For Quick Alerts
ALLOW NOTIFICATIONS  
For Daily Alerts

ಅಮ್ಮಾ ಹೀಗೆ ಇರಬೇಕೆನ್ನುವ ನಿಯಮ ಇಲ್ಲ...... ನೀವು ಸಹ ಆಗಾಗ್ಗೆ ತಪ್ಪು ಮಾಡಿ...

|

ಈ ಭೂಮಿಯ ಮೇಲಿರುವ ಅತ್ಯಂತ ನಿಸ್ವಾರ್ಥ ಜೀವಿ ಯಾರಾದರೂ ಒಬ್ಬರನ್ನು ನೀವು ನೋಡಬೇಕೆಂದರೆ ಅದು "ಅಮ್ಮ " ಮಾತ್ರ. ಎಲ್ಲರಿಗೂ ಅಮ್ಮ ಅಂದರೇನೆ ಪ್ರಪಂಚ, ಅಮ್ಮನನ್ನು ಪ್ರತಿ ದಿನ ಸಂಭ್ರಮಿಸಬೇಕು ನಾವು ಆದರೆ.......

Things Mother Must Stop Feeling Guilty About in kannada

ಕುಟುಂಬಸ್ಥರು, ಪತಿ ಅಷ್ಟೇ ಏಕೆ ಮಕ್ಕಳು ಸಹ ಅಮ್ಮನನ್ನು ತನಗಾಗಿಯೇ ಬದುಕಿರುವ ಒಂದು ಜೀವ ಎಂದು ಅವಳನ್ನು ಒಪ್ಪಿಬಿಟ್ಟಿದ್ದಾರೆ. ಇದು ಏಕೆ ಹೀಗೆ, ಅಮ್ಮ ಮಾತ್ರ ಎಲ್ಲರ ಅಗತ್ಯತೆಗಳನ್ನು ಅರಿತುಕೊಳ್ಳುವವಳು, ಅವಳು ಎಂದಿಗೂ ತಪ್ಪು ಮಾಡುವುದೇ ಇಲ್ಲ, ಇವಳು ಇಡುವ ಪ್ರತಿಯೊಂದು ಹೆಜ್ಜೆಯೂ ಸರಿಯೇ ಎಂಬುದು ಎಲ್ಲರ ನಂಬಿಕೆ.

ಆದರೆ ಎಲ್ಲರಿಗೂ ನೆನಪಿರಲಿ ಅಮ್ಮನಿಗೂ ಸಹ ಒಂದು ಬದುಕಿದೆ, ಅವಳಿಗೂ ಸಹ ತನ್ನದೇ ಆದ ಆಸೆಗಳಿವೆ ಆದರೆ ಅವಳು ನಿಮ್ಮೆಲ್ಲರ ಆರೈಕೆ, ಕಾಳಜಿ, ಪ್ರೀತಿಯಿಂದಾಗಿ ತನ್ನ ಎಲ್ಲ ಬಯಕೆಗಳನ್ನು ಮರೆಮಾಚಿದ್ದಾಳೆ.

ಅಮ್ಮಂದಿರೇ ನೀವು ಸಹ ನಿಮ್ಮ ಬದುಕನ್ನು ಬದುಕಿ, ನೀವು ಆಗಾಗ್ಗೆ ತಪ್ಪು ಮಾಡಿ, ನೀವು ಕೆಲವೊಮ್ಮೆ ಮಕ್ಕಳನ್ನು ಸರಿಯಾಗಿ ಕಾಳಜಿ ಮಾಡಲು ಆಗದಿದ್ದರೆ ಅದಕ್ಕಾಗಿ ಬೇಸರ ಪಡಬೇಡಿ......

ಅಮ್ಮ ಇದನ್ನು ಮಾಡುವಂತಿಲ್ಲ ಎಂದು ಎಲ್ಲರು ನಿಮ್ಮಲ್ಲಿ ಬಿಂಬಿಸಿರುವ ಇವುಗಳನ್ನು ನೀವು ಮಾಡಿದರೆ ತಪ್ಪೇ ಇಲ್ಲ.....

