For Quick Alerts
ALLOW NOTIFICATIONS  
For Daily Alerts

ಕಾವಲಿ ಮೇಲೆ ತ್ರಿವರ್ಣ ದೋಸೆ ಮೋಡಿ

By * ವೈಷ್ಣವಿ ಮೂರ್ತಿ, ಬೆಂಗಳೂರು
|

ದೋಸೆ ನಮ್ಮ ನಿತ್ಯ ತಿಂಡಿಯ ಅವಿಭಾಜ್ಯ ಅಂಗವೇ ಆದರೂ ಅದನ್ನು ತಯಾರಿಸುವ ವಿಧಾನದಲ್ಲಿ ಮಾತ್ರ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. 'ಮಾಡಿದ್ದೇ ಮಾಡಬೇಡವೇ ಪಂಕಜಾ, ಹೊಸ ಐಡಿಯಾ ಹುಡುಕೇ' ಎಂದು ತಮಗೆ ತಾವೇ ಹೇಳಿಕೊಳ್ಳುತ್ತಿರುವ ಹೆಂಗಳೆಯರಿಗೆ ಈ ಕೆಳಕಂಡ ತ್ರಿವರ್ಣ ದೋಸೆಯನ್ನು ಅರ್ಪಿಸಲಾಗಿದೆ, ಈ ಮೂರು ಬಣ್ಣದ ಸ್ಪೆಷಲ್ ದೋಸೆಯ ರುಚಿಯನ್ನು ನೀವೂ ಮಾಡಿ ರುಚಿ ನೋಡಿ...

ಬೇಕಾಗುವ ಸಾಮಗ್ರಿಗಳು:
* ಒಂದು ಪಾವು ಅಕ್ಕಿ
* 2 ಚಮಚ ಮೆಂತ್ಯ ಕಾಳು
* 1 ಕಟ್ಟು ಪಾಲಕ್ ಸೊಪ್ಪು
* 2 ಕ್ಯಾರೆಟ್
* ಉಪ್ಪು (ರುಚಿಗೆ ತಕ್ಕಷ್ಟು)
* ಸ್ವಲ್ಪ ಎಣ್ಣೆ ಅಥವಾ ತುಪ್ಪವೂ ಆದೀತು

ಮಾಡುವ ವಿಧಾನ:

ಸ್ಟೆಪ್ 1: ಒಂದು ದಿವಸದ ಮಟ್ಟಿಗೆ ಅಕ್ಕಿ ಮತ್ತು ಮೆಂತ್ಯೆ ಕಾಳನ್ನು ನೆನೆಯಿಡಬೇಕು. ಪಾಲಕ್ ಸೊಪ್ಪು ಮತ್ತು ಕ್ಯಾರೆಟ್ಟನ್ನು ತೊಳೆದು ಬೇರೆ ಬೇರೆಯಾಗಿಯೇ ಬೇಯಿಸಿಟ್ಟುಕೊಳ್ಳಬೇಕು.

ಸ್ಟೆಪ್ 2: ನೆಂದ ಅಕ್ಕಿ ಮತ್ತು ಮೆಂತ್ಯೆಯನ್ನು ಮೂರು ಭಾಗವನ್ನಾಗಿ ಮಾಡಿಕೊಂಡು, ಮೊದಲನೇ ಭಾಗಕ್ಕೆ ಬೆಂದ ಪಾಲಕ್ ಸೊಪ್ಪು ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಎರಡನೇ ಭಾಗಕ್ಕೆ ಬೆಂದ ಕ್ಯಾರೆಟ್ ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಮೂರನೇ ಭಾಗವನ್ನು ಬರೀ ಉಪ್ಪು ಹಾಕಿ ರುಬ್ಬಿಟ್ಟುಕೊಳ್ಳಬೇಕು.

ಸ್ಟೆಪ್ 3: ದೋಸೆ ಹೆಂಚನ್ನು ಚೆನ್ನಾಗಿ ಕಾಯಿಸಿ. ಮೊದಲಿಗೆ ಕ್ಯಾರೆಟ್ ಮಿಶ್ರಣವನ್ನು ಮಧ್ಯದಲ್ಲಿ ಹುಯ್ದು, ನಂತರ ಹಾಗೇ ರುಬ್ಬಿಟ್ಟುಕೊಂಡ ಮಿಶ್ರಣವನ್ನು (ಬಿಳಿಹಿಟ್ಟು) ಅದರ ಸುತ್ತಲು ಹುಯ್ದು, ನಂತರ ಪಾಲಕ್ ಮಿಶ್ರಣವನ್ನು ಅದರ ಸುತ್ತಲು ಹುಯ್ಯಬೇಕು.

ಸ್ಟೆಪ್ 4: ಅದರ ಮೇಲೆ ಹಿತಮಿತವಾಗಿ ಎಣ್ಣೆಯನ್ನೋ ಅಥವಾ ತುಪ್ಪವನ್ನೋ ಹಾಕಿ ಒಂದು ಅಗಲವಾದ ಮುಚ್ಚಳವನ್ನು ಮುಚ್ಚಿಟ್ಟು ಚೆನ್ನಾಗಿ ಬೆಂದಮೇಲೆ ನಿಧಾನವಾಗಿ ದೋಸೆಯನ್ನು ಹೆಂಚಿನ ಮೇಲೆ ತಿರುವಿ ಹಾಕಿದರೆ ಕೇಸರಿ ಬಿಳಿ ಹಸಿರು ದೋಸೆ ಸಿದ್ಧ.

ಫೈನಲಿ: ಆನಂತರದಲ್ಲಿ ದೋಸೆಗಳನ್ನು ತಟ್ಟೆಗೆ ಅಥವಾ ಬಾಳೆ ಎಲೆಯ ಮೇಲೆ ಹರಡಿ ಚಟ್ನಿಪುಡಿಯೊಂದಿಗೆ ಹೊಟ್ಟೆಗೆ ಇಳಿಸಿಕೊಳ್ಳಬೇಕು. ದೋಸೆಗಳ ಜತೆಗೇ ಫಿಲ್ಟರ್ ಕಾಫಿ ಕೂಡ ರೆಡಿ ಇದ್ದುಬಿಟ್ಟರೆ ರುಚಿ ಎಲ್ಲೆ ಮೀರಿಸುತ್ತೆ.

English summary

One india Cuisine | Tri-color Dosa recipe | Pan India Cake | ಮೂರು ಬಣ್ಣದ ದೋಸೆ | ಮೂರು ಬಣ್ಣದ ಸ್ಪೆಷಲ್ ದೋಸೆ

A tri-color Dosa is a special dosa recipe which can be prepared easily. This dosa is also very good for health as it contain many of the nutritious vegetables and grains. Take a look at how to prepare tri color dosa.
X
Desktop Bottom Promotion