Just In
- 9 hrs ago
ಯೋಧರ ಚಿತಾಭಸ್ಮ ಸಂಗ್ರಹಿಸಲು ಬರೋಬ್ಬರಿ 1.2 ಲಕ್ಷ ಕಿ.ಮೀ ದೂರ ಕ್ರಮಿಸಿದ ಬೆಂಗಳೂರಿನ ವ್ಯಕ್ತಿ, ದೇಶ ಸೇವೆ ಅಂದರೆ ಇದಲ್ವೇ?
- 13 hrs ago
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನಿಮ್ಮ ಪತಿಗೆ ನೀವು ಹೇಗೆ ಹೇಳುತ್ತೀರಿ? ಇಲ್ಲಿದೆ ಕೆಲವು ಟಿಪ್ಸ್!
- 17 hrs ago
Today Rashi Bhavishya: ಸೋಮವಾರದ ದಿನ ಭವಿಷ್ಯ: ತುಲಾ, ಮಕರ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಇರಲಿ
- 1 day ago
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
Don't Miss
- Sports
Asia Cup 2022: ನನಗೆ ಇದು ಮತ್ತೊಂದು ಪಂದ್ಯವಷ್ಟೆ; IND vs PAK ಪಂದ್ಯದ ಕುರಿತು ಗಂಗೂಲಿ ಮಾತು
- Movies
ಶೋನಲ್ಲಿ ಬಾಡಿ ಶೇಮಿಂಗ್, ಮಂಗಾಟ ನನಗೆ ಇಷ್ಟವಾಗಲಿಲ್ಲ: ಅನಸೂಯಾ
- News
ದಾವಣಗೆರೆ: ಯುವತಿಯರ ಜೊತೆ ಸೇರಿ ಬ್ಲಾಕ್ಮೇಲ್ ಮಾಡುತ್ತಿದ್ದ ನಾಲ್ವರ ಬಂಧನ
- Automobiles
ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ
- Finance
Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
- Technology
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲ್ಯಾಂಗ್ವೇಜ್ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ?
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಟೂತ್ಪೇಸ್ಟ್ನಿಂದಲೂ ಪ್ರೆಗ್ನೆನ್ಸಿ ಟೆಸ್ಟ್..? ಈ ಟೆಸ್ಟ್ ಮಾಡುವುದು ಹೇಗೆ?
ಇಂದಿನ ಆಧುನಿಕ ಕಾಲದಲ್ಲಿ ಮನುಷ್ಯ ಕಂಡು ಹಿಡಿದಿರುವ ತಂತ್ರಜ್ಞಾನಗಳಿಗೆ ಲೆಕ್ಕವಿಲ್ಲ. ಇದಕ್ಕೆ ಸವಾಲೊಡ್ಡುವಂತೆ ಡಿಐವೈ ಹ್ಯಾಕ್ಗಳೂ ಕೂಡಾ ವೈರಲ್ ಆಗುತ್ತಿವೆ. ಈ ಡಿವೈಐ ಹ್ಯಾಕ್ಗಳ ಪಟ್ಟಿಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡುವ ವಿಧನಗಳೂ ಇವೆ ಗೊತ್ತಾ. ನಾವೀಗ ಹೇಳೋದಿಕ್ಕೆ ಹೊರಟಿರೋದು ಕೂಡಾ ಪ್ರೆಗ್ನೆನ್ಸಿ ಟೆಸ್ಟ್ ಹ್ಯಾಕ್ ಬಗ್ಗೆ. ಅದೂ ಟೂತ್ಪೇಸ್ಟ್ ಬಳಸಿಕೊಂಡು ಪ್ರೆಗ್ನನ್ಸಿ ಟೆಸ್ಟ್ ಮಾಡುವ ಬಗ್ಗೆ.
