For Quick Alerts
ALLOW NOTIFICATIONS  
For Daily Alerts

ಫಟಾಫಟ್ ರೆಸಿಪಿ: ಕ್ಷಣಾರ್ಧದಲ್ಲಿ ಬಿಸಿ ಬಿಸಿ 'ಬ್ರೆಡ್ ದೋಸೆ' ರೆಡಿ!

ಬ್ರೆಡ್ ದೋಸೆಯನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ಬ್ರೆಡ್‌ನಿಂದ ತಯಾರು ಮಾಡಲಾಗುವ ಈ ದೋಸೆ ಖಂಡಿತ ನಿಮ್ಮ ನಾಲಗೆಯ ಅಸ್ವಾದತೆಯನ್ನು ಹೆಚ್ಚಿಸುವುದು ಖಂಡಿತ.

By Jaya Subramanya
|

ಬೆಳಗ್ಗಿನ ತಿಂಡಿ ಅರಸ ಸೇವಿಸುವಂತಿರಬೇಕು, ಮಧ್ಯಾಹ್ನದೂಟ ರಾಣಿ ಸೇವಿಸುಂತಿರಬೇಕು ಅಂತೆಯೇ ರಾತ್ರಿಯ ಭೋಜನ ಬಡವ ಸೇವಿಸುವಂತಿರಬೇಕು ಎಂಬುದು ಆಹಾರ ಸೇವನೆಯ ಬಗೆಗಿರುವ ಪುರಾತನ ಇಂಗ್ಲೀಷ್ ಗಾದೆಯಾಗಿದೆ. ಹೆಚ್ಚುವರಿ ತೂಕದಿಂದ ನಿಮ್ಮನ್ನು ಕಾಪಾಡುವ ಈ ಆಹಾರ ಸೂತ್ರವನ್ನು ನೀವು ಸೂಕ್ತವಾಗಿ ಪಾಲಿಸಿದಿರಿ ಎಂದಾದಲ್ಲಿ ಬೊಜ್ಜು ನಿಮ್ಮನ್ನು ಕಾಡಲು ಸಾಧ್ಯವೇ ಇಲ್ಲ ಎಂಬುದು ಆರೋಗ್ಯ ತಜ್ಞರ ಮಾತಾಗಿದೆ. ತೆಳ್ಳಗೆ-ಬೆಳ್ಳಗಿನ ನೀರು ದೋಸೆ

ಅಂತೆಯೇ ನೀವು ಸ್ಲಿಮ್ ಟ್ರಿಮ್ ಆಗಿ ಸದಾ ಆರೋಗ್ಯಕರವಾಗಿ ನಳ ನಳಿಸುವಂತಿರಬೇಕು ಎಂದಾದಲ್ಲಿ ಬೆಳಗ್ಗಿನ ತಿಂಡಿಯನ್ನು ಎಂದಿಗೂ ತ್ಯಜಿಸದಿರಿ ಎಂಬುದನ್ನೂ ಈ ತಜ್ಞರು ತಿಳಿಸುತ್ತಾರೆ. ಬೆಳಗ್ಗೆ ನಾವು ಆಹಾರ ಸೇವನೆಯನ್ನು ಮಾಡದೇ ಇರುವ ಸಮಯದಲ್ಲಿ ಅದು ಮಧ್ಯಾಹ್ನ ಅತಿಯಾಗಿ ತಿನ್ನುವುದಕ್ಕೆ ಪ್ರೇರಣೆಯನ್ನು ನೀಡುತ್ತದೆ ಎಂದಾಗಿದೆ. ಇದರಿಂದ ಆಹಾರ ಸೇವನೆಯ ಚಕ್ರದಲ್ಲಿ ವೈಪರೀತ್ಯಗಳುಂಟಾಗಿ ನೀವು ತೂಕ ಹೆಚ್ಚಳ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತೀರಿ.

