For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಕೆಲಸಕ್ಕೆ ಹೋಗುತ್ತಿದ್ದರೆ, ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ

|

ಪ್ರತಿ ಹೆಣ್ಣಿನ ಜೀವನದಲ್ಲಿ ತಾಯಿಯಾಗುವುದು ಅತ್ಯಂತ ಸುಂದರ ಹಾಗೂ ಅಷ್ಟೇ ಸವಾಲಿನ ಹಂತವಾಗಿದೆ. ಗರ್ಭ ಧರಿಸಿದ ನಂತರ ಮಹಿಳೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳಿಗೆ ಒಳಗಾಗುತ್ತಾಳೆ. ಆದರೆ, ಈ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಂಡು, ಅದರ ಜೊತೆಗೆ ಕೆಲಸಕ್ಕೂ ಹೋಗುವ ಮಹಿಳೆ ತುಸು ಹೆಚ್ಚೇ ಗೌರವಕ್ಕೆ ಪಾತ್ರಳಾಗುತ್ತಾಳೆ. ಏಕೆಂದರೆ ಗರ್ಭಿಣಿಯಾಗಿದ್ದಾಗ ಕೆಲಸ ಮಾಡುವುದು ಸುಲಭದ ಮಾತಲ್ಲ. ಹಾಗಂತ ಭಯ ಪಡುವ ಅಗತ್ಯವೂ ಇಲ್ಲ. ಕೆಲವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ, ಆರಾಮದಾಯಕ ಜೀವನವನ್ನು ನಡೆಸಬಹುದು.
ನೀವು ಪ್ರಸ್ತುತ ಗರ್ಭಿಣಿಯಾಗಿದ್ದು, ಕೆಲಸ ಮಾಡುತ್ತಿದ್ದರೆ, ಯಾವುದೇ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಗರ್ಭಿಣಿ ಉದ್ಯೋಗಿ ನೆನಪಿಡಬೇಕಾದ ಕೆಲವು ಸಂಗತಿಗಳುನ್ನು ಈ ಕೆಳಗೆ ನೀಡಲಾಗಿದೆ:

ಪೌಷ್ಟಿಕಾಂಶಭರಿತ ಆಹಾರ ಸೇವಿಸಿ:

ಪೌಷ್ಟಿಕಾಂಶಭರಿತ ಆಹಾರ ಸೇವಿಸಿ:

ಇನ್ನೇನು ತಾಯಿಯಾಗವವಳು ತನ್ನ ಮಗುವಿಗಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಮುಖ್ಯ. ಗರ್ಭಿಣಿಯರು ಕೆಲಸಕ್ಕೆ ಹೋಗುವಾಗ ಮನೆಯಿಂದಲೇ ಊಟ ಕೊಂಡೊಯ್ಯುವುದನ್ನು ಮರೆಯಬೇಡಿ. ನಿಮ್ಮ ಊಟವು ಸಮತೋಲಿತ ಮತ್ತು ಪೌಷ್ಟಿಕವಾಗಿರಲು ನಿಮ್ಮ ಊಟಕ್ಕೆ ಹಸಿರು ಸೊಪ್ಪು-ತರಕಾರಿ, ಧಾನ್ಯಗಳನ್ನು ಸೇರಿಸಿ. ಫೋಲಿಕ್ ಆಮ್ಲವನ್ನು ಹೆಚ್ಚು ಸೇವಿಸುವುದು ಮುಖ್ಯ, ಏಕೆಂದರೆ ಇದು ಮಗುವಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆವಕಾಡೊ, ಹೂಕೋಸು, ಕಿತ್ತಳೆ ಮುಂತಾದ ಫೋಲಿಕ್ ಆಮ್ಲದ ಆಹಾರಗಳನ್ನು ಸೇವಿಸಿ.