ಅರೆ.. ಟೂತ್ ಪೇಸ್ಟ್ನಿಂದ ಕೂಡಾ ಗರ್ಭಿಣಿಯೇ ಎನ್ನುವುದನ್ನು ಟೆಸ್ಟ್ ಮಾಡೋದಿಕ್ಕಾಗುತ್ತಾ ಎನ್ನುವ ಕುತೂಹಲ ನಿಮಗಿದ್ದರೆ, ಈ ಸ್ಟೋರಿ ಕಂಪ್ಲೀಟ್ ಓದಿ.

ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ ಎಂದರೆ
ಟೂತ್ಪೇಸ್ಟ್ ಅಂತೂ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಗರ್ಭಿಣಿಯೇ ಎನ್ನುವುದನ್ನು ಪರೀಕ್ಷೆ ಮಾಡಲು ಟೂತ್ಪೇಸ್ಟ್ಗೆ, ಮೂತ್ರದ ಕೆಲವು ಹನಿಗಳನ್ನು ಹಾಕಿ. ಇದರಿಂದ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯನ್ನು ನೋಡಿ ಗರ್ಭಿಣಿ ಹೌದೋ, ಅಲ್ಲವೋ ಎನ್ನುವುದನ್ನು ಕಂಡುಹಿಡಿಯಲಾಗುತ್ತೆ.

ಈ ಪೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆಂದರೆ..
ಪ್ರೆಗ್ನೆನ್ಸಿ ಟೆಸ್ಟ್ ಮಾಡುವ ವಿಧಾನಗಳ ಬಗ್ಗೆ ಯೂ ಟ್ಯೂಬ್ನಲ್ಲಂತೂ ಹಂತಹಂತವಾಗಿ ತಿಳಿಸುತ್ತಾರೆ. ಇದರ ಪ್ರಕಾರ ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆಂದರೆ,
ಒಂದು ಸಣ್ಣ ಕಪ್ನಲ್ಲಿ ಟೂತ್ಪೇಸ್ಟ್ ಹಾಕಿ, ಮೂತ್ರದ ಕೆಲವು ಹನಿಗಳನ್ನು ಅದರಲ್ಲಿ ಹಾಕಿ, ಮಿಶ್ರಣವನ್ನು ಕಲಸಿ. ಇದಾದ ನಂತರ ಟೂತ್ಪೇಸ್ಟ್ ಮಿಶ್ರಣದಲ್ಲಿ ನೊರೆ ಕಂಡುಬರುತ್ತಾ, ಅಥವಾ ಬಣ್ಣ ಬದಲಾಗುತ್ತಾ ಎನ್ನುವುದನ್ನು ನೋಡಬೇಕು.

ಟೂತ್ಪೇಸ್ಟ್ನಿಂದ ಪ್ರೆಗ್ನೆನ್ಸಿ ಟೆಸ್ಟ್ ಹೇಗೆ ಸಾಧ್ಯ..?
ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ನಲ್ಲಿ ನೀವು ಮೂತ್ರವನ್ನು ಟೂತ್ಪೇಸ್ಟ್ನೊಂದಿಗೆ ಮಿಶ್ರಣ ಮಾಡಿದಾಗ ಅದರಲ್ಲಿ ಬದಲಾವಣೆಯನ್ನು ಕಾಣಬಹುದು. ಹೇಗೆಂದರೆ ಗರ್ಭಿಣಿ ಮಹಿಳೆಯ ಮೂತ್ರದಲ್ಲಿರುವ ಆಮ್ಲಗಳು ಟೂತ್ಪೇಸ್ಟ್ನಲ್ಲಿ ನೊರೆಗೆ ಕಾರಣವಾಗಬಹುದು. ಆದರೆ ಗರ್ಭಿಣಿಯಲ್ಲದ ಮಹಿಳೆಯರ ಮೂತ್ರದಲ್ಲಿನ ಆಮ್ಲೀಯತೆಯೂ ಇದೇ ಪರಿಣಾಮವನ್ನು ಕೂಡಾ ಉಂಟುಮಾಡಬಹುದು. ಹಾಗಾಗಿ ಈ ಟೆಸ್ಟ್ ಅನ್ನು ನೂರಕ್ಕೆ ನೂರು ಪ್ರತಿಶತ ಕರೆಕ್ಟ್ ಎಂದು ಹೇಳಲಾಗದು.
