For Quick Alerts
ALLOW NOTIFICATIONS  
For Daily Alerts

ಮಗು ಹುಟ್ಟುವ ಮುನ್ನವೇ ಈ ವಸ್ತುಗಳನ್ನು ತಪ್ಪದೇ ಖರೀದಿಸಿ

|

ಮೊದಲ ಬಾರಿಗೆ ತಾಯ್ತತನದ ಖುಷಿಯಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಮನೆಗೆ ಮಗುವಿನ ಆಗಮನದ ಮೊದಲು ಏನೆಲ್ಲಾ ವಸ್ತುಗಳನ್ನು ಖರೀದಿಸಬೇಕೆಂಬ ಗೊಂದಲವಿರುತ್ತದೆ, ಇದು ಸಹಜ ಕೂಡಾ. ಮಗುವಿಗಾಗಿ ಖರೀದಿಸುವಂತಹ ವಸ್ತುಗಳು ತಾತ್ಕಾಲಿಕವಾಗಿ ಮತ್ತು ಭವಿಷ್ಯಕ್ಕೂ ಬೇಕಾಗುವಂತಹ ವಸ್ತುಗಳನ್ನು ಖರೀದಿಸಬೇಕಾಗುತ್ತದೆ.

What Are The Baby Essentials You Should Buy Before Birth

ಆದರೆ, ಆರಂಭದಲ್ಲಿ, ನವಜಾತ ಶಿಶುವಿಗೆ ಬಳಸಲಾಗುವ ವಸ್ತುಗಳನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ತಾಯಂದಿರು ತಮ್ಮ ಮಗುವಿಗೆ ಖರೀದಿಸಬೇಕಾದಂತಹ ಹಲವಾರು ವಸ್ತುಗಳ ಪಟ್ಟಿಯನ್ನು ಮಾಡಿಕೊಂಡಿರುತ್ತಾರೆ.

ಆದರೆ ಆ ಪಟ್ಟಿಯಲ್ಲಿ ತಮ್ಮ ಮಗುವಿನ ಆಗಮನದ ಮೊದಲು ಖರೀದಿಸಬೇಕಾದಂತಹ ಮುಖ್ಯವಾದ ವಸ್ತುಗಳಲ್ಲಿ ಯಾವುದು ಮೊದಲು ಖರೀದಿಸಬೇಕು ಯಾವುದು ನಂತರ ಎನ್ನುವ ಆಯ್ಕೆ ಕಷ್ಟ ಎನಿಸಬಹುದು. ಆದುದರಿಂದ, ಮಗು ಮನೆಗೆ ಬರುವ ಮೊದಲು ಖರೀದಿ ಮಾಡಬೇಕಾದ ಅಗತ್ಯವಿರುವ ಪ್ರಮುಖ ವಸ್ತುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಮಗುವಿನ ಜನನದ ಮೊದಲು ಖರೀದಿಸಬೇಕಾದಂತಹ ಪ್ರಮುಖ ವಸ್ತುಗಳು

1. ಒಂದು ಕ್ರಿಬ್ (ಸಣ್ಣ ಹಾಸಿಗೆ)

1. ಒಂದು ಕ್ರಿಬ್ (ಸಣ್ಣ ಹಾಸಿಗೆ)

ಮಗುವಿನ ಜನನದ ನಂತರ ಆರಂಭದಲ್ಲಿ ಮಗು ಸುಮಾರು ದಿನವೊಂದಕ್ಕೆ ಸರಾಸರಿ 13-14 ಗಂಟೆಗಳ ಕಾಲ ನಿದ್ದೆ ಮಾಡುವ ಅವಶ್ಯಕತೆಯಿರುತ್ತದೆ. ಆದುದರಿಂದ ಮಗು ಚೆನ್ನಾಗಿ ನಿದ್ದೆ ಮಾಡಲು ಸಹಾಯವಾಗುವಂತೆ ವಿಶೇಷವಾಗಿ ತಯಾರಿಸಲಾದ ಹಾಸಿಗೆ (ಕ್ರಿಬ್) ಯನ್ನು ಖರೀದಿಸಬೇಕಾಗುತ್ತದೆ.