1) ಅಮ್ಮ ಸಹ ವಿರಾಮ ತೆಗೆದುಕೊಳ್ಳಬೇಕು

ಅಮ್ಮಂದಿರಾಗಿ, ವಿರಾಮವನ್ನು ತೆಗೆದುಕೊಳ್ಳುವುದು ಐಷಾರಾಮಿಯಂತೆ ಭಾಸವಾಗುತ್ತದೆ. ಅಮ್ಮನಿಗೇಕೆ ವಿರಾಮ ಎಂದೂ ಸಹ ಯೋಚಿಸುವವರು ಇದ್ದಾರೆ. ನಿಮ್ಮ ಅಗತ್ಯತೆಗಳು, ಆದ್ಯತೆಗಳು ಮತ್ತು ಸ್ವಯಂ ಕಾಳಜಿಯನ್ನು ಒಮ್ಮೆಯಾದರೂ ಎಲ್ಲರಿಗಿಂತ ಮೊದಲಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮಕ್ಕಳ ಕಾಳಜಿ ವಿಚಾರದಲ್ಲಿ ನೀವೆ ಸದಾ ಮುಂದಿರಬೇಕು ಎಂದೇನಿಲ್ಲ, ನಿಮ್ಮ ಪತಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಮಕ್ಕಳ ಕಾಳಜಿಯ ವಿಚಾರದಲ್ಲಿ ನಿಮ್ಮನ್ನು ಕಾಡುವ ಮಿಲಿಯನ್ ವಿಷಯಗಳನ್ನು ಮರೆತುಬಿಡುವುದು ಕೆಲವು ಬಾರಿ ಅತ್ಯಗತ್ಯ ಹಾಗೂ ತಪ್ಪಿಲ್ಲ.

ಅಮ್ಮಂದಿರಾಗಿ, ಚಿಂತಿಸದಿರಲು ಅಥವಾ ನಿರಾತಂಕವಾಗಿರಲು ಅಸಾಧ್ಯವಾಗಿದೆ ಆದರೆ ನೀವು ಮಾಡಬಹುದಾದ ಕನಿಷ್ಠವೆಂದರೆ ನಿಮ್ಮನ್ನು ಪುನರ್ಯೌವನಗೊಳಿಸಲು ಸ್ವಲ್ಪ ಸಮಯವನ್ನು ನಿಮಗಾಗಿ ಅನುಮತಿಸುವುದು, ವಿರಾಮ ತೆಗೆದುಕೊಳ್ಳುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ,

2) ಅಮ್ಮ ಸದಾ ಲಭ್ಯವಿರುವುದಿಲ್ಲ

ಅಮ್ಮಂದಿರು ಸದಾ ಲಭ್ಯವಿರುತ್ತಾರೆ ಮತ್ತು ಸಾರ್ವಕಾಲಿಕವಾಗಿ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಅವರು ಯಾವಾಗಲೂ ಎಲ್ಲದರ ಬಗ್ಗೆಯೂ ತೆಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲ, ಎಲ್ಲದರ ಮೇಲೆ ಇರಲು ಸಾಧ್ಯವಿಲ್ಲ. ಪೋಷಕರಾಗಿ 'ಇಲ್ಲ' ಎಂದು ಹೇಳುವುದು ಕಠಿಣ ವಿಷಯ ಆದರೆ ಕೆಲವು ಸಂದರ್ಭಗಳಲ್ಲಿ ಅದು ಮುಖ್ಯವಾಗಿದೆ. ತಾಯಿಯಾಗಿ ನಿಮ್ಮ ಮೌಲ್ಯವನ್ನು ತಿಳಿದುಕೊಳ್ಳಿ ಮತ್ತು ನೀವು ಯಾವಾಗಲೂ ಮಕ್ಕಳ ಎಲ್ಲ ಬೇಡಿಕಗಳಿಗೆ ಇರಲು ಸಾಧ್ಯವಾಗದಿದ್ದರೆ ಅದು ತಪ್ಪೇನಿಲ್ಲ, ಇಲ್ಲಿ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಮಾಡುವುದು, ನಿಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. .

3) ಅಮ್ಮ ಸಹ ಆಗಾಗ್ಗೆ ತಪ್ಪು ಮಾಡುತ್ತಾ

ರೆಅಮ್ಮಂದಿರು ಸರಿಯಾದ ಮಾರ್ಗವನ್ನೇ ಅನುಸರಿಸುತ್ತಾರೆ ಮತ್ತು ಅವರು ಎಂದಿಗೂ ತಪ್ಪು ಮಾಡಬಾರದು ಎಂಬುದು ಸರ್ವಸಹಜವಾಗಿದೆ, ಇದನ್ನೇ ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಅಸಾಧ್ಯ. ತಪ್ಪುಗಳನ್ನು ಮಾಡುವುದು ಮನುಷ್ಯನ ಸಹಜಧರ್ಮ ಎಂಬುದು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಅಮ್ಮಂದಿರು ಸಹ ಎಲ್ಲರಂತೆ ವರ್ತಿಸಲು, ಕೆಲವು ತಪ್ಪುಗಳನ್ನು ಮಾಡಲು, ಅವರು ಅವರಾಗೆ ಇರಲು ಅವಕಾಶ ನೀಡುವುದು ಉತ್ತಮ.

