For Quick Alerts
ALLOW NOTIFICATIONS  
For Daily Alerts

ಹಳೆಯ ಬಿಳಿ ಬೆಡ್‌ಶೀಟ್‌ಗಳನ್ನು ಮರುಬಳಕೆ ಮಾಡಲು 5 ಸಲಹೆಗಳು

|

ಹಳೆದಾಗಿರುವ ಬಿಳಿ ಬೆಡ್‍ಶೀಟ್‍ಗಳನ್ನು ಮರುಬಳಕೆ ಮಾಡಲು ಹಲವಾರು ಮಾರ್ಗಗಳಿವೆ. ಹೊಸದಾಗಿ ತಂದಂತಹ ಬೆಡ್‍ಶೀಟ್‍ಗಳನ್ನು ಕೆಲವು ತಿಂಗಳು ಬಳಸಿದ ಮೇಲೆ ನಾವು ಅವುಗಳನ್ನು ಬಿಸಾಡಿ ಹೊಸ ಬೆಡ್‍ಶೀಟ್ ಕೊಂಡುಕೊಳ್ಳಲು ಇಚ್ಛಿಸುತ್ತೇವೆ. ಆದರೆ ನಿಮ್ಮ ಹಳೆಯ ಬೆಡ್‍ಶೀಟ್‍ಗಳನ್ನು ಉಳಿಸಿಕೊಂಡು ಅವುಗಳನ್ನು ಸೃಜನಶೀಲವಾಗಿ ಬಳಸಿಕೊಳ್ಳಲು ಹಲವಾರು ಮಾರ್ಗಗಳಿವೆ. ನೀವು ಸಹ ಸ್ವಲ್ಪ ಸೃಜನಶೀಲತೆಯಿಂದ ಆಲೋಚಿಸಿ, ನಿಮಗೂ ಸಹ ಹೊಚ್ಚ ಹೊಸ ಆಲೋಚನೆಗಳು ಲಭಿಸಬಹುದು.

ಬೆಡ್‍ಶೀಟಿನ ಮೇಲೆ ಸಣ್ಣ ಕಲೆ ಅಥವಾ ಸ್ವಲ್ಪ ಹರಿದಿದ್ದರೆ ನಾವು ಅದನ್ನು ಬಿಸಾಡಲು ಆಲೋಚಿಸುತ್ತೇವೆ. ಅದರಲ್ಲೂ ಬಿಳಿಯ ಬೆಡ್‍ಶೀಟುಗಳು ಕಲೆಗಳಿಗೆ ಹೆಚ್ಚು ಈಡಾಗುತ್ತದೆ. ಆದಾಗಿಯೂ ನೀವು ಇದನ್ನು ಬಿಸಾಡದೆ ಬಳಸಿಕೊಳ್ಳಲು ಹಲವಾರು ಮಾರ್ಗಗಳು ಇರುತ್ತವೆ. ಒಂದು ವೇಳೆ ನಿಮ್ಮ ಹಳೆಯ ಬಿಳಿಯ ಬೆಡ್‍ಶೀಟ್‍ಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂದು ನಿಮಗೆ ಗೊತ್ತಿದ್ದರೆ, ಅವುಗಳನ್ನು ಬಳಸಿಕೊಂಡು ನೀವು ನಾನಾ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಬನ್ನಿ ಅದಕ್ಕಾಗಿ ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಮುಂದೆ ಓದಿ....

