For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಯೋನಿಯ ವಾಸನೆಗೆ ಕಾರಣ ಹಾಗೂ ಪರಿಹಾರ

|

ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಮತ್ತು ಜೀವನದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಕೆಲವು ಬದಲಾವಣೆಗಳು ಅಪ್ಯಾಯಮಾನವಾಗಿದ್ದರೆ ಕೆಲವು ಅಷ್ಟೊಂದು ಇರುವುದಿಲ್ಲ. ವಿಶೇಷವಾಗಿ ವಾಕರಿಕೆ, ಬೆನ್ನು ನೋವು, ತಲೆನೋವು, ತಲೆಸುತ್ತುವಿಕೆ, ವಾಂತಿ ಇತ್ಯಾದಿಗಳು ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭಿಣಿಯೂ ಎದುರಿಸಬೇಕಾದ ತೊಂದರೆಗಳಾಗಿವೆ. ಮನೋಭಾವದಲ್ಲಿ ಏರುಪೇರು ಮತ್ತು ವಾಕರಿಕೆಯ ತೊಂದರೆಯ ಬಗ್ಗೆ ಹೆಚ್ಚು ಚರ್ಚೆಗಳೂ ಸಾಕಷ್ಟು ಸಲಹೆಗಳು ವಿವರವಾಗಿ ಚರ್ಚಿಸಲ್ಪಡುತ್ತವೆ.

Vaginal Odor During Pregnancy: Causes & Remedies

ಆದರೆ ತೀರಾ ಖಾಸಗಿಯಾದ ಇತರ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ವ್ಯಕ್ತವಾಗುವುದಿಲ್ಲ. ಅದರಲ್ಲೂ ಜನನಾಂಗದಿಂದ ಒಸರುವ ಸ್ರಾವ ಮತ್ತು ಹೊಮ್ಮುವ ದುರ್ವಾಸನೆಯ ಬಗ್ಗೆ ಹೇಳಿಕೊಳ್ಳಲೂ ಹಲವು ಗರ್ಭಿಣಿಯರು ಮುಜುಗರ ಪಟ್ಟುಕೊಳ್ಳುತ್ತಾರೆ. ಒಂದು ವೇಳೆ ಅಸಹಜವಾಗಿ ಈ ವಾಸನೆ ಹೊಮ್ಮುತ್ತಿದ್ದರೆ ಇದಕ್ಕೆ ಬೇರೆ ಕಾರಣಗಳಿರಬಹುದು. ಇಂದಿನ ಲೇಖನದಲ್ಲಿ ಈ ಮುಜುಗರ ತರುವ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನೂ ಸೂಕ್ತ ಚಿಕಿತ್ಸೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅರಿಯೋಣ:

ಗರ್ಭಾವಸ್ಥೆಯಲ್ಲಿ ಜನನಾಂಗದಲ್ಲಿ ವಾಸನೆ ಇರುವುದು ಸಾಮಾನ್ಯವೇ?

ಗರ್ಭಾವಸ್ಥೆಯಲ್ಲಿ ಜನನಾಂಗದಲ್ಲಿ ವಾಸನೆ ಇರುವುದು ಸಾಮಾನ್ಯವೇ?

ಗರ್ಭಾವಸ್ಥೆಯಲ್ಲಿ ಜನನಾಂಗದ ಸ್ರಾವ ಕಾಣಿಸಿಕೊಳ್ಳುವುದು ಅತಿ ಸಾಮಾನ್ಯವಾಗಿದೆ. ಕೆಲವು ಮಹಿಳೆಯರಿಗೆ ಈ ಭಾಗದಲ್ಲಿ ವಾಸನೆ ಇರುವುದು ಸಹಾ ಸ್ಪಷ್ಟವಾಗಿಯೇ ಗಮನಕ್ಕೆ ಬರಬಹುದು. ಇತರ ದಿನಗಳಿಗಿಂತಲೂ ಗರ್ಭಾವಸ್ಥೆಯಲ್ಲಿಯೇ ಜನನಾಂಗದಿಂದ ದುರ್ವಾಸನೆ ಹೊಮ್ಮುವುದು ಹೆಚ್ಚು ಸಾಮಾನ್ಯವಾಗಿದೆ. ಗರ್ಭಿಣಿಯರಲ್ಲಿ 65% ಕ್ಕಿಂತಲೂ ಹೆಚ್ಚು ಗರ್ಭಧಾರಣೆಯ ಸಮಯದಲ್ಲಿ ಜನನಾಂಗದ ಸ್ರಾವ ದುರ್ವಾಸನೆಯಿಂದ ಕೂಡಿರುತ್ತದೆ.. 10 ರಲ್ಲಿ ಕನಿಷ್ಟ 6 ಮಹಿಳೆಯರಿಗಾದರೂ ಜನನಾಂಗದಿಮ್ದ ಒಂದು ವಿಶಿಷ್ಟ ವಾಸನೆ ಹೊಮ್ಮುವ ಅನುಭವವಾಗುತ್ತದೆ. ಆದ್ದರಿಂದ ಹೌದು, ಇದು ಸಾಮಾನ್ಯ ಎಂದೇ ಪರಿಗಣಿಸಬಹುದು.

