For Quick Alerts
ALLOW NOTIFICATIONS  
For Daily Alerts

ಟೀನೇಜ್‌ ಪ್ರಾಯದ ಮಕ್ಕಳಿದೆಯೇ? ಮಕ್ಕಳು ಗುಣವಂತರಾಗಿ ಬೆಳೆಯಲು ನೀವೇನು ಮಾಡಬೇಕು, ನೋಡಿ

|

ಮಕ್ಕಳು ಚಿಕ್ಕವರು ಇರುವಾಗ ತುಂಬಾ ಮುದ್ದು ಮಾಡುತ್ತೇವೆ, ಆದರೆ ಅವರು ಯಾವಾಗ ಹದಿ ಹರೆಯದ ಪ್ರಾಯಕ್ಕೆ ಬರುತ್ತಾರೋ ಪೋಷಕರು ಸ್ವಲ್ಪ ಸ್ಟ್ರಿಕ್‌ ಆಗಬೇಕಾಗುತ್ತದೆ, ಏಕೆಂದರೆ ಆ ವಯಸ್ಸೇ ಅಂಥದ್ದು... ಏನೇನೋ ತಿಳಿಯ ಬಯಸುವ ಕುತೂಹಲದ ವಯಸ್ಸದು... ಯಾವುದು ಸರಿ, ಯಾವುದು ತಪ್ಪು ಎಂಬ ತಿಳುವಳಿಕೆ ಇರುವುದಿಲ್ಲ.. ಈ ಸಮಯದಲ್ಲಿ ಪೋಷಕರನ್ನು ಕಂಡರೆ ಕೆಲ ಮಕ್ಕಳು ಶತ್ರುಗಳಂತೆ ಭಾವಿಸುವುದೂ ಉಂಟು.

ಮಕ್ಕಳು ದಾರಿ ತಪ್ಪ ಬಾರದು ಎಂಬ ಆತಂಕದಲ್ಲಿ ಪೋಷಕರು ತುಂಬಾ ಸ್ಟ್ರಿಕ್‌ ಆಗಲು ಹೋದಾಗ ಮಕ್ಕಳಿಗೆ ಪೋಷಕರು ಶತ್ರುಗಳಾಗುತ್ತಾರೆ...ಟೀನೇಜ್‌ನಲ್ಲಿ ಮಕ್ಕಳನ್ನು ತುಂಬಾ ಸ್ಟ್ರಿಕ್ ಆಗಿ ತಿದ್ದಲು ಹೋದರೆ ಪ್ರಯೋಜನವಿಲ್ಲ. ಹೀಗೆ ಮಾಡಿದರೆ ಮಕ್ಕಳು ಕೆಲವೊಂದು ವಿಷಯಗಳನ್ನು ಪೋಷಕರ ಬಳಿ ಹೇಳಲು ಹಿಂಜರಿಯಬಹುದು. ಪೋಷಕರಿಂದ ಒಂದು ಅಂತರ ಕಾಯ್ದುಕೊಳ್ಳಲು ಬಯಸಬಹುದು. ಹಾಗಾಗಿ ಮಕ್ಕಳು ಹದಿ ಹರೆಯದ ಪ್ರಾಯಕ್ಕೆ ಬಂದಾಗ ಪೋಷಕರೂ ಸ್ಟ್ರಿಕ್‌ ಆಗುವ ಬದಲಿಗೆ ಎಲ್ಲಿ ಬೇಕು ಅಲ್ಲಿ ಮಾತ್ರ ಸ್ಟ್ರಿಕ್ಟ್‌ ಆಗಿ ಇದ್ದು ನಂತರ ಮಕ್ಕಳ ಜೊತೆ ಸ್ನೇಹಿತರ ಜೊತೆಗೆ ವರ್ತಿಸಬೇಕಾಗುವುದು. ಕೆಲವೊಂದು ಟಿಪ್ಸ್ ಅನುಸರಿಸಿದರೆ ಮಕ್ಕಳನ್ನು ಒಳ್ಳೆಯ ಗುಣವಂತರಾಗಿ ಬೆಳೆಸಬಹುದು, ಅದಕ್ಕಾಗಿ ನೀವು ಮಾಡಬೇಕಾಗಿರುವುದು:

ಅವರ ಮಾತುಗಳನ್ನು ಆಲಿಸಿ:

ಅವರ ಮಾತುಗಳನ್ನು ಆಲಿಸಿ:

