For Quick Alerts
ALLOW NOTIFICATIONS  
For Daily Alerts

ಉಪ್ಪಿಟ್ಟಿಗೆ ಹಾಲಿಡೆ, ರವೆ ಪೊಂಗಲ್ ಈ ಸ್ಯಾಟರ್ಡೆ

By Staff
|
New recipe, Rava Pongal
ಈ ತಿಂಡಿ ತಯಾರಿಕಾ ವಿಧಾನವನ್ನು ಓದುವ ಮೊದಲೇ ಓದುಗರಲ್ಲಿ ಒಂದು ಅರಿಕೆ. ಈ ರೆಸಿಪಿ ಖಂಡಿತ ಉಪ್ಪಿಟ್ಟಲ್ಲ. ಹೆಚ್ಚೂ ಕಡಿಮೆ ಉಪ್ಪಿಟ್ಟಿನ ಪದಾರ್ಥಗಳನ್ನೇ ಬಳಸಿ ಮಾಡಲಾಗುವ ಹೊಸಬಗೆಯ ತಿಂಡಿ ರವೆ ಪೊಂಗಲ್. ಮಾಡಿ ನೋಡಿ ರುಚಿ ತಿಳಿದಾಗಲೇ ಈ ರೆಸಿಪಿಯ ಅಸಲಿಯತ್ತು ತಿಳಿಯುತ್ತದೆ. ಸೋ, ಉಪ್ಪಿಟ್ಟಿಗೆ ಒಂದು ದಿನ ರಜಾ ನೀಡಿ, ರವೆ ಪೊಂಗಲ್ಲನ್ನು ಆಮಂತ್ರಿಸಿಕೊಳ್ಳಿ.

ರೆಸಿಪಿ ಹೇಳಿದವರು : ಸೀತಮ್ಮ, ಹೆಣ್ಣೂರು ಕ್ರಾಸ್, ಬೆಂಗಳೂರು

ಸಾಮಗ್ರಿಗಳು :

ಸಣ್ಣ ರವೆ ಎರಡು ಲೋಟ
ಹೆಸರುಬೇಳೆ ಅರ್ಧ ಲೋಟ
ನೀರು ಒಂಭತ್ತು ಲೋಟ
ಉಪ್ಪು ಎರಡು ಟೀ ಚಮಚ
ಕಾಳುಮೆಸಿನ ಪುಡಿ ಎರಡು ಚಮಚ
ಗೋಡಂಬಿ ಚೂರುಗಳು ಒಂದು ಹಿಡಿ
ಎಣ್ಣೆ ಮತ್ತು ತುಪ್ಪ ಎಂಟು ಚಮಚ
ಕರಿಬೇವಿನ ಸೊಪ್ಪು, ತುರಿದ ಹಸಿ ಶುಂಠಿ

ತಯಾರಿಸುವ ವಿಧಾನ :

ಹಸಿವಾಸನೆ ನಿವಾರಣೆ ಆಗುವವರೆಗೆ ಅರ್ಧ ಚಮಚ ತುಪ್ಪ ಹಾಕಿ ರವೆ ಹುರಿದಿಟ್ಟುಕೊಳ್ಳಬೇಕು. ಹೆಸರುಬೇಳೆಯನ್ನು ದಪ್ಪತಳದ ಪಾತ್ರೆಯಲ್ಲಿ 3,4 ಲೋಟ ನೀರು ಹಾಕಿ ಮುಕ್ಕಾಲು ಬೇಯುವವರೆಗೆ ಕುದಿಸಿಟ್ಟುಕೊಳ್ಳಬೇಕು. ಪ್ರತ್ಯೇಕವಾಗಿ ಎಣ್ಣೆ ಬಿಸಿಮಾಡಿಕೊಂಡು ಗೋಡಂಬಿ, ಕರಿಬೇವಿನ ಸೊಪ್ಪು, ಶುಂಠಿ, ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ ಒಗ್ಗರಣೆಯನ್ನು ಮಾಡಿಟ್ಟುಕೊಳ್ಳಬೇಕು.

ಈ ಒಗ್ಗರಣೆ ಮಾಡಿದ ಬಾಣಲೆಗೆ ಬೇಯಿಸಿದ ಬೇಳೆ ಮತ್ತು ರವೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕದಕಿರಿ. 5 ಅಥವಾ 6 ಲೋಟ ಬಿಸಿನೀರು ಹಾಕಿ ಪಾತ್ರೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಇಂಗುವವರೆಗೆ ಮತ್ತು ರವೆ ಚೆನ್ನಾಗಿ ಬೇಯುವವರೆಗೆ ಬೇಯಿಸಿರಿ. ಪಾತ್ರೆಯಲ್ಲಿರುವ ಬೇಳೆ ಸೀಯದಂತೆ ಆಗಾಗ ಕೆದಕುತ್ತಾ ಇರಬೇಕು. ಅದರ ಮೇಲೆ ಬಿಸಿ ತುಪ್ಪ ಹಾಕಿದರೆ ರವೆ ಪೊಂಗಲ್ಲು ರೆಡಿ. ತೆಂಗಿನಕಾಯಿ ಚಟ್ನಿ ಅಥವಾ ಮೊಸರು ಬಜ್ಜಿ ಜತೆಗೆ ಬಡಿಸಬಹುದು.

Story first published: Friday, November 27, 2009, 14:33 [IST]
X
Desktop Bottom Promotion