ಗರ್ಭಾವಸ್ಥೆಯಲ್ಲಿ ಜನನಾಂಗದ ದುರ್ವಾಸನೆಗೆ ಕಾರಣವೇನು?

ಗರ್ಭಾವಸ್ಥೆಯಲ್ಲಿ ಜನನಾಂಗದ ದುರ್ವಾಸನೆಗೆ ಕಾರಣವೇನು?

ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ಈ ವಾಸನೆ ಹೆಚ್ಚು ಪ್ರಬಲವಾಗಿರಲು ಕೆಲವಾರು ಕಾರಣಗಳಿವೆ. ದೇಹದ ದ್ರವಗಳ ಪಿ ಎಚ್ ಮಟ್ಟದಲ್ಲಿ ಏರಿಳಿತ, ಬೆವರುವಿಕೆ, ಸೋಂಕುಗಳು, ರಸದೂತಗಳು ಮತ್ತು ಬದಲಾಗಿರುವ ಆಹಾರಾಭ್ಯಾಸಗಳು ಸಾಮಾನ್ಯ ಕಾರಣಗಳಾಗಿವೆ. ಉಳಿದಂತೆ ಯಾವುದಾದರೂ ವೈದ್ಯಕೀಯ ಕಾರಣದ ಹೊರತಾಗಿ ಈ ವಾಸನೆ ಸೂಸುತ್ತಿದ್ದರೆ ಹೆರಿಗೆಯ ಬಳಿಕ ಇದು ತಾನಾಗಿಯೇ ಇಲ್ಲವಾಗುತ್ತದೆ. ಬೆವರು ಮತ್ತು ಆಹಾರಾಭ್ಯಾಸದ ಕಾರಣ ಗರ್ಭ ಧರಿಸಿದರ ಮಹಿಳೆಯರಲ್ಲಿಯೂ ಈ ಬಗೆಯ ದುರ್ವಾಸನೆ ಕಾಣಿಸಿಕೊಳ್ಳಬಹುದು.

ತಜ್ಞರು ಪರಿಗಣಿಸುವ ಪ್ರಮುಖ ಕಾರಣಗಳು ಇಂತಿವೆ

ತಜ್ಞರು ಪರಿಗಣಿಸುವ ಪ್ರಮುಖ ಕಾರಣಗಳು ಇಂತಿವೆ

1. ಸೋಂಕುಗಳು

ಗರ್ಭಾವಸ್ಥೆಯಲ್ಲಿ ಜನನಾಂಗದಲ್ಲಿ ಉಂಟಾಗುವ ಸೋಂಕು ಪ್ರಬಲ ಮತ್ತು ಕಮಟಾಗಿರುವ ದುರ್ವಾಸನೆಗೆ ಕಾರಣವಾಗಬಹುದು. ಜನನಾಂಗದಲ್ಲಿ ನೈಸರ್ಗಿಕವಾಗಿ ಕಂಡುಬರುವ ಶಿಲೀಂಧ್ರಗಳು ಅತಿಯಾಗಿ ವೃದ್ದಿಗೊಳ್ಳುವ ಕಾರಣ ಶಿಲೀಂಧ್ರದ ಸೋಂಕು ಉಂಟಾಗುತ್ತದೆ. ಇದು ನಿರಂತರ ತುರಿಕೆ ಮತ್ತು ವಾಸನೆ ಹೊಂದಿರುವ ಸ್ರಾವವನ್ನು ಹೊರ ಸೂಸುವಂತೆ ಮಾಡುತದೆ. ಒಂದು ಬಗೆಯ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾಗುವ Bacterial vaginosis ಎಂಬ ಹೆಸರಿನ ಸೋಂಕು ಸಹಾ ಗರ್ಭಾವಸ್ಥೆಯಲ್ಲಿ ದುರ್ವಾಸನೆ ಬೀರುವ ಸ್ರಾವಕ್ಕೆ ಕಾರಣವಾಗಬಹುದು.