ಗರ್ಭವನ್ನು ಧರಿಸಿದಾಗ ದೇಹವು ಕೊರಿಯಾನಿಕ್ ಗೊನಡೋಟ್ರೋಪಿನ್ ಅಂದರೆ ಹೆಚ್ಸಿಜಿ ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಅಮೈನೋ ಆಮ್ಲಗಳಿಂದ ಮಾಡಲ್ಪಡುವ ಈ ಹಾರ್ಮೊನ್ನ ಮಟ್ಟವನ್ನು ಗರ್ಭಧಾರಣೆಯ ಪರೀಕ್ಷೆ, ಮೂತ್ರ ಹಾಗೂ ರಕ್ತ ಪರೀಕ್ಷೆಯ ಮೂಲಕ ತಿಳಿಯಬಹುದು. ಟೂತ್ಪೇಸ್ಟ್ನಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಎನ್ನುವ ರಾಸಾಯನಿಕವಿದ್ದು, ಈ ರಾಸಾಯನಿಕವು ಮೂತ್ರದಲ್ಲಿನ ಅಮೈನೋ ಆಮ್ಲಗಳೊಂದಿಗೆ ಸಂಯೋಗ ಹೊಂದಿದಾಗ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಉತ್ಪಾದಿಸುತ್ತೆ. ಅಂದರೆ ನೊರೆಯಾಗಿ ಬದಲಾವಣೆಯಾಗುತ್ತದೆ.ನೀವು ತಿಳಿದುಕೊಳ್ಳಬೇಕಾದ ಇನ್ನೊಂದು ಸಂಗತಿ ಎಂದರೆ ಸಾಮಾನ್ಯ ವ್ಯಕ್ತಿಯ ಮೂತ್ರದಲ್ಲಿ ಕೂಡಾ ಅಮೈನೋ ಆಮ್ಲ ಇರುತ್ತೆ. ಹಾಗಾಗಿ ಗರ್ಭಿಣಿಯಾಗಿಲ್ಲದಿದ್ದರೂ ಇದೇ ರಾಸಾಯನಿಕ ಬದಲಾವಣೆಯಾಗಬಹುದು.

ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ ನಿಖರವೇ..?
ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ ಮನೆಯಲ್ಲೇ ನೀವು ಮಾಡಬಹುದಾದ ಪ್ರಯೋಗವಾದರೂ, ನೀವು ಗರ್ಭಿಣಿಯೇ, ಅಲ್ಲವೇ ಎನ್ನುವುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಸುಮ್ಮನೆ ಫನ್ಗಾಗಿ, ಒಮ್ಮೆ ಟ್ರೈ ಮಾಡಿ ನೋಡೋಣ ಎನ್ನುವುದಾದರೆ ಟೂತ್ಪೇಸ್ಟ್ನ ಪ್ರಯೋಗ ಮಾಡಬಹುದು. ನೀವು ನಿಜವಾಗಲೂ ಗರ್ಭಿಣಿಯೇ ಎನ್ನುವುದನ್ನು ಪರೀಕ್ಷಿಸಲು ಇತರ ಟೆಸ್ಟ್ ಆಯ್ಕೆ ಮಾಡಬಹುದು.