ನಿಮ್ಮ ಪೀಠೋಪಕರಣಗಳನ್ನು ಮುಚ್ಚಿ
ಒಂದು ವೇಳೆ ನಿಮ್ಮ ಮನೆಯಲ್ಲಿ ಬಳಸದೆ ಇರುವಂತಹ ಪೀಠೋಪಕರಣಗಳು ಇದ್ದಲ್ಲಿ, ಅವುಗಳನ್ನು ಬೆಡ್‍ಶೀಟಿನಿಂದ ಮುಚ್ಚಿ. ಹಾಗೆಯೇ ನೀವು ರಜೆಯ ಮೇಲೆ ಹೊರಗೆ ಹೋಗುತ್ತಿದ್ದಲ್ಲಿ, ಧೂಳಿನಿಂದ ಮುಕ್ತವಾಗಿರಬೇಕಾದ ಪೀಠೋಪಕರಣಗಳನ್ನು ಬೆಡ್‍ಶೀಟಿನಿಂದ ಮುಚ್ಚಿ. ಜೊತೆಗೆ ನಿಮ್ಮ ಮನೆಯನ್ನು ಯಾವುದಾದರು ಒಂದು ಸಮಾರಂಭಕ್ಕೆ ಮುನ್ನ ಸಿದ್ಧಗೊಳಿಸಬೇಕಾದಲ್ಲಿ ಸಹ ಈ ಬೆಡ್‍ಶೀಟ್‍ಗಳನ್ನು ಪೀಠೋಪಕರಣಗಳ ಮೇಲೆ ಮುಚ್ಚ ಬಹುದು. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ನಿಮ್ಮ ಇಸ್ತ್ರಿ ಮಾಡುವ ಮೇಜಿನ ಮೇಲೆ ಮುಚ್ಚಿ
ನಿಮ್ಮ ಬೆಡ್‍ಶೀಟ್‍ಗಳನ್ನು ಹೇಗೆ ಬಳಸುವುದು? ಹಳೆಯ ಬೆಡ್‍ಶೀಟ್‍ಗಳನ್ನು ನಿಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡುವ ಮೇಜಿನ ಮೇಲೆ ಮುಚ್ಚಿ. ಸಾಮಾನ್ಯವಾಗಿ, ನಿಮ್ಮ ಇಸ್ತ್ರಿ ಮಾಡುವ ಮೇಜಿನ ಮೇಲೆ ಇದಕ್ಕೆ ಅನುಕೂಲಕರವಾಗಿ ಕೆಲವೊಂದು ಬಟ್ಟೆಗಳನ್ನು ಹಾಕಬೇಕಾಗುತ್ತದೆ. ಇದಕ್ಕೆಂದು ಹೊಸ ಬಟ್ಟೆಗಳನ್ನು ಹಾಕುವ ಬದಲು, ನೀವು ನಿಮ್ಮ ಹಳೆಯ ಬೆಡ್‍ಶೀಟ್‍ಗಳನ್ನು ಬಳಸಿಕೊಳ್ಳಬಹುದು. ಏಕೆಂದರೆ ಹಳೆಯ ಬೆಡ್‍ಶೀಟ್‍ಗಳನ್ನು ಬಳಸಿಕೊಳ್ಳಬೇಕಾದಾಗ ನೀವು ಬಟ್ಟೆ ಸುಟ್ಟು ಹೋಗುತ್ತದೆ ಎಂಬುದರ ಕುರಿತಾಗಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ.

ನಿಮ್ಮ ಕಾರಿನಲ್ಲಿ ಬಳಸಿಕೊಳ್ಳಿ
ನಿಮ್ಮ ಕಾರಿನಲ್ಲಿ ಕೆಲವೊಂದು ವಸ್ತುಗಳನ್ನು ಇತರೆಡೆಗೆ ಸಾಗಿಸುವಾಗ, ನೀವು ನಿಮ್ಮ ಸೀಟ್ ಕವರ್‌ಗಳನ್ನು ಮಣ್ಣು ಮಾಡುವ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಬೆಡ್‍ಶೀಟ್ ಬಳಸಿದರೆ ನಿಮ್ಮ ಕಾರಿನ ಸೀಟ್‍ಗಳು ಹಾಳಾಗುವುದನ್ನು ತಡೆಯಬಹುದು. ಹೀಗೆ ನೀವು ನಿಮ್ಮ ಹಳೆಯ ಬಿಳಿ ಬೆಡ್‍ಶೀಟ್‍ಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು.