ಅಮ್ಮಂದಿರು ಕುಗ್ಗಬಹುದು, ಅವರು ಗೊಂದಲಕ್ಕೊಳಗಾಗಬಹುದು ಇದು ಸಾಮಾನ್ಯವಾಗಿದೆ. ಅಮ್ಮ ತಪ್ಪು ಮಾಡಿದರೆ ದೊಡ್ಡ ತಪ್ಪು ಎಂದು ತಪ್ಪಿತಸ್ಥರೆಂದು ಭಾವಿಸಲು ಇಲ್ಲಿ ಏನೂ ಇಲ್ಲ. ನಮ್ಮ ಹೆತ್ತವರು ತಪ್ಪು ಮಾಡಿದಾಗ ಅವರನ್ನು ಕ್ಷಮಿಸುವುದು ಮತ್ತು ನಾವೇ ಪೋಷಕರಾದಾಗ ಸಹ ತಪ್ಪು ಮಾಡುವುದು ಸಹಜ ಹಾಗೂ ಮಾಡಿ. ಪಾಲಕರು ಅವರು ಎಂದಿಗೂ ತಪ್ಪಾಗಲಾರರು ಎಂದು ನಂಬುವಂತೆ ಮಾಡಲಾಗುತ್ತದೆ ಆದರೆ ಕಠಿಣ ಸತ್ಯವೆಂದರೆ ಕೆಲವೊಮ್ಮೆ ಅವರು ಅದನ್ನು ಮಾಡುತ್ತಾರೆ ಮತ್ತು ನಾವು ಅದನ್ನು ದಾರಿಯುದ್ದಕ್ಕೂ ಒಪ್ಪಿಕೊಳ್ಳಬೇಕು ಅಷ್ಟೇ.

4) ಅಮ್ಮ ಕೆಲಸ ಮಾಡಿದರೆ ಕಾಳಜಿ ಅಸಾಧ್ಯ

ಹೆಚ್ಚಿನ ಕುಟುಂಬಗಳಲ್ಲಿ, ಉದ್ಯೋಗ ಮಾಡುವ ತಾಯಿಗಿಂತ ಮೂರ್ಖರು ಬೇರೆ ಇಲ್ಲ ಎಂದುಕೊಂಡಿದ್ದಾರೆ. ಏಕೆಂದರೆ ಅವರು ಮಕ್ಕಳಿಗೆ ಪ್ರಾಧಾನ್ಯತೆ ಕೊಡುವುದಿಲ್ಲ ಎಂದು ತೀರ್ಮಾನಕ್ಕೆ ಬಂದುಬಿಡುತ್ತಾರೆ. ಕೆಲಸ ಮಾಡುವ ತಾಯಿಯು ತನ್ನ ಮಕ್ಕಳಿಗೆ ಸ್ವಂತ ಕಾಲಿನ ಮೇಲೆ ನಿಲ್ಲಲು ಕಲಿಸುವ ಬಲವಾದ, ಸ್ವತಂತ್ರ ಮಹಿಳೆಯ ಪ್ರತಿಬಿಂಬವಾಗಿದೆ. ಕೆಲಸ ಮಾಡುವ ಅಮ್ಮಂದಿರು ಅಸಮರ್ಥ ಅಮ್ಮಂದಿರಿಗೆ ಸಮಾನಾರ್ಥಕವಲ್ಲ, ಆದರೆ ಅವರು ಶಕ್ತಿಯುತ ಅಮ್ಮಂದಿರಿಗೆ ಸಮಾನಾರ್ಥಕವಾಗಿರಬಹುದು. ಅವರು ಮನೆಯ ಕೆಲಸದ ಜೊತೆಗೆ ಹೊರಗಿನ ತಮ್ಮ ಉದ್ಯೋಗವನ್ನು ಸಹ ಸಮರ್ಥವಾಗಿ ನಿಭಾಯಿಸುತ್ತಿರುತ್ತಾರೆ ಎಂಬುದು ನೆನಪಿರಲಿ.

ಕೆಲಸ ಮಾಡುವ ತಾಯಿಯು ಮನೆಯಲ್ಲಿಯೇ ಇರುವ ತಾಯಿಯಂತೆಯೇ ದಕ್ಷ, ಸಮರ್ಥ, ಪ್ರೀತಿ ಮತ್ತು ಗಮನವನ್ನು ಹೊಂದಿರುತ್ತಾಳೆ. ತಾಯಿಯಾಗಿ ನೀವು ಏನು ಮಾಡಿದರೂ ಅದು ನೀವು ಮಾಡುವ ಆಯ್ಕೆಯಾಗಿದೆ ಮತ್ತು ಅದನ್ನು ಆಚರಿಸಬೇಕು ಮತ್ತು ಗೌರವಿಸಬೇಕು, ನಿಂದಿಸಬಾರದು ಮತ್ತು ಕೀಳುಗೊಳಿಸಬಾರದು.

English summary

Things Mother Must Stop Feeling Guilty About in kannada

Here we are discussing about Things Mother Must Stop Feeling Guilty About in kannada. Read more.
Story first published: Thursday, May 26, 2022, 15:21 [IST]
X
Desktop Bottom Promotion