ವಿಶೇಷವಾಗಿ ಮಗುವಿಗಾಗಿಯೇ ತಯಾರಿಸಲ್ಪಡುವ ಹಾಸಿಗೆಯು ಹಗಲು ರಾತ್ರಿ ಮಕ್ಕಳ ಸುಖ ನಿದ್ರೆ ಮಾಡಲು ಅನುಕೂಲವಾಗಿರುತ್ತದೆ.ಅನೇಕ ಅನುಭವಿ ಅಮ್ಮಂದಿರು ಬೆಸಿನೆಟ್ ಖರೀದಿಸಲು ಸೂಚಿಸುತ್ತಾರೆ. ಆದರೆ. ಮೊದಲೇ ಹೇಳಿದಂತೆ, ಮಗುವಿನ ದೀರ್ಘಕಾಲೀನ ಬಳಕೆಯ ಬಗ್ಗೆ ಯೋಚಿಸುವುದಾದಲ್ಲಿ ಮಗುವಿಗೆ ಆರು ತಿಂಗಳ ವಯಸ್ಸಾದಾಗ ಬೇಸಿನೆಟ್ ಬದಲು ಹಾಸಿಗೆಯನ್ನು ಉಪಯೋಗಿಸಬೇಕಾಗುತ್ತದೆ. ಆದ್ದರಿಂದ ಆರಂಭದಲ್ಲಿಯೇ ಕ್ರಿಬ್ (ಹಾಸಿಗೆ)ಅನ್ನು ಖರೀದಿಸುವುದು ಯಾವಾಗಲೂ ಎಲ್ಲರಿಗೂ ಉತ್ತಮವಾದ ಆಯ್ಕೆಯಾಗಿದೆ.

2. ಕಡು ಬಣ್ಣದ ಕರ್ಟನ್ ಗಳು

2. ಕಡು ಬಣ್ಣದ ಕರ್ಟನ್ ಗಳು

ಈ ಮೊದಲೇ ಹೇಳಿದಂತೆ ನವಜಾತ ಶಿಶುವಿಗೆ ಹಗಲು ಮತ್ತು ಇರುಳು ಎರಡೂ ಹೊತ್ತು ಹೆಚ್ಚಿನ ನಿದ್ರೆಯ ಅವಶ್ಯಕತೆ ಇರುತ್ತದೆ. ಹಾಗಾಗಿ, ಕಿಟಕಿಯ ಮೂಲಕ ಸೂರ್ಯನ ಬೆಳಕು ಬರುವಂತಿದ್ದಲ್ಲಿ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ.

ಆದುದರಿಂದ ರಾತ್ರಿಯ ಕತ್ತಲಿನ ವಾತಾವರಣವನ್ನು ಸೃಷ್ಟಿಸುವಂತೆ ಮಾಡುವ ಕಡು ಬಣ್ಣದ ಕರ್ಟನ್ ಗಳನ್ನು ಕಿಟಕಿಗೆ ಹಾಕುವುದರಿಂದ ಮಗು ಸುಖ ನಿದ್ರೆ ಯಾವುದೇ ತೊಂದರೆ ಇಲ್ಲದೆ ಮಾಡಲು ಸಹಾಯವಾಗುತ್ತದೆ. ಆದುದರಿಂದ ರಾತ್ರಿಯ ವಾತಾವರಣವನ್ನು ಸೃಷ್ಟಿಸುವಂತೆ ಮಾಡಲು ಕೊಠಡಿಯ ಪ್ರತಿಯೊಂದು ಕಿಟಕಿಗಳಿಗೂ ಎರಡು ಬೇರೆ ಬೇರೆ ಕರ್ಟನ್ ಗಳನ್ನು ಖರೀದಿಸುವುದು ಉತ್ತಮ.