2. ಆಹಾರಾಭ್ಯಾಸದಲ್ಲಿ ಬದಲಾವಣೆ

2. ಆಹಾರಾಭ್ಯಾಸದಲ್ಲಿ ಬದಲಾವಣೆ

ಜನನಾಂಗದ ದುರ್ವಾಸನೆಗೆ ಆಹಾರಕ್ರಮದಲ್ಲಿ ಬದಲಾವಣೆಯೂ ಒಂದು ಪ್ರಮುಖ ಕಾರಣವಾಗಿದೆ. ಉದಾಹರಣೆಗೆ ಒಂದು ವೇಳೆ ಗರ್ಭವತಿ ಬೆಳ್ಳುಳ್ಳಿ ಮತ್ತು ಇತರ ಮಸಾಲೆಯುಕ್ತ ಅಹಾರಗಳನ್ನು ಸೇವಿಸಿದರೆ ನಂತರದ ದಿನಗಳಲ್ಲಿ ಜನನಾಂಗದ ಸ್ರಾವ ಮತ್ತು ವಾಸನೆ ಬದಲಾಗಿರುತ್ತದೆ. ಈ ವಾಸನೆ ಕೊಂಚ ಗಂಧಕದ ಘಾಟು ಹೊಂದಿದ್ದರೆ ಇದಕ್ಕೆ ಬೆಳ್ಳುಳ್ಳಿ ಕಾರಣ ಎಂದು ಖಚಿತಪಡಿಸಿಕೊಳ್ಳಬಹುದು.

3. ಪಿ.ಎಚ್ ಮಟ್ಟಗಳಲ್ಲಿ ಏರುಪೇರು

3. ಪಿ.ಎಚ್ ಮಟ್ಟಗಳಲ್ಲಿ ಏರುಪೇರು

ಜನನಾಂಗದ ಪಿ ಎಚ್ ಮಟ್ಟ ಸಾಮಾನ್ಯವಾಗಿ 3.8 ಮತ್ತು 4.5 ಗಳ ನಡುವೆ ಇರಬೇಕು. ಅಂದರೆ ಈ ಭಾಗ ಕೊಂಚ ಆಮ್ಲೀಯವಾಗಿರುತ್ತದೆ. ಜನನಾಂಗದಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಉಳಿವಿಗೆ ಈ ಮಟ್ಟ ಅಗತ್ಯವಾಗಿದ್ದು ಈ ಪರಿಸರದಲ್ಲಿ ಮಾತ್ರ ಇವು ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸಬಲ್ಲವು. ಆದರೆ ಗರ್ಭಾವಸ್ಥೆಯಲ್ಲಿ ಜನನಾಂಗದ ಭಾಗಕ್ಕೆ ರಕ್ತದ ಹರಿವು ಹೆಚ್ಚುವ ಕಾರಣ ಈ ಪಿ ಎಚ್ ಮಟ್ಟದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ಪರಿಣಾಮವಾಗಿ ಬ್ಯಾಕ್ಟೀರಿಯಾಗಳ ಸೋಂಕು ಉಂಟಾಗಬಹುದು. ಈ ಬಗೆಯ ಸೋಂಕಿಗೆ vaginitis ಎಂದು ಕರೆಯುತ್ತಾರೆ. ಹಾಗೂ ಈ ಸೋಂಕಿನಿಂದ ಹರಿಯುವ ಸ್ರಾವ ಸಾಮಾನ್ಯವಾಗಿ ಮೀನಿನ ವಾಸನೆಯನ್ನು ಹೊಂದಿರುತ್ತದೆ.

