For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಹೆಚ್ಚು ಉಪ್ಪು, ಸಕ್ಕರೆ ಏಕೆ ನೀಡಬಾರದು? ತಜ್ಞರ ಹೇಳೋದೇನು?

|

ಉಪ್ಪು ಅಥವಾ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹಿರಿಯರಿಗೆ ಮಾತ್ರ ಹಾನಿಯಾಗುತ್ತದೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಇವೆರಡನ್ನು ಅತಿಯಾಗಿ ಸೇವಿಸುವುದರಿಂದ ಮಕ್ಕಳಿಗೂ ಹಾನಿಕರ. ಸಾಮಾನ್ಯವಾಗಿ ತಜ್ಞರು ಆರಂಭದಲ್ಲಿ ಮಕ್ಕಳಿಗೆ ಉಪ್ಪು ಮತ್ತು ಸಕ್ಕರೆ ನೀಡದಂತೆ ಸಲಹೆ ನೀಡುತ್ತಾರೆ. ಇದಕ್ಕೆ ಕಾರಣವೇನು ಮತ್ತು ಅವುಗಳ ಸೇವನೆಯಿಂದ ಏನು ಹಾನಿಯಾಗಬಹುದು ಎಂಬುದನ್ನು ಇಲ್ಲಿ ನೋಡೋಣ.

ಮಕ್ಕಳ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡುವುದು ಏಕೆ ಮುಖ್ಯ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಕ್ಕಳಿಗೆ ಉಪ್ಪು ಹಾಗೂ ಸಕ್ಕರೆ ಎಷ್ಟು ಪ್ರಮಾಣದಲ್ಲಿರಬೇಕು?:

ಮಗುವಿಗೆ 6 ತಿಂಗಳಾಗುವವರೆಗೆ ಸಕ್ಕರೆ ಮತ್ತು ಉಪ್ಪನ್ನು ನೀಡಬಾರದು ಎಂದು ತಜ್ಞರು ಹೇಳುತ್ತಾರೆ. 6 ತಿಂಗಳಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಗ್ರಾಂ ಉಪ್ಪನ್ನು ನೀಡಬಾರದು. ಒಂದರಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಎರಡು ಗ್ರಾಂ ಉಪ್ಪನ್ನು ನೀಡಬೇಕು. 4 ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ ದಿನಕ್ಕೆ 3 ಗ್ರಾಂ ಉಪ್ಪನ್ನು ನೀಡಬೇಕು. ಇದರಲ್ಲಿ 0. 4 ಗ್ರಾಂ ಸೋಡಿಯಂ ಇರುವುದು. ಜೊತೆಗೆ ಸಕ್ಕರೆ ಸೇರಿಸಿದ ಆಹಾರವನ್ನು ಚಿಕ್ಕ ಮಕ್ಕಳಿಗೆ ನೀಡಬಾರದು. ಮಕ್ಕಳಿಗೆ ನೈಸರ್ಗಿಕ ವಸ್ತುಗಳಿಂದ ಪಡೆದ ಸಕ್ಕರೆ ಸಾಕು. ಅವರು ಹಣ್ಣುಗಳು ಮತ್ತು ಇತರ ಆಹಾರಗಳಿಂದ ನೈಸರ್ಗಿಕ ಸಕ್ಕರೆ ಪಡೆಯುತ್ತಾರೆ, ಅವರಿಗೆ ಅಷ್ಟೇ ಸಾಕು. ಜೇನು ಅಥವಾ ಖರ್ಜೂರದ ಸಿರಪ್ ಕೂಡ 8 ತಿಂಗಳವರೆಗೆ ಅವರಿಗೆ ನೀಡಬಾರದು.

ಮಕ್ಕಳ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡುವುದು ಏಕೆ ಮುಖ್ಯ?:

ಮಕ್ಕಳ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡುವುದು ಏಕೆ ಮುಖ್ಯ?:

1. ಮೂಳೆಗಳಿಗೆ ಹಾನಿ:

ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ಮಕ್ಕಳ ಮೂಳೆಗಳಿಗೂ ಹಾನಿಯಾಗುತ್ತದೆ. ಉಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು. ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇಲ್ಲದಿದ್ದರೆ, ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸಬಹುದು. ಇದು ಮೂಳೆಗಳ ಮುರಿತಕ್ಕೆ ದಾರಿ ಮಾಡಿಕೊಡುವುದು. ಇದು ಬೆಳೆಯುವ ವಯಸ್ಸಿನ ಮಕ್ಕಳಿಗೆ ಒಳ್ಳೆಯದಲ್ಲ.

2. ನಿರ್ಜಲೀಕರಣದ ಅಪಾಯ:

2. ನಿರ್ಜಲೀಕರಣದ ಅಪಾಯ:

ಆಹಾರದಲ್ಲಿ ಸೋಡಿಯಂ ಅಧಿಕವಾಗಿರುವ ಮಕ್ಕಳು ನಿರ್ಜಲೀಕರಣಕ್ಕೆ ಬಲಿಯಾಗಬಹುದು. ಇದರಿಂದಾಗಿ ದೇಹದ ನೀರು ಬೆವರು ಅಥವಾ ಮೂತ್ರದ ರೂಪದಲ್ಲಿ ಹೊರಬರುತ್ತಲೇ ಇರುತ್ತದೆ. ಚಿಕ್ಕ ಮಕ್ಕಳಿಗೆ ಬಾಯಾರಿಕೆಯಾಗುತ್ತಿದೆ ಎಂದು ಹೇಳಿಕೊಳ್ಳುವುದಿಲ್ಲ, ಹಾಗಾಗಿ ಅವರ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದರಿಂದ ಮೂತ್ರಪಿಂಡದ ಕಲ್ಲುಗಳು, ದೇಹದಲ್ಲಿ ನೋವು, ಮಲಬದ್ಧತೆ ಮತ್ತು ಯಕೃತ್ತಿನ ಹಾನಿ ಮೊದಲಾದ ಸಮಸ್ಯೆಗಳು ಕಂಡುಬರುತ್ತವೆ.

