For Quick Alerts
ALLOW NOTIFICATIONS  
For Daily Alerts

ಹೊಟ್ಟೆಯಲ್ಲಿ ಮಗು ಒದೆಯುವುದು ಏಕೆ? ಯಾವಾಗ ಒದೆಯಲು ಪ್ರಾರಂಭಿಸುತ್ತದೆ?

|

ಗರ್ಭಿಣಿಯಾಗಿದ್ದಾಗ ಮಗುವಿನ ಮೊದಲ ಕಿಕ್‌ ಆಹಾ... ತಾಯಿಗೆ ಆಗುವ ಪುಳುಕ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಯ್ಯೋ ನನ್ನ ಮಗು ಒದೆಯುತ್ತಿದೆ ಎಂದು ಆ ತಾಯಿಗೆ ಖುಷಿಯೋ ಖುಷಿ, ಇನ್ನು ಮಗು ಕಿಕ್‌ ಕೊಡುವ ತಂದೆ ಕೂಡ ಹೊಟ್ಟೆಯ ಮೇಲೆ ಕೈಯಿಟ್ಟು ಆ ಖುಷಿ ಅನುಭವಿಸುವುದುಂಟು.

ಮಗು ಹೊಟ್ಟೆಯಲ್ಲಿ ಕಿಕ್‌ ಕೊಡುತ್ತಿದ್ದರೆ ತಾಯಿಗೆ ಮಗು ಚಟುವಟಿಕೆಯಿಂದ ಇದೆ ಎಂಬುವುದು ತಿಳಿಯುತ್ತದೆ. ವೈದ್ಯರು ಕೂಡ ತಾಯಿಗೆ ನೀವು ಮಗುವಿನ ಕಿಕ್‌ ಕಡೆ ಗಮನ ಹರಿಸಬೇಕು. ಒಂದು ಗಂಟೆಯಲ್ಲಿ 10 ಬಾರಿಯಾದರೂ ಒದೆಯಬೇಕು ಎಂದು ಹೇಳುತ್ತಾರೆ.

ಮಗು ಗರ್ಭದಲ್ಲಿ ಏಕೆ ಒದೆಯುತ್ತದೆ? ಯಾವಾಗ ಭ್ರೂಣವೂ ಕಿಕ್‌ ಮಾಡಲು ಪ್ರಾರಂಭಿಸುತ್ತದೆ? ಏಕೆ ಮಗುವಿನ ಒದೆತ ಕಡೆಗೆ ಗಮನ ಹರಿಸಬೇಕು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ.

ಹೊಟ್ಟೆಯೊಳಗೆ ಮಗು ಒದೆಯುವುದು ಮಗುವಿನ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು

ಹೊಟ್ಟೆಯೊಳಗೆ ಮಗು ಒದೆಯುವುದು ಮಗುವಿನ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು

ಮಗು ಹೊಟ್ಟೆಯೊಳಗೆ ತಿರುಗುವುದು, ಮೈ ಮುರಿಯುವುದು, ಒದೆಯುವುದು ಇವೆಲ್ಲಾ ಮಗುವಿನ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಮಗುವಿನ ಒದೆತ ಸಾಮಾನ್ಯವಾಗಿ 20-30ನೇ ವಾರದಲ್ಲಿ ಪ್ರಾರಂಭವಾಗುತ್ತದೆ. ಇದು ಮಗುವಿನ ಬೆಳವಣಿಗೆಯ ಹಂತವಾಗಿದ್ದು ಈ ಸಮಯದಲ್ಲಿ ಮೂಳೆ ಆಕಾರಕ್ಕೆ ಬರಲಾರಂಭಿಸಿರುತ್ತದೆ, ಮಗುವಿನ ಒದೆತ 35 ವಾರಗಳ ಬಳಿಕ ಕಡಿಮೆಯಾಗುವುದು.

ಭ್ರೂಣದ ಮೂಳೆಯಲ್ಲಿ ತೊಂದರೆ ಇದ್ದರೆ ಮಗುವಿನ ಒದೆತ ಇಲ್ಲದಿರುವುದಾಗಿ ಅಧ್ಯಯನಗಳು ಹೇಳುತ್ತವೆ.

ನರಗಳ ಬೆಳವಣಿಗೆಗೂ ಸಹಕಾರಿ

ಕೆಲವೊಂದು ಅಧ್ಯಯನಗಳ ಪ್ರಕಾರ ಮಗುವಿನ ಒದೆತ ಮಗುವಿನ ನರಗಳ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದೆ. ಆದ್ದರಿಂದ ಮಗು ಒದ್ದಷ್ಟೂ ಒಳ್ಳೆಯದೇ.

ಮಗುವಿನ ಒದೆತದ ಅನಭವ ಯಾವಾಗ ಉಂಟಾಗುತ್ತದೆ?

ಮಗುವಿನ ಒದೆತದ ಅನಭವ ಯಾವಾಗ ಉಂಟಾಗುತ್ತದೆ?

