For Quick Alerts
ALLOW NOTIFICATIONS  
For Daily Alerts

ಆಲೂ ಪಲ್ಯ ಪಾಕವಿಧಾನ

Posted By: Divya Pandith
|

ಆಲೂ ಪಲ್ಯ ಪ್ರತಿಯೊಂದು ಮನೆಯಲ್ಲೂ ತಯಾರಿಸುವ ಪ್ರಸಿದ್ಧ ಕರ್ನಾಟಕ ಶೈಲಿಯ ಭಕ್ಷ್ಯ. ಆಲೂಗಡ್ಡೆ ಮತ್ತು ರುಚಿಕರವಾದ ಮಸಾಲಾ ಪದಾರ್ಥಗಳ ಸಮ್ಮಿಶ್ರಣದಿಂದ ಈ ಪಲ್ಯವನ್ನು ತಯಾರಿಸಲಾಗುತ್ತದೆ. ಇದನ್ನು ದೋಸೆ, ರೊಟ್ಟಿ ಹಾಗೂ ಅನ್ನದ ಜೊತೆ ಸವಿಯಬಹುದು. ಬಾಯಲ್ಲಿ ನೀರೂರಿಸುವ ಈ ಪಲ್ಯವನ್ನು ಸಮೋಸದ ಮಿಶ್ರಣದಂತೆಯೂ ಬಳಸಲಾಗುವುದು.

ಸಾಮಾನ್ಯವಾಗಿ ಆಲೂಗಡ್ಡೆಯ ಪಲ್ಯ ತಯಾರಿಸುವಾಗ ಮಸಾಲೆಯನ್ನು ಸೇರಿಸಿ ತಯಾರಿಸಲಾಗುತ್ತದೆ. ಆದರೆ ನಾವಿಲ್ಲಿ ಹೇಳುತ್ತಿರುವ ಆಲೂಗಡ್ಡೆ ಪಲ್ಯದ ಪಾಕವಿಧಾನದಲ್ಲಿ ಮಸಾಲೆಯನ್ನು ಪರಿಮಳದ ಕಾರಣಕ್ಕಾಗಿ ಕೊನೆಯಲ್ಲಿ ಬಳಸುತ್ತೇವೆ. ಈ ವಿಧಾನವನ್ನು ಅನ್ವಯಿಸಿದರೆ ಬಹುಬೇಗ ತಯಾರಿಸಬಹುದು.

ಆಲೂಗಡ್ಡೆಯನ್ನು ನಿಮ್ಮ ನೆಚ್ಚಿನ ತರಕಾರಿ ಪಲ್ಯದೊಂದಿಗೂ ಸೇರಿಸಿ ಖಾದ್ಯವನ್ನು ತಯಾರಿಸಬಹುದು. ಹೆಚ್ಚು ರುಚಿಯನ್ನು ನೀಡಬಲ್ಲ ಈ ಪಾಕವಿಧಾನವನ್ನು ನೀವು ತಪ್ಪದೆಯೇ ಮಾಡಿ ನೋಡಿ. ನಿಮಗೆ ಅನುಕೂಲಕ್ಕಾಗಿ ನಾವಿಲ್ಲಿ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ನೀಡುತ್ತಿದ್ದೇವೆ.

ಆಲೂಗಡ್ಡೆ ಪಲ್ಯ ವಿಡಿಯೋ ರೆಸಿಪಿ

aloo palya recipe
ಆಲೂ ಪಲ್ಯ ಪಾಕವಿಧಾನ | ಹಂತ ಹಂತವಾದ ಆಲೂಗಡ್ಡೆ ಪಲ್ಯ ಪಾಕವಿಧಾನ | ಆಲೂಗಡ್ಡೆ ಬಾಜಿ ರೆಸಿಪಿ | ಆಲೂಗಡ್ಡೆ ಪಲ್ಯ ವಿಡಿಯೋ ರೆಸಿಪಿ | ಕರ್ನಾಟಕ ಶೈಲಿಯ ಕರಿ ರೆಸಿಪಿ
ಆಲೂ ಪಲ್ಯ ಪಾಕವಿಧಾನ | ಹಂತ ಹಂತವಾದ ಆಲೂಗಡ್ಡೆ ಪಲ್ಯ ಪಾಕವಿಧಾನ | ಆಲೂಗಡ್ಡೆ ಬಾಜಿ ರೆಸಿಪಿ | ಆಲೂಗಡ್ಡೆ ಪಲ್ಯ ವಿಡಿಯೋ ರೆಸಿಪಿ | ಕರ್ನಾಟಕ ಶೈಲಿಯ ಕರಿ ರೆಸಿಪಿ
Prep Time
5 Mins
Cook Time
30M
Total Time
35 Mins

Recipe By: ಅರ್ಚನಾ ವಿ.

