For Quick Alerts
ALLOW NOTIFICATIONS  
For Daily Alerts

ಪೋಷಕರು, ತಮ್ಮ ಮಗಳನ್ನು ಮೊದಲ ಋತುಸ್ರಾವಕ್ಕೆ ಹೇಗೆ ಸಿದ್ಧಪಡಿಸಬೇಕು?

|

ಪ್ರತಿ ಹೆಣ್ಣಿನ ಜೀವನದಲ್ಲಿ ಋತುಮತಿಯಾಗುವುದು ಅತ್ಯಂತ ಮಹತ್ವ ಪಡೆದಿರುವ ಘಟ್ಟ. ಇದರಿಂದಲೇ ಹೆಣ್ತತನಕ್ಕೊಂದು ಹೊಸ ರೂಪ ಸಿಗುವುದು. ಋತುಸ್ರಾವ ಅತ್ಯಂತ ಸುಂದರವಾದ ಪ್ರಕ್ರಿಯೆಯಾದರೂ, ಬಹಳ ಹಿಂದಿನ ಕಾಲದಿಂದಲೂ ಇದರೊಂದಿಗೆ ತಪ್ಪು ಕಲ್ಪನೆಗಳು ಸುತ್ತಿಕೊಮಡಿವೆ, ಅದು ಇಂದಿಗೂ ಕೆಲವು ಕಡೆ ಇರುವುದು ದುರಾದೃಷ್ಟವೇ ಸರಿ.

ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮುಟ್ಟಾಗುವಿಕೆ ಮತ್ತು ಸಂತಾನೋತ್ಪತ್ತಿ ಅಂಗದ ಇತರ ಕಾರ್ಯಗಳ ಬಗ್ಗೆ ಶಿಕ್ಷಣ ನೀಡುವುದು ಬಹಳ ಮುಖ್ಯ. ನಮ್ಮ ಸಮಾಜದಲ್ಲಿನ ಹಲವಾರು ನಿಷೇಧಗಳಿಂದಾಗಿ, ಪೋಷಕರು ಇಂತಹ ವಿಷಯಗಳನ್ನು ಮಾತನಾಡುವುದೇ ಇಲ್ಲ, ಇದರಿಂದ ಮುಂಬರುವ ಬದಲಾವಣೆಗಳಿಗೆ ತಮ್ಮ ಮಕ್ಕಳನ್ನು ತಯಾರು ಮಾಡಲು ವಿಫಲರಾಗುತ್ತಾರೆ.

ಆದರೆ, ಪೋಷಕರು ಮನಸ್ಸು ಮಾಡಿದರೆ, ಈ ಎಲ್ಲಾ ತಪ್ಪುಕಲ್ಪನೆಗಳಿಂದ ಮಗಳನ್ನು ದೂರಮಾಡಬಹುದು. ಅದಕ್ಕಾಗಿ ಹೆಣ್ಣುಮಕ್ಕಳನ್ನು ಅವರು ಋತುಮತಿಯಾಗುವ ವಯಸ್ಸಿಗೆ ಬರುತ್ತಿರುವಾಗಲೇ, ಅವರಲ್ಲಿ ಮುಟ್ಟಿನ ಬಗ್ಗೆ ಇರುವ ಗೊಂದಲ, ಮೂಢನಂಬಿಕೆಗಳನ್ನು ದೂರಮಾಡಿ, ಸರಿಯಾದ ಮಾರ್ಗದರ್ಶನ ನೀಡಬೇಕು.

ಪೋಷಕರಾದವರು, ನಿಮ್ಮ ಮಗಳ ಮೊದಲ ಪೀರಿಯಡ್ಸ್ ಗೆ ಆಕೆಯನ್ನು ಹೇಗೆ ಸಿದ್ಧ ಮಾಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮುಟ್ಟು: ನಿಮ್ಮ ಮಗಳ ಜೀವನದಲ್ಲಿ ಒಂದು ಮೈಲಿಗಲ್ಲು

