For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನು ಕೋವಿಡ್‌ 19ನಿಂದ ರಕ್ಷಿಸಲು ಪೋಷಕರು ಏನು ಮಾಡಬೇಕು?

|

ಕೊರೊನಾ 2ನೇ ಅಲೆ ಕಡಿಮೆ ಆಗಿದೆ, 3ನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಏಕೆಂದರೆ ದೇಶದಲ್ಲಿ ಈಗಾಗಲೇ ಕೆಲವು ಮಕ್ಕಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಆದ್ದರಿಂದ ಪೋಷಕರು ನಿರ್ಲಕ್ಷ್ಯ ಮಾಡುವಂತೆ ಇಲ್ಲ. ಆದ್ದರಿಂದ ಮಕ್ಕಳನ್ನು ಕೋವಿಡ್‌ 19 ರಕ್ಷಿಸಲು ಪೋಷಕರು ಅಗ್ಯತ ಕ್ರಮಗಳನ್ನು ಅನುಸರಿಸಬೇಕು.

ಪೋಷಕರೇ ಪ್ರಮುಖವಾಗಿ ನೀವು ಮಾಡಬೇಕಾಗಿರುವುದು:

ಕೈಗಳನ್ನು ತೊಳೆಯಬೇಕು

ಕೈಗಳನ್ನು ತೊಳೆಯಬೇಕು

ಮಕ್ಕಳಿಗೆ ಕೈಗಳನ್ನು ತೊಳೆಯುವ ಅಭ್ಯಾಸ ಮಾಡಿಸಬೇಕು. 5 ವರ್ಷದ ಮೇಲಿನ ಮಕ್ಕಳಿಗೆ ನೀವು ಆಗಾಗ ಕೈ ತೊಳೆಯಬೇಕು, ಇಲ್ಲದಿದ್ದರೆ ಕೈಯಲ್ಲಿ ಕ್ರಿಮಿ ಇರುತ್ತವೆ ಎಂದರೆ ಅವರು ಅದನ್ನು ಫಾಲೋ ಮಾಡುತ್ತವೆ. ಅಲ್ಲದೆ ಸೋಪು ಹಚ್ಚಿ ನೀರಿನಲ್ಲಿ ಆಡುವುದು ಅಂದರೆ ಅವರಿಗೂ ಇಷ್ಟ. ಇನ್ನು 5 ವರ್ಷದ ಕೆಳಗಿನ ಮಕ್ಕಳಿಗೆ ಪೋಷಕರು ಅಥವಾ ಕೇರ್‌ಟೇಕರ್‌ ಆಗಾಗ ಕೈ ತೊಳೆಸಬೇಕು.

ಮಕ್ಕಳ ಕೈಗಳಿಗೆ ಸ್ಯಾನಿಟೈಸರ್‌ ಬೇಡ, ಬದಲಿಗೆ ಸೋಪು ಹಚ್ಚಿ ತೊಳೆಯಿರಿ. ಇನ್ನು ಹೊರಗಡೆ ಹೋದಾಗ ಕೂಡ ಚಿಕ್ಕ ಹ್ಯಾಂಡ್‌ ವಾಶ್ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ, ಕೈ ತೊಳೆಯಕ್ಕೆ ಜಾಗ ಸಿಕ್ಕೇ ಸಿಗುತ್ತದೆ, ಮಕ್ಕಳ ಕೈಗಳನ್ನು ತೊಳೆಯುತ್ತಾ ಇರಿ.

ಮಕ್ಕಳ ಕೈಗಳಿಗೆ ಸ್ಯಾನಿಟೈಸರ್‌ ಹಾಕಿದರೆ ಅವರಿಗೆ ಬಾಯಿಗೆ ಕೈ ಬೆರಳು ಹಾಕಿದರೆ ಸ್ಯಾ ನಿಟೈಸರ್ ಹೊಟ್ಟೆ ಸೇರುತ್ತದೆ, ಇದು ಹಾನಿಕಾರಕ. 10 ವರ್ಷದ ಕೆಳಗಿನ ಮಕ್ಕಳು ಬೆರಳು ಚೀಪುವ ಅಭ್ಯಾಸವಿಲ್ಲದಿದ್ದರೂ ಒಂದಲ್ಲಾ ಒಂದು ಕಾರಣಕ್ಕೆ ಬಾಯಿಗೆ ಕೈ ಹಾಕುತ್ತವೆ, ಆದ್ದರಿಂದ ಸ್ಯಾನಿಟೈಸರ್ ಹಾಕಬೇಡಿ, ಸೋಪು ಹಾಕಿಯೇ ಕೈ ತೊಳೆಯಿರಿ.