ಬೆಳಗ್ಗಿನ ತಿಂಡಿಯಲ್ಲಿ ವೈವಿಧ್ಯತೆ ಇದ್ದಾಗ ಅಂತೆಯೇ ಅದನ್ನು ಸರಳವಾಗಿ ತಯಾರಿಸುವ ಕಲೆ ನಮಗೆ ಒಲಿದಲ್ಲಿ ಇಂತಹ ತೊಂದರೆಗಳಿಗೆ ಅವಕಾಶವೇ ಇರುವುದಿಲ್ಲ. ನಿಮ್ಮ ಮನೆಯವರನ್ನು ಮೆಚ್ಚಿಸುವ ಅತಿರುಚಿಕರವಾದ ಬೆಳಗ್ಗಿನ ತಿಂಡಿ ರೆಸಿಪಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇದನ್ನು ನಿಮ್ಮ ಪ್ರೀತಿಪಾತ್ರರು ಮೆಚ್ಚುವುದು ಖಂಡಿತ. ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ದೋಸೆ ರೆಸಿಪಿ

ಹಾಗಿದ್ದರೆ ಬನ್ನಿ ಬ್ರೆಡ್ ದೋಸೆಯನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ಬ್ರೆಡ್‌ನಿಂದ ತಯಾರು ಮಾಡಲಾಗುವ ಈ ದೋಸೆ ಖಂಡಿತ ನಿಮ್ಮ ನಾಲಗೆಯ ಅಸ್ವಾದತೆಯನ್ನು ಹೆಚ್ಚಿಸುವುದು ಖಂಡಿತ.

Bread Dosa Recipe

ಪ್ರಮಾಣ - 3
*ಸಿದ್ಧತಾ ಸಮಯ - 30 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು

ಸಾಮಾಗ್ರಿಗಳು
1. ಬ್ರೆಡ್ ಸ್ಲೈಸ್ - 10
2.ರವೆ- 1/2 ಕಪ್
3.ಮೊಸರು - 1/2 ಕಪ್
4.ಅಕ್ಕಿ ಹುಡಿ - 1 1/2 ಚಮಚ
5.ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ
1.ಎಣ್ಣೆ - 2 ಚಮಚ
2.ಜೀರಿಗೆ - 1/4 ನೇ ಚಮಚ
3.ಸಾಸಿವೆ - 1/2 ಕಪ್
4.ಉದ್ದಿನ ಬೇಳೆ - 1/2 ಚಮಚ
5.ಕರಿಬೇವಿನೆಸಳು - 2-3 (ಸಣ್ಣದಾಗಿ ಹೆಚ್ಚಿದ್ದು)
6.ಹಸಿಮೆಣಸು - 2 (ಸಣ್ಣದಾಗಿ ಹೆಚ್ಚಿದ್ದು)
7.ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ್ದು)
8.ಶುಂಠಿ - 1/2 ಇಂಚು ತುಂಡುಮಾಡಿದ್ದು (ಸಣ್ಣದಾಗಿ ಕತ್ತರಿಸಿದ್ದು)

