For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿ-ಬಿಂಬಲುಕಾಯಿ ಉಪ್ಪಿನಕಾಯಿ ರೆಸಿಪಿ

Posted By:
|

ಉಪ್ಪಿನಕಾಯಿ ಇಲ್ಲದ ಊಟ ಅದೊಂದು ಊಟವೇ ಎಂಬ ಮಾತೇ ಇದೆ. ಉಪ್ಪಿನಕಾಯಿ ಅಂದ ಕೂಡಲೇ ಹೆಚ್ಚಿನವರಿಗೆ ಮಾವಿನಕಾಯಿ,ನಿಂಬೆಕಾಯಿ ನೆನಪಾಗುತ್ತದೆ. ಉಪ್ಪಿನಕಾಯಿ ಎಂದಾಕ್ಷಣ ಬಾಯಲ್ಲಿ ನೀರೂರುವುದು ಕೂಡ ಸಹಜ. ಹಾಗಂತ ಉಪ್ಪಿನಕಾಯಿಗೆ ಕೇವಲ ಮಾವಿನಕಾಯಿ ಅಥವಾ ನಿಂಬೆಕಾಯಿಯೇ ಬೇಕೆಂದೇನೂ ಇಲ್ಲ. ಹೌದು ನಾವಿವತ್ತು ನಿಮಗೆ ಹೊಸ ರೆಸಿಪಿಯೊಂದನ್ನು ತಿಳಿಸಿಕೊಡುತ್ತಿದ್ದೇವೆ. ಈ ಉಪ್ಪಿನಕಾಯಿ ಕೈಗೆಟುಕುವ ಬೆಲೆಯಲ್ಲಿ ತಯಾರಿಸಬಹುದಾದ ದಿಢೀರ್ ಉಪ್ಪಿನಕಾಯಿ. ಇದಕ್ಕೆ ಮಾವಿನಕಾಯಿಯೂ ಬೇಡ, ನಿಂಬೆಕಾಯಿಯೂ ಬೇಡ. ಹಾಗಾದ್ರೆ ಬೇಕಾಗಿರುವುದು ಏನು ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

bitter gourd & bimbalu pickle recipe

bitter gourd and bimbalu pickle recipe ಹಾಗಲಕಾಯಿ-ಬಿಂಬಲುಕಾಯಿ ಉಪ್ಪಿನಕಾಯಿ ರೆಸಿಪಿ
bitter gourd and bimbalu pickle recipe ಹಾಗಲಕಾಯಿ-ಬಿಂಬಲುಕಾಯಿ ಉಪ್ಪಿನಕಾಯಿ ರೆಸಿಪಿ
Prep Time
20 Mins
Cook Time
20M
Total Time
40 Mins

Recipe By: Sushma chatra

Recipe Type: Sides

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    1. ಹಾಗಲಕಾಯಿ - ಒಂದು ಬೌಲ್ ನಷ್ಟು ಹಾಗಲಕಾಯಿ ಹೋಳುಗಳು (ಅಥವಾ ಮಧ್ಯಮ ಗಾತ್ರದ ಎರಡು ಹಾಗಲಕಾಯಿ)

    2. ಬಿಂಬಲುಕಾಯಿ - 10 ರಿಂದ 12

    3. ಉಪ್ಪು - ರುಚಿಗೆ ತಕ್ಕಷ್ಟು

    4. ಎಳೆಯ (ಬಲಿಯದ) ಹಸಿರು ಕಾಳುಮೆಣಸು - 25 ರಿಂದ 30 ಕಾಳುಗಳು

    5. ಜೀರಿಗೆ ಮೆಣಸು- 20

    6. ಸಾಸಿವೆ - ಒಂದು ಸ್ಪೂನ್

    7. ಮೆಂತ್ಯೆ - ಒಂದು ಸ್ಪೂನ್

    8. ಅರಿಶಿನ ಪುಡಿ- ಚಿಟಿಕೆ

    9. ಇಂಗು- ಚಿಟಿಕೆ

    10. ಕೊಬ್ಬರಿ ಎಣ್ಣೆ- ಎರಡರಿಂದ ಮೂರು ಸ್ಪೂನ್

Red Rice Kanda Poha
How to Prepare
  • ಮಾಡುವ ವಿಧಾನ

    ಮೊದಲಿಗೆ ಒಂದು ಬೌಲ್ ನಷ್ಟು ಹಾಗಲಕಾಯಿಯನ್ನು ಉದ್ದುದ್ದು ಹೋಳುಗಳಂತೆ ಹೆಚ್ಚಿಕೊಳ್ಳಿ.

    ಅದಕ್ಕೆ ಎಳೆಯ ಅಥವಾ ಬಲಿಯದ ಹಸಿರು ಕಾಳುಮೆಣಸನ್ನು ಸೇರಿಸಿ.

