For Quick Alerts
ALLOW NOTIFICATIONS  
For Daily Alerts

ದಿಢೀರ್‌ ಅಂತಾ ಮಾಡಿ ಬ್ರೆಡ್ ರಸ್ಮಲೈ ರೆಸಿಪಿ

|

ಮೂಲತಃ ಉತ್ತರ ಭಾರತದ ಸಿಹಿ ಖಾದ್ಯ ರಸ್ಮಲೈ ದಕ್ಷಿಣ ಭಾರತದ ಸಾಕಷ್ಟು ಆಹಾರ ಪ್ರಿಯರ ನೆಚ್ಚಿನ ಸಿಹಿ ಖಾದ್ಯವಾಗಿದೆ. ಸಾಮಾನ್ಯವಾಗಿ ರಸ್ಮಲೈ ಅನ್ನು ಹೊಡೆದ ಹಾಲಿನ ಕೆನೆಯಿಂದ ತಯಾರಿಸುತ್ತಾರೆ. ಇದು ಹುದುಗುವಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
ಅದಕ್ಕಾಗಿ ದಿಢೀರ್‌ ಎಂದು ಮಾಡುವ ಬ್ರೆಡ್ ರಸ್ಮಲೈ ಬಹಳ ಸುಲಭ ಮತ್ತು ರುಷಿಕರ ಪಾಕವಿಧಾನವಾಗಿದೆ. ಇದನ್ನು ಮನೆಯಲ್ಲಿಯೇ ತಯಾರಿಸಬಹುದು ಮತ್ತು ಹಬ್ಬದ ಸಮಯದಲ್ಲಿ, ವಿಶೇಷ ಅತಿಥಿಗಳನ್ನು ಆಹ್ವಾನಿಸಿದಾಗ ತಯಾರಿಸಲು ಇದು ಬೆಸ್ಟ್ ರೆಸಿಪಿ ಆಗಿದೆ.

Bread Rasmalai Recipe

ಶೀಘ್ರದಲ್ಲೇ ತಯಾರಾಗುವ ಬ್ರೆಡ್‌ ರಸ್ಮಲೈ ಮಾಡುವುದು ಹೇಗೆ, ಅದಕ್ಕೆ ಬೇಕಾಗುವ ಸಾಮಾಗ್ರಿಗಳೇನು ಬನ್ನಿ ಮುಂದೆ ತಿಳಿಯೋಣ:

Bread Rasmalai Recipe/ ಬ್ರೆಡ್ ರಸ್ಮಲೈ ರೆಸಿಪಿ
Bread Rasmalai Recipe/ ಬ್ರೆಡ್ ರಸ್ಮಲೈ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By: Meena Bhandari

Recipe Type: Sweet

Serves: 4

Ingredients
  • ಬೇಕಾಗುವ ಸಾಮಾಗ್ರಿಗಳು

    ಬಿಳಿ ಬ್ರೆಡ್ - 4 ಸ್ಲೈಸ್‌

    ಸಕ್ಕರೆ - ಒಂದು ಕಪ್‌

    ಒಣದ್ರಾಕ್ಷಿ - 8-10

    ಪಿಸ್ತಾ - 8-10

    ನೆನೆಸಿದ ಬಾದಾಮಿ - 8-10

    ಪುಡಿಮಾಡಿದ ಗೋಡಂಬಿ - 8-10

    ಕೊಬ್ಬಿನ ಹಾಲು ಹಾಲು - 1 ಲೀಟರ್

    ಕೇಸರಿ - 1 ಪಿಂಚ್

Red Rice Kanda Poha
How to Prepare
  • ತಯಾರಿಸುವ ವಿಧಾನ

    1. ಬಿಳಿ ಬ್ರೆಡ್ ಅನ್ನು ಗಾಜಿನ ಅಥವಾ ಯಾವುದೇ ವೃತ್ತಾಕಾರದ ವಸ್ತುವಿನ ಸಹಾಯದಿಂದ ಗುಂಡಾಗಿ ಕತ್ತರಿಸಿ, ಬ್ರೆಡ್‌ ಅಂಚುಗಳನ್ನು ಕತ್ತರಿಸಿ. ಎಲ್ಲಾ ಬ್ರೆಡ್ ಹೋಳುಗಳನ್ನು ಒಂದೇ ಆಕೃತಿಗೆ ಕತ್ತರಿಸಿಕೊಳ್ಳಿ.

    2. ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ

    3. ಹಾಲು ಚೆನ್ನಾಗಿ ಕುದ್ದಿ ಅರ್ಧ ಮಟ್ಟಕ್ಕೆ ಬಂದಾಗ ಸಕ್ಕರೆ, ಕೇಸರಿ, ಪುಡಿಮಾಡಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಸೇರಿಸಿ.

    4. ಹಾಲು ಇನ್ನು ಕುದ್ದು ಗಟ್ಟಿ ಆಗುವವರೆಗೆ ಮತ್ತು ಸ್ವಲ್ಪ ಹಳದಿ ಬಣ್ಣ ಬರುವವರೆಗೆ ಕುದಿಸಿ.

    5. ಕತ್ತರಿಸಿದ ಬ್ರೆಡ್ ಚೂರುಗಳನ್ನು ಒಂದು ತಟ್ಟೆಯಲ್ಲಿ ಇಡಿ.

    6. ಹಾಲಿನ ಮಿಶ್ರಣಕ್ಕೆ ಬ್ರೆಡ್ ಚೂರುಗಳನ್ನು ಹಾಕಿ.

    7. ಇದೀಗ ಉಳಿದ ಡ್ರೈ ಫ್ರೂಟ್ಸ್‌ಗಳಿಂದ ಅಲಂಕರಿಸಿ.

    8. ಇದನ್ನು ಬಿಸಿ ಅಥವಾ ಫ್ರಿಡ್ಜ್‌ನಲ್ಲಿಟ್ಟು ಕೆಲವು ಸಮಯದ ನಂತರ ತಣ್ಣಗೆ ಸೇವಿಸಬಹುದು.

Instructions
  • ಹಾಲನ್ನು ಕುದಿಸುವಾಗ ನಿರಂತರವಾಗಿ ಕಲಸುತ್ತಾ ಇರಿ. ತಯಾರಿಸಿದ ಅರ್ಧ ಘಂಟೆಯೊಳಗೆ ಇದನ್ನು ಸೇವಿಸಿ, ಇಲ್ಲದಿದ್ದರೆ ಬ್ರೆಡ್ ಪೂರ್ಣ ಮೆತ್ತಗೆ ಆಗುತ್ತದೆ.
Nutritional Information
  • ಫೈಬರ್ - - 8.9 ಗ್ರಾಂ
  • ಕ್ಯಾಲ್ಸಿಯಂ - ಕ್ಯಾಲ್ - 1157
  • ಪ್ರೋಟೀನ್ - - 33.3 ಗ್ರಾಂ
[ 5 of 5 - 16 Users]
X
Desktop Bottom Promotion