Recipe Type: ಹೆಚ್ಚುವರಿ ಭಕ್ಷ್ಯ/ ಸೈಡ್ ಡಿಶ್

Serves: 2 ಮಂದಿಗೆ

Ingredients
  • ಆಲೂಗಡ್ಡೆ - 4

    ನೀರು - 2 ಕಪ್

    ಎಣ್ಣೆ - 1 1/2 ಟಿಚಮಚ

    ಹೆಚ್ಚಿಕೊಂಡ ಈರುಳ್ಳಿ - 2

    ಟೊಮೆಟೊ - 2

    ರುಚಿಗೆ ತಕ್ಕಷ್ಟು ಉಪ್ಪು

    ಅರಿಶಿನ - ಒಂದು ಚಿಟಕಿ

    ಖಾರದ ಪುಡಿ/ಮೆನಸಿನ ಹಿಟ್ಟು - 2 ಟೀ ಚಮಚ

    ದಾಲ್ಚಿನ್ನಿ - 1/2 ಇಂಚಿನ ಎರಡು ತುಂಡು

    ಲವಂಗ - 3-4

Red Rice Kanda Poha
How to Prepare
  • 1. ಕುಕ್ಕರ್‌ನಲ್ಲಿ ಆಲೂಗಡ್ಡೆಯನ್ನು ಹಾಕಿರಿ.

    2. ಇದಕ್ಕೆ ನೀರನ್ನು ಸೇರಿಸಿ, ಎರಡು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಸಂಪೂರ್ಣವಾಗಿ ಆರಲು ಬಿಡಿ.

    3. ಕುಕ್ಕರ್‌ನಿಂದ ಬೆಂದ ಆಲೂಗಡ್ಡೆಯನ್ನು ತೆಗೆದು, ಸಿಪ್ಪೆಯನ್ನು ತೆಗೆಯಬೇಕು.

    4. ಕೈಗಳಿಂದಲೇ ಆಲೂಗಡ್ಡೆಯನ್ನು ತುಂಡಾಗಿಸಿ ಮ್ಯಾಶ್/ಜಜ್ಜಿರಿ.

    5. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.

    6. ಈರುಳ್ಳಿಯನ್ನು ಸೇರಿಸಿ ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

    7. ಟೊಮೆಟೋ ಮತ್ತು ಚಿಟಕಿ ಉಪ್ಪನ್ನು ಸೇರಿಸಿ ಕಲುಕಿ.

    8. ಚೆನ್ನಾಗಿ ಮಿಶ್ರಗೊಳಿಸಿ ಮುಚ್ಚಳವನ್ನು ಮುಚ್ಚಿ.

    9. ಟೊಮೆಟೋ ರಸವು ಆವಿಯಾಗುವಂತೆ 5 ನಿಮಿಷಗಳ ಕಾಲ ಬೇಯಿಸಿ.

    10. ಅರಿಶಿನ ಪುಡಿ, ಖಾರ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.

    11. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

    12. ದಾಲ್ಚಿನ್ನಿ ಮತ್ತು ಲವಂಗವನ್ನು ಸೇರಿಸಿ ಚೆನ್ನಾಗಿ ಹುರಿದು, ಪಾತ್ರೆಯಲ್ಲೇ ಸೌಟಿನಿಂದ ಸ್ವಲ್ಪ ಜಜ್ಜಿರಿ.

    13. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.

