For Quick Alerts
ALLOW NOTIFICATIONS  
For Daily Alerts

ಮೊದಲ ಹೆರಿಗೆಯಾದ ಬಳಿಕ ಕಾಡುವ ಬಂಜೆತನದ ಬಗ್ಗೆ ಗೊತ್ತಿದೆಯೇ?

|

ಸೆಕೆಂಡರಿ ಇನ್‌ಫರ್ಟಿಲಿಟಿ ಬಗ್ಗೆ ಕೇಳಿದ್ದೀರಾ? ಅಂದರೆ ಅದನ್ನು ಮೊದಲಿನ ಹೆರಿಗೆಯ ಬಳಿಕ ಕಾಡುವ ಬಂಜೆತನ ಎಂದು ಕರೆಯಲಾಗುವುದು. ಎಷ್ಟೋ ದಂಪತಿಗೆ ಇದರ ಬಗ್ಗೆ ತಿಳಿದರುವುದೇ ಇಲ್ಲ.

ಒಂದು ಮಗುವಾಗಿರುತ್ತೆ, ಆದ್ದರಿಂದ ಬಂಜೆತನ ಸಮಸ್ಯೆ ಇರಲ್ಲ ಎಂದು ಭಾವಿಸುತ್ತರೆತ್ತಾರೆ. ಆದರೆ ಕೆಲವರಿಗೆ ಒಂದು ಮಗುವಾದ ಬಳಿಕ ಬಂಜೆತನ ಉಂಟಾಗುವುದು.

ಆದ್ದರಿಂದ ಒಂದು ಮಗುವಾದ ಬಳಿಕ ಎರಡನೇ ಮಗುವಿಗೆ ಪ್ರಯತ್ನ ಮಾಡಿದಾಗ ಫಲ ಸಿಕ್ಕಿರುವುದಿಲ್ಲ. ಆದರೆ ಹೆಚ್ಚಿನವರು ವೈದ್ಯರ ಬಳಿ ಹೋಗುವುದೇ ಇಲ್ಲ, ಮೊದಲು ಏನೂ ತೊಂದರೆಯಾಗಿಲ್ಲ, ಆದ್ದರಿಂದ ಏನೂ ತೊಂದರೆ ಇರಲ್ಲ, ಆದರೆ ಗರ್ಭಧಾರಣೆಗೆ ಎನೂ ತೊಂದರೆಯಿಲ್ಲ, ನಿಧಾನಕ್ಕೆ ಆಗಬಹುದು ಎಂದು ಭಾವಿಸುತ್ತಾರೆ, ಕೊನೆಗೆ ಮಗುವಾಗುವ ಸಾಧ್ಯತೆ ಕಡಿಮೆಯಾಗುವುದು. ಅದೇ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಎರಡನೇ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.

ಬಂಜೆತನ ಪುರುಷ ಹಾಗೂ ಮಹಿಳೆಯರಲ್ಲೂ ಉಂಟಾಗಬಹುದು. ಒಂದು ಹೆರಿಗೆಯಾದ ಬಳಿಕ ಬಂಜೆತನ ಸಾಮಾನ್ಯವಾಗಿ ಈ ಕಾರಣಗಳಿಂದ ಉಂಟಾಗುತ್ತದೆ:

1. ವಯಸ್ಸು

1. ವಯಸ್ಸು

ಪುರುಷ ಹಾಗೂ ಮಹಿಳೆಯರ ವಯಸ್ಸು ಕೂಡ ಬಂಜೆತನಕ್ಕೆ ಕಾರಣವಾಗುವುದು. ಮೊದಲ ಮಗುವಾಗಿ ಎರಡನೇ ಮಗುವಿಗೆ ತುಂಬಾ ಗ್ಯಾಪ್ ಕೊಟ್ಟಾಗ ವಯಸ್ಸು ಕೂಡ ಹೆಚ್ಚಿರುತ್ತೆ. ಆಗ ಮಗುವಿಗಾಗಿ ಪ್ರಯತ್ನಿಸಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಕಡಿಮೆ.

