For Quick Alerts
ALLOW NOTIFICATIONS  
For Daily Alerts

ಅಕ್ಕಿ ರೊಟ್ಟಿ ರೆಸಿಪಿ

Posted By: Divya pandith
|

ಅಕ್ಕಿ ರೊಟ್ಟಿ ಕರ್ನಾಟಕ ಶೈಲಿಯ ಪಾಕವಿಧಾನ. ಇದು ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದಾಗಿದೆ. ಇದು ಮಹರಾಷ್ಟ್ರ ಶೈಲಿಯ ತಾಳಿಪಿಟ್ಟನ್ನು ಹೋಲುತ್ತದೆ. ಈ ತಿಂಡಿಯು ಅತ್ಯುತ್ತಮ ಪೋಷಕಾಂಶ ಹಾಗೂ ರುಚಿಯಿಂದ ಕೂಡಿರುತ್ತದೆ. ಅಕ್ಕಿ ಹಿಟ್ಟು, ವಿವಿಧ ಬಗೆಯ ತರಕಾರಿ ಹಾಗೂ ಜೀರಿಗೆಯ ಮಿಶ್ರಣದಲ್ಲಿ ತಯಾರಿಸಲಾಗುವ ಈ ತಿಂಡಿ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುವ ಜೀರಿಗೆ ತಿಂಡಿಯನ್ನು ಜೀರ್ಣಿಸುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

ಒಮ್ಮೆ ತಿಂದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವ ಮನಸ್ಸನ್ನು ಉಂಟುಮಾಡುವ ಶಕ್ತಿಯನ್ನು ಈ ತಿಂಡಿ ಪಡೆದುಕೊಂಡಿದೆ. ಈ ಅಕ್ಕಿರೊಟ್ಟಿಗೆ ತೆಂಗಿನಕಾಯಿ ಚಟ್ನಿ, ಉಪ್ಪಿನಕಾಯಿ, ಮೊಸರು ಮತ್ತು ಬೆಣ್ಣೆಯ ಸಂಯೋಜನೆಯೊಂದಿಗೂ ಸವಿಯಬಹುದು. ಇವು ರೊಟ್ಟಿಯ ರುಚಿಯನ್ನು ದ್ವಿಗುಣಗೊಳಿಸುತ್ತವೆ. ಮುಂಜಾನೆಯ ಉಪಹಾರಕ್ಕೆ, ಮಧ್ಯಾಹ್ನದ ಊಟದ ಪ್ರಯುಕ್ತ, ಸಂಜೆ ಟೀ ಸಮಯಕ್ಕೆ ಅಥವಾ ಸಂಜೆಯ ಊಟಕ್ಕೂ ಸಹ ಇದನ್ನು ಸವಿಯಬಹುದು.

ಕರ್ನಾಟಕದೆಲ್ಲೆಡೆ ತಯಾರಿಸುವ ಈ ತಿಂಡಿಯನ್ನು ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು. ನಿಮಗೂ ಈ ತಿಂಡಿಯನ್ನು ತಯಾರಿಸಬೇಕು ಎನ್ನುವ ಮನಸ್ಸಾದರೆ ಈ ಮುಂದೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯ ಪಾಕವಿಧಾನವನ್ನು ಅರಿಯಿರಿ.

Akki rotti recipe
ಅಕ್ಕಿರೊಟ್ಟಿ ರೆಸಿಪಿ| ಅಕ್ಕಿರೊಟ್ಟಿ ಮಾಡುವುದು ಹೇಗೆ | ಅಕ್ಕಿ ಹಿಟ್ಟಿನ ರೊಟ್ಟಿ ರೆಸಿಪಿ | ಅಕ್ಕಿ ಹಿಟ್ಟಿನ ಪ್ಯಾನ್ ಕೇಕ್ ರೆಸಿಪಿ| ತಳಿಪೀತ್ ರೆಸಿಪಿ
ಅಕ್ಕಿರೊಟ್ಟಿ ರೆಸಿಪಿ| ಅಕ್ಕಿರೊಟ್ಟಿ ಮಾಡುವುದು ಹೇಗೆ | ಅಕ್ಕಿ ಹಿಟ್ಟಿನ ರೊಟ್ಟಿ ರೆಸಿಪಿ | ಅಕ್ಕಿ ಹಿಟ್ಟಿನ ಪ್ಯಾನ್ ಕೇಕ್ ರೆಸಿಪಿ| ತಳಿಪೀತ್ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By: ಕಾವ್ಯಶ್ರೀ ಎಸ್.

Recipe Type: ಪ್ರಮುಖ ಖಾದ್ಯ

Serves: 5

Ingredients
  • ಹೆಚ್ಚಿದ ಈರುಳ್ಳಿ- 2

    ಎಣ್ಣೆ - ಬಳಿಯಲು (ಗ್ರೀಸಿಂಗ್)

    ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1/2 ಕಪ್

    ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 5-6

    ಜೀರಿಗೆ - 3/4 ಟೇಬಲ್ ಚಮಚ

    ತುರಿದ ಗಜರಿ- 3/4 ಕಪ್

    ನೀರು -ಮಿಶ್ರಣಕ್ಕೆ

    ಉಪ್ಪು -3/4 ಟೇಬಲ್ ಚಮಚ

Red Rice Kanda Poha
How to Prepare
  • 1. ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿ.