4. ರಸದೂತಗಳ ಬದಲಾವಣೆ

4. ರಸದೂತಗಳ ಬದಲಾವಣೆ

ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹವು ಸಾಕಷ್ಟು ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗುತ್ತದೆ. ಗರ್ಭಿಣಿಯಾಗಿದ್ದಾಗ, ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಎಂಬ ಎರಡು ಹಾರ್ಮೋನುಗಳ ಉತ್ಪಾದನೆಯಲ್ಲಿ ಹಠಾತ್ ಹೆಚ್ಚಳ ಕಂಡುಬರುತ್ತದೆ. ಎರಡು ಹಾರ್ಮೋನುಗಳು ಇತರ ಸಮಯಕ್ಕಿಂತಲೂ ಈ ದಿನಗಳಲ್ಲಿ ಹೆಚ್ಚು ಸ್ರವಿಸಲ್ಪಡುತ್ತವೆ. ಈ ಹೆಚ್ಚಳವೇ ಜರಾಯುವಿನ ರಚನೆಗೆ ಸಹಾಯ ಮಾಡುತ್ತದೆ ಮತ್ತು ಮಗುವಿಗೆ ಅಗತ್ಯ ಪೋಷಣೆಯನ್ನು ನೀಡುತ್ತದೆ. ಮಹಿಳೆ ಗರ್ಭಿಣಿಯಾಗಿದ್ದಾಗ, ಆಕೆಯ ದೇಹದಲ್ಲಿ ಪ್ರೊಲ್ಯಾಕ್ಟಿನ್ ಮಟ್ಟವೂ ಹೆಚ್ಚಾಗುತ್ತದೆ, ಇದು ನಂತರ ಎದೆ ಹಾಲಿನ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಹಾರ್ಮೋನುಗಳ ಬದಲಾವಣೆಗಳು ಜನನಾಂಗದ ವಿಸರ್ಜನೆಯನ್ನು ಹೆಚ್ಚಿಸುತ್ತದೆ ಮತ್ತು ಇದರಲ್ಲಿ ವಾಸನೆ ಇರುವಂತೆಯೂ ಮಾಡುತ್ತವೆ.

ಗರ್ಭಾವಸ್ಥೆಯಲ್ಲಿ ಎದುರಾಗುವ ಜನನಾಂಗದ ದುರ್ವಾಸನೆಯನ್ನು ನಿವಾರಿಸುವ ವಿಧಾನಗಳು:

ಗರ್ಭಾವಸ್ಥೆಯಲ್ಲಿ ಎದುರಾಗುವ ಜನನಾಂಗದ ದುರ್ವಾಸನೆಯನ್ನು ನಿವಾರಿಸುವ ವಿಧಾನಗಳು:

ಜನನಾಂಗದ ವಾಸನೆ ಮತ್ತು ದುರ್ವಾಸನೆ ಸೂಸುವ ಸ್ರಾವ ಎದುರಾದಾಗ ಈ ಕೆಳಗಿನ ವಿಧಾನಗಳ ಮೂಲಕ ಚಿಕಿತ್ಸೆ ನೀಡಬಹುದು ಮತ್ತು ಈ ಸ್ಥಿತಿ ಎದುರಾಗದಂತೆ ತಡೆಗಟ್ಟಬಹುದು

1. ಜನನಾಂಗದ ಭಾಗ ಒಣದಾಗಿರುವಂತೆ ಆಗಾಗ ಸ್ವಚ್ಛಗೊಳಿಸುವುದು

ಗರ್ಭಾವಸ್ಥೆಯಲ್ಲಿ ಜನನಾಂಗದ ಭಾಗ ಆದಷ್ಟೂ ಒಣದಾಗಿರುವಂತೆ ಸ್ವಚ್ಛಗೊಳಿಸುತ್ತಾ ಇರುವುದು ಪ್ರಥಮವಾದ ಕ್ರಮವಾಗಿದೆ. ಆಗಾಗ ಸ್ನಾನ ಮಾಡುತ್ತಿರಿ ಮತ್ತು ಜನನಾಂಗದ ಭಾಗವನ್ನು ಕೇವಲ ಉಗುರುಬೆಚ್ಚನೆಯ ನೀರಿನಿಂದ ಮಾತ್ರ ಸ್ವಚ್ಛಗೊಳಿಸಿ. ಈ ಭಾಗವನ್ನು ಸ್ವಚ್ಛಗೊಳಿಸಲು ಸೌಮ್ಯ ಸಾಬೂನು ಉಪಯೋಗಿಸಿ. ಇನ್ನೂ ಉತ್ತಮ ಎಂದರೆ ವೈದ್ಯರು ಸೂಚಿಸುವ ಮಹಿಳಾ ಸ್ವಚ್ಛತಾ ಸಾಮಾಗ್ರಿಗಳನ್ನೇ ಉಪಯೋಗಿಸಿ. ಅಲ್ಲದೇ ಈ ಭಾಗದ ರೋಮಗಳನ್ನು ಅತಿ ಕಿರಿದಾಗಿರುವಂತೆ ಕತ್ತರಿಸಿಕೊಳ್ಳುತ್ತಿರಿ.

