For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕೊರೊನಾ ಲಸಿಕೆ: ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಹೊಸ ಮಾರ್ಗಸೂಚಿ ಹೀಗಿದೆ

|

ಕೊರೊನಾ ವಿರುದ್ಧ ಹೋರಾಡುವಲ್ಲಿ ಕೋವಿಡ್ 19 ಲಸಿಕೆ ತುಂಬಾನೇ ಪ್ರಯೋಜನಕಾರಿ ಎಂಬುವುದು ಈಗಾಗಲೇ ಸಾಬೀತಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರುವ ತಾವು ಇಚ್ಛೆ ಪಟ್ಟರೆ ಲಸಿಕೆ ಪಡೆಯಬಹುದೆಂದು ಹೇಳಿತ್ತು. ಇದೀಗ ಕೇಂದ್ರ ಸರ್ಕಾರ ಗರ್ಭಿಣಿ ಮಹಿಳೆಯರಿಗಾಗಿ ಹೊಸದೊಂದು ಮಾರ್ಗಸೂಚಿ ರಚಿಸಿದೆ.

ಗರ್ಭಿಣಿಯರು ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆ ಸೂಚನೆ

ಗರ್ಭಿಣಿಯರು ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆ ಸೂಚನೆ

ಗರ್ಭಿಣಿ ಮಹಿಳೆಯರು ಲಸಿಕೆಗಾಗಿ Co-WIN ಪೋರ್ಟಲ್‌ಗೆ ಹೋಗಿ ನೋಂದಾಯಿಸಲು ಹೇಳಿದೆ. ಕೇಂದ್ರ ಆರೋಗ್ಯ ಇಲಾಖೆ ಹೊಸದಾಗಿ ನೀಡಿರುವ ಮಾರ್ಗಸೂಚಿಯಲ್ಲಿ ಕೋವಿಡ್‌ 19 ಲಸಿಕೆ ಪಡೆಯಲು ಗರ್ಭಿಣಿಯರು ಇತರರಂತೆ ನೋಂದಾಣಿ ಮಾಡಬಹುದು ಎಂದು ಹೇಳಿದೆ.

ಗರ್ಭಿಣಿಯರು ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗ ಸೂಚಿಗಳು

ಗರ್ಭಿಣಿಯರು ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗ ಸೂಚಿಗಳು

* ಹೆಚ್ಚಿನ ಗರ್ಭಿಣಿ ಮಹಿಳೆಯರಲ್ಲಿ ಕೋವಿಡ್‌ 19 ಚಿಕ್ಕ-ಪುಟ್ಟ ಲಕ್ಷಣಗಳು ಇರುತ್ತವೆ ಅಥವಾ ಲಕ್ಷಣಗಳೇ ಕಂಡು ಬರುವುದಿಲ್ಲ. ಆದರೆ ಕೋವಿಡ್‌ 19 ತಗುಲಿದರೆ ಅದು ಅವರಿಗೆ ಹಾಗೂ ಮಗುವಿಗೆ ಹೆಚ್ಚು ಅಪಾಯಕಾರಿಯಾಗಿದೆ. ಆದ್ದರಿಂದ ಅವರು ಕೋವಿಡ್‌ 19 ಲಸಿಕೆ ಪಡೆಯುವುದರ ಜೊತೆಗೆ ಸೋಂಕಿನಿಂದ ತಮ್ಮನ್ನು ರಕ್ಷಿಸಲು ಮುನ್ನೆಚ್ಚರಿಕೆವಹಿಸಬೇಕಾಗಿದೆ.

* ಮಹಿಳೆಯರಲ್ಲಿ ಅಪಾಯದ ಸಾಧ್ಯತೆ ಹೆಚ್ಚು, ಕೆಲವರು ಆರೋಗ್ಯ ಕಾರ್ಯಕರ್ತರಾಗಿ ಅಥವಾ ಫ್ರಂಟ್‌ಲೈನ್‌ ವರ್ಕರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮುದಾಯದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಮನೆಯ ಹೊರಗಡೆ ಹೋಗಿ ಕೆಲಸ ಮಾಡುತ್ತಿದ್ದಾರೆ, ಮನೆಯ ಕೆಲಸ ಕಾರ್ಯಗಳನ್ನೂ ಮಾಡುತ್ತಿದ್ದಾರೆ, ಇನ್ನು ಮನೆ ಚಿಕ್ಕದಾಗಿದ್ದು ಅಧಿಕ ಜನರಿದ್ದರೆ ಸಾಮಾಜಿಕ ಅಂತರ ಕಷ್ಟವಾಗುವುದು.

* ಒಂದು ವೇಳೆ ಗರ್ಭಿಣಿಯರಿಗೆ ಕೋವಿಡ್ 19 ಸೋಂಖು ತಗುಲಿದರೆ ಶೇ.90ರಷ್ಟು ಗರ್ಭಿಣಿಯರು ಯಾವುದೇ ಆಸ್ಪತ್ರೆ ಚಿಕಿತ್ಸೆಯಿಲ್ಲದೆ ಗುಣಮುಖರಾಗುತ್ತಿದ್ದಾರೆ, ಕೆಲವರಿಗಷ್ಟೇ ಪರಿಸ್ಥಿತಿ ಗಂಭೀರವಾಗುತ್ತಿದೆ.