3. ಅಧಿಕ ರಕ್ತದೊತ್ತಡದ ಸಮಸ್ಯೆ:

3. ಅಧಿಕ ರಕ್ತದೊತ್ತಡದ ಸಮಸ್ಯೆ:

ಆಹಾರದಲ್ಲಿ ಹೆಚ್ಚಿನ ಉಪ್ಪಿನಿಂದ, ರಕ್ತದಲ್ಲಿ ಬಿಪಿ ಮಟ್ಟವು ಹೆಚ್ಚಾಗುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗಬಹುದು, ಅದೂ ಚಿಕ್ಕ ವಯಸ್ಸಿನಲ್ಲಿ. ಈ ಸಮಸ್ಯೆಯು ಹೃದಯಕ್ಕೆ ತುಂಬಾ ಹಾನಿಕಾರಕವಾಗಿದೆ ಮತ್ತು ಮಗುವಿನಲ್ಲಿ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

4. ಕಿಡ್ನಿ ಸ್ಟೋನ್ ಸಮಸ್ಯೆ:

4. ಕಿಡ್ನಿ ಸ್ಟೋನ್ ಸಮಸ್ಯೆ:

ದೇಹದಲ್ಲಿ ಸೋಡಿಯಂ ಅಧಿಕವಾಗಿರುವುದರಿಂದ ಮೂತ್ರದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಬಿಡುಗಡೆಯಾಗುತ್ತದೆ. ಈ ಕ್ಯಾಲ್ಸಿಯಂ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಕಿಡ್ನಿಯಲ್ಲಿನ ಕಲ್ಲುಗಳು ಮಗುವಿನಲ್ಲಿ ದೇಹದ ನೋವು, ಶೀತ, ಜ್ವರ ಮತ್ತು ವಾಕರಿಕೆ ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಮೂತ್ರದಲ್ಲಿ ರಕ್ತವೂ ಇರಬಹುದು. ಆದ್ದರಿಂದ ಉಪ್ಪನ್ನು ಕಡಿಮೆ ಸೇವಿಸಿ.

5. ಮೂತ್ರಪಿಂಡಗಳ ಮೇಲೆ ಪರಿಣಾಮ:

5. ಮೂತ್ರಪಿಂಡಗಳ ಮೇಲೆ ಪರಿಣಾಮ:

ಮಕ್ಕಳಿಗೆ ಹೆಚ್ಚಿನ ಉಪ್ಪನ್ನು ನೀಡಿದರೆ, ಸೋಡಿಯಂ ಹೆಚ್ಚಾಗುವುದು. ಅವರ ಮೂತ್ರಪಿಂಡಗಳಲ್ಲಿ ಈ ಹೆಚ್ಚುವರಿ ಸೋಡಿಯಂ ಅನ್ನು ಸಂಸ್ಕರಿಸಲು ಸಾಧ್ಯವಿಲ್ಲ ಮತ್ತು ಅದನ್ನು ದೇಹದಿಂದ ಫಿಲ್ಟರ್ ಮಾಡಲು ಸಾಧ್ಯವಿಲ್ಲ. ಇದು ಮಕ್ಕಳ ಮೂತ್ರಪಿಂಡದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಕಿಡ್ನಿ ಸಂಬಂಧಿಸಿದ ರೋಗಗಳು ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

6. ಇತರ ಸಮಸ್ಯೆಗಳು:

6. ಇತರ ಸಮಸ್ಯೆಗಳು:

ನೀವು ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಉಪ್ಪು ಅಥವಾ ಸಕ್ಕರೆಯನ್ನು ನೀಡಿದರೆ, ಅವರು ಅನೇಕ ದೈಹಿಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಶಿಶುಗಳು ಎದೆಹಾಲನ್ನು ಬೇಗನೆ ಬಿಟ್ಟುಬಿಡುತ್ತವೆ. ಅಷ್ಟೇ ಅಲ್ಲ, ತರಕಾರಿಗಳು ಅಥವಾ ಇತರ ಆಹಾರಗಳ ರುಚಿಯನ್ನು ಬೆಳೆಸಿಕೊಳ್ಳುವುದಿಲ್ಲ. ಇದು ಸ್ಥೂಲಕಾಯತೆ, ಹಲ್ಲಿನ ನಷ್ಟ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಒಳಗೊಂಡಿರುತ್ತದೆ.

English summary

Why No Salt and Sugar For Babies until 1 Year of age in Kannada

Here we talking about Why No Salt and Sugar For Babies until 1 year of age in Kannada, read on
Story first published: Saturday, February 26, 2022, 16:30 [IST]
X
Desktop Bottom Promotion