ಮಾಡುವ ವಿಧಾನ
1. ಬ್ರೆಡ್‌ನ ಕಂದು ಭಾಗವನ್ನು ಕತ್ತರಿಸಿ ತೆಗೆಯಿರಿ.
2.ನೀರಿನಲ್ಲಿ 2 ನಿಮಿಷಗಳಷ್ಟು ಕಾಲ ಎಲ್ಲಾ ಬ್ರೆಡ್ ತುಂಡುಗಳನ್ನು ನೆನೆಸಿಡಿ.
3.ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿಕೊಂಡು ದಪ್ಪನೆಯ ಹಿಟ್ಟನ್ನು ಸಿದ್ಧಮಾಡಿಕೊಳ್ಳಿ.
4.ನೀರಿನಿಂದ ಬ್ರೆಡ್ ತುಂಡುಗಳನ್ನು ಹೊರತೆಗೆದು ಅವುಗಳನ್ನು ಚೆನ್ನಾಗಿ ಹುಡಿಮಾಡಿಕೊಳ್ಳಿ ಮತ್ತು ನಿಮ್ಮ ಕೈಗಳಿಂದ ಮೆತ್ತಗಾಗಿಸಿಕೊಳ್ಳಿ.
5.ಹುಡಿ ಮಾಡಿದ ಬ್ರೆಡ್ ಅನ್ನು ಹಿಟ್ಟಿಗೆ ಸೇರಿಸಿ ಮತ್ತು ಇದಕ್ಕೆ ಮೊಸರನ್ನು ಬೆರೆಸಿ, ಹಾಗೂ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6.ಇಷ್ಟೆಲ್ಲಾ ಆದ ನಂತರ ಬ್ಲೆಂಡರ್‌ಗೆ ಎಲ್ಲವನ್ನೂ ಹಾಕಿ ಮತ್ತು ತಿರುಗಿಸಿಕೊಳ್ಳಿ. ಹಿಟ್ಟಿನಲ್ಲಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
7.ಈಗ ಸ್ವಚ್ಛವಾದ ಪಾತ್ರೆಗೆ ಹಿಟ್ಟನ್ನು ಸುರಿದುಕೊಳ್ಳಿ ಮತ್ತು ಹಿಟ್ಟಿನ ಸಾಂದ್ರತೆಯನ್ನು ಪರಿಶೀಲಿಸಿ.
8.ಇನ್ನು ಬಾಣಲೆಯನ್ನು ಅನ್ನು ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ.
9.ಜೀರಿಗೆ, ಸಾಸಿವೆ,ಉದ್ದಿನ ಬೇಳೆ, ಕರಿಬೇವಿನೆಸಳು, ಈರುಳ್ಳಿ, ಶುಂಠಿ ಮತ್ತು ಹಸಿಮೆಣಸನ್ನು ಬಾಣಲೆಯಲ್ಲಿ ಹುರಿದುಕೊಳ್ಳಿ...ಈರುಳ್ಳಿ ಕಂದು ಬಣ್ಣಕ್ಕೆ ತಿರುಗಲಿ.
10.ಇನ್ನು ಗ್ಯಾಸ್‌ನಿಂದ ಬಾಣಲೆಯನ್ನು ಇಳಿಸಿ
11.ತವಾ ತೆಗೆದುಕೊಂಡು ಅದನ್ನು ಬಿಸಿಮಾಡಿ.
12.ತವಾಕ್ಕೆ ಎಣ್ಣೆಯನ್ನು ಹಾಕಿ ಮತ್ತು ಸ್ವಚ್ಛ ಬಟ್ಟೆಯಿಂದ ಒರೆಸಿ.
13.ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ ಮತ್ತು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ
14.ಈಗ ವೃತ್ತಾಕಾರದ ಸೌಟನ್ನು ಬಳಸಿಕೊಂಡು ತವಾದ ಮೇಲೆ ಹಿಟ್ಟನ್ನು ಸುರಿಯಿರಿ.
15.ಸೌಟಿನ ತಳವನ್ನು ಬಳಸಿಕೊಂಡು ದೋಸೆಯನ್ನು ಎಲ್ಲೆಡೆಯೂ ಹರಡಿಸಿ ಇದರಿಂದ ದೋಸೆ ತೆಳುವಾಗಿ ಚೆನ್ನಾಗಿ ಬೇಯುತ್ತದೆ.
16.ದೋಸೆಯ ಮಧ್ಯಭಾಗಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ನಂತರ 2-3 ನಿಮಿಷಗಳಷ್ಟು ಕಾಲ ಕಾಯಿರಿ. ದೋಸೆ ಚೆನ್ನಾಗಿ ಬೇಯಲಿ. ದೋಸೆಯ ಎರಡೂ ಭಾಗವನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
17.ಬ್ರೆಡ್ ದೋಸೆಯನ್ನು ಬಿಸಿಬಿಸಿಯಾಗಿ ಸೇವಿಸಲು ನೀಡಿ.

ನಿಜಕ್ಕೂ ರುಚಿಕರವಾದ ದೋಸೆ ರೆಸಿಪಿ ಇದಾಗಿದ್ದು ಸ್ವಾದಮಯ ಸಾಂಬಾರ್‌ನೊಂದಿಗೆ ಇದನ್ನು ಸವಿಯಲು ನಿಮ್ಮ ಮನೆಮಂದಿಗೆ ನೀಡಬಹುದಾಗಿದೆ. ನಿಮ್ಮ ಮನೆಯವರು ಈ ದೋಸೆ ರೆಸಿಪಿಯನ್ನು ಇಷ್ಟಪಡುವುದು ಖಂಡಿತ.

English summary

Easy Bread Dosa Recipe

Skipping breakfast means lethargy, lack of concentration, no energy and lots of other problems. So, why not try an easy bread dosa recipe to excite your breakfast table? Indian cuisine is the perfect example of unity in diversity. If 'Chole Bhature' of North is finger-licking good, then Dosa and Idli of South are lip-smacking as well. So, read on to know more about the easy bread dosa recipe that you can try for breakfast.
Story first published: Monday, January 30, 2017, 19:20 [IST]
X
Desktop Bottom Promotion