ಇವುಗಳನ್ನು ಏಪ್ರನ್‍ನಂತೆ ಬಳಸಿಕೊಳ್ಳಿ
ಹಳೆ ಬಿಳಿ ಬೆಡ್‍ಶೀಟ್‍ಗಳನ್ನು ಏನು ಮಾಡುವುದು? ಅವುಗಳನ್ನು ನಿಮ್ಮ ಏಪ್ರನ್‍ನಂತೆ ಬಳಸಿಕೊಳ್ಳಿ. ಹಳೆಯ ಬೆಡ್‍ಶೀಟ್‍ಗಳನ್ನು ಬಳಸಿಕೊಂಡು ಏಪ್ರನ್ ಹೊಲಿಸಿಕೊಳ್ಳಿ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕರೆಗಳು ಹಾಗುವ ಸಂಭವವಿರುತ್ತದೆ. ಅಂತಹ ಕರೆಗಳಿಂದ ನಿಮ್ಮ ಬಟ್ಟೆಗಳಿಗೆ ಹಾನಿಯನ್ನು ಮಾಡದಿರಲು ಈ ಏಪ್ರನ್‍ಗಳು ರಕ್ಷಣಾ ಕವಚದಂತೆ ಕೆಲಸ ಮಾಡುತ್ತವೆ. ಮನೆಯಲ್ಲಿ ಹಳೆಯ ಬೆಡ್ ಶೀಟ್ ಇರಿಸಿಕೊಂಡು ಹೊಸ ಏಪ್ರನ್ ಏಕೆ ಕೊಳ್ಳುವಿರಿ. ಹಳೆಯ ಬೆಡ್‍ಶೀಟನ್ನೇ ಹೊಸ ಏಪ್ರನ್ ಆಗಿ ಪರಿವರ್ತಿಸಿಕೊಳ್ಳಿ. ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ

ಪರದೆಗಳಾಗಿ ಬಳಸಿ
ಒಂದು ವೇಳೆ ನಿಮ್ಮ ಹಳೆಯ ಬೆಡ್‍ಶೀಟಿನ ಬಣ್ಣಗಳು ನಿಮ್ಮ ಮನೆಯ ಗೋಡೆಗೆ ಹೊಂದಿಕೊಂಡರೆ, ಅವುಗಳನ್ನು ಏಕೆ ನಿಮ್ಮ ಮನೆಯ ಕಿಟಕಿ, ಬಾಗಿಲುಗಳಿಗೆ ಪರದೆಗಳಾಗಿ ಬಳಸಬಾರದು? ಬಿಳಿಯ ಬಣ್ಣವು ಬಹುತೇಕ ಎಲ್ಲಾ ಬಣ್ಣಗಳ ಜೊತೆಗೂ ಆರಾಮವಾಗಿ ಬೆರೆಯುತ್ತದೆ. ಹಾಗಾಗಿ ನೀವು ಅವುಗಳ ಬಗ್ಗೆ ಚಿಂತಿಸುವುದೇ ಬೇಡ. ನಿಮ್ಮ ಮನೆಯ ಗೋಡೆಗಳಿಗೆ ನಿಸ್ಸಂಶಯವಾಗಿ ನಿಮ್ಮ ಹಳೆಯ ಬಿಳಿ ಬೆಡ್ ಶೀಟ್ ಹೊಂದಿಕೊಳ್ಳುತ್ತದೆ. ಇದು ನಿಮ್ಮ ಹಳೆಯ ಬೆಡ್‍ಶೀಟನ್ನು ಬಳಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದು.

English summary

5 Ways To Reuse White Old Bed Sheets

There are many ways to reuse white old bed sheets. After using new bed sheets for a few months, we tend to throw them away to buy new ones. But it's a good idea to save your old bed sheets because there are so many creative ways to reuse them. Here are some ways to reuse white old bed sheets:
X
Desktop Bottom Promotion