For Quick Alerts
ALLOW NOTIFICATIONS  
For Daily Alerts

ಪೋಷಕರೇ, ಮಕ್ಕಳನ್ನು ಅತಿಯಾಗಿ ಕಂಟ್ರೋಲ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಡಿ

|

ಕೆಲವು ಮಕ್ಕಳು ತಮ್ಮ ಮಿತಿಗಳನ್ನು ದಾಟುತ್ತಾರೆ, ಇದರಿಂದಾಗಿ ಪೋಷಕರು ಕೆಲವು ಕಟ್ಟುಪಾಡುಗಳನ್ನು ಮಾಡಬೇಕಾಗುತ್ತದೆ. ಇದೇ ರೀತಿ ಪೋಷಕರು ತಮ್ಮ ಮಗುವನ್ನು ನಿಯಂತ್ರಿಸಲು ಹಲವು ಕಾರಣಗಳಿವೆ. ಅನೇಕ ಪೋಷಕರು ತಮ್ಮ ಮಗು ಪರಿಪೂರ್ಣವಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ನಿಯಂತ್ರಣದ ದಾರಿ ಹಿಡಿಯುತ್ತಾರೆ. ಆದ್ರೆ ಇದರಿಂದ ಮಕ್ಳಳಿಗೆ ಒಳಿತಾಗುವ ಬದಲು ಹಾನಿಯಾಗುತ್ತಿದೆ ಎಂಬುದು ತಿಳಿದಿಲ್ಲ. ಅದಕ್ಕಾಗಿ ಈ ಲೇಖನದಲ್ಲಿ, ನಿಯಂತ್ರಸುವ ಪೋಷಕರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ನಿಯಂತ್ರಣ ಮಾಡುವ ಪೋಷಕರು ಹೇಗಿರುತ್ತಾರೆ?:

ನಿಯಂತ್ರಣ ಮಾಡುವ ಪೋಷಕರು ಹೇಗಿರುತ್ತಾರೆ?:

ಇದೊಂದು ಪೋಷಕರ ಶೈಲಿಯಾಗಿದ್ದು, ಇದರಲ್ಲಿ ಒಬ್ಬರು ಅಥವಾ ಇಬ್ಬರೂ ಪೋಷಕರು ಮಗುವಿನ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಅಥವಾ ಅವನ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಇದನ್ನು ಅಧಿಕೃತ ಪೋಷಕತ್ವ ಎಂದೂ ಕರೆಯುತ್ತಾರೆ. ಇಂತಹ ಪೋಷಕರು ತಮ್ಮ ಮಕ್ಕಳಿಗೆ ಕಟ್ಟುನಿಟ್ಟಾದ ಶಿಸ್ತುಗಳನ್ನು ಮಾಡುತ್ತಾರೆ ಮತ್ತು ಅವರಿಗೆ ಅನೇಕ ನಿಯಮಗಳನ್ನು ರೂಪಿಸುತ್ತಾರೆ. ಜೊತೆಗೆ ತಮ್ಮ ಮಗುವಿನ ಅಗತ್ಯತೆಗಳನ್ನು ನಿರ್ಲಕ್ಷಿಸುತ್ತಾರೆ.

ಪೋಷಕರು ಹೇಗೆ ನಿಯಂತ್ರಿಸುತ್ತಾರೆ?:

ಪೋಷಕರು ಹೇಗೆ ನಿಯಂತ್ರಿಸುತ್ತಾರೆ?:

ಮಕ್ಕಳ ಮೇಲೆ ರೇಗುವ ಮೂಲಕ ಅಥವಾ ಅವರನ್ನು ಶಿಕ್ಷಿಸುವ ಮೂಲಕ, ಪೋಷಕರು ನಿಯಂತ್ರಣವನ್ನು ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವು ಪೋಷಕರು ಮಗುವಿಗೆ ಸರಳವಾಗಿ ನಿರ್ದೇಶಿಸಿ, ಅವರ ಭಾವನಾತ್ಮಕ ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆ. ಮಗುವನ್ನು ಚೆನ್ನಾಗಿಯೇ ನೋಡಿಕೊಂಡು ಅವರ ಮೇಲೆ ಆಗಾಗ ರೇಗುವುದು, ಬೈಯುವುದು ಮಾಡುತ್ತಾರೆ. ಜೊತೆಗೆ ಅವರ ಪ್ರತಿಯೊಂದು ಆಸೆ, ಅಭಿಪ್ರಾಯಗಳಿಗೆ ಅಡ್ಡಿಯಾಗಿ ನಿಲ್ಲುತ್ತಾರೆ.

