For Quick Alerts
ALLOW NOTIFICATIONS  
For Daily Alerts

ಪುರುಷ ಹಾಗೂ ಮಹಿಳೆಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಹಠ ಯೋಗ

|

ಇತ್ತೀಚೆಗೆ ಮಕ್ಕಳಾಗದಿರುವ ಸಮಸ್ಯೆ ಅನೇಕ ದಂಪತಿಗಳಲ್ಲಿ ಕಂಡು ಬರುತ್ತಿದೆ, ಇದಕ್ಕೆ ನಾನಾ ಕಾರಣಗಳಿವೆ, ಪುರುಷ ಅಥವಾ ಸ್ತ್ರೀ ಬಂಜೆತನ, ಪಿಸಿಒಎಸ್, ಥೈರಾಯ್ಡ್, ಅನಾರೋಗ್ಯ ಜೀವನಶೈಲಿ, ತುಂಬಾ ಲೇಟಾಗಿ ಮದುವೆಯಾಗುವುದು, ಮಾನಸಿಕ ಒತ್ತಡ ಇವೆಲ್ಲಾ ಮಕ್ಕಳಾಗದಿರಲು ಪ್ರಮುಖ ಕಾರಣಗಳಾಗಿವೆ.

ಭಾರತದ ಪ್ರಸಿದ್ಧ ಯೋಗ ಗುರುಗಳಾದ ಸದ್ಗುರುಗಳು 21 ವರ್ಷದ ಬಳಿಕ ಹಠ ಯೋಗ ಅಭ್ಯಾಸ ಮಾಡುವುದರಿಂದ ತಮ್ಮ ಸಂತಾನೋತ್ಪತ್ತಿ ಅಂಗಾಂಗಗಳ ಆರೋಗ್ಯ ಕುಗ್ಗದಂತೆ ಕಾಪಾಡಬಹುದಾಗಿದೆ ಎಂದಿದ್ದಾರೆ. ಹಾಗಾದರೆ ಏನಿದು ಹಠ ಯೋಗ? ಎಂದು ನೋಡುವುದಾದರೆ ಯೋಗ ಎಂಬುವುದು ಬರೀ ಒಂದು ವ್ಯಾಯಾಮವಲ್ಲ. ಸುಮಾರು 5000ಕ್ಕೂ ಅಧಿಕ ವರ್ಷದ ಇತಿಹಾಸವನ್ನು ಹೊಂದಿರುವ ಯೋಗದಿಂದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಬಹುದಾಗಿದೆ.

ಆಸನವೆಂಬುವುದು ದೇಹವನ್ನು ರಬ್ಬರ್‌ನಂತೆ ತಿರುಗಿಸುವ ಕಸರತ್ತಲ್ಲ, ಒಂದೊಂದು ಆಸನದ ಹಿಂದೆಯೂ ಒಂದೊಂದು ವೈಜ್ಞಾನಿಕ ಕಾರಣಗಳಿವೆ.

ಆಸನವೆಂಬುವುದು ದೇಹವನ್ನು ರಬ್ಬರ್‌ನಂತೆ ತಿರುಗಿಸುವ ಕಸರತ್ತಲ್ಲ, ಒಂದೊಂದು ಆಸನದ ಹಿಂದೆಯೂ ಒಂದೊಂದು ವೈಜ್ಞಾನಿಕ ಕಾರಣಗಳಿವೆ.

ನಾವು ಸರಿಯಾಗಿ ಕೂತರೆ ಒಂದು ಆಸನ, ಕಾಲನ್ನು ಎತ್ತಿದರೆ ಮತ್ತೊಂದು ಆಸನ ಹೀಗೆ ಹಲವಾರು ಆಸನಗಳಿವೆ, ಆದರೆ ಇಲ್ಲಿ ಆಸನದ ಜೊತೆಗೆ ಉಸಿರಾಟದ ಕ್ರಿಯೆಯನ್ನೂ ಅಭ್ಯಾಸ ಮಾಡುತ್ತೇವೆ. ಅಂದ್ರೆ ನಿಧಾನಕ್ಕೆ ಉಸಿರು ತೆಗೆಯುವುದು, ಬಿಡುವುದು ಇವೆಲ್ಲಾ ಮಾಡುತ್ತೇವೆ, ಇದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯ ಕೂಡ ಸದೃಢವಾಗುವುದು. ಮನಸ್ಸಿನಲ್ಲಿರುವ ಒತ್ತಡ, ಗೊಂದಲ ಕಡಿಮೆಯಾಗುವುದು, ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚುವುದು.