ಕೋವಿಡ್ 19 ಯಾರಿಗೆ ಅಪಾಯ

ಕೋವಿಡ್ 19 ಯಾರಿಗೆ ಅಪಾಯ

* ಗರ್ಭಿಣಿಯಲ್ಲಿ ಕೋವಿಡ್‌ 19 ಲಕ್ಷಣಗಳಿದ್ದರೆ ಅವರ ಆರೋಗ್ಯ ಗಂಭೀರವಾಗುವ ಸಾಧ್ಯತೆ ಹೆಚ್ಚು ಹಾಗೂ ಸಾವು ಕೂಡ ಸಂಭವಿಸಬಹುದು.

* ಗರ್ಭಿಣಿಯರಿಗೆ ಸೋಂಕು ತಗುಲಿ ಪರಿಸ್ಥಿತಿ ಗಂಭೀರವಾದರೆ ಇತರರಂತೆ ಅವರು ಕೂಡ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

* ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ, ವಯಸ್ಸು 35ಕ್ಕಿಂತ ಅಧಿಕವಾಗಿದ್ದರೆ ಅಂಥವರಿಗೆ ಸೋಂಕು ತಗುಲಿದರೆ ಅಪಾಯ ಹೆಚ್ಚು.

* ಕೋವಿಡ್‌ 19 ತಗುಲಿದ ಮಹಿಳೆಯರು ಜನ್ಮ ನೀಡಿದ ಮಕ್ಕಳಲ್ಲಿ ಶೇ.95ರಷ್ಟು ಮಕ್ಕಳು ಆರೋಗ್ಯವಂತರಾಗಿಯೇ ಹುಟ್ಟಿದ್ದಾರೆ. ಕೆಲವೊಂದು ಕೇಸ್‌ಗಳಲ್ಲಿ ಗರ್ಭಿಣಿಯರಲ್ಲಿ ರೋಗ ಸ್ಥಿತಿ ಗಂಭೀರವಾಗಿದ್ದರೆ ಆಗ ಅವಧಿ ಪೂರ್ವ ಮಗು ಜನಿಸುವ ಸಾಧ್ಯತೆ ಹೆಚ್ಚು. ಇನ್ನು ಜನಿಸಿದ ಮಗುವಿನ ತೂಕ 2.5ಕ್ಕಿಂತಲೂ ಕಡಿಮೆ ಇದ್ದರೆ ಆಗ ಕೆಲ ನವಜಾತಶಿಶುಗಳು ಸಾವನ್ನಪ್ಪುವ ಸಾಧ್ಯತೆ ಇದೆ.

* ಗರ್ಭಿಣಿಯರಲ್ಲಿ 35 ವರ್ಷ ಮೇಲ್ಪಟ್ಟವರು, ಅಧಿಕ ಮೈ ತೂಕ ಹೊಂದಿದವರು, ಮಧುಮೇಹ, ರಕ್ತದೊತ್ತಡ , ರಕ್ತ ಹೆಪ್ಪುಗಟ್ಟುವುದು ಮುಂತಾದ ಸಮಸ್ಯೆ ಇದ್ದವರಿಗೆ ಒಂದು ವೇಳೆ ಕೋವಿಡ್ 19 ಸೋಂಕು ತಗುಲಿದರೆ ಅಂಥವರ ಆರೋಗ್ಯ ತುಂಬಾ ಗಂಭೀರವಾಗುವುದು.

* ಇನ್ನು ಗರ್ಭಿಣಿಯಾಗಿದ್ದಾಗ ಕೋವಿಡ್‌ 19 ಸೋಂಕು ತಗುಲಿದ್ದರೆ ಅಂಥವರಿಗೆ ಹೆರಿಗೆಯಾದ ಬಳಿಕ ಲಸಿಕೆ ನೀಡಬೇಕು.

ಗರ್ಭಿಣಿಯರು ಲಸಿಕೆ ಪಡೆಯುವುದು ಸುರಕ್ಷಿತ

ಗರ್ಭಿಣಿಯರು ಲಸಿಕೆ ಪಡೆಯುವುದು ಸುರಕ್ಷಿತ

ಭಾರತದಲ್ಲಿ ಸಿಗುತ್ತಿರುವ ಕೋವಿಡ್‌ 19 ಲಸಿಕೆ ಸುರಕ್ಷಿತವಾಗಿದ್ದು ಗರ್ಭಿಣಿಯರು ಈ ಲಸಿಕೆ ಪಡೆದರೆ ಕೋವಿಡ್‌ 19ನಿಂದ ರಕ್ಷಣೆ ಸಿಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಅಡ್ಡಪರಿಣಾಮಗಳು: ಲಸಿಕೆ ಪಡೆದ ಬಳಿಕ ಕೆಲವರಲ್ಲಿ ಸುಸ್ತು, ಚುಚ್ಚಿದ ಜಾಗದಲ್ಲಿ ನೋವು ಕಂಡು ಬರಬಹುದು. ಇದು 2-3 ದಿನಗಳಲ್ಲಿ ಸರಿ ಹೋಗುವುದು.

ಅಲ್ಲದೆ ಲಸಿಕೆಯಿಂದ ದೀರ್ಘಾವಧಿಯ ಅಡ್ಡಪರಿಣಾಮವಿಲ್ಲ ಹಾಗೂ ಗರ್ಭದಲ್ಲಿರುವ ಮಗುವಿಗೂ ಈ ಲಸಿಕೆಯಿಂದ ಅಪಾಯವಿಲ್ಲ.

English summary

Union Health Ministry issued guidelines to vaccinate pregnant women against Covid-19; Details in kannada

The Union Health Ministry issued guidelines for vaccinating pregnant women against Covid-19 and assured that the vaccines are safe for them. Read More.
Story first published: Tuesday, June 29, 2021, 12:06 [IST]
X
Desktop Bottom Promotion