Instructions
  • 1. ವ್ರತ ಅಥವಾ ಉಪವಾಸ ಆಚರಣೆಯ ಸಂದರ್ಭದಲ್ಲಿ ಈ ಪಾಕವಿಧಾನಕ್ಕೆ ಈರುಳ್ಳಿಯನ್ನು ಸೇರಿಸದೆಯೇ ತಯಾರಿಸಬಹುದು.
  • 2. ಕೊನೆಯಲ್ಲಿ ಮಸಾಲಾ ಪುಡಿಯನ್ನು ಸೇರಿಸಿ ಪಲ್ಯವನ್ನು ಖಾರ ಮತ್ತು ಪರಿಮಳಯುಕ್ತವಾಗಿ ತಯಾರಿಸಬಹುದು.
Nutritional Information
  • ಸರ್ವಿಂಗ್ ಸೈಜ್ - 1 ಕಪ್
  • ಕ್ಯಾಲೋರಿ - 145 ಕ್ಯಾಲ್
  • ಫ್ಯಾಟ್ - 9 ಗ್ರಾಂ
  • ಪ್ರೋಟೀನ್ - 4 ಗ್ರಾಂ
  • ಕಾರ್ಬೋಹೈಡ್ರೇಟ್ - 12 ಗ್ರಾಂ
  • ಸಕ್ಕರೆ - 4 ಗ್ರಾಂ
  • ಫೈಬರ್ - 3 ಗ್ರಾಂ

ಆಲೂ ಪಲ್ಯ ಪಾಕವಿಧಾನದ ಹಂತ ಹಂತವಾದ ಚಿತ್ರ ವಿವರಣೆ:

1. ಕುಕ್ಕರ್‌ನಲ್ಲಿ ಆಲೂಗಡ್ಡೆಯನ್ನು ಹಾಕಿರಿ.

aloo palya recipe

2. ಇದಕ್ಕೆ ನೀರನ್ನು ಸೇರಿಸಿ, ಎರಡು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಸಂಪೂರ್ಣವಾಗಿ ಆರಲು ಬಿಡಿ.

aloo palya recipe
aloo palya recipe

3. ಕುಕ್ಕರ್‌ನಿಂದ ಬೆಂದ ಆಲೂಗಡ್ಡೆಯನ್ನು ತೆಗೆದು, ಸಿಪ್ಪೆಯನ್ನು ತೆಗೆಯಬೇಕು.

aloo palya recipe
aloo palya recipe

4. ಕೈಗಳಿಂದಲೇ ಆಲೂಗಡ್ಡೆಯನ್ನು ತುಂಡಾಗಿಸಿ ಮ್ಯಾಶ್/ಜಜ್ಜಿರಿ.

aloo palya recipe

5. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.

aloo palya recipe

6. ಈರುಳ್ಳಿಯನ್ನು ಸೇರಿಸಿ ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

aloo palya recipe

7. ಟೊಮೆಟೊ ಮತ್ತು ಚಿಟಕಿ ಉಪ್ಪನ್ನು ಸೇರಿಸಿ ಕಲುಕಿ.

aloo palya recipe
aloo palya recipe

8. ಚೆನ್ನಾಗಿ ಮಿಶ್ರಗೊಳಿಸಿ ಮುಚ್ಚಳವನ್ನು ಮುಚ್ಚಿ.

aloo palya recipe

9. ಟೊಮೆಟೊ ರಸವು ಆವಿಯಾಗುವಂತೆ 5 ನಿಮಿಷಗಳ ಕಾಲ ಬೇಯಿಸಿ.

aloo palya recipe

10. ಅರಿಶಿನ ಪುಡಿ, ಖಾರ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.

aloo palya recipe
aloo palya recipe
aloo palya recipe
aloo palya recipe

11. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

aloo palya recipe

12. ದಾಲ್ಚಿನ್ನಿ ಮತ್ತು ಲವಂಗವನ್ನು ಸೇರಿಸಿ ಚೆನ್ನಾಗಿ ಹುರಿದು, ಪಾತ್ರೆಯಲ್ಲೇ ಸೌಟಿನಿಂದ ಸ್ವಲ್ಪ ಜಜ್ಜಿರಿ.

aloo palya recipe
aloo palya recipe
aloo palya recipe

13. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.

aloo palya recipe
aloo palya recipe
aloo palya recipe
[ 4 of 5 - 108 Users]
X
Desktop Bottom Promotion