ಇತರ ಮಕ್ಕಳೊಂದಿಗೆ ಬೆರೆಯಲು ಬಿಡಬೇಡ

ಇತರ ಮಕ್ಕಳೊಂದಿಗೆ ಬೆರೆಯಲು ಬಿಡಬೇಡ

ಮಕ್ಕಳಿಗೆ ಮಕ್ಕಳ ಜೊತೆ ಸೇರಿ ಆಡುವುದು ಅಂದ್ರೆ ತುಂಬಾ ಖುಷಿ, ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ, ನಾವು ಸ್ಟ್ರಿಕ್ಟ್ ಆಗಲೇಬೇಕು, ಮಕ್ಕಳು ಮನೆಯಲ್ಲೇ ಆಡಲಿ ಅವರ ಜೊತೆ ನೀವೂ ಆಡಬೇಕು. ಇಲ್ಲದಿದ್ದರೆ ಅವರಿಗೆ ಬೋರಾಗುವುದು. ಮಕ್ಕಳನ್ನು ಆಡಲು ಹೇಳಿ ನೀವು ಫೋನ್‌ನಲ್ಲಿ ಬ್ಯುಸಿಯಾಗಬೇಡಿ, ಮಕ್ಕಳಿಗಾಗಿ ನೀವು ಸಮಯ ಕೊಡಿ.

ಸಭೆ-ಸಮಾರಂಭಗಳಿಗೆ ಹೋಗುವುದನ್ನು ಕಡಿಮೆ ಮಾಡಿ

ಸಭೆ-ಸಮಾರಂಭಗಳಿಗೆ ಹೋಗುವುದನ್ನು ಕಡಿಮೆ ಮಾಡಿ

ಅನ್‌ಲಾಕ್‌ ಆಗಿರುವ ಕಾರಣ ಸಭೆ, ಸಮಾರಂಭಗಳು ಇದ್ದೇ ಇರುತ್ತದೆ, ನೀವು ಮಕ್ಕಳ ಕರೆದುಕೊಂಡು ಹೋಗುವುದು ಮಾಡಬೇಡಿ. ಆದಷ್ಟು ಅವುಗಳೆನ್ನೆಲ್ಲಾ ಅವಾಯ್ಡ್ ಮಾಡಿ (ತಪ್ಪಿಸಿ).

ಮನೆಗೆ ಯಾರಾದರೂ ಬರುವಾಗ ಎಚ್ಚರವಹಿಸಿ

ಮನೆಗೆ ಯಾರಾದರೂ ಬರುವಾಗ ಎಚ್ಚರವಹಿಸಿ

ಮನೆಗೆ ನೆಂಟರಿಷ್ಟರು ಬರುವುದಾದರೆ ಅವರ ಬಳಿ ಬರಬೇಡಿ ಎಂದು ಹೇಳಲು ಸಾಧ್ಯವಾಗದಿದ್ದರೆ ಸುಳ್ಳುಗಳನ್ನು ಹೇಳಿಯಾದರೂ ಅವರು ಬರುವುದನ್ನು ತಪ್ಪಿಸಿ (ನಿಮಗೆ ಶೀತವಿದೆ ಎಂದರೆ ಸಾಕು ಅವರು ತಾನಾಗಿಯೇ ಬರುವುದಿಲ್ಲ) ಈ ಸಮಯದಲ್ಲಿ ಮಕ್ಕಳ ಸುರಕ್ಷಿತೆ ಮುಖ್ಯ. ಇನ್ನು ಮನೆಗೆ ಯಾರಾದರೂ ಬಂದರೆ ಅವರ ಬಳಿ ಮಕ್ಕಳು ಓಡಾಡುವುದು, ಅವರು ಎತ್ತಿ ಮುದ್ದಾಡುವುದು ಬೇಡ, ಈಗ ತುಂಬಾ ಜನರು ಅರ್ಥ ಮಾಡಿಕೊಂಡಿದ್ದಾರೆ, ಮಕ್ಕಳಿಗೆ ಹಾನಿಯಾಗಲು ಅವರೂ ಬಯಸುವುದಿಲ್ಲ.