3. ಶಿಶು ಕಾರ್ ಸೀಟ್

3. ಶಿಶು ಕಾರ್ ಸೀಟ್

ನವಜಾತ ಶಿಶುವನ್ನು ಬಿಡುಗಡೆ ಮಾಡುವ ಮೊದಲು ಅನೇಕ ಆಸ್ಪತ್ರೆಗಳು ಮಗುವಿಗೆ ಸ್ವಂತ ಶಿಶು ಕಾರ್ ಸೀಟ್ ಹೊಂದಲು ಬಯಸುತ್ತಾರೆ. ಶಿಶುವಿನ ಕತ್ತು ಮತ್ತು ತಲೆಗೆ ಆಧಾರ ನೀಡಬಲ್ಲ ಈ ಆಸನವು ರಸ್ತೆಯಲ್ಲಿ ಪ್ರಯಾಣ ಮಾಡುವಾಗಲೂ ಸಹ ಮಗು ಸುಖವಾಗಿ ನಿದ್ರಿಸಲು ಅನುಕೂಲವಾಗುತ್ತದೆ.

ಆದ್ದರಿಂದ, ಅತ್ಯುತ್ತಮ ಶಿಶು ಕಾರ್ ಸೀಟ್ ಗಳು ಆರಾಮದಾಯಕವಾದ ಮಲಗುವ ಆಸನ, ಸುರಕ್ಷತಾ ಸೀಟ್ ಬೆಲ್ಟ್‌ಗಳು, ಪರಿವರ್ತಿತ ಸೀಟ್ ಗಳು, ಕುತ್ತಿಗೆ ಮತ್ತು ತಲೆಗೆ ಉತ್ತಮ ಆಧಾರವಾಗುವಂತಹ ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಶಿಶುವಿಗೆ ಒದಗಿಸುತ್ತದೆ. ಹಾಗಾಗಿ, ನವಜಾತ ಶಿಶುವಿಗೆ ಹೊಸ ಶಿಶು ಕಾರು ಸೀಟ್ ಗಳನ್ನು ಹೊಂದುವುದು ಉತ್ತಮ.

4. ಬೇಬಿ ಮಾನಿಟರ್

4. ಬೇಬಿ ಮಾನಿಟರ್

ಮಗುವಿಗೆ ಯಾವಾಗಲೂ ರಕ್ಷಣೆಯ ಅಗತ್ಯವಿರುತ್ತದೆ. ಆದುದರಿಂದ. ಇದನ್ನು ತಾಯಿಯು ಮಗುವಿನ ಚಲನವಲನವನ್ನು ಅನುಸರಿಸಬೇಕಾಗುತ್ತದೆ. ಅಲ್ಲದೆ. ಮಗು ಮಧ್ಯ ರಾತ್ರಿಯಲ್ಲಿ ಎಚ್ಚರಗೊಳ್ಳುವಾಗ ಎಲ್ಲಾ ಚಲನವಲನಗಳನ್ನು ಪತ್ತೆ ಹಚ್ಚಲು ಮತ್ತು ಸಂಕೇತಗಳನ್ನು ಕಳುಹಿಸಲು ಈ ಮಾನಿಟರ್ ಸಹಾಯಕಾರಿಯಾಗಿರುತ್ತದೆ.

ಅಲ್ಲದೆ ಅಮ್ಮಂದಿರು ಇತರ ಮನೆಯ ಕೆಲಸಗಳನ್ನು ಮಾಡಬೇಕಾಗಿರುತ್ತದೆ. ಜೊತೆಗೆ, ಅವರ ಕೆಲಸದ ನಂತರ ವಿಶ್ರಾಂತಿ ಪಡೆಯಬೇಕಾಗಿರುತ್ತದೆ. ಆದುದರಿಂದ ಅಮ್ಮಂದಿರು ಮಕ್ಕಳೊಂದಿಗೆ ಇಲ್ಲದೇ ಇರುವ ಸಮಯದಲ್ಲಿ ಬೇಬಿ ಮಾನಿಟರ್ ಆರೈಕೆ ಮಾಡಲು ಸಹಾಯ ಮಾಡುತ್ತದೆ. ಈ ಮಾನಿಟರ್ ಮಗು ಚಲಿಸುವ ಎಲ್ಲಾ ಕ್ರಿಯೆಗಳನ್ನು ದಾಖಲಿಸುತ್ತದೆ. ಅಲ್ಲದೆ, ರಾತ್ರಿಯಲ್ಲಿ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಹಾಗಾಗಿ, ಇದು ಅಮ್ಮಂದಿರಿಗೆ ಮಕ್ಕಳ ಆರೈಕೆಗೆ ಸಹಾಯಕಾರಿಯಾಗಬಲ್ಲದು.