ಕೆಲಸ ಮಾಡುವಾಗ ಜಂಕ್ ಫುಡ್ ಸೇವಿಸುವುದನ್ನು ತಪ್ಪಿಸಿ. ಬೀದಿ ಆಹಾರ ಅಥವಾ ಉಪ್ಪು ಅಥವಾ ಸಕ್ಕರೆ ಹೆಚ್ಚು ಇರುವ ವಸ್ತುಗಳನ್ನು ಸಂಪೂರ್ಣವಾಗಿ ತಪ್ಪಿಸಿ. ಮಜ್ಜಿಗೆ ಮತ್ತು ತಾಜಾ ರಸವನ್ನು ಸೇವಿಸುವುದು ಒಳ್ಳೆಯದು.

ಸ್ನ್ಯಾಕ್ಸ್ ಜೊತೆಗಿರಲಿ:

ಸ್ನ್ಯಾಕ್ಸ್ ಜೊತೆಗಿರಲಿ:

ಮೊದಲ ತ್ರೈಮಾಸಿಕದಲ್ಲಿ ಬೆಳಗಿನ ತಲೆನೋವು ಅಥವಾ ವಾಕರಿಕೆ ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ಬೆಳಿಗ್ಗೆ ಕಾಡಲಿದ್ದು, ನಿಮ್ಮ ದಿನವನ್ನು ಪ್ರಾರಂಭಿಸಲು ನಿಮಗೆ ಕಷ್ಟವಾಗಬಹುದು. ವಾಕರಿಕೆ ನಿವಾರಿಸಲು, ದಿನವಿಡೀ ಸ್ನಾಕ್ಸ್ಗಳನ್ನು ತಿನ್ನಿರಿ. ನಿಮ್ಮ ಊಟದ ಡಬ್ಬಿಯಲ್ಲಿ ಸಲಾಡ್, ಹಣ್ಣುಗಳು, ಬಿಸ್ಕತ್ತುಗಳನ್ನು ಪ್ಯಾಕ್ ಮಾಡಿ. ವಾಕರಿಕೆ ಬಂದಾಗ ಈ ತಿಂಡಿಗಳನ್ನು ಸೇವಿಸಿ. ಹುಣಸೆಹಣ್ಣಿನ ಉಂಡೆ, ನೆಲ್ಲಿಕಾಯನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಸಹ ಒಳ್ಳೆಯದು.

ತುಂಬಾ ಹೊತ್ತು ನಿಲ್ಲಬೇಡಿ:

ತುಂಬಾ ಹೊತ್ತು ನಿಲ್ಲಬೇಡಿ:

ಕೆಲಸದಲ್ಲಿ ಹೆಚ್ಚು ಹೊತ್ತು ನಿಲ್ಲದಂತೆ ನೋಡಿಕೊಳ್ಳಿ ಏಕೆಂದರೆ ಇದು ಬೆನ್ನು ಮತ್ತು ಕಾಲು ನೋವಿಗೆ ಕಾರಣವಾಗಬಹುದು. ಹೆಚ್ಚು ಹೊತ್ತು ನಿಲ್ಲುವುದರಿಂದ ಭ್ರೂಣಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ ಮತ್ತು ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.

ಕೆಲಸದಲ್ಲಿ ಒತ್ತಡ ಬೇಡ:

ಕೆಲಸದಲ್ಲಿ ಒತ್ತಡ ಬೇಡ:

ಗರ್ಭಾವಸ್ಥೆಯು ಹೆಣ್ಣಿಗೆ ಹೆಚ್ಚಿನ ಒತ್ತಡವನ್ನು ತರುತ್ತದೆ. ಜೊತೆಗೆ ಕೆಲಸ ಮಾಡುವುದರಿಂದ ಹೆಚ್ಚುವರಿ ಒತ್ತಡ ಬಿದ್ದಂತೆ ಭಾಸವಾಗುತ್ತದೆ. ಕೆಲಸದಲ್ಲಿರುವ ನಿಮ್ಮ ಸಹೋದ್ಯೋಗಿಗಳು, ವ್ಯವಸ್ಥಾಪಕರೊಂದಿಗೆ ನಿಮ್ಮ ಒತ್ತಡವನ್ನು ಚರ್ಚಿಸಿ. ಅಗತ್ಯವಿದ್ದರೆ ಮನೆಯಿಂದ ಕೆಲಸ ಮಾಡುವಂತಹ ಆಯ್ಕೆಗಳನ್ನು ಅವರ ಬಳಿ ಕೇಳಿ.

ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ತಪ್ಪಿಸಿ:

ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ತಪ್ಪಿಸಿ:

ನೀವು ಪ್ರಯಾಣ ಸಂಬಂಧಿತ ಉದ್ಯೋಗ ಮಾಡುತ್ತಿದ್ದರೆ, ಪ್ರಯಾಣಿಸಲು ಸುರಕ್ಷಿತ ಸಮಯವು 14 ರಿಂದ 28 ವಾರಗಳ ನಡುವೆ ಇರುತ್ತದೆ ಎಂಬುದನ್ನು ನೆನಪಿಡಿ. ಗರ್ಭಾವಸ್ಥೆಯ ಮೊದಲ ಲಕ್ಷಣಗಳು ಮರೆಯಾಗುವ ಸಮಯ ಇದು. ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಸದೃಢರಾಗಿರುತ್ತಾರೆ. ಆದ್ದರಿಂದ ನಿಮ್ಮ ಪ್ರಯಾಣದ ಸಮಯವನ್ನು ಸಾಧ್ಯವಾದಷ್ಟು ಮಿತಿಗೊಳಿಸಲು ಪ್ರಯತ್ನಿಸಿ. ನೀವು ಹೆಚ್ಚು ಸಮಯ ಪ್ರಯಾಣಿಸಬೇಕಾದರೆ, ನಿಮ್ಮ ಕಾಲುಗಳನ್ನು ಹಿಗ್ಗಿಸಲು ಆಗಾಗ್ಗೆ ವಾಹನ ನಿಲ್ಲಿಸಿ.

ಭಾರ ಎತ್ತುವ ಕೆಲಸ ಬೇಡ;

ಭಾರ ಎತ್ತುವ ಕೆಲಸ ಬೇಡ;

ನಿಮ್ಮ ಕೆಲಸಕ್ಕೆ ಎಳೆಯುವುದು, ತಳ್ಳುವುದು, ಎತ್ತುವುದು ಅಥವಾ ಇತರ ಯಾವುದೇ ದೈಹಿಕ ಶ್ರಮದ ಅಗತ್ಯವಿದ್ದರೆ, ತಕ್ಷಣವೇ ನಿಲ್ಲಿಸಿ. ತಲೆತಿರುಗುವಿಕೆ ಮತ್ತು ಆಯಾಸದಂತಹ ನಿಮ್ಮ ಗರ್ಭಾವಸ್ಥೆಯ ಲಕ್ಷಣಗಳೊಂದಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಬಹುದು. ಈ ಬಗ್ಗೆ ನಿಮ್ಮ ಮ್ಯಾನೇಜರ್ ಜೊತೆ ಮಾತನಾಡಿ.

ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ:

ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ:

ಕೆಲಸದಲ್ಲಿರುವಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಪ್ರತಿ ಗಂಟೆಗೊಮ್ಮೆ ಎದ್ದು, ಕೆಲವು ನಿಮಿಷಗಳ ಕಾಲ ನಡೆಯಿರಿ. ಇದು ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸುತ್ತಾಡುವುದರಿಂದ ಊತವೂ ಕಡಿಮೆಯಾಗುತ್ತದೆ. ಕೆಲಸದಿಂದ ಕೆಲವು ನಿಮಿಷಗಳನ್ನು ವಿರಾಮ ತೆಗೆದುಕೊಂಡು, ನಿಮ್ಮ ಪಾದಗಳನ್ನು ಮೇಲಕ್ಕೆ ಇಡಿ, ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಿ. ಇದು ಭಾರೀ ಕೆಲಸದ ದಿನದಂದು ರೀಚಾರ್ಜ್ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

English summary

Working during pregnancy: Dos And Don'ts For Women Working During Pregnancy in Kannada

Here we talking about Working during pregnancy: Dos And Don'ts For Women Working During Pregnancy in Kannada, read on
Story first published: Friday, November 26, 2021, 18:00 [IST]
X