ಮನೆಯನ್ನು ಸ್ವಚ್ಛವಾಗಿಡಿ

ಮನೆಯನ್ನು ಸ್ವಚ್ಛವಾಗಿಡಿ

ಮನೆಯನ್ನು ತುಂಬಾ ಸ್ವಚ್ಛವಾಗಿಡಿ, ಮಕ್ಕಳು ಮುಟ್ಟುವ ವಸ್ತುಗಳನ್ನು, ಅವರು ಆಡುವ ನೆಲವನ್ನು ಡಿಸ್‌ಇನ್‌ಫೆಕ್ಟ್ ಹಾಕಿ ತೊಳೆಯಿರಿ.

ಮನೆಯಲ್ಲಿ ಯಾರಾದರೂ ಹುಷಾರು ತಪ್ಪಿದರೆ

ಮನೆಯಲ್ಲಿ ಯಾರಾದರೂ ಹುಷಾರು ತಪ್ಪಿದರೆ

ಮನೆಯಲ್ಲಿ ಯಾರಾದರೂ ಹುಷಾರು ತಪ್ಪಿದರೆ ಮಕ್ಕಳನ್ನು ಅವರ ಸಮೀಪ ಬಿಡಬೇಡಿ, ಹುಷಾರು ಇಲ್ಲದವರು ಪ್ರತ್ಯೇಕ ಕೋಣೆಯಲ್ಲಿರಲಿ ಹಾಗೂ ಮಾಸ್ಕ್ ಧರಿಸಲಿ. ಕೆಲವರು ವೈರಲ್‌ ಫ್ಲೂ ಅದೂ ಇದು ಅಂತ ನಿರ್ಲಕ್ಷ್ಯ ಮಾಡುತ್ತಾರೆ. ಮಕ್ಕಳ ವಿಷಯದಲ್ಲಿ ಆ ನಿರ್ಲಕ್ಷ್ಯ ಬೇಡ.

ಮಕ್ಕಳಿಗೆ ಹುಷಾರು ಇಲ್ಲದಿದ್ದರೆ

ಮಕ್ಕಳಿಗೆ ಹುಷಾರು ಇಲ್ಲದಿದ್ದರೆ

ಮಕ್ಕಳಲ್ಲಿ ಅನಾರೋಗ್ಯ ಕಂಡು ಬಂದರೆ ಕೂಡಲೇ ಮಕ್ಕಳ ತಜ್ಞರಿಗೆ ತೋರಿಸಿ, ಎರಡು ದಿನ ಕಾದು ಮತ್ತೆ ತೋರಿಸುವ ಎಂದು ಕೂರಬೇಡಿ. ಹೊರಗಡೆ ಹೋಗುವಾಗ 6 ವರ್ಷದ ಮೇಲಿನ ಮಕ್ಕಳಿಗೆ ಮಾಸ್ಕ್ ಧರಿಸಿ. 5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಡ. ಆದರೆ ಅವರನ್ನು ಸುರಕ್ಷಿತೆ ಕಡೆ ಪೋಷಕರು ಹೆಚ್ಚು ಗಮನ ಹರಿಸಬೇಕು.

ಪೋಷಕರು ಕೋವಿಡ್ 19 ಲಸಿಕೆ ಪಡೆಯಬೇಕು

ಪೋಷಕರು ಕೋವಿಡ್ 19 ಲಸಿಕೆ ಪಡೆಯಬೇಕು

ಮಕ್ಕಳ ರಕ್ಷಣೆಗೆ ಪೋಷಕರೇ ಕೋವಿಡ್‌ 19 ಲಸಿಕೆ ಪಡೆಯಿರಿ, ಮನೆಯಲ್ಲಿರುವ ಇತತರಿಗೂ ಕೋವಿಡ್‌ ಲಸಿಕೆ ಪಡೆಯಲು ಹೇಳಿ. ಮನೆಯಲ್ಲಿನ ದೊಡ್ಡವರು ಕೋವಿಡ್‌ 19 ಲಸಿಕೆ ಪಡೆಯಿರಿ, ನಿಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಬಹುಮುಖ್ಯವಾಗಿದೆ.

English summary

Ways To Protect Children From Getting And Spreading COVID-19 in Kannada

Ways to Protect Children from getting and spreading COVID-19, read on....
Story first published: Tuesday, June 22, 2021, 10:52 [IST]
X
Desktop Bottom Promotion