For Quick Alerts
ALLOW NOTIFICATIONS  
For Daily Alerts

ಇಡ್ಲಿಗೆ ಬೆಸ್ಟ್ ಜೋಡಿ ಘಮ ಘಮ ಈರುಳ್ಳಿ ಸಾಂಬಾರ್

By Super
|
nion Sambar Recipe
ಇಡ್ಲಿ ಜೊತೆ ಈರುಳ್ಳಿ ಸಾಂಬಾರ್ ಕಾಂಬಿನೇಶನ್ ಬಲುರುಚಿ. ಅನ್ನಕ್ಕೂ ಈ ಸಾಂಬಾರ್ ಒಳ್ಳೆ ಟೇಸ್ಟ್ ನೀಡುತ್ತೆ. ಕೇವಲ ಹೋಟೆಲ್ ನಲ್ಲಿ ಮಾತ್ರವಲ್ಲ, ಮನೆಯಲ್ಲೂ ರುಚಿಕರವಾದ ಈರುಳ್ಳಿ ಸಾಂಬಾರ್ ಮಾಡಲು ಸಾಧ್ಯವಿದೆ. ಅದೂ ಕೂಡ ಸುಲಭವಾಗಿ. ಈರುಳ್ಳಿ ಸಾಂಬಾರ್ ಮಾಡುವ ವಿಧಾನ ತಿಳಿದುಕೊಳ್ಳಿ.

ಈರುಳ್ಳಿ ಸಾಂಬಾರ್ ಗೆ ಬೇಕಾಗುವ ಸಾಮಗ್ರಿ: 2 ಚಮಚ ಧನಿಯಾ, 2 ಚಮಚ ಉದ್ದಿನ ಬೇಳೆ, 2 ಕೆಂಪು ಮೆಣಸಿನಕಾಯಿ, 1/2 ಕಪ್ ತೆಂಗಿನ ತುರಿ, 1/4 ಕಪ್ ಜೀರಿಗೆ, 1/4 ಕೆ.ಜಿ ಚಿಕ್ಕ ಈರುಳ್ಳಿ (ನಾಟಿ), 1 ಟೊಮೆಟೊ, ಕೊತ್ತಂಬರಿ, ಸಾಸಿವೆ, ಎಣ್ಣೆ, ಉಪ್ಪು, 1 ಚಮಚ ತುಪ್ಪ

ಈರುಳ್ಳಿ ಸಾಂಬಾರ್ ಮಾಡುವುದು ಹೇಗೆ?
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಉದ್ದಿನ ಬೇಳೆಯನ್ನು ಸ್ವಲ್ಪ ಕೆಂಪಗಾಗುವ ತನಕ ಹುರಿದುಕೊಳ್ಳಬೇಕು. ಇದಾದ ನಂತರ ಅದರಲ್ಲಿ ಧನಿಯಾ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಹುರಿದು ಪಕ್ಕಕ್ಕಿಟ್ಟುಕೊಳ್ಳಬೇಕು.

* ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಟೊಮೆಟೊ, ಈರುಳ್ಳಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಬೇಕು. (ಸಾಂಬಾರ್ ಸ್ವಲ್ಪ ಖಾರವಿರಬೇಕೆಂದರೆ ಮೆಣಸಿನಕಾಯಿಪುಡಿ ಅಥವಾ ಸಾಂಬಾರ್ ಪುಡಿ ಬೆರೆಸಬಹುದು). 5-10 ನಿಮಿಷ ಸಣ್ಣ ಉರಿಯಲ್ಲಿ ಈ ಮಿಶ್ರಣವನ್ನು ಬೇಯಿಸುತ್ತಿರಬೇಕು.

* ಹುರಿದಿಟ್ಟುಕೊಂಡಿದ್ದ ಮಿಶ್ರಣವನ್ನು ಪೇಸ್ಟ್ ನಂತೆ ರುಬ್ಬಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಬೆರೆಸಬೇಕು. ಮಸಾಲೆಯ ವಾಸನೆ ಬರುವವರೆಗೂ ಸಾಂಬಾರನ್ನು ತಿರುಗಿಸುತ್ತಿರಬೇಕು.

* ನಂತರ ಒಲೆ ಆರಿಸಿ, ಸಾಂಬಾರಿಗೆ ಸಾಸಿವೆ ಒಗ್ಗರಣೆ ನಿಡಬೇಕು. ಕೊನೆಯಲ್ಲಿ ಇದಕ್ಕೆ ಒಂದು ಚಮಚ ತುಪ್ಪ ಬೆರೆಸಿದರೆ ಸಾಕು ಸಾಂಬಾರ್ ಘಂ ಅಂತಿರುತ್ತೆ.

English summary

Onion Sambar Recipe | Best Sambar for Idly | ಈರುಳ್ಳಿ ಸಾಂಬಾರ್ ಮಾಡುವ ವಿಧಾನ | ಇಡ್ಲಿಗೆ ಸೂಕ್ತ ಈರುಳ್ಳಿ ಸಾಂಬಾರ್

Idlis taste very boring without the sambar. The hot idlis dipped in spicy sambar and melted ghee can impress anyone and make their day. Here is the easy recipe
X
Desktop Bottom Promotion