5. ಚೇಂಜಿಂಗ್ ಟೇಬಲ್ ಮತ್ತು ಡ್ರೆಸ್ಸರ್

5. ಚೇಂಜಿಂಗ್ ಟೇಬಲ್ ಮತ್ತು ಡ್ರೆಸ್ಸರ್

ಚೇಂಜಿಂಗ್ ಟೇಬಲ್ ಮತ್ತು ಡ್ರೆಸ್ಸರ್ ಅನ್ನು ಖರೀದಿಸುವುದು ಯಾವಾಗಲೂ ಒಂದು ಉತ್ತಮ ಆಯ್ಕೆ ಎನಿಸುತ್ತದೆ. ಮಗುವಿನ ಎಲ್ಲಾ ಬಟ್ಟೆಗಳನ್ನು ಡ್ರೆಸ್ಸರ್ ನಲ್ಲಿ ಇರಿಸುವುದು ಮತ್ತು ಟೇಬಲ್ ನ ಮೇಲ್ಮೈ ಯನ್ನು ಬಟ್ಟೆ ಬದಲಾಯಿಸಲು ಉಪಯೋಗಿಸುವುದು ಅಮ್ಮಂದಿರಿಗೆ ಒಂದು ಅತ್ಯಂತ ಆಹ್ಲಾದಕರವಾದ ಮತ್ತು ಅನುಕೂಲಕರವಾಗುವಂತಹ ಕ್ರಮವಾಗಿದೆ.

ನೆಲದ ಮೇಲೆ ಕುಳಿತುಕೊಂಡು ಮಕ್ಕಳ ಬಟ್ಟೆಗಳನ್ನು ಬದಲಾಯಿಸುವುದರಿಂದ ಅನೇಕ ತಾಯಂದಿರು ಬೆನ್ನು ನೋವಿನಿಂದ ಬಳಲುತ್ತಾರೆ. ಹಾಗೂ, ಇದರ ಬಗ್ಗೆ ಅನೇಕ ದೂರುಗಳನ್ನು ನಾವು ಕೇಳಿರುತ್ತೇವೆ. ಆದರೆ ಈ ಚೇಂಜಿಂಗ್ ಟೇಬಲ್ ಮತ್ತು ಡ್ರೆಸ್ಸರ್ ಬಳಸುವುದರಿಂದ ನೆಲದಲ್ಲಿ ಕುಳಿತುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಹಾಗೂ ಇದು ಬೆನ್ನು ನೋವಿನಿಂದ ಮುಕ್ತಗೊಳಿಸುತ್ತದೆ.

6. ಡೈಪರ್ಸ್

6. ಡೈಪರ್ಸ್

ಬೇಬಿ ಡೈಪರ್ ಹೆಚ್ಚಾಗಿ ಅಗತ್ಯವಿರುವ ವಸ್ತುವಾಗಿದೆ. ಮನೆಯಲ್ಲಿ ಸಾಕಷ್ಟು ಡೈಪರ್ ಗಳನ್ನು ಮೊದಲೇ ಸಂಗ್ರಹಿಸಬೇಕಾದ ಅಗತ್ಯವಿಲ್ಲ. ಆದರೂ, ಮಗು ಮನೆಗೆ ಬಂದಾಗ ಒಂದೇ ದಿನದಲ್ಲಿ 11-12 ಡೈಪರ್ ಗಳು ಬೇಕಾಗುತ್ತವೆ.

ಸ್ವಲ್ಪ ಪ್ರಮಾಣದಲ್ಲಿ ಮೊದಲು ಸಂಗ್ರಹಿಸಿದರೆ ಸಾಕಾಗುತ್ತದೆ. ಅತ್ಯುತ್ತಮ ಬೇಬಿ ಡೈಪರ್ ಗಳ ಆಯ್ಕೆಗಾಗಿ, ನೀವು ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ, ಖರೀದಿಸುವ ಮೊದಲು ಯಾವಾಗಲೂ ಗಾತ್ರವನ್ನು ಪರಿಶೀಲಿಸುವುದು ಅತ್ಯವಶ್ಯಕವಾಗಿರುತ್ತದೆ.