ಮುಟ್ಟು: ನಿಮ್ಮ ಮಗಳ ಜೀವನದಲ್ಲಿ ಒಂದು ಮೈಲಿಗಲ್ಲು

ಹೆಣ್ಣಿನ ಜೀವನದಲ್ಲಿ ಋತುಮತಿಯಾಗುವುದು ಒಂದು ಮೈಲಿಗಲ್ಲಾಗಿದ್ದು, ಆಕೆಯ ದೇಹದ ಸಂತಾನೋತ್ಪತ್ತಿ ಅಂಗದ ಆರೋಗ್ಯಕರ ಕಾರ್ಯನಿರ್ವಹಣೆಯೊಂದಿಗೆ ಸಂಬಂಧಿಸಿರುವ ನೈಸರ್ಗಿಕ ಪ್ರಕ್ರಿಯೆ. ನಿಮ್ಮ ಮಗಳು ಮೊದಲ ಬಾರಿಗೆ ಮುಟ್ಟಾದರೆ, ಆಕೆ ಪ್ರೌಢಾವಸ್ಥೆಗೆ ಬಂದಿದ್ದಾಳೆ, ಅಭಿವೃದ್ಧಿ ಹೊಂದಿದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹೊಂದಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಕೆಗ ಸರಿಯಾದ ಮಾರ್ಗದರ್ಶನ ನೀಡುವುದು ತುಂಬಾ ಮುಖ್ಯ. ಇದು ಅವಳಿಗೆ ತನ್ನ ಆ ದಿನಗಳನ್ನು ಸಮರ್ಪಕವಾಗಿ ಎದುರಿಸಲು ಸಹಾಯ ಮಾಡತ್ತದೆ. ಈ ಜವಾಬ್ದಾರಿ ಪೋಷಕರದ್ದು.

ವೈಜ್ಞಾನಿಕವಾಗಿ ಮಾತನಾಡಿ, ಮೂಢನಂಬಿಕೆಗಳನ್ನಲ್ಲ:

ವೈಜ್ಞಾನಿಕವಾಗಿ ಮಾತನಾಡಿ, ಮೂಢನಂಬಿಕೆಗಳನ್ನಲ್ಲ:

ಸಾಮಾನ್ಯವಾಗಿ ಮುಟ್ಟಿನ ಬಗ್ಗೆ ಮಾತನಾಡುವಾಗ, ವಾಸ್ತವಾಂಶಗಳ ಮೇಲೆ ಕೇಂದ್ರೀಕರಿಸುವ ಬದಲು, ಪುರಾಣ ಅಥವಾ ಮೂಢನಂಬಿಕೆಗಳ ಬಗ್ಗೆ ಹೆಚ್ಚು ಗಮನ ನೀಡುತ್ತೇವೆ. ಇದು ಸರಿಯಲ್ಲ. ಮುಟ್ಟಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ, ಅದನ್ನು ಅಶುದ್ಧ ಅಥವಾ ಕೊಳಕು ಎಂದು ನೋಡಬಾರದು. ಮುಟ್ಟಿನ ರಕ್ತಸ್ರಾವ ಆರೋಗ್ಯಕರವಾಗಿದ್ದು, ಇತರ ಯಾವುದೇ ರೀತಿಯ ರಕ್ತಸ್ರಾವಕ್ಕಿಂತ ಭಿನ್ನವಾಗಿರುತ್ತದೆ. ಹಳೆಯ ರಕ್ತ ಮತ್ತು ಅಂಗಾಂಶಗಳನ್ನು ಒಳಗೊಂಡ ಗರ್ಭಾಶಯದ ಒಳ ಪದರವು ದೇಹದಿಂದ ಹೊರಬಂದಾಗ ಸಂಭವಿಸುತ್ತದೆ. ಆದ್ದರಿಂದ ಅಜ್ಜಿಕಾಲದ ಮೂಢನಂಬಿಕೆಗಳನ್ನು ಬಿಟ್ಟು, ನೈರ್ಮಲ್ಯ ಕಾಪಾಡಿಕೊಳ್ಳುವುದರ ಬಗ್ಗೆ ಹಾಗೂ ಮುಟ್ಟಿನ ಮಹತ್ವದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿಕೊಡಿ.

ಆ ದಿನಗಳಿಗೆ ಅಗತ್ಯವಿರುವ ವಸ್ತುಗಳನ್ನು ಪಟ್ಟಿ ಮಾಡಿ:

ಆ ದಿನಗಳಿಗೆ ಅಗತ್ಯವಿರುವ ವಸ್ತುಗಳನ್ನು ಪಟ್ಟಿ ಮಾಡಿ:

ದೈಹಿಕ ಬದಲಾವಣೆಗಳ ಬಗ್ಗೆ ನಿಮ್ಮ ಮಗಳನ್ನು ತಯಾರು ಮಾಡುವುದು ಮಾತ್ರವಲ್ಲ, ಮುಟ್ಟಿನ ದಿನಗಳನ್ನು ಸುಗಮವಾಗಿ ನಿರ್ವಹಿಸಲು ಅಗತ್ಯವಿರುವ ವಸ್ತುಗಳ ಬಗ್ಗೆಯೂ ಶಿಕ್ಷಣ ನೀಡಬೇಕು. ಪ್ಯಾಡ್‌ಗಳು, ಟ್ಯಾಂಪೂಗಳಿದ ಹಿಡಿದು, ಮುಟ್ಟಿನ ಸೆಳೆತ ಕಡಿಮೆ ಮಾಡುವ ಬಿಸಿನೀರಿನ ಬ್ಯಾಗ್‌ಗಳವರೆಗೆ, ಮುಟ್ಟಿನ ಸಮಯದಲ್ಲಿ ಅಗತ್ಯವಿರುವ ವಸ್ತುಗಳ ಬಗ್ಗೆ ತಿಳಿಸಿ ಹಾಗೂ ಅವುಗಳನ್ನು ಸಂಗ್ರಹಿಸಲು ಸಹಾಯ ಮಾಡಿ.

ಮುಟ್ಟಿನ ವಸ್ತುಗಳನ್ನು ಹೇಗೆ ಬಳಸಬೇಕೆಂದು ಕಲಿಸಿ:

ಮುಟ್ಟಿನ ವಸ್ತುಗಳನ್ನು ಹೇಗೆ ಬಳಸಬೇಕೆಂದು ಕಲಿಸಿ:

ಆಕೆಗೆ ಪಿರಿಯಡ್ ಕಿಟ್ ಅನ್ನು ಪೂರೈಸುವುದು ಮಾತ್ರ, ಪೋಷಕರ ಕೆಲಸವಲ್ಲ. ಇದರ ಜೊತೆಗೆ ಅದನ್ನೆಲ್ಲ ಬಳಸಲು ಅವರಿಗೆ ಸಹಾಯ ಮಾಡಬೇಕು. ಇದರಲ್ಲಿ ತಾಯಿಯ ಪಾತ್ರ ಹೆಚ್ಚಿರುತ್ತದೆ. ಪ್ರತಿಯೊಂದು ವಸ್ತುವನ್ನು ಬಳಸಲು ತನ್ನದೇ ಆದ ವಿಶಿಷ್ಟ ಮಾರ್ಗವಿದೆ, ಅದು ಪ್ಯಾಡ್ ಅಥವಾ ಟ್ಯಾಂಪೂನ್ ಆಗಿರಲಿ, ಅನುಭವಿ ವ್ಯಕ್ತಿಗಳು ಮಾತ್ರ ಈ ವಸ್ತುಗಳ ಕುರಿತು ಹೇಳು ಅಥವಾ ಅರ್ಥ ಮಾಡಿಸಲು ಸಾಧ್ಯ.

ಮುಟ್ಟಿನ ಸೆಳೆತ ಅಥವಾ ನೋವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಹೇಳಿ:

ಮುಟ್ಟಿನ ಸೆಳೆತ ಅಥವಾ ನೋವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಹೇಳಿ:

ಕೆಲವು ಮಹಿಳೆಯರು ಮುಟ್ಟಿನ ಯಾವುದೇ ಲಕ್ಷಣ ಹೊಂದಿರುವುದಿಲ್ಲ, ಆರಾಮವಾಗಿ ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ ಇನ್ನು ಕೆಲವರಿಗೆ ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವು ಅಥವಾ ಸೆಳೆತ ಹೆಚ್ಚಾಗಿ ಕಾಡುವುದು. ಇಂತಹ ಸಮಯದಲ್ಲಿ ಅದನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಅರಿತಿದ್ದರೆ ಆಕೆಗೆ ಸುಲಭವಾಗುವುದು. ಆದ್ದರಿಂದ, ನಿಮ್ಮ ಮಗಳನ್ನು ಮುಂಚಿತವಾಗಿ ತಯಾರು ಮಾಡಿ. ಮುಟ್ಟಿನ ನೋವನ್ನು ನಿರ್ವಹಿಸುವ ಕೆಲವು ವಿಧಾನಗಳು ಈ ಕೆಳಗಿನಂತಿವೆ.

  • ಬಿಸಿನೀರಿನ ಬ್ಯಾಗ್ ಬಳಸಿ.
  • ಬಿಸಿನೀರಿನ ಸ್ನಾನ ಮಾಡಿ.
  • ನಿಯಮಿತ ವ್ಯಾಯಾಮವು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ.
  • ನೋವು ಹೆಚ್ಚಿದ್ದರೆ, ವೈದ್ಯರನ್ನು ಸಂಪರ್ಕಿಸಿ.
English summary

Tips to Prepare your Daughter for her First Period in Kannada

Here we talking about Tips to prepare your daughter for her first period in Kannada, read on
Story first published: Thursday, August 12, 2021, 19:44 [IST]
X
Desktop Bottom Promotion