2. ವೀರ್ಯಾಣು ಅಥವಾ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು

2. ವೀರ್ಯಾಣು ಅಥವಾ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು

ವಯಸ್ಸಾಗುತ್ತಿದ್ದಂತೆ ಪುರುಷರಲ್ಲಿ ವೀರ್ಯಾಣು, ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಕಡಿಮೆಯಾಗುವುದು. ಇದರಿಂದಾಗಿ ಕೂಡ ಗರ್ಭಧಾರಣೆ ಸಾಧ್ಯತೆ ಕಡಿಮೆಯಾಗುವುದು.

3. ಫಾಲೋಪಿಯನ್‌ ಟ್ಯೂಬ್‌ ಬ್ಲಾಕ್ ಆಗಿದ್ದರೆ

3. ಫಾಲೋಪಿಯನ್‌ ಟ್ಯೂಬ್‌ ಬ್ಲಾಕ್ ಆಗಿದ್ದರೆ

ಲೈಂಗಿಕ ಸೋಂಕಾದ gonorrhea and chlamydiaದಿಂದಾಗಿ ಫಾಲೋಪಿಯನ್ ಟ್ಯೂಬ್‌ ಬ್ಲಾಕ್ ಆಗಿ ಅಂಡಾಣು ಮತ್ತು ವೀರ್ಯಾಣು ಸೇರದೆ ಬಂಜೆತನ ಉಂಟಾಗುವುದು.

4. ಸಂತಾನೋತ್ಪತ್ತಿ ಅಂಗಕ್ಕೆ ಪೆಟ್ಟಾಗಿದ್ದರೆ

4. ಸಂತಾನೋತ್ಪತ್ತಿ ಅಂಗಕ್ಕೆ ಪೆಟ್ಟಾಗಿದ್ದರೆ

ಪಿಸಿಒಎಸ್‌ ಮತ್ತು ಥೈರಾಯ್ಡ್ ಸಮಸ್ಯೆ ಉಂಟಾದರೆ ಅಥವಾ ಪ್ರೊಗೆಸ್ಟಿರೋನ್‌ ಉತ್ಪತ್ತಿ ಕಡಿಮೆಯಾದರೆ ಅಥವಾ ಅನಿಯಮಿತ ಮುಟ್ಟಿನ ಸಮಸ್ಯೆ ಅಥವಾ ಅಂಡಾಣು ಉತ್ಪತ್ತಿ ಕಡಿಮೆಯಾದರೆ ಬಂಜೆತನ ಉಂಟಾಗುವುದು.

5. ಜೀವನಶೈಲಿ ಬದಲಾದರೆ

5. ಜೀವನಶೈಲಿ ಬದಲಾದರೆ

ಮೈ ತೂಕ ಹೆಚ್ಚುವುದು, ವಿಪರೀತ ಮಾನಸಿಕ ಒತ್ತಡ ಇವೆಲ್ಲಾ ಬಂಜೆತನಕ್ಕೆ ಕಾರಣವಾಗುವುದು.

ಮೊದಲ ಮಗುವಾದ ಬಳಿಕ ಬಂಜೆತನ ಉಂಟಾದರೆ ಸಂತಾನೋತ್ಪತ್ತಿ ಚಿಕಿತ್ಸೆ

ನೀವು ಒಂದು ವರ್ಷದಿಂದ ಎರಡನೇ ಮಗುವಿಗಾಗಿ ಪ್ರಯತ್ನಿಸುತ್ತಿದ್ದು ಅದರಿಂದ ಫಲ ಸಿಗದಿದ್ದರೆ ತುಂಬಾ ಲೇಟ್‌ ಮಾಡಬೇಡಿ, ವೈದ್ಯರನ್ನು ಕಾಣಿ. ಅವರು ಸಮಸ್ಯೆಯೇನು ಏನು ಪತ್ತೆ ಮಾಡಿ ಚಿಕಿತ್ಸೆ ನೀಡುತ್ತಾರೆ. ಇದರ ಜೊತೆ ಮೈ ತೂಕ ಹೆಚ್ಚಾದರೆ ಮೈ ತೂಕ ಕಡಿಮೆ ಮಾಡಿಕೊಳ್ಳಿ, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಇವೆಲ್ಲಾ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು.

English summary

What is Secondary Infertility? Know Causes, Signs, Diagnosis & Treatment in Kannada

What is Secondary Infertility? Know Causes, Signs, Diagnosis & Treatment in Kannada...
Story first published: Thursday, February 24, 2022, 11:36 [IST]
X
Desktop Bottom Promotion