7. ಡೈಪರ್ ಬ್ಯಾಗ್

7. ಡೈಪರ್ ಬ್ಯಾಗ್

ಮಗುವಿಗೆ ಒಂದೇ ಸಮಯದಲ್ಲಿ ಸಾಕಷ್ಟು ಸಾಮಗ್ರಿಗಳು ಮತ್ತು ಬಟ್ಟೆಗಳು ಬೇಕಾಗುತ್ತವೆ. ಇದಕ್ಕಾಗಿ, ಆಸ್ಪತ್ರೆ, ಕೆಲಸ ಅಥವಾ ಸರಬರಾಜಾಗುವ ಅಂಗಡಿಗಳ ಮೊರೆ ಹೋಗಬೇಕಾಗಬಹುದು. ಆದುದರಿಂದ ಒಂದು ಡೈಪರ್ ಬ್ಯಾಗ್ ಅನ್ನು ಜೊತೆಗೆ ಇರಿಸಿಕೊಳ್ಳುವುದರಿಂದ ಒಂದೇ ಬ್ಯಾಗ್ ನಲ್ಲಿ ಎಲ್ಲವೂ ಇರುವಂತೆ ಮಾಡುತ್ತದೆ.

ಡೈಪರ್ ಬ್ಯಾಗ್ ನಲ್ಲಿ ಅನೇಕ ವಿಭಾಗಗಳಿದ್ದು, ಮಗುವಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಒಂದೇ ಚೀಲದಲ್ಲಿ ಇರಿಸಲು ತಾಯಂದಿರಿಗೆ ಸಹಾಯ ಮಾಡುತ್ತದೆ. ನೀವು ನಿಮ್ಮ ಕೆಲಸ ಮಾಡಲು ಅಥವಾ ವಾಕಿಂಗ್ ಗೆ ಹೋಗುವಾಗ ಮಗುವನ್ನು ಕರೆದೊಯ್ಯುಲು ಇಚ್ಚಿಸುವಿರಾದಲ್ಲಿ ಮಗುವಿನೊಂದಿಗೆ ಡೈಪರ್ ಬ್ಯಾಗ್ ಒಯ್ಯುವುದು ಸಹಕಾರಿಯಾಗಿರುತ್ತದೆ.

8. ಸ್ತನ್ಯಪಾನ ಪಂಪ್

8. ಸ್ತನ್ಯಪಾನ ಪಂಪ್

ಸ್ತನ್ಯಪಾನ ಪಂಪ್ ತಾಯಿ ಹಾಲಿನ ಉತ್ಪತ್ತಿ ಮತ್ತು ಹಾಲಿನ ಪೂರೈಕೆಯನ್ನು ಹೆಚ್ಚಿಸುವಲ್ಲಿ ಅತ್ಯಂತ ಉಪಯುಕ್ತವಾದುದಾಗಿದೆ. ತಾಯಿ ಹೊರಗಡೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಗುವಿಗೆ ಎದೆ ಹಾಲು ಕುಡಿಯಲು ಸಹಾಯ ಮಾಡುತ್ತದೆ.

ಇದನ್ನು ಬಾಡಿಗೆಗೆ ಅಥವಾ ಹೊಸದು ಖರೀದಿಸುವುದರಿಂದ ಮಗುವಿಗಾಗಿ ತಾಯಿ ಹಾಲನ್ನೇ ಉಣಿಸಲು ಸಹಾಯವಾಗುತ್ತದೆ. ಇದರಿಂದಾಗಿ ತಾಯಿಯು ಮಗುವನ್ನು ನೋಡಿಕೊಳ್ಳಲು ಬೇರೆಯವರೊಂದಿಗೆ ಬಿಟ್ಟರೂ ಸಹ ಮಗುವಿಗೆ ಇದರ ಸಹಾಯದಿಂದ ಎದೆಹಾಲನ್ನೇ ಹಾಲುಣಿಸಬಹುದಾಗಿದೆ. ಅಲ್ಲದೆ ಇದು ತಾಯಂದಿರು ದಣಿದಿದ್ದಾಗ ಅಥವಾ ವಿಶ್ರಾಂತಿ ಸಮಯದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.