2. ಸೌಂದರ್ಯ ಪ್ರಸಾದನಗಳ ಬಳಕೆ ಬೇಡ

2. ಸೌಂದರ್ಯ ಪ್ರಸಾದನಗಳ ಬಳಕೆ ಬೇಡ

ಸುಗಂಧಕಾರಕ ಪ್ರಸಾದನಗಳು, ಮಹಿಳಾ ಸುಗಂಧ ದ್ರವ್ಯಗಳು, ಜನನಾಂಗವನ್ನು ಸ್ವಚ್ಛಗೊಳಿಸುವ ಕೃತಕ ಪರಿಮಳದ ಉತ್ಪನ್ನಗಳು ಮೊದಲಾದವುಗಳನ್ನು ಗರ್ಭಾವಸ್ಥೆಯಲ್ಲಿ ಉಪಯೋಗಿಸದಿರಿ. ಅಲ್ಲದೇ ತ್ವಚೆಗೆ ಗಡಸಾಗಿರುವ ಯಾವುದೇ ಬಗೆಯ ಸೋಪನ್ನು ಜನನಾಂಗದ ಸ್ವಚ್ಛತೆಗೆ ಬಳಸದಿರಿ. ಏಕೆಂದರೆ ಜನನಾಂಗದ ಭಾಗದಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ಈ ಸೋಪುಗಳು ನಿವಾರಿಸಿ ಬಿಡುತ್ತವೆ. ಹೀಗಾದಾದ ಅನಗತ್ಯ ಸೋಂಕು ಎದುರಾಗಬಹುದು.

3. ಹತ್ತಿಯ ಒಳ ಉಡುಪುಗಳನ್ನೇ ತೊಟ್ಟುಕೊಳ್ಳಿ

3. ಹತ್ತಿಯ ಒಳ ಉಡುಪುಗಳನ್ನೇ ತೊಟ್ಟುಕೊಳ್ಳಿ

ಗರ್ಭಾವಸ್ಥೆ ಮತ್ತು ಬಾಣಂತನ ಮುಗಿಯುವವರೆಗೂ ನಿಮ್ಮ ಎಲ್ಲಾ ಸಿಂಥೆಟಿಟ್ ಅಥವಾ ಕೃತಕ ನೂಲುಗಳ ಬಟ್ಟೆಗಳ ಗೋಜಿಗೆ ಹೋಗುವುದೇ ಬೇಡ. ಕೇವಲ ಹತ್ತಿಯ ಒಳ ಉಡುಪುಗಳನ್ನು ಮಾತ್ರವೇ ತೊಟ್ಟುಕೊಳ್ಳಿ. ಈ ಮೂಲಕ ಜನನಾಂಗದ ಭಾಗದಲ್ಲಿ ಸಾಕಷ್ಟು ಗಾಳಿಯಾಡುವಿಕೆ ಸಾಧ್ಯವಾಗುತ್ತದೆ ಹಾಗೂ ಹೆಚ್ಚುವರಿ ಬೆವರನ್ನು ಈ ಬಟ್ಟೆ ಸುಲಭವಾಗಿ ಹೀರಿಕೊಳ್ಳುತ್ತದೆ.

4. ಆಹಾರಾಭ್ಯಾಸಗಳನ್ನು ಬದಲಿಸಲು ಯತ್ನಿಸಿ

4. ಆಹಾರಾಭ್ಯಾಸಗಳನ್ನು ಬದಲಿಸಲು ಯತ್ನಿಸಿ

ಗರ್ಭಾವಸ್ಥೆಯಲ್ಲಿ ಕೆಲವು ಆಹಾರದ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಆದಷ್ಟೂ ಖಾರದ ಮತ್ತು ಮಸಾಲೆಯ ಆಹಾರಗಳು, ವಿಶೇಷವಾಗಿ ಬೆಳ್ಳುಳ್ಳಿ ಇರುವ ಆಹಾರಗಳನ್ನು ಮಿತಗೊಳಿಸಿ. ಈ ಮೂಲಕ ಜನನಾಂಗದ ದುರ್ವಾಸನೆಯನ್ನು ಆದಷ್ಟು ಮಟ್ಟಿಗೆ ತಗ್ಗಿಸಬಹುದು.

5. ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳನ್ನು ಕ್ರಮಬದ್ದವಾಗಿ ಸೇವಿಸಿ

5. ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳನ್ನು ಕ್ರಮಬದ್ದವಾಗಿ ಸೇವಿಸಿ

ಒಂದು ವೇಳೆ ಯಾವುದಾದರೂ ಸೋಂಕು ಜನನಾಂಗದ ವಾಸನೆಗೆ ಕಾರಣವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳನ್ನು ಸಲಹೆ ಮಾಡಿದ ಪ್ರಕಾರವೇ ಸೇವಿಸಿ.

English summary

Vaginal Odor During Pregnancy: Causes & Remedies

Here we are discussing about Vaginal Odor During Pregnancy: Causes & Remedies. Let’s find out what are the causes of vaginal smell and what you can do to get rid of that unpleasant smell. Read more.
Story first published: Monday, August 24, 2020, 13:22 [IST]
X
Desktop Bottom Promotion