For Quick Alerts
ALLOW NOTIFICATIONS  
For Daily Alerts

30ರ ನಂತರ ಗರ್ಭಣಿಯಾಗಲು ಬಯಸುತ್ತಿದ್ದೀರಾ? ಹಾಗಾದರೆ ಇವುಗಳ ಬಗ್ಗೆ ತಿಳಿದಿರಲಿ

|

ಇತ್ತೀಚಿನ ವರ್ಷಗಳಲ್ಲಿ ದಂಪತಿ ಮೊದಲ ಮಗು ಪಡೆಯಲು ಬಯಸುವಾಗ ವಯಸ್ಸು 30 ದಾಟಿರುತ್ತದೆ. ಅನೇಕ ಕಾರಣಗಳಿಂದ ಮಗುವನ್ನು ಪಡೆಯುವಾಗ ವಯಸ್ಸು 30 ದಾಟುತ್ತಿದೆ. ಓದು, ಕೆಲಸ, ಆರ್ಥಿಕ ಸದೃಢತೆ ಈ ಎಲ್ಲಾ ನಿಟ್ಟಿನಲ್ಲಿ ಈಗೀನ ಯುವ ಜನಾಂಗ ಚಿಂತಿಸುತ್ತೆ. ಓದು ಮುಗಿಯುವಷ್ಟರಲ್ಲಿ 23-25 ವರ್ಷ ನಂತರ ಒಂದಿಷ್ಟು ವರ್ಷ ಜಾಬ್‌ ಮಾಡಬೇಕೆಂದು ಬಯಸುತ್ತಾರೆ, ನಂತರ ಮದುವೆ, ಮದುವೆಯಾದ ಮೇಲೆ ಬೇಗನೆ ಮಗು ಬೇಡ, ಆರ್ಥಿಕವಾಗಿ ಸ್ವಲ್ಪ ಸೆಟ್ಲ್‌ ಆಗಲಿ ಎಂಬ ಚಿಂತನೆ ಈ ಎಲ್ಲಾ ಕಾರಣಗಳಿಂದ ಮಗು ಪಡೆಯಲು ನಿಧಾನ ಮಾಡುತ್ತಾರೆ.

ಆದರೆ ವಯಸ್ಸಾಗುತ್ತಿದ್ದಂತೆ ನಾವು ಅಂದುಕೊಂಡಂತೆ ಮನೆ, ಕಾರು ಎಲ್ಲಾ ಆಗುತ್ತೆ, ಆದರೆ ಆವಾಗ ಮಗುವಿಗಾಗಿ ಪ್ರಯತ್ನಿಸಿದಾಗ ಬೇರೆಯದೇ ಸಮಸ್ಯೆ ಕಂಡು ಬರುತ್ತದೆ. ಕೆಲವರಿಗೆ ಅಂಡಾಣುಗಳು, ವೀರ್ಯಾಣುಗಳು ಕಡಿಮೆಯಾಗುತ್ತೆ, ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಆಗ ಗರ್ಭಧಾರಣೆ ಕಷ್ಟವಾಗಿ ಆಸ್ಪತ್ರೆಗೆ ತುಂಬಾ ಖರ್ಚಾಗುವುದು.

ಆದ್ದರಿಂದ ಯಾರು 30 ವರ್ಷದ ಬಳಿಕ ಗರ್ಭಧಾರಣೆ ಬಯಸುತ್ತೀರೋ ಅವರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ 30 ವರ್ಷದ ಬಳಿಕ ಗರ್ಭಧಧಾರಣೆ ದೊಡ್ಡ ಕಷ್ಟವೇನಲ್ಲ, ನೀವು ನೈಸರ್ಗಿಕವಾಗಿ ಗರ್ಭಧಾರಣೆಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.

30 ವರ್ಷದ ಬಳಿಕ ಗರ್ಭದಾರಣೆ ಏಕೆ ಕಷ್ಟವಾಗುವುದು, ಆ ಸಮಸ್ಯೆಗಳನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

30ರ ಬಳಿಕ ಗರ್ಭಧಾರಣೆಗೆ ಎದುರಾಗುವ ಸಮಸ್ಯೆಗಳು

30ರ ಬಳಿಕ ಗರ್ಭಧಾರಣೆಗೆ ಎದುರಾಗುವ ಸಮಸ್ಯೆಗಳು

* ಆರೋಗ್ಯಸಮಸ್ಯೆ: 30ರ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಜೀವನ ಶೈಲಿ ಚೆನ್ನಾಗಿಲ್ಲದಿದ್ದರೆ ಕೊಲೆಸ್ಟ್ರಾಲ್‌, ಮಧುಮೇಹದಂಥ ಸಮಸ್ಯೆ ಬೇಗನೆ ಕಾಣಿಸಿಕೊಳ್ಳುವುದು.