ಟೂತ್ಪೇಸ್ಟ್ನಿಂದ ಗರ್ಭಧಾರಣೆಯನ್ನು ಪತ್ತೆಹಚ್ಚೋದಕ್ಕೆ ಸಾಧ್ಯ ಇಲ್ಲ. ಪ್ರೆಗ್ನೆನ್ಸಿ ಕಿಟ್ ಮೂಲಕ ಮಾಡುವ ಪರೀಕ್ಷೆಗಳಲ್ಲಿ ಜರಾಯು ಬಿಡುಗಡೆ ಮಾಡುವ ಹೆಚ್ಸಿಜಿ ಹಾರ್ಮೋನ್ ಪರಿಶೀಲಿಸಲಾಗುತ್ತೆ. ಜರಾಯುವಿನ ಹೊರತಾಗಿ ನಮ್ಮ ದೇಹದ ಇತರ ಭಾಗಗಳಾದ ಪಿಟ್ಯುಟರಿ ಗ್ರಂಥಿ, ಯಕೃತ್ತು, ಕೊಲೊನ್ ಮತ್ತು ದೇಹದಲ್ಲಿ ಆಗುವಂತಹ ಕೆಲವೊಂದು ಟ್ಯೂಮರ್ನಿಂದ ಈ ಹಾರ್ಮೋನ್ ಬಿಡುಗಡೆ ಮಾಡುತ್ತೆ. ಹಾಗಾಗಿ ಟೂತ್ಪೇಸ್ಟ್ನಿಂದ ಮಾಡೋ ಪರೀಕ್ಷೆಯಿಂದ ನೀವು ಪ್ರೆಗ್ನೆಂಟ್ ಎಂದು ನಿಖರವಾಗಿ ಹೇಳಲಾಗದು.
ಯಾವುದೇ ಟೆಸ್ಟ್ ಮಾಡಿಸಿಕೊಳ್ಳುವುದಾದರೂ ಮುಟ್ಟು ನಿಂತ ಹಲವು ದಿನಗಳವರೆಗೆ ಕಾಯಬೇಕು. ಮನೆಯಲ್ಲಿ ಮಾಡುವ ಯಾವುದೇ ಟೆಸ್ಟ್ಗಾದರೂ ಗರ್ಭಧಾರಣೆ ಪತ್ತೆ ಹಚ್ಚಲು ನಿಮ್ಮ ದೇಹದಲ್ಲಿ ಹೆಚ್ಸಿಜಿ ಲೆವೆಲ್ ಹೆಚ್ಚಾಗಿರಬೇಕು. ಆದಷ್ಟು ಬೆಳಗ್ಗೆ ಎದ್ದ ತಕ್ಷಣ ಪ್ರೆಗ್ನೆನ್ಸಿ ಟೆಸ್ಟ್ ಮಾಡುವುದು ಉತ್ತಮ.

ಟೂತ್ಪೇಸ್ಟ್ ಪ್ರೆಗ್ನೆನ್ಸಿಯಲ್ಲಿ ಪಾಸಿಟಿವ್ ರಿಸಲ್ಟ್ ಹೇಗಿರುತ್ತೆ..?
ಈ ಪ್ರೆಗ್ನೆನ್ಸಿ ಟೆಸ್ಟ್ನಲ್ಲಿ ಟೂತ್ಪೇಸ್ಟ್ ಮತ್ತು ಮೂತ್ರವನ್ನು ಒಟ್ಟಿಗೆ ಬೆರೆಸಿದ ನಂತರ ಆ ಮಿಶ್ರಣವು ನೀಲಿಯಾದರೆ ಅಥವಾ ನೊರೆ ಕಾಣಿಸಿಕೊಂಡರೆ ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ. ಆದರೆ ಮೊದಲ ಹೇಳಿದಂತೆ ಖಚಿತವಾಗಿ ಪಾಸಿಟಿವ್ ಎಂದು ಹೇಳಲು ಸಾಧ್ಯವಿಲ್ಲ.
ನೀವು ಗರ್ಭಿಣಿಯಾಗಿರದಿದ್ದರೆ ಟೂತ್ಪೇಸ್ಟ್ ಹಾಗೂ ಮೂತ್ರದ ಮಿಶ್ರಣವು ನೀಲಿಯಾಗದಿದ್ದರೆ ಅಥವಾ ನೊರೆ ಬರದೇ ಇದ್ದಲ್ಲಿ ನಿಮ್ಮ ರಿಸಲ್ಟ್ ನೆಗೆಟಿವ್ ಎಂದೂ ಹೇಳಬಹುದು. ಆದರೆ ಸಾಮಾನ್ಯವಾಗಿ ಮೂತ್ರವು ಆಮ್ಲೀಯವಾಗಿರುವುದರಿಂದ ನೊರೆ ಬಂದೇ ಬರುತ್ತೆ.

ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ ಬದಲಾಗಿ ಈ ಟೆಸ್ಟ್ ಮಾಡಿ
ಟೂತ್ಪೇಸ್ಟ್ ಪ್ರೆಗ್ನೆನ್ಸಿ ಟೆಸ್ಟ್ ಪರಿಣಾಮಕಾರಿಯಾಗಿರದು. ಈಗೀಗ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ಗಳು ಸುಲಭವಾಗಿ ಅಂಗಡಿಗಳಲ್ಲಿ, ಮೆಡಿಕಲ್ಗಳಲ್ಲಿ ಸಿಕ್ಕೇ ಸಿಗುತ್ತೆ. ಇದು ಅಷ್ಟೇನೂ ದುಬಾರಿಯಲ್ಲ. ಅಗ್ಗವೂ ಕೂಡ. ಇದನ್ನು ನೀವು ಬಳಸಬಹುದು. ಇಲ್ಲವಾದರೆ ಕೆಲವೊಂದು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪ್ರೆಗ್ನೆನ್ಸಿ ಟೆಸ್ಟ್ ಮಾಡುತ್ತಾರೆ. ಖಾಸಗೀ ಆಸ್ಪತ್ರೆಗಳಲ್ಲೂ ಕೂಡಾ ಈ ಟೆಸ್ಟ್ಗಳನ್ನು ಮಾಡುತ್ತಾರೆ.ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಮೂತ್ರ ಪರೀಕ್ಷೆಯ ಮೂಲಕ ಗರ್ಭಧಾರಣೆ ಪರೀಕ್ಷೆ ಮಾಡುತ್ತಾರೆ. ಕೆಲವೊಮ್ಮೆ ಬ್ಲಡ್ ಸ್ಯಾಂಪಲ್ ಅಥವಾ ಅಲ್ಟ್ರಾಸೌಂಡ್ ಮೂಲಕವೂ ಟೆಸ್ಟ್ ಮಾಡುತ್ತಾರೆ. ನೀವು ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಿದರೂ, ಅದು ನಿಮಗೆ ವಿಶ್ವಾಸಾರ್ಹ ಅಂತ ಅನಿಸದೇ ಇದ್ದಲ್ಲಿ, ಖಂಡಿತವಾಗಿಯೂ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷೆ ಮಾಡಿಸಿಕೊಳ್ಳಿ.
ಮುಟ್ಟು ನಿಂತು ನೀವು ಗರ್ಭಿಣಿ ಎಂದು ನಿಮಗನಿಸಿದಲ್ಲಿ ಈ ಡಿಐವೈ ಪ್ರಯೋಗಗಳ ಬದಲು ಮೆಡಿಕಲ್ಗಳಲ್ಲಿ ಸಿಗುವಂತಹ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಬಳಸುವುದು ಉತ್ತಮ. ಗರ್ಭಫಲಿತ ಆರರಿಂದ ಹನ್ನೆರಡು ದಿನಗಳ ನಂತರ ಮೂತ್ರದಲ್ಲಿ ಹೆಚ್ಸಿಜಿ ಲೆವೆಲ್ ಪತ್ತೆಹಚ್ಚುವ ಮೂಲಕ ನೀವು ಗರ್ಭಿಣಿಯಾಗಿದ್ದೀರಾ, ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಗರ್ಭಾವಸ್ಥೆಯು ಮುಂದುವರೆದಂತೆ ದೇಹದಲ್ಲಿ ಹೆಚ್ಸಿಜಿ ಮಟ್ಟವೂ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮೂಲಕ ಮಾಡುವ ಪರೀಕ್ಷೆಗಳು ಹೆಚ್ಚು ನಿಖರವಾಗಿರುತ್ತದೆ.