    2. ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.

    3. ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಗಜರಿಯನ್ನು ಸೇರಿಸಿ.

    4. ಒಂದು ಚಮಚದ ಸಹಾಯದಿಂದ ಎಲ್ಲವನ್ನೂ ಮಿಶ್ರಗೊಳಿಸಿ.

    5. ಉಪ್ಪನ್ನು ಸೇರಿಸಿ, ಪುನಃ ಮಿಶ್ರಗೊಳಿಸಿ.

    6. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಕೈಗಳಿಂದ ಅಕ್ಕಿಹಿಟ್ಟನ್ನು ಕಲಸಿ.

    7. ಮಧ್ಯಮ ಪ್ರಮಾಣದಲ್ಲಿ ಮೃದುವಾಗುವಂತೆ ಹಿಟ್ಟನ್ನು ನಾದಿ.

    8. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರದ ಉಂಡೆಯನ್ನು ಮಾಡಿ.

    9. ಒಂದೆಡೆ ಇಡಿ.

    10. ಬೇಕಿಂಗ್ ಪೇಪರ್ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಸವರಿ.

    11. ಕಟ್ಟಿಕೊಂಡ ಹಿಟ್ಟಿನ ಉಂಡೆಯೊಂದನ್ನು ಪೇಪರ್ ಮೇಲೆ ಇಟ್ಟು, ಕೈಯಲ್ಲಿ ತಟ್ಟಿ.

    12. ತಟ್ಟಿಕೊಂಡ ಹಿಟ್ಟಿನ ಮೇಲೆ ಮೂರು ರಂಧ್ರವನ್ನು ಮಾಡಿ. ಇದು ಎಲ್ಲಾ ಭಾಗದಲ್ಲೂ ಚೆನ್ನಾಗಿ ಬೇಯಲು ಸಹಾಯವಾಗುವುದು.

    13. ಬಂಡಿಯ ಮೇಲೆ ಅಥವಾ ತವಾದ ಮೇಲೆ ಒಂದು ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

    14. ತಟ್ಟಿಕೊಂಡ ರೊಟ್ಟಿಯನ್ನು ಕೈಗಳ ಸಹಾಯದಿಂದ ತವಾದ ಮೇಲೆ ಹಾಕಿ ಅಥವಾ ವರ್ಗಾಯಿಸಿ.

    15. ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ.

    16. 3-4 ನಿಮಿಷಗಳ ಕಾಲ ಬೇಯಿಸಿ.

    17. ರೊಟ್ಟಿಯನ್ನು ತಿರುವಿ ಎರಡು ನಿಮಿಷಗಳ ಕಾಲ ಬೇಯಿಸಿ. ತಿಳಿಯಾದ ಹೊಂಬಣ್ಣಕ್ಕೆ ತಿರುಗಬೇಕು.

    18. ಇನ್ನೊಮ್ಮೆ ತಿರುವಿ, ಬೆಂದಿದೆಯೇ ಎಂದು ಪರೀಕ್ಷಿಸಿ.

    19. ಬೆಂದ ನಂತರ ಒಂದು ಪ್ಲೇಟ್‍ಗೆ ವರ್ಗಾಯಿಸಿ.

Instructions
  • 1. ಗಜರಿ ಮತ್ತು ಈರುಳ್ಳಿ ನೀರು ಬಿಡುವುದರಿಂದ ಬಹಳ ಮೃದುವಾಗಿ ಹಿಟ್ಟನ್ನು ಕಲಸಬೇಡಿ.
  • 2. ಇತರ ರೊಟ್ಟಿಗಳಿಗೆ ಹೋಲಿಸಿದರೆ ಅಕ್ಕಿ ರೊಟ್ಟಿ ಎಣ್ಣೆಯನ್ನು ಹೆಚ್ಚು ಹೀರಿಕೊಳ್ಳುತ್ತದೆ.
  • 3. ರೊಟ್ಟಿ ತಟ್ಟಲು ಒಂದು ಫಾಯಿಲ್ ಅಥವಾ ಅಂಟಿಕೊಳ್ಳದ ಕಾಗದಗಳನ್ನು ಬಳಸಬಹುದು.
  • 4. ರೊಟ್ಟಿಯನ್ನು ನೇರವಾಗಿ ಬಾಣಲೆಯ ಮೇಲೆ ಹಾಕಬಹುದು.
  • 5. ರೊಟ್ಟಿ ಬೇಯಿಸುವುದನ್ನು ಸಾಂಪ್ರದಾಯಿಕ ವಿಧಾನ ಎಂದು ಪರಿಗಣಿಸಲಾಗುವುದು.
  • 6. ರೊಟ್ಟಿ ತಟ್ಟುವಾಗ ಕೈಗೆ ಎಣ್ಣೆಯನ್ನು ಸವರಿಕೊಳ್ಳಿ.
Nutritional Information
  • ಬಡಿಸುವ ಪ್ರಮಾಣ - 1
  • ಕ್ಯಾಲೋರಿ - 152 ಕ್ಯಾಲ್
  • ಕೊಬ್ಬು - 2.4 ಗ್ರಾಂ.
  • ಪ್ರೋಟೀನ್ - 2.9 ಗ್ರಾಂ.
  • ಕಾರ್ಬೋಹೈಡ್ರೇಟ್ - 29.3ಗ್ರಾಂ.
  • ಸಕ್ಕರೆ - 0.9 ಗ್ರಾಂ
  • ಫೈಬರ್ - 1.8 ಗ್ರಾಂ.

