For Quick Alerts
ALLOW NOTIFICATIONS  
For Daily Alerts

ನಿಮ್ಮ ಎರಡನೇ ಮಗುವಿಗೆ ಈ ವಸ್ತುಗಳನ್ನು ಎಂದಿಗೂ ಮರುಬಳಕೆ ಮಾಡಬೇಡಿ

|

ನಮ್ಮಲ್ಲಿ ಹೆಚ್ಚಿನವರು ಮೊದಲ ಮಗುವಿನ ಎಲ್ಲಾ ವಸ್ತುಗಳನ್ನು ಎರಡನೇ ಮಗುವಿಗೆ ನಂತರ ಬಳಸಬಹುದು ಎಂಬ ಉದ್ದೇಶದಿಂದ ಇಟ್ಟುಕೊಳ್ಳುತ್ತಾರೆ. ಆದರೆ, ಇದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಏಕೆಂದರೆ, ಎಲ್ಲಾ ವಸ್ತುಗಳನ್ನು ಎರಡನೇ ಮಗುವಿಗೆ ಬಳಸಲು ಉತ್ತಮವಲ್ಲ. ಇದು ಮಗುವಿನ ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು. ಆದ್ದರಿಂದ ಯಾವ ವಸ್ತುಗಳನ್ನು ಎರಡನೇ ಮಗುವಿಗೆ ಮರುಬಳಕೆ ಮಾಡಬಾರದು ಎಂಬುದನ್ನು ಇಲ್ಲಿ ನೋಡೋಣ.

ಎರಡನೇ ಮಗುವಿಗೆ ಮರುಬಳಕೆ ಮಾಡಬಾರದ ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ:

ಮಗುವಿನ ಉಡುಗೆ:

ಮಗುವಿನ ಉಡುಗೆ:

ನಿಮ್ಮ ಮೊದಲ ಮಗು ಹುಡುಗನಾಗಿದ್ದು, ಎರಡನೇ ಬಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರೆ, ಹುಡುಗನ ಬಟ್ಟೆಗಳು ನಿಮಗೆ ಇನ್ನೂ ಕೆಲಸ ಮಾಡಬಹುದು. ಅವರ ಜೀನ್ಸ್, ಶಾರ್ಟ್ಸ್ ಮತ್ತು ಟೀ ಶರ್ಟ್ ಅನ್ನು ಬಳಸಬಹುದು. ಆದರೆ ಅನೇಕ ಬಾರಿ, ಬಟ್ಟೆಗಳು ಹಳೆಯದಾಗುತ್ತವೆ. ಆದ್ದರಿಂದ ಹೊಸ ಬಟ್ಟೆಗಳನ್ನು ಖರೀದಿಸಬೇಕು.

ಬೈಬ್ಸ್ ಮತ್ತು ನ್ಯಾಪಿಗಳು:

ಬೈಬ್ಸ್ ಮತ್ತು ನ್ಯಾಪಿಗಳು:

ಆಹಾರ ನೀಡುವಾಗ ಮಗುವಿನ ಬಟ್ಟೆಯ ಮೇಲೆ ಹಾಕುವ ಬಟ್ಟೆಯನ್ನು ಬೈಬ್ಸ್ ಎಂದು ಕರೆಯಲಾಗುತ್ತದೆ. ಮೊದಲ ಮಗುವಿಗೆ ಬಳಸಿದ ಬಿಬ್ಸ್ ಮತ್ತು ನ್ಯಾಪಿಗಳನ್ನು ಮರುಬಳಕೆ ಮಾಡಲಾಗುವುದಿಲ್ಲ. ಏಕೆಂದರೆ, ಈ ವಸ್ತುಗಳನ್ನು ಪ್ರತಿದಿನ ಬಳಸುತ್ತಾರೆ, ಆದ್ದರಿಂದ ಅವುಗಳಿಗೆ ಕಲೆಯಾಗುವುದು ಸಹಜ. ಕೆಲವೊಮ್ಮೆ ಅವು ಎಷ್ಟು ದುರ್ವಾಸನೆ ಬೀರುತ್ತವೆ ಎಂದರೆ ತೊಳೆದರೂ ವಾಸನೆ ಹೋಗುವುದಿಲ್ಲ. ಇನ್ನೊಂದು ಮಗುವಿಗೆ ಅವುಗಳನ್ನು ಬಳಸದಿರಲು ಪ್ರಯತ್ನಿಸಿ. ವಿಶೇಷವಾಗಿ ಮಕ್ಕಳ ನಡುವೆ ದೀರ್ಘ ಅಂತರವಿದ್ದರೆ, ನೀವು ಇತರ ಮಗುವಿಗೆ ಹೊಸ ಬಿಬ್ಸ್ ಮತ್ತು ನ್ಯಾಪಿಗಳನ್ನು ಖರೀದಿಸಬೇಕು.

