For Quick Alerts
ALLOW NOTIFICATIONS  
For Daily Alerts

ಮಕ್ಕಳ ಅಚ್ಚುಮೆಚ್ಚಿನ ಸಾಫ್ಟ್ ಫ್ರೈಡ್ ನೂಡಲ್ಸ್

By Prasad
|
Veg Noodles
ಏಕತಾನದಿಂದ ಬೇಸತ್ತ ನಾಲಿಗೆ ಆಗಾಗ ವಿಭಿನ್ನಬಗೆಯ ತಿಂಡಿ ತಿನಿಸುಗಳನ್ನು ಬೇಡುತ್ತಿರುತ್ತದೆ. ಯಾರು ಬೇಕಾದರೂ ಯಾರ ಸಹಾಯವಿಲ್ಲದೆತಯಾರಿಸಿಕೊಳ್ಳಬಹುದಾದ ಇನ್ಟಂಟ್ ಸಾಫ್ಟ್ ಫ್ರೈಡ್ ನೂಡಲ್ಸ್. ಇದು ಮಕ್ಕಳಿಗಂತೂ ಅಚ್ಚುಮೆಚ್ಚು.

ಬೇಕಾಗುವ ಪದಾರ್ಥಗಳು : ವೆಜ್ ನೂಡಲ್ಸ್ 250 ಗ್ರಾಂ | ಈರುಳ್ಳಿ ಹೂವು ಸಣ್ಣ ಹಿಡಿಯಷ್ಟು | ಸೋಯಾ ಸಾಸ್ | ಚಿಲ್ಲಿ ಸಾಸ್ | ಮಸಾಲಾ ಪುಡಿ | ಎಣ್ಣೆ

ಮಾಡುವ ವಿಧಾನ :

* ವೆಜ್ ನೂಡಲ್ಸನ್ನು ಒಂದು ನಾನ್ ಸ್ಟಿಕ್ ಪಾತ್ರೆಯಲ್ಲಿ ಮೂರು ಲೋಟದಷ್ಟು ನೀರಿನಲ್ಲಿ ಚೆನ್ನಾಗಿ ಬೇಯಿಸಿರಿ. ಬೇಯಿಸುವಾಗ ಕಟ್ಟಿಗೆಯ ಮುಚ್ಚುಗದಿಂದ ಅಂಟಿಕೊಂಡಿರುವ ನೂಡಲ್ಸನ್ನು ಬಿಡಿಸಿಕೊಳ್ಳಿ.

* ಒಂದು ಅಗಲ ತಳದ ಪಾತ್ರೆಯಲ್ಲಿ ಎರಡು ಚಮಚದಷ್ಟು ಎಣ್ಣೆ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹೂವುಗಳನ್ನು ಹಾಕಿ ಬಾಡಿಸಿರಿ. ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ನೂಡಲ್ಸನ್ನು ಸುರಿದುಕೊಳ್ಳಿ.

* ಎರಡು ನಿಮಿಷದ ನಂತರ ಸೋಯಾ ಸಾಸ್, ಚಿಲ್ಲಿ ಸಾಸ್, ಮಸಾಲಾ ಪುಡಿ ಹಾಕಿ ಮತ್ತೆ ಐದು ನಿಮಿಷ ಬೇಯಲು ಬಿಟ್ಟು ಪಾತ್ರೆಯನ್ನು ಕೆಳಗಿಳಿಸಿ. ತಟ್ಟೆಗೆ ಟೊಮೇಟೊ ಚಿಲ್ಲಿ ಸಾಸ್ ಹಾಕಿಕೊಂಡು ಫೋರ್ಕ್ ಸಹಾಯದಿಂದ ಬಿಸಿಯಿರುವಾಗಲೇ ಸಾಫ್ಟ್ ಫ್ರೈಡ್ ನೂಡಲ್ಸ್ ಜಮಾಯಿಸಿ.

Story first published: Tuesday, June 8, 2010, 12:38 [IST]
X
Desktop Bottom Promotion