ಮಗುವಿನ ಒದೆತ 16 ವಾರಗಳು ಕಳೆಯುತ್ತಿದ್ದಂತೆ ಶುರುವಾಗುತ್ತದೆ. ಅಂದರೆ ಎರಡನೇ ತ್ರೈಮಾಸಿಕದಿಂದ ಶುರುವಾಗುತ್ತದೆ. ಮೊದಲಿಗೆ ನಿಮ್ಮ ಹೊಟ್ಟೆಯೊಳಗೆ ಒಂದು ರೀತಿಯ ಅನುಭವ ಉಂಟಾಗುತ್ತದೆ. ಎರಡನೇ ತ್ರೈಮಾಸಿಕದಲ್ಲಿ ಕೆಲವರಿಗೆ ಬೇಬಿ ಕಿಕ್ ಅಷ್ಟಾಗಿ ಗೊತ್ತಾಗುವುದಿಲ್ಲ, ಹಾಗಂತ ಈ ಬಗ್ಗೆ ತುಂಬಾ ಭಯ ಪಡಬೇಕಾಗಿಲ್ಲ, ಮೂರನೇ ತ್ರೈಮಾಸಿಕದಲ್ಲಿ ಮಗುವಿನ ಒದೆತದ ಅನುಭವ ಉಂಟಾಗುವುದು.

 ಯಾವಾಗ ಮಗುವಿನ ಒದೆ ಕಡೆ ಗಮನ ನೀಡಬೇಕು?

ಯಾವಾಗ ಮಗುವಿನ ಒದೆ ಕಡೆ ಗಮನ ನೀಡಬೇಕು?

28ನೇ ವಾರದ ಬಳಿಕ ಮಗುವಿನ ಒದೆತ ಕಡೆ ತುಂಬಾನೇ ಗಮನ ನೀಡುವಂತೆ ವೈದ್ಯರು ಹೇಳುತ್ತಾರೆ. ಒಂದು ಗಂಟೆಯಲ್ಲಿ 10 ಬಾರಿಯಾದರೂ ಒದೆಯಬೇಕು ಎಂದು ಹೇಳುತ್ತಾರೆ.

ಗರ್ಭಾವಸ್ಥೆಯಲ್ಲಿ ಮಧುಮೇಹ, ಬಿಪಿ ಮುಂತಾದ ಸಮಸ್ಯೆಯಿದ್ದರೆ ಮಗುವಿನ ಕಿಕ್‌ ಕಡೆ ತುಂಬಾನೇ ಗಮನ ನೀಡಬೇಕು. ಕಿಕ್ ಕಡಿಮೆಯಾಗಿದೆ ಎಂದು ಅನಿಸಿದ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಮಗುವಿನ ಕಿಕ್‌ ಯಾವ ಸಮಯದಲ್ಲಿ ಹೆಚ್ಚು ಗೊತ್ತಾಗುತ್ತದೆ

ಮಗುವಿನ ಕಿಕ್‌ ಯಾವ ಸಮಯದಲ್ಲಿ ಹೆಚ್ಚು ಗೊತ್ತಾಗುತ್ತದೆ

ಸಾಮಾನ್ಯವಾಗಿ ಮಗು ಬೆಳಗ್ಗೆಯಿಂದ-ಸಂಜೆಯವರೆಗೆ ತುಂಬಾ ಚಟುವಟಿಕೆಯಿಂದ ಇರುತ್ತದೆ. ಇನ್ನು ಕೆಲವರಿಗೆ ರಾತ್ರಿ ನಿದ್ದೆ ಮಾಡಿದಾಗ ನಿದ್ದೆಯಿಂದ ಎಚ್ಚೆತ್ತುಕೊಳ್ಳುವಷ್ಟು ಒದೆ ಕೊಡುತ್ತದೆ. ನಿಮ್ಮ ಮಗು ದಿನಾ ಒದೆಯುತ್ತಿದ್ದು ಇದ್ದಕ್ಕಿದ್ದಂತೆ ಒದೆಯದಿದ್ದರೆ ಗಮನಿಸಬೇಕಾದ ಸಮಸ್ಯೆಯೇ ಹೌದು. ಕೂಡಲೇ ನೀವು ವೈದ್ಯರನ್ನು ಭೇಟಿ ಮಾಡಬೇಕು.

ನಿಮ್ಮ ಮಗುವಿನ ಕಿಕ್‌ ಗೊತ್ತಾಗುತ್ತಿಲ್ಲ ಎಂದರೆ ಯಾವುದಾದರೂ ಸಿಹಿ ಜ್ಯೂಸ್‌ ಕುಡಿದು ಹಾಗೇ ಮಲಗಿ ಹೊಟ್ಟೆಯನ್ನು ಗಮನಿಸಿ. ಜ್ಯೂಸ್‌ ಕುಡಿದ ಒಂದು ಗಂಟೆಯ ಒಳಗಾಗಿ ಮಗು ಒದೆಯಲಾರಂಭಿಸುತ್ತದೆ.

ಗರ್ಭಾವಸ್ಥೆಯಲ್ಲಿ ಬೆನ್ನು ಮೇಲೆ ಮಲಗಿದರೆ ಆಮ್ಲಜನಕ ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಸಿಗದೆ ಒದೆ ಕಡಿಮೆಯಾಗುವುದು. ಆದ್ದರಿಂದ ಗರ್ಭಿಣಿಯರು ಒಂದು ಬದಿಯಲ್ಲಿ ತಿರುಗಿ ಮಲಗುವುದು ಒಳ್ಳೆಯದು.

English summary

Why Do Babies Kick In The Womb And When It Starts?

Why do babies kick in the womb and when it starts? Here are more information....
X
Desktop Bottom Promotion