For Quick Alerts
ALLOW NOTIFICATIONS  
For Daily Alerts

ಥಟ್‌ ಅಂತ ಮಾಡಬಹುದು ಆಂಧ್ರ ಶೈಲಿ ಎಗ್ ಕರಿ

|

ಮಳೆ ಕಾಲದಲ್ಲಿ ಖಾರ, ರುಚಿಯ ಅಡುಗೆಗಳನ್ನು ಬಾಯಿ ಕೇಳುತ್ತದೆ. ಅದಕ್ಕೆ ಸೂಕ್ತವಾದ ರುಚಿಕರ ಖಾದ್ಯಗಳೆಂದರೆ ಆಂಧ್ರ ಪಾಕಶೈಲಿ. ಆಂಧ್ರ ಪಾಕವಿಧಾನಗಳು ಖಾರಾ ಹಾಗೂ ಮಸಾಲೆಯುಕ್ತ ಆಹಾರಗಳಿಗೆ ಖ್ಯಾತಿ. ನೀವು ಮಸಾಲೆಯುಕ್ತ ಆಹಾರಗಳನ್ನು ತಿನ್ನಲು ಬಯಸಿದರೆ ತೆಲುಗು ಶೈಲಿಯ ಪಾಕವಿಧಾನ ಪ್ರಯತ್ನಿಸಿ.
ಇಂದು ನಾವು ವಿಶೇಷ ಆಂಧ್ರ ಶೈಲಿಯಲ್ಲಿ ಸ್ಥಳೀಯವಾಗಿ ಕೋಡಿ ಗುಡ್ಡು ಪುಲುಸು ಎಂದು ಕರೆಯುವ ಮೊಟ್ಟೆಯ ಕರಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ. ಬಹಳ ಶೀಘ್ರದಲ್ಲಿ ಮತ್ತು ಸರಳವಾಗಿ ಮಾಡಬಹುದಾದ ರೆಸಿಪಿ ಇದಾಗಿದೆ.

egg curry

ಬನ್ನಿ, ಆಂಧ್ರ ಶೈಲಿಯ ಎಗ್ ಕರಿ ಅಥವಾ ಕೋಡಿ ಗುಡ್ಡು ಪುಲುಸು ಹೇಗೆ ಮಾಡೋದು ನೋಡೋಣ:

Andra Style Egg Curry/ ಥಟ್‌ ಅಂತ ಮಾಡಬಹುದು ಆಂಧ್ರ ಶೈಲಿ ಎಗ್ ಕರಿ
Andra Style Egg Curry/ ಥಟ್‌ ಅಂತ ಮಾಡಬಹುದು ಆಂಧ್ರ ಶೈಲಿ ಎಗ್ ಕರಿ
Prep Time
10 Mins
Cook Time
20M
Total Time
30 Mins

Recipe By: Meghashree

Recipe Type: Non veg

Serves: 4

Ingredients
  • ಬೇಕಾಗುವ ಪದಾರ್ಥಗಳು

    ಬೇಯಿಸಿದ ಮೊಟ್ಟೆಗಳು- 3

    ಈರುಳ್ಳಿ- 1 (ಕತ್ತರಿಸಿದ)

    ಬೆಳ್ಳುಳ್ಳಿ- 2

    ಹಸಿರು ಮೆಣಸಿನಕಾಯಿಗಳು - 3-4

    ಟೊಮ್ಯಾಟೋಸ್- 2

    ಅರಿಶಿನ ಪುಡಿ- 1 ಚಮಚ

    ಕೆಂಪು ಮೆಣಸಿನ ಪುಡಿ- 2 ಚಮಚ

    ಕೊತ್ತಂಬರಿ ಪುಡಿ- 1 ಚಮಚ

    ಹುಣಸೆ ತಿರುಳು- 1/2 ಕಪ್

    ಬೆಲ್ಲ- 1 ಚಮಚ

    ಉಪ್ಪು- ರುಚಿಗೆ ಅನುಗುಣವಾಗಿ

    ಸಾಸಿವೆ- 1 ಚಮಚ

    ಜೀರಾ ಬೀಜಗಳು- 1 ಚಮಚ

    ಕರಿಬೇವಿನ ಎಲೆಗಳು- 1 ಚಿಗುರು

    ತೈಲ- 2 ಚಮಚ

    ಕೊತ್ತಂಬರಿ ಸೊಪ್ಪು- 2 ಚಮಚ

Red Rice Kanda Poha
How to Prepare
  • ಮಾಡುವ ವಿಧಾನ

    1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ ಫ್ರೈ ಮಾಡಿ.

    2. ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ 4-5 ನಿಮಿಷ ಫ್ರೈ ಮಾಡಿ.

    3. ನಂತರ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ. 2-3 ನಿಮಿಷ ಬೇಯಿಸಿ.

    4. ಕತ್ತರಿಸಿದ ಟೊಮ್ಯಾಟೊ ಮತ್ತು ಹುಣಸೆ ತಿರುಳು ಸೇರಿಸಿ. 3-4 ನಿಮಿಷ ಬೇಯಿಸಿ.

    5. ನಂತರ ಬೆಲ್ಲ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಸಾಲೆ 4-5 ನಿಮಿಷ ಬೇಯಲು ಬಿಡಿ.

    6. ಈಗ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    7. ನಂತರ, ಗ್ಯಾಸ್‌ ಆಫ್‌ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

    8. ಈಗ ಬೇಯಿಸಿದ ಅನ್ನದೊಂದಿಗೆ ಈ ವಿಶೇಷ ಮೊಟ್ಟೆಯ ಮೇಲೋಗರವನ್ನು ಆನಂದಿಸಿ.

Instructions
  • ಬೇಯಿಸಿದ ಮೊಟ್ಟೆಗಳನ್ನು ಮಸಾಲೆಗೆ ಸೇರಿಸುವ ಮೊದಲು ಚಾಕುವಿನಿಂದ ಕತ್ತರಿಸಿ. ಇದು ಗ್ರೇವಿ ಮೊಟ್ಟೆಗಳ ಒಳಗೆ ಸೇರಲು ಸಹಾಯ ಮಾಡುತ್ತದೆ, ಇದು ಹೆಚ್ಚು ರುಚಿಕರವಾಗಿರುತ್ತದೆ.
Nutritional Information
[ 4.5 of 5 - 55 Users]
X
Desktop Bottom Promotion