ಅವರ ಮಾತುಗಳನ್ನು ಕೇಳುವುದು ಅಂದ್ರೆ ಅವರ ಭಾವನೆಗಳನ್ನು ಅರಿಯಲು ಪ್ರಯತ್ನಿಸಿ, ಅವರ ಜೊತೆ ಮಾತನಾಡುವಾಗ ಅಥವಾ ಅವರನ್ನು ತಿದ್ದುವಾಗ ಪದಗಳನ್ನು ಯೋಚಿಸಿ ಬಳಸಿ. ಅವರ ಆಸೆಗಳನ್ನು ಅರಿಯಲು ಪ್ರಯತ್ನಿಸಿ. ಅವರ ತಪ್ಪುಗಳನ್ನು ಜೋರು ಮಾಡಿ ತಿದ್ದಲು ಪ್ರಯತ್ನಿಸುವುದಕ್ಕಿಂತ ಅವರ ತಪ್ಪುಗಳನ್ನು ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿ.

ನಡವಳಿಕೆ ಹೇಗಿರಬೇಕು ಎಂಬುವುದನ್ನು ತಿಳಿಸಿ

ನಡವಳಿಕೆ ಹೇಗಿರಬೇಕು ಎಂಬುವುದನ್ನು ತಿಳಿಸಿ

ನಮ್ಮ ಕುಟುಂಬ ಏನು, ಕುಟುಂಬದ ಗೌರವವೇನು ಅದನ್ನು ಉಳಿಸಲು ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುವುದು ಅವರಿಗೆ ಮನವರಿಕೆ ಮಾಡಬೇಕು. ಅದರ ಅರಿವು ಮಕ್ಕಳಿಗಾದರೆ ನೀವು ಅವರು ಯಾವುದೇ ತಪ್ಪು ಹಾದಿ ತುಳಿಯಲ್ಲ ಎಂದು ಆರಾಮವಾಗಿ ನಂಬಬಹುದು.

ಒಂದು ವೇಳೆ ಅವರಿಂದ ಏನಾದರೂ ತಪ್ಪು ಆದರೆ

ಎಲ್ಲರೂ ಎಲ್ಲಾ ಸಮಯದಲ್ಲಿ ಸರಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಅವರಿಂದ ಏನೋ ಒಂದು ಅವರನ್ನು ಕ್ಷಮಿಸಿ, ಅದನ್ನು ತಿದ್ದಿಕೊಂಡು ನಡೆಯಲು ಪ್ರೇರೇಪಿಸಿ. ಅವರು ನೀವು ಬಯಸಿದಂತೆಯೇ ವರ್ತಿಸುತ್ತಾರೆ. ಇನ್ನು ಅವರಲ್ಲಿ ಏನಾದರೂ ಹತಾಶೆ, ನೋವು ಇದ್ದರೆ ಅದರಿಂದ ಮಕ್ಕಳನ್ನು ಹೊರ ತರಲು ಪ್ರಯತ್ನಿಸಿ.

ಆತ್ಮ ಗೌರವ, ಆತ್ಮವಿಶ್ವಾಸ ಎಂದೂ ತಗ್ಗಲು ಬಿಡಬೇಡ ಎಂದು ದೈರ್ಯ ತುಂಬಿ

ಆತ್ಮ ಗೌರವ, ಆತ್ಮವಿಶ್ವಾಸ ಎಂದೂ ತಗ್ಗಲು ಬಿಡಬೇಡ ಎಂದು ದೈರ್ಯ ತುಂಬಿ

ಇದನ್ನು ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಹೇಳಬೇಕು. ಯಾವುದೇ ಪರಿಸ್ಥಿತಿಯಲ್ಲಿ ನಿನ್ನ ಆತ್ಮ ಗೌರವ ತಗ್ಗುವಂತೆ ನಡೆದುಕೊಳ್ಳಬೇಡ ಎಂದು ಹೇಳಿ. ಸವಾಲುಗಳನ್ನು ಎದುರಿಸುವ, ಗೆಲ್ಲುವ ಆತ್ಮವಿಶ್ವಾಸ ತುಂಬಿ. ಮಕ್ಕಳಿಗೆ ಕಷ್ಟವಾಗಬಹುದು ತುಂಬಾ ಓಲೈಕೆ ಮಾಡುವುದು ಅಂದ್ರೆ ಅವರು ಕೇಳಿದ್ದೆಲ್ಲಾ ಕೊಡಿಸಿ ಅವರನ್ನು ಖುಷಿ ಪಡಿಸಲು ಪ್ರಯತ್ನಿಸಬಾರದು. ನಿಮ್ಮ ಇತಿ-ಮಿತಿಗಳ ಬಗ್ಗೆ ಮಕ್ಕಳಲ್ಲಿಸ್ಪಷ್ಟ ಕಲ್ಪನೆ ಇರಬೇಕು.