ಡೈಯಪರ್ ಬ್ಯಾಗ್:

ಡೈಯಪರ್ ಬ್ಯಾಗ್:

ನೀವು ಮೊದಲ ಬಾರಿಗೆ ತಾಯಿಯಾದಾಗ ಡೈಪರ್‌ಗಳನ್ನು ಇಡಲು, ಬ್ಯಾಗ್ ಸಹ ಖರೀದಿಸಿದ್ದರೆ, ನೀವು ಅದನ್ನು ಎರಡನೇ ಬಾರಿಗೆ ಬಳಸಲು ಬಯಸುವುದು ಅನಿವಾರ್ಯವಲ್ಲ. ಅತಿಯಾದ ಬಳಕೆಯಿಂದ ಡಯಾಪರ್ ಬ್ಯಾಗ್‌ಗಳು ಬೇಗನೆ ಹಾಳಾಗುತ್ತವೆ. ಇದಲ್ಲದೆ, ಬಹುಶಃ ಈಗ ನೀವು ಬೆನ್ನು ಮೇಲೆ ಹಾಕಿಕೊಳ್ಳುವಂತಹ ಬ್ಯಾಗ್ ಖರೀದಿಸುವ ಮನಸ್ಥಿತಿಯಲ್ಲಿದ್ದೀರಿ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಶಾಪಿಂಗ್ ಪಟ್ಟಿಯಲ್ಲಿ ಸೇರಿಸಿ.

ಅಗಿಯುವ ಸಾಧನ:

ಅಗಿಯುವ ಸಾಧನ:

ಮಗುವಿನ ಹಲ್ಲುಗಳು ಬರುವ ವೇಳೆ, ನಾವು ಅವುಗಳನ್ನು ಅಗಿಯಲು ಸ್ಯೂಟರ್ ಅಥವಾ ಟೀಟರ್ ಅನ್ನು ನೀಡುತ್ತೇವೆ. ನಿಮ್ಮ ಮಗುವಿಗೆ ಕಚ್ಚುವ ಪ್ರಚೋದನೆಯನ್ನು ಪೂರೈಸಲು ಮತ್ತು ಹೆಬ್ಬೆರಳು ಹೀರುವುದನ್ನು ತಡೆಯಲು ಇದು ಸುರಕ್ಷಿತ ಮಾರ್ಗವಾಗಿದೆ. ಹಳೆಯ ಉತ್ಪನ್ನಗಳು ಕಲುಷಿತವಾಗಿರುವುದರಿಂದ ಅಂತಹ ಉತ್ಪನ್ನಗಳನ್ನು ಮರುಬಳಕೆ ಮಾಡುವುದು ಹಾನಿಕಾರಕವಾಗಿದೆ. ಇದಲ್ಲದೆ, ಮಕ್ಕಳು ಇದನ್ನು ಅಗಿಯುವುದರಿಂದ, ಇದು ಹಾಳಾಗುತ್ತದೆ. ಆದ್ದರಿಂದ ಹಳೆಯ ಸಾಧನವನ್ನು ನೀಡುವ ಬದಲು, ಇನ್ನೊಂದು ಮಗುವಿಗೆ ಹೊಸ ಸೂಟರ್ ಅಥವಾ ಟೂಟರ್ ಖರೀದಿಸಿ.

ಬಾಟಲಿಗಳು ಮತ್ತು ನಿಪ್ಪಲ್ಲು:

ಬಾಟಲಿಗಳು ಮತ್ತು ನಿಪ್ಪಲ್ಲು:

ಅನೇಕ ಬಾರಿ ಮಗು ಹಿಂದೆ ಬಳಸಿದ ಹಾಲಿನ ಬಾಟಲಿ ಮತ್ತು ನಿಪ್ಪಲ್ಲುಗಳನ್ನು ತೆಗೆದಿಡುತ್ತಾರೆ. ಆದರೆ ಬಾಟಲಿಗಳ ನಿಪ್ಪಲ್ಲುಗಳನ್ನು ಬಳಸದೆ ದೀರ್ಘಕಾಲ ಸಂಗ್ರಹಿಸಿದರೆ ಅವು ಕಲುಷಿತವಾಗುತ್ತವೆ ಎಂದು ಬಹುಶಃ ಅವರಿಗೆ ತಿಳಿದಿಲ್ಲ. ಆದ್ದರಿಂದ, ನಿಮ್ಮ ಎರಡನೇ ಮಗುವಿಗೆ ಹೊಸ ಫೀಡಿಂಗ್ ಬಾಟಲಿಗಳು ಮತ್ತು ನಿಪ್ಪಲ್ಲುಗಳನ್ನು ಖರೀದಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ.

English summary

Things You Cannot Reuse for Your Second Baby in Kannada

Here we talking about Things You Cannot Reuse for Your Second Baby in Kannada, read on
Story first published: Friday, April 1, 2022, 17:32 [IST]
X
Desktop Bottom Promotion