ಯೋಗ ಮಾಡುವುದರಿಂದ ದೊರೆಯುವ ಪ್ರಯೋಜನಗಳೆಂದರೆ

ಯೋಗ ಮಾಡುವುದರಿಂದ ದೊರೆಯುವ ಪ್ರಯೋಜನಗಳೆಂದರೆ

* ದೈಹಿಕ ಆರೋಗ್ಯ ಹೆಚ್ಚುವುದು

* ದೇಹದ ಭಂಗಿ ಸರಿಯಾಗಿಡುವುದು

* ದೇಹದ ಫ್ಲಕ್ಸಿಬಿಲಿಟಿ ಹೆಚ್ಚಾಗುವುದು

* ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚುವುದು

* ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

* ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಲು ಸಹಕಾರಿ

* ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

* ಮನಸ್ಸು ನಿರಾಳವಾಗಿರುತ್ತೆ

ಮಾನಸಿಕ ಒತ್ತಡ ಹಾಗೂ ಬಂಜೆತನ ನಡುವಿನ ಸಂಬಂಧವೇನು?

ಮಾನಸಿಕ ಒತ್ತಡ ಹಾಗೂ ಬಂಜೆತನ ನಡುವಿನ ಸಂಬಂಧವೇನು?

ಮಕ್ಕಳಾಗದಿರುವುದಕ್ಕೆ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿದೆ. ಯಾರು ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೋ ಅವರಿಗೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಚಿಕಿತ್ಸೆ ನೀಡಿದರೂ ಫಲ ಸಿಗಲ್ಲ. ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಮೊದಲಿಗೆ ಮನಸ್ಸಿನಲ್ಲಿರುವ ಒತ್ತಡವನ್ನು ಹೊರ ಹಾಕಲು ಪ್ರಯತ್ನಿಸಬೇಕು.

ನಾವು ಒತ್ತಡದಲ್ಲಿದ್ದಾಗ ಕಾರ್ಟಿಸೋಲ್ ಹಾರ್ಮೋನ್‌ ಬಿಡುಗಡೆಯಾಗುತ್ತೆ, ಇದು ಅಂಡೋತ್ಪತ್ತಿ ಸಮಯದಲ್ಲಿ ಅಂಡಾಣುಗಳನ್ನು ಬಿಡುಗಡೆ ಮಾಡುವುದನ್ನು ತಡೆಯುತ್ತದೆ, ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಯೋಗ ಸಹಕಾರಿಯಯಾಗಿದೆ.

ಯೋಗ ಸಂತಾನೋತ್ಪತ್ತಿಗೆ ಹೇಗೆ ಸಹಕಾರಿ?

ಯೋಗ ಸಂತಾನೋತ್ಪತ್ತಿಗೆ ಹೇಗೆ ಸಹಕಾರಿ?

ಪ್ರತಿನಿತ್ಯ ಯಾರು ಯೋಗ ಅಭ್ಯಾಸ ಮಾಡುತ್ತಾರೋ ಅವರ ಮಾನಸಿಕ ಒತ್ತಡ ಶೇ.20ರಷ್ಟು ಕಡಿಮೆಯಾಗುವುದು, ಇದರಿಂದಾಗಿ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು ಎಂದು ಈ ಕುರಿತು ನಡೆಸಿದ ಅಧ್ಯಯನ ವರದಿಗಳು ಹೇಳಿವೆ.

