For Quick Alerts
ALLOW NOTIFICATIONS  
For Daily Alerts

ಗುಳಿಟ್ಟು ಅಥವಾ ಗುಳಿಯಪ್ಪ ರೆಸಿಪಿ

By * ಶೀಲಾ ನಟರಾಜ್, ಮೈಕೋ ಲೇಔಟ್
|
Gulittu or Guliyappa or Paddu recipe
ಸಾಮಾನ್ಯವಾಗಿ ಇಡ್ಲಿ ಅಥವಾ ದೋಸೆ ಹಿಟ್ಟು ಉಳಿದಾಗ ಅದನ್ನು ಫ್ರಿಜ್ ನಲ್ಲಿಟ್ಟು ಮಾರನೆ ದಿನ ಗುಳಿಟ್ಟು ಮಾಡುವುದು ವಾಡಿಕೆ. ಉಳಿದ ಪದಾರ್ಥ ವ್ಯರ್ಥವಾಗಬಾರದು ಎಂದು ತಿಂಡಿ ಮಾಡಿ ಪಾತ್ರೆ ತೊಳೆದು ಕೈತೊಳೆದುಕೊಳ್ಳುವ ಒಂದು ಬೆಳಗಿನ ಪಲಾಯನವಾದ ಮಾತ್ರ. ಆದರೆ, ಗುಳಿಟ್ಟನ್ನೇ ಮಾಡಬೇಕು ಎಂದು ಪ್ಲಾನ್ ಮಾಡುವವರಿಗಾಗಿ ಅರಕೆರೆ ಮೈಕೋ ಲೇ ಔಟ್ ಶೀಲಾ ಅವರು ರೆಸಿಪಿ ಬರೆದಿದ್ದಾರೆ. ಮಾಡಿನೋಡಿ.

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ಅಕ್ಕಿ 1ಲೋಟ, ಕುಸುಬಲ ಅಕ್ಕಿ 1ಲೋಟ, ಸಿಪ್ಪೆ ಬಿಡಿಸಿದ ಉದ್ದಿನಕಾಳು 1/2 ಲೋಟ, ಕಡಲೇಬೇಳೆ 1ಚಮಚ, ಹಸಿರುಮೆಣಸಿನಕಾಯಿ 8, ಉಪ್ಪು 2ಚಮಚ, ಸಣ್ಣಗೆ ಕತ್ತರಿಸಿದ ಟೊಮ್ಯಾಟೋ 1, ಸಣ್ಣಗೆ ಕತ್ತರಿಸಿದ ಈರುಳ್ಳಿ 1/2 ಲೋಟ, ಕತ್ತರಿಸಿದ ಕೊತ್ತಂಬರಿಸೊಪ್ಪು, ಅಡಿಗೆ ಸೋಡಾ 1/4 ಚಮಚ, ಹುಳಿಮೊಸರು 1/4 ಲೋಟ.

ತಯಾರಿಸುವ ವಿಧಾನ

ಕಾಳು ಬೇಳೆಗಳನ್ನು ಬೇರೆ ಬೇರೆಯಾಗಿ ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿರಿ. ಎರಡು ವಿಧವಾದ ಅಕ್ಕಿಗಳನ್ನು ಒಟ್ಟಿಗೆ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ. ಮೊದಲು ಬೇಳೆಯನ್ನು ನುಣ್ಣಗೆ, ನೊರೆ ನೊರೆಯಾಗುವಂತೆ ರುಬ್ಬಿಕೊಳ್ಳಿರಿ. ಅಕ್ಕಿಯನ್ನು ಹಸಿರು ಮೆಣಸಿನಕಾಯಿಯೊಂದಿಗೆ ತರಿತರಿಯಾದ ರವೆಯಂತೆ ರುಬ್ಬಿಕೊಳ್ಳಿರಿ. ರುಬ್ಬಿಕೊಂಡ ಅಕ್ಕಿ ಮತ್ತು ಬೇಳೆಯನ್ನು ಉಪ್ಪಿನೊಂದಿಗೆ ಬೆರೆಸಿ, ಮಾರನೇ ದಿನದವರೆಗೆ, ಅಂದರೆ, ಕನಿಷ್ಠ 8 ಗಂಟೆ ನೆನೆಸಿರಿ. ಇದಕ್ಕೆ ತೆಂಗಿನಕಾಯಿ ತುಣುಕುಗಳು, ನೆನೆಸಿದ ಕಡಲೇಬೇಳೆ, ಈರುಳ್ಳಿ, ಕೊತ್ತಂಬರಿಸೊಪ್ಪು, ಕರಿಬೇವಿನ ಸೊಪ್ಪು, ಮೊಸರು ಮತ್ತು ಸೋಡಾ ಬೆರೆಸಿರಿ. ಚೆನ್ನಾಗಿ ಕಲಸಿ ಗುಳಿಟ್ಟಿನ ಹಂಚಿಗೆ ಸುರಿಯಿರಿ. ಹಂಚಿಗೆ ಹಾಕುವ ಮುನ್ನ ಗುಳಿಗಳಲ್ಲಿ ಹನಿ ಎಣ್ಣೆ ಸವರಬೇಕು. ಈ ತಿಂಡಿಗೆ ಇದಕ್ಕೆ ಗುಳಿಯಪ್ಪ ಎಂದೂ ಕರೆಯುತ್ತಾರೆ.

Story first published: Thursday, August 27, 2009, 16:09 [IST]
X
Desktop Bottom Promotion