9. ಬೇಬಿ ಬಾತ್ ಟಬ್

9. ಬೇಬಿ ಬಾತ್ ಟಬ್

ವೆಚ್ಚ ಭರಿಸುವ ಶಕ್ತಿ ಇಲ್ಲ ಎಂದಾದಲ್ಲಿ ಕಿಚನ್ ಸಿಂಕ್ ಇದಕ್ಕೆ ಒಂದು ಪರ್ಯಾಯ ವ್ಯವಸ್ಥೆಯಾಗಿದೆ. ಆದರೆ ಶಿಶುವಿಗೆ ಸ್ನಾನ ಮಾಡುವಾಗ ಸುರಕ್ಷತಾ ಕ್ರಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆದ್ದರಿಂದ ಸಮತೋಲನ ಮತ್ತು ಸುರಕ್ಷತೆಯನ್ನುಕಾಪಾಡಿಕೊಳ್ಳುವ ದೃಷ್ಟಿಯಿಂದ ಬೇಬಿ ಬಾತ್ ಟಬ್ ಯಾವಾಗಲೂ ಒಂದು ಗಣನೆಗೆ ತೆಗೆದುಕೊಳ್ಳುವಂತಹ ಅತ್ಯುತ್ತಮ ಆಯ್ಕೆಯಾಗಿದೆ.

ಅತ್ಯುತ್ತಮ ಬೇಬಿ ಸ್ನಾನದತೊಟ್ಟಿಗಳು ಕನ್ವರ್ಟಿಬಿಲಿಟಿ, ಅನೇಕ ಲಾಕಿಂಗ್ ವ್ಯವಸ್ಥೆಗಳು, ಆರಾಮದಾಯಕವಾದ ಕುಳಿತುಕೊಳ್ಳುವ ಸ್ಥಳ, ಮೃದುವಾದ ಟವೆಲ್ ತರಹದ ವಿನ್ಯಾಸ, 360 ಡಿಗ್ರಿ ಬ್ಯಾಕ್‌ರೆಸ್ಟ್ ಆಧಾರ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.

ಅಂತಿಮವಾಗಿ

ಅಂತಿಮವಾಗಿ

ಹೊಸ ಶಿಶು ಬರುವಾಗ ಸಂತೋಷ ಮತ್ತು ಖುಷಿಯನ್ನು ಹೊತ್ತು ತರುತ್ತದೆ. ಆದರೆ, ಆ ಶಿಶುವನ್ನು ಅಷ್ಟೇ ಜಾಗರೂಕತೆಯಿಂದ ನೋಡಿಕೊಳ್ಳುವುದೂ ಸಹ ಅತ್ಯವಶ್ಯಕ. ಆದರೆ, ಈ ಎಲ್ಲಾ ಅಗತ್ಯ ವಸ್ತುಗಳೊಂದಿಗೆ, ಶಿಶುಗಳನ್ನು ನೋಡಿಕೊಳ್ಳುವುದು ಅಮ್ಮಂದಿರಿಗೆ ಆಹ್ಲಾದಕರ ಅನುಭವವಾಗಿರುತ್ತದೆ. ಇಲ್ಲಿ ಶಿಫಾರಸು ಮಾಡಿದ ಉತ್ಪನ್ನಗಳನ್ನು ನಿಮಗೆ ಅವಶ್ಯಕ ಮತ್ತು ನಿಮ್ಮ ಪಟ್ಟಿಯಲ್ಲಿ ಸೇರಿಸುವಿರಿ ಎಂದು ನಾವು ಭಾವಿಸುತ್ತೇವೆ.

English summary

What Are The Baby Essentials You Should Buy Before Birth

Here we are discussing about What Are The Baby Essentials You Should Buy Before Birth. moms checked all the registry lists but don’t know how many to grab or need when the baby arrives. So, we have created the top 10 must need products that you should buy before the baby arrives. Read more.
X
Desktop Bottom Promotion