For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಬಿಸಿಗೆ ಗಣಕೆ ಹಣ್ಣಿನ ಪಾನಕ

Posted By:
|

ಇದು ರಣರಣ ಬೇಸಿಗೆ ದಿನಗಳು. ದೇಹಕ್ಕೆ ತಂಪು ಮಾಡಿಕೊಳ್ಳಲೇಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ಜ್ಯೂಸ್ ಸೇವಿಸಬೇಕು. ವೆರೈಟಿ ಹಣ್ಣುಗಳು ದೇಹಕ್ಕೆ ತಂಪು ಮಾಡುವುದರ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ.

Black Nightshade Fruit juice Recipe

ನಾವಿಲ್ಲಿ ಗಣಕೆ ಹಣ್ಣಿನಿಂದ ಪಾನಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಗಣಕೆ ಸೊಪ್ಪನ್ನು ನಾವು ಮಾರುಕಟ್ಟೆಯಲ್ಲಿ ಗಮನಿಸಿರುತ್ತೇವೆ. ಆದರೆ ಹಣ್ಣುಗಳು ಮಾರಾಟವಾಗುವುದಿಲ್ಲ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಹಣ್ಣುಗಳು ಲಭ್ಯವಿದ್ದರೆ ಖಂಡಿತ ಪಾನಕ ಮಾಡಿ ಸೇವಿಸುವುದನ್ನು ಮರೆಯಬೇಡಿ.

ಯುರೋಪಿಯನ್ ನೈಟ್ ಶೇಡ್,ಬ್ಲಾಕ್ ನೈಟ್ ಶೇಡ್, ಬ್ಲಾಕ್ ಬೆರ್ರೀ ನೈಟ್ ಶೇಡ್, ಸೋಲಾನಮ್ ನಿಗ್ರಮ್ ಎಂದು ಇಂಗ್ಲೀಷಿನಲ್ಲಿ ಕರೆಯಲಾಗುವ ಈ ಹಣ್ಣಿಗೆ ಕನ್ನಡದಲ್ಲಿ ಕಾಕೆ ಹಣ್ಣು, ಗಣಕೆ ಹಣ್ಣು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಹಾಗಾದ್ರೆ ಈ ಹಣ್ಣಿನಿಂದ ಪಾನಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

Black Nightshade Fruit juice Recipe ಗಣಕೆ ಹಣ್ಣಿನ ಪಾನಕ
Black Nightshade Fruit juice Recipe ಗಣಕೆ ಹಣ್ಣಿನ ಪಾನಕ
Prep Time
3 Mins
Cook Time
3M
Total Time
3 Mins

Recipe By: Sushma

Recipe Type: Juice

Serves: 1

Ingredients
  • ಬೇಕಾಗುವ ಸಾಮಗ್ರಿಗಳು

    . ಗಣಕೆ ಹಣ್ಣು - 40 ರಿಂದ 50 ಹಣ್ಣುಗಳು

    . ಸಕ್ಕರೆ - ಮೂರೂ ಚಮಚ

    . ಉಪ್ಪು - ಚಿಟಿಕೆ

    . ಕಾಳುಮೆಣಸು - ಎರಡು

    . ಜೀರಿಗೆ - 10 ಕಾಳುಗಳು

Red Rice Kanda Poha
How to Prepare
  • ಮಾಡುವ ವಿಧಾನ

    ಚೆನ್ನಾಗಿ ತೊಳೆದ ಗಣಕೆ ಹಣ್ಣುಗಳು, ಸಕ್ಕರೆ, ಉಪ್ಪು, ಕಾಳುಮೆಣಸು, ಜೀರಿಗೆ ಯನ್ನು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಜ್ಯೂಸರ್ ನಲ್ಲಿ ಕೂಡ ಮಾಡಬಹುದು.

    ನಂತರ ಸೋಸಿಕೊಂಡರೆ ಗಣಕೆ ಹಣ್ಣಿನ ಪಾನಕ ಸಿದ್ಧವಾಗುತ್ತದೆ.

Instructions
  • ಗಣಕೆ ಹಣ್ಣುಗಳ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ . ರಕ್ತದ ಕಣಗಳನ್ನು ಹೆಚ್ಚಿಸುವುದಕ್ಕೆ ಇದು ಸಹಕಾರಿ . ದೇಹದ ಟಾಕ್ಸಿಕ್ ಅಂಶವನ್ನು ಹೊರಹಾಕುವುದಕ್ಕೆ ಸಹಕಾರಿ. . ಹೊಟ್ಟೆ ನೋವಿರುವವರು ಇದನ್ನು ಸೇವಿಸುವುದು ಒಳ್ಳೆಯದು. . ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. . ಹಲ್ಲುನೋವಿರುವವರು ಈ ಹಣ್ಣುಗಳನ್ನು ಸೇವಿಸುವುದು ಒಳಿತು
Nutritional Information
[ 4.5 of 5 - 13 Users]
X
Desktop Bottom Promotion