    ಇದಕ್ಕೆ ಉಪ್ಪು ಹಾಕಿ ಒಂದು ಗಂಟೆ ನೆನೆಸಿಡಿ.

    ನಂತರ ಬಿಂಬಲುಕಾಯಿಯನ್ನು ಮಿಕ್ಸಿ ಮಾಡಿಕೊಳ್ಳಿ.

    ಒಂದು ಪಾತ್ರೆಯಲ್ಲಿ ಒಗ್ಗರಣೆ ತಯಾರಿಸಿ.

    ಕೊಬ್ಬರಿ ಎಣ್ಣೆ ಹಾಕಿ ಮೆಂತೆ ಸಾಸಿವೆ ಹುರಿಯಿರಿ.

    ಚಟಿಪಟಿ ಅಂದಾಗ ಸೂಜಿಮೆಣಸನ್ನು ಜಜ್ಜಿಕೊಂಡು ಹಾಕಿ. ಸೂಜಿಮೆಣಸು ಇಲ್ಲದೆ ಇರುವವರು ಹಸಿಮೆಣಸನ್ನು ಕೂಡ ಬಳಸಬಹುದು. ಉದ್ದಗೆ ಹೆಚ್ಚಿಕೊಂಡ ಹಸಿಮೆಣಸನ್ನೂ ಕೂಡ ಬಳಸಬಹುದು.

    ಸೂಜಿಮೆಣಸು ಸ್ವಲ್ಪ ಹುರಿದಾಗ ಅದಕ್ಕೆ ಇಂಗು, ಅರಿಶಿನ ಸೇರಿಸಿ.

    ನಂತರ ರುಬ್ಬಿಕೊಂಡ ಬಿಂಬಲುಕಾಯಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ.

    ಒಂದು ಐದು ನಿಮಿಷ ಕುದಿಸಿದ ನಂತರ ನೀರು ಆರುತ್ತದೆ. ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.

    ತಣ್ಣಗಾದ ಮಿಶ್ರಣಕ್ಕೆ ನೀವು ಮ್ಯಾರಿನೇಟ್ ಮಾಡಿಟ್ಟುಕೊಂಡ ಹಾಗಲಕಾಯಿ ಉಪ್ಪು ಮತ್ತು ಕಾಳುಮೆಣಸಿನ ಮಿಶ್ರಣವನ್ನು ಇದಕ್ಕೆ ಸೇರಿಸಿ.

    ನಂತರ ಚೆನ್ನಾಗಿ ಕೈಯಾಡಿದರೆ ರುಚಿರುಚಿಯಾದ ಹಾಗಲಕಾಯಿ ಉಪ್ಪಿನಕಾಯಿ ರೆಸಿಪಿ ತಯಾರಾಗುತ್ತದೆ. ಎರಡು ದಿನದ ನಂತರ ಹಾಗಲಕಾಯಿ ಉಪ್ಪು-ಹುಳಿಯನ್ನೆಲ್ಲಾ ಹೀರಿಕೊಂಡು ರುಚಿರುಚಿಯಾಗುತ್ತದೆ. ಹಾಗಾಗಿ ಉಪ್ಪಿನಕಾಯಿ ತಯಾರಿಸಿದ ಎರಡನೇ ದಿನಕ್ಕೆ ಅತ್ಯಧ್ಬುತವಾಗುತ್ತದೆ.

Instructions
  • ಪ್ರಯೋಜನ . ಕಡಿಮೆ ಬೆಲೆಯಲ್ಲಿ ಸಿದ್ಧವಾಗುವ ಉಪ್ಪಿನಕಾಯಿ ಅಂದರೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ . ದಿಢೀರ್ ತಯಾರಿಸಬಹುದು. ಹೆಚ್ಚು ಸಮಯ ವ್ಯಯಿಸುವ ಅಗತ್ಯವಿಲ್ಲ . ಹಾಗಲಕಾಯಿ ಉಪ್ಪಿನಕಾಯಿ ಆಗಿರೋದ್ರಿಂದ ಶುಗರ್ ಇರುವವರು ಕೂಡ ಬಳಸಬಹುದು . ಮಾವಿನಕಾಯಿ ಇಲ್ಲದ ಸೀಸನ್ ನಲ್ಲೂ ತಯಾರಿಸಬಹುದು. ಎಲ್ಲಾ ಸೀಸನ್ ನಲ್ಲೂ ತಯಾರಿಸಬಹುದಾದ ಉಪ್ಪಿನಕಾಯಿ. . ಕಾಳುಮೆಣಸು ಇರೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆ ವೃದ್ಧಿಸುತ್ತದೆ.
Nutritional Information
[ 5 of 5 - 112 Users]
X
Desktop Bottom Promotion