* ಪುರುಷರಲ್ಲಿ ವೀರ್ಯಾಣು ಕಡಿಮೆಯಾಗುವುದು: ಧೂಮಪಾನ ಅಭ್ಯಾಸವವಿರುವವರಿಗೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

* ಮಹಿಳೆಯರಲ್ಲಿ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು: 30 ವಯಸ್ಸು ದಾಟುತ್ತಿದ್ದಂತೆ ಮಹಿಳೆಯರಲ್ಲಿ ಅಂಡಾಣುಗಳ ಸಂಖ್ಯೆ ಕಡಿಮೆಯಾಗುವುದು

* ಥೈರಾಯ್ಡ್‌, ಪಿಸಿಒಎಸ್‌, ಅನಿಯಮಿತ ಮುಟ್ಟಿನ ಸಮಸ್ಯೆ: ಈ ರೀತಿಯ ಸಮಸ್ಯೆಗಳು 30 ವಯಸ್ಸಿನ ಬಳಿಕ ಹೆಚ್ಚಾಗಿ ಕಾಡುವುದು

* ಅತ್ಯಧಿಕ ಮಾನಸಿಕ ಒತ್ತಡ: ಅಲ್ಲದೆ ಈ ವಯಸ್ಸಿನಲ್ಲಿ ದುಡಿಯುತ್ತಿರುತ್ತೇವೆ, ವೃತ್ತಿಯಲ್ಲಿ ಬೆಳವಣಿಗೆಯಾಗಬೇಕು, ಆರ್ಥಿಕವಾಗಿ ಸೆಟ್ಲ್‌ ಆಗಬೇಕು ಎಂದೆಲ್ಲಾ ಇರುತ್ತದೆ, ಇದರಿಂದ ಮಾನಸಿಕ ಒತ್ತಡ ಹೆಚ್ಚುವುದು.

ಹೀಗಾಗಿ 30 ವರ್ಷದ ಬಳಿಕ ಗರ್ಭಧಾರಣೆಗೆ ಹೆಚ್ಚಿನವರಿಗೆ ಸಮಸ್ಯೆಗಳು ಎದುರಾಗುವುದು.

30 ವರ್ಷದ ಬಳಿಕ ಗರ್ಭಧಾರಣೆಯಾದರೆ ಎದುರಾಗುವ ಸಮಸ್ಯೆಗಳು

30 ವರ್ಷದ ಬಳಿಕ ಗರ್ಭಧಾರಣೆಯಾದರೆ ಎದುರಾಗುವ ಸಮಸ್ಯೆಗಳು

ಗರ್ಭಧಾರಣೆ ನಿಧಾನವಾಗುವುದು ಒಂದು ರೀತಿಯ ಸಮಸ್ಯೆಯಾದರೆ 30ರ ನಂತರ ಗರ್ಭಿಣಿಯಾದರೆ ಅನೇಕ ಆರೋಗ್ಯ ಸಮಸ್ಯೆಗಳೂ ಎದುರಾಗುವುದು. ಹೈಪರ್‌ಟೆನ್ಷನ್, ಗರ್ಭಾವಸ್ಥೆಯಲ್ಲಿ ಮಧುಮೇಹ, ಅಸಹಜ ಬೆಳವಣಿಗೆ, ಅವಧಿ ಪೂರ್ವ ಮಗುವಿನ ಜನನ, ಸಿ ಸೆಕ್ಷನ್‌ ಹೆರಿಗೆ, ಸ್ಟಿಲ್‌ ಬರ್ತ್‌ ಅಂದರೆ ಮಗು ಹೊಟ್ಟೆಯಲ್ಲಿಯೇ ಸಾಯುವುದು ಹೀಗೆ ಅನೇಕ ಸಮಸ್ಯೆಗಳು ಎದುರಾಗುವುದು.

ಯಾವಾಗ ಮಹಿಳೆಯ ವಯಸ್ಸು 30 ದಾಟುತ್ತಾ ಈ ರೀತಿಯ ಸಮಸ್ಯೆ ಹೆಚ್ಚಾಗುವುದು. ಅದರಲ್ಲೂ 35 ವಯಸ್ಸಿನ ಬಳಿಕ, 40 ಆಸುಪಾಸಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇವರಿಗೆ ಎಕ್ಟೋಪಿಕ್‌ ಪ್ರೆಗ್ನೆನ್ಸಿ, ಗರ್ಭಪಾತ, ಸಿಸೇರಿಯನ್ ಈ ರೀತಿಯ ಸಮಸ್ಯೆಗಳು ಹೆಚ್ಚಾಗುವುದು.

30ರ ನಂತರ ಗರ್ಭಧಾರಣೆ ಬಯಸುವುದಾದರೆ ಹೀಗೆ ಮಾಡಿ

30ರ ನಂತರ ಗರ್ಭಧಾರಣೆ ಬಯಸುವುದಾದರೆ ಹೀಗೆ ಮಾಡಿ

* ಗರ್ಭಧಾರಣೆಯ ಮುಂಚೆಯೇ ವೈದ್ಯರನ್ನು ಭೇಟಿಯಾಗಿ ಕೌನ್ಸಿಲಿಂಗ್‌ ತೆಗೆದುಕೊಳ್ಳಿ. ಅವರು ನಿಮಗೆ ಫಾಲಿಕ್‌ ಆಮ