ಯೋಗದ ಕೆಲವೊಂದು ಭಂಗಿಗಳು ಹಾಗೂ ಉಸಿರಾಟದ ಕ್ರಿಯೆ ಇವೆಲ್ಲಾ ಪುರುಷ ಹಾಗೂ ಮಹಿಳೆರಲ್ಲಿ ಸಂತಾನೋತ್ಪತ್ತಿ ಅಂಗಗಳಿಗೆ ರಕ್ತ ಸಂಚಾರ ಹಾಗೂ ಆಮ್ಲಜನಕ ಸರಿಯಾಗಿ ಪೂರೈಕೆಯಾಗುವಂತೆ ಮಾಡುತ್ತದೆ. ಇದರಿಂದಾಗಿ ಲೈಂಗಿಕ ಸಮಸ್ಯೆಗಳು ದೂರವಾಗುವುದು, ಸಂತಾನೋತ್ಪತ್ತಿ ಸಾಧ್ಯತೆ ಹೆಚ್ಚುವುದು.

ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಹಠಯೋಗ

ಸಂತಾನೋತ್ಪತ್ತಿಗೆ ಹಠ ಯೋಗ ಒಳ್ಳೆಯದು. ಇದರಲ್ಲಿ ಆಸನಗಳನ್ನು ನಿಧಾನಕ್ಕೆ ಮಾಡಲಾಗುವುದು, ಅಲ್ಲದೆ ಉಸಿರಾಟದ ಟೆಕ್ನಿಕ್‌ ಬಳಸಲಾಗುವುದು. ಇದರಿಂದಾಗಿ ಪೆಲ್ವಿಕ್ ಭಾಗ ಬಲವಾಗುವುದು.

ಪಿಸಿಒಎಸ್, ಹಾರ್ಮೋನ್‌ ಸಮಸ್ಯೆ ಇವೆಲ್ಲಾ ಹೊಂದಿರುವವರು ಹಠ ಯೋಗ ಮಾಡುವುದರಿಂದ ಬೇಗನೆ ಫಲಿತಾಂಶ ಪಡೆಯಬಹುದು. ಯೋಗ ಅಭ್ಯಾಸವನ್ನು ವಾರದಲ್ಲಿ 4-5 ದಿನದಂತೆ ನಾಲ್ಕು ತಿಂಗಳು ಮಾಡಿದರೆ ಬಯಸಿದ ಫಲ ಸಿಗುವುದು.

ಹಠ ಯೋಗ ಎಂದರೇನು?

ಹಠ ಯೋಗ ಎಂದರೇನು?

ಹ ಎಂದರೆ ಸೂರ್ಯ

ಠ ಎಂದರೆ ಚಂದ್ರ

ಸೂರ್ಯ, ಚಂದ್ರನ ಶಕ್ತಿಯನ್ನು ಸಮತೋಲನದಲ್ಲಿಡುವ ಯೋಗ ಆಗಿದೆ. ಹಠ ಯೋಗ ದೇಹ ಹಾಗೂ ಮನಸ್ಸಿನ ಸಮತೋಲನ ಕಾಪಾಡುತ್ತೆ ಅಲ್ಲದೆ ನಾಡಿಗಳನ್ನು ಶುದ್ಧ ಮಾಡುತ್ತೆ.

ಪ್ರಾರಂಭದಲ್ಲಿ ಅಭ್ಯಾಸ ಮಾಡಲು ಕೆಲ ಹಠ ಯೋಗ ಭಂಗಿಗಳು

ಪ್ರಾರಂಭದಲ್ಲಿ ಅಭ್ಯಾಸ ಮಾಡಲು ಕೆಲ ಹಠ ಯೋಗ ಭಂಗಿಗಳು

ತಾಡಾಸನ

ವೃಕ್ಷಾಸನ

ಉತ್ತಾನಾಸನ

ಅಧೋಮುಖ ಶ್ವಾನಾಸನ

ಸೇತು ಬಂಧಾಸನ

ಹಾಲಾಸನ

ಶಿರರ್ಸಾನ

ಸಲಭಾಸನ

ಸರ್ವಾಂಗಾಸನ

ಧನುರ್ಸಾನ

English summary

What Does Hatha Mean? How Hatha Yoga Helps To Keep Your Reproductive Organs Healthy in kannada

what does hatha mean? how hatha yoga helps to keep your reproductive organs healthy, read on..
Story first published: Saturday, June 19, 2021, 17:57 [IST]
X
Desktop Bottom Promotion