ಪೋಷಕರು ಮಕ್ಕಳನ್ನು ಏಕೆ ನಿಯಂತ್ರಿಸಲು ಬಯಸುತ್ತಾರೆ?:

ಪೋಷಕರು ಮಕ್ಕಳನ್ನು ಏಕೆ ನಿಯಂತ್ರಿಸಲು ಬಯಸುತ್ತಾರೆ?:

ಕೆಲವು ಪೋಷಕರು ತಮ್ಮ ಮಕ್ಕಳಿಂದ ದೂರ ಹೋಗಲು ಬಯಸುವುದಿಲ್ಲ. ತಮ್ಮ ಮಕ್ಕಳು ಯಾವಾಗಲೂ ತಮ್ಮೊಂದಿಗೆ ಇರಬೇಕೆಂದು ಭಾವಿಸುತ್ತಾರೆ. ತಮಗೆ ಅಗತ್ಯ ಬಂದಾಗ ರಕ್ಷಣೆಗೆ ಬರಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಜೀವನದಲ್ಲಿ ತಮಗೆ ಸಿಗದೇ ಇರುವುದೇಲ್ಲವೂ ತಮ್ಮ ಮಕ್ಕಳಿಗೆ ಸಿಗಬೇಕೆಂದು ಶ್ರಮಿಸುತ್ತಾರೆ. ಈ ಪಯಣದಲ್ಲಿ ಪೋಷಕರು ತಮ್ಮ ಮಗುವಿನ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಜೊತೆಗೆ ಪಾಲಕರು ತಮ್ಮ ಮಗು ಜೀವನದಲ್ಲಿ ಯಾವುದೇ ತಪ್ಪು ಮಾಡಬೇಕೆಂದು ಬಯಸುವುದಿಲ್ಲ. ಇದರಿಂದಾಗಿ ಅವರು ತಮ್ಮ ಮಗುವಿನ ಬಗ್ಗೆ ಅತಿಯಾದ ರಕ್ಷಣಾ ಭಾವನೆ ಹೊಂದಿರುತ್ತಾರೆ. ಅದಕ್ಕಾಗಿ ಪೋಷಕರು ಮಕ್ಕಳ ಜೀವನವನ್ನು ನಿಯಂತ್ರಿಸಲು ಮನಸ್ಸು ಮಾಡುತ್ತಾರೆ.

ತಜ್ಞರು ಏನು ಹೇಳುತ್ತಾರೆ?:

ತಜ್ಞರು ಏನು ಹೇಳುತ್ತಾರೆ?:

ಪೋಷಕರು ತಮ್ಮ ಮಗುವನ್ನು ಬೆದರಿಸುವ ಬದಲು ಅವರೊಂದಿಗೆ ಸೌಹಾರ್ದಯುತ ನಡವಳಿಕೆಯನ್ನು ಇಟ್ಟುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಮಗುವು ತನ್ನ ಮನಸ್ಸಿನಲ್ಲಿರುವ ಎಲ್ಲವನ್ನೂ ಹೇಳುವಂತೆ ಇರಬೇಕು. ಇದರೊಂದಿಗೆ ಮಕ್ಕಳ ಮುಂದೆ ತಪ್ಪು ವಿಷಯಗಳನ್ನು ಅಥವಾ ತಪ್ಪು ಉದಾಹರಣೆಗಳನ್ನು ನೀಡಬಾರದು. ಇದರಿಂದ ಮಗು ನಿಮ್ಮ ಬಗ್ಗೆ ಭಯಪಡಬಹುದು ಅಥವಾ ನಿಮ್ಮಿಂದ ದೂರವಿರಲು ಪ್ರಯತ್ನಿಸಬಹುದು.

English summary

What are the Characteristics and Effects of Controlling Parents in Kannada

Here we talking about what are the characteristics and effects of controlling parents in kannada, read on
Story first published: Tuesday, April 12, 2022, 10:49 [IST]
X
Desktop Bottom Promotion