ಚಿತ್ರ ಬರಹ:

1. ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿ.

Akki rotti recipe

2. ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.

Akki rotti recipe
Akki rotti recipe

3. ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಗಜರಿಯನ್ನು ಸೇರಿಸಿ.

Akki rotti recipe
Akki rotti recipe
Akki rotti recipe

4. ಒಂದು ಚಮಚದ ಸಹಾಯದಿಂದ ಎಲ್ಲವನ್ನೂ ಮಿಶ್ರಗೊಳಿಸಿ.

Akki rotti recipe

5. ಉಪ್ಪನ್ನು ಸೇರಿಸಿ, ಪುನಃ ಮಿಶ್ರಗೊಳಿಸಿ.

Akki rotti recipe
Akki rotti recipe

6. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಕೈಗಳಿಂದ ಅಕ್ಕಿಹಿಟ್ಟನ್ನು ಕಲಸಿ.

Akki rotti recipe
Akki rotti recipe

7. ಮಧ್ಯಮ ಪ್ರಮಾಣದಲ್ಲಿ ಮೃದುವಾಗುವಂತೆ ಹಿಟ್ಟನ್ನು ನಾದಿ.

Akki rotti recipe

8. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರದ ಉಂಡೆಯನ್ನು ಮಾಡಿ.

Akki rotti recipe
Akki rotti recipe

9. ಒಂದೆಡೆ ಇಡಿ.

Akki rotti recipe

10. ಬೇಕಿಂಗ್ ಪೇಪರ್ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಸವರಿ.

Akki rotti recipe

11. ಕಟ್ಟಿಕೊಂಡ ಹಿಟ್ಟಿನ ಉಂಡೆಯೊಂದನ್ನು ಪೇಪರ್ ಮೇಲೆ ಇಟ್ಟು, ಕೈಯಲ್ಲಿ ತಟ್ಟಿ.

Akki rotti recipe
Akki rotti recipe

12. ತಟ್ಟಿಕೊಂಡ ಹಿಟ್ಟಿನ ಮೇಲೆ ಮೂರು ರಂಧ್ರವನ್ನು ಮಾಡಿ. ಇದು ಎಲ್ಲಾ ಭಾಗದಲ್ಲೂ ಚೆನ್ನಾಗಿ ಬೇಯಲು ಸಹಾಯವಾಗುವುದು.

Akki rotti recipe

13. ಬಂಡಿಯ ಮೇಲೆ ಅಥವಾ ತವಾದ ಮೇಲೆ ಒಂದು ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

Akki rotti recipe

14. ತಟ್ಟಿಕೊಂಡ ರೊಟ್ಟಿಯನ್ನು ಕೈಗಳ ಸಹಾಯದಿಂದ ತವಾದ ಮೇಲೆ ಹಾಕಿ ಅಥವಾ ವರ್ಗಾಯಿಸಿ.

Akki rotti recipe

15. ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ.

Akki rotti recipe

16. 3-4 ನಿಮಿಷಗಳ ಕಾಲ ಬೇಯಿಸಿ.

Akki rotti recipe

17. ರೊಟ್ಟಿಯನ್ನು ತಿರುವಿ ಎರಡು ನಿಮಿಷಗಳ ಕಾಲ ಬೇಯಿಸಿ. ತಿಳಿಯಾದ ಹೊಂಬಣ್ಣಕ್ಕೆ ತಿರುಗಬೇಕು.

Akki rotti recipe
Akki rotti recipe

18. ಇನ್ನೊಮ್ಮೆ ತಿರುವಿ, ಬೆಂದಿದೆಯೇ ಎಂದು ಪರೀಕ್ಷಿಸಿ.

Akki rotti recipe

19. ಬೆಂದ ನಂತರ ಒಂದು ಪ್ಲೇಟ್‍ಗೆ ವರ್ಗಾಯಿಸಿ.

Akki rotti recipe
Akki rotti recipe
Akki rotti recipe
[ 4 of 5 - 38 Users]
X
Desktop Bottom Promotion