ಆಗ ಅವರಿಗೆ ನಿಮ್ಮ ಬಳಿ ಏನು ಕೇಳಬೇಕು, ಏನು ಕೇಳಬಾರದು, ಹೇಗೆ ವರ್ತಿಸಬೇಕು ಎಂಬುವುದರ ಸ್ಪಷ್ಟ ಕಲ್ಪನೆ ಇರುತ್ತದೆ.

ಮಕ್ಕಳನ್ನೂ ಗೌರವಿಸಿ

ಮಕ್ಕಳನ್ನೂ ಗೌರವಿಸಿ

ಕೆಲವೊಮ್ಮೆ ಅವರು ಏನಾದರೂ ಹೇಳಲು ಬರುವಾಗ ಬಾಯಿ ಮುಚ್ಚಿಸಲು ಪ್ರಯತ್ನಿಸಬೇಡಿ, ಅವರ ಮಾತುಗಳನ್ನೂ ಕೇಳಿ, ಅವರು ಚಿಕ್ಕವರು ಅಂದ ಮಾತ್ರಕ್ಕೆ ಗೌರವ ತೋರಬಾರದು ಎಂದೇನು ಇಲ್ಲ, ಅವರ ಮಾತುಗಳಿಗೂ ಬೆಲೆ ನೀಡಿ ಇದು ಅವರಿಗೆ ತುಂಬಾನೇ ಖುಷಿಯಾಗುವುದು.

ಅವರಿಗೂ ಜವಾಬ್ದಾರಿಗಳನ್ನು ನೀಡಿ

ಅವರಿಗೂ ಜವಾಬ್ದಾರಿಗಳನ್ನು ನೀಡಿ

ಮಕ್ಕಳು ಬೆಳೆಯುತ್ತಿದ್ದಂತೆ ಅವರಿಗೆ ಕೆಲವೊಂದು ಜವಾಬ್ದಾರಿ ನೀಡಿ. ಮನೆಯಲ್ಲಿ ನೀವು ಕೆಲಸ ಮಾಡುವಾಗ ಅವರಿಗೂ ಕೆಲವು ಕೆಲಸ ನೀಡಿ, ಲಿಂಗ ಬೇಧವಿಲ್ಲದೆ ಅಡುಗೆ ಕಲಿಸಿ. ನಿಮ್ಮ ಕೆಲಸಗಳಿಗೆ ಅವರ ಸಹಾಯ ಕೋರಿ ಇದರಿಂದ ಅವರು ಬದುಕಿನ ಪಾಠಗಳನ್ನು ಕಲಿಯುತ್ತಾರೆ.

ಸಮಸ್ಯೆಗಳನ್ನು ಧನಾತ್ಮಕವಾಗಿ ಎದುರಿಸಲು ಕಲಿಸಿ ಕೊಡಿ

ಸಮಸ್ಯೆಗಳನ್ನು ಧನಾತ್ಮಕವಾಗಿ ಎದುರಿಸಲು ಕಲಿಸಿ ಕೊಡಿ

ಜೀವನದಲ್ಲಿ ಎಲ್ಲರಿಗೂ ಒಂದೆಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ, ಅಲ್ಲದೇ ಬಂದೇ ಬರುತ್ತದೆ, ಅದನ್ನು ಹೇಗೆ ನಿಬಾಯಿಸುತ್ತೇವೆ ಎಂಬುವುದರಲ್ಲಿ ಜಾಣ್ಮೆ ಇರುವುದು. ಕೆಲವರು ಸಮಸ್ಯೆಗಳಿಗೆ ಹೆದರಿ ಓಡಿ ಹೋಗುತ್ತಾರೆ, ಅವರಿಗೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ, ಮತ್ತೆ ಕೆಲವರು ಸಮಸ್ಯೆಗಳನ್ನು ಎದುರಿಸಿ ನಿಲ್ಲುತ್ತಾರೆ, ಅವರು ಬದುಕಿನಲ್ಲಿ ಗೆಲ್ಲುತ್ತಾರೆ. ನೀವು ಮಕ್ಕಳಿಗೆ ಕಲಿಸಬೇಕಾಗಿರುವುದು ಎರಡನೇಯದು.

English summary

Tips To Encouraging Good Behavior In Teenagers in Kannada

Tips to Encouraging good behavior in teenagers in Kannada...
Story first published: Wednesday, August 4, 2021, 13:39 [IST]
X
Desktop Bottom Promotion