For Quick Alerts
ALLOW NOTIFICATIONS  
For Daily Alerts

ದಿ ಗ್ರೇಟ್ ಇಂಡಿಯನ್ ಕೊಂಕಣಿ ಪಿಜ್ಜಾ ಅಥವಾ ದೊಡ್ಡಕ್

By * ಮಾಲತಿ ಶೆಣೈ
|
The great Indian Konkani Pizza
ನಮ್ಮ ಮನೆಯಲ್ಲಿ ಇಡ್ಲಿ ಹಿಟ್ಟು ಸ್ವಲ್ಪ ಜಾಸ್ತಿನೆ ಮಾಡಿ ಇಡ್ತೇನೆ. ಮೊದಲ ದಿನ ಇಡ್ಲಿ ಪಾತ್ರೆಯಲ್ಲಿ conservative ಇಡ್ಲಿ. ಹಿಂಗಿನ ಚಟ್ನಿ ಮತ್ತು ಸಾಂಬಾರ್.

ಎರಡನೆ ದಿನ ಅದರ ಹೆಸರು ಇಡ್ಲಿ part-2 ಬಾಳೆ ಎಲೆಯಲ್ಲಿ ಹಿಟ್ಟು ಹಾಕಿ ಬೇಯಿಸುವುದು. ಕೊಂಕಣಿಯಲ್ಲಿ ರಮ್ದಣ್ ಅನ್ತೇವೆ. ಇದನ್ನು ಖಾರ ಖಾರ ಕೆಂಪು ಮೆಣಸು ಶುಂಠಿ ಚಟ್ನಿ...:-) ಟೈಪ್ ಮಾಡಬೇಕಾದ್ರೆ ಬಾಯಲ್ಲಿ ನೀರೂರ್ತಾ ಇರುತ್ತದೆ.

ಮೂರನೆ ದಿನ part-3ನಲ್ಲಿ ದೊಡ್ಡಕ್ . ದೊಡ್ಡಕ್ ಅಂದ್ರೆ nothing but ದಪ್ಪ ದೋಸೆ. ಮೊದಲಿಗೆ ಇಡ್ಲಿ ಹಿಟ್ಟಿಗೆ ಶುಂಠಿ + ಹಸಿ ಮೆಣಸಿನಕಾಯಿ ಪೇಸ್ಟ್ ಬೆರೆಸಿಡುತ್ತೇನೆ. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಕೆಂಪು ಮೆಣಸು, ಮೆಂತೆ ಹಾಕಿ ಒಗ್ಗರಣೆ ಕೊಡುವುದು ಅದರಲ್ಲಿ 5-6- ಸೌಟು (ಸೌಟು ಮತ್ತು ಸಟ್ಟುಗ words taught to me by ಮೇಲಿನ ಮನೆ ಪುಟ್ಟು ದಿಶಾಂತ್) ಇಡ್ಲಿ ಹಿಟ್ಟು ಹಾಕಿ, ಬಾವಡಿಯಿಂದ ಮುಚ್ಚಿ, ಎರಡು ಬದಿ ಕೆಂಪಾಗುವವರೆಗೆ ಬೇಯಿಸುವುದು. fresh ಬೆಣ್ಣೆಯೊಂದಿಗೆ ಗುಳುಂ ಮಾಡುವುದು :-))

ಹಾಂ, ಪೇಟೆಯಲ್ಲಿ ಸಿಗುವ ಇಡ್ಲಿ ಹಿಟ್ಟಿಂದ ದೊಡ್ಡಕ್ ಮಾಡಿದ್ರೆ ಚೆನ್ನಾಗಿರಲ್ಲ.. ಮನೆಯಲ್ಲೇ ಮಾಡಿ... ನನ್ನ ಇಡ್ಲಿ ಹಿಟ್ಟಿನ ಅಳತೆ ಒಂದು ಕಪ್ ಉದ್ದಿನಬೇಳೆಗೆ ಎರಡು ಕಪ್ ಬೆಳ್ತಿಗೆ ಅಕ್ಕಿ...ಕೆಂಪಕ್ಕಿ ಇದ್ರೆ ಇನ್ನೂ ಸೂಪರ್..in terms of taste as well as texture... ಈ ದೊಡ್ಡಕ್ ಗೆ ಮಾಳವಿಕ ಇಟ್ಟ ಹೆಸರು the great Indian Konkani Pizza... ಬಿಸಿ ಬಿಸಿ ಇದ್ದಾಗಲೆ ಸ್ವಾಹಾ ಮಾಡಬೇಕು. [ಕೃಪೆ : ನೆನಪಿನ ಸಂಚಿಯಿಂದ]

English summary

The great Indian Konkani Pizza | ದಿ ಗ್ರೇಟ್ ಇಂಡಿಯನ್ ಕೊಂಕಣಿ ಪಿಜ್ಜಾ

The great Indian Konkani Pizza prepared using Idli dough. It is tasty as well as easy to make. Try it once at home.
Story first published: Thursday, March 1, 2012, 14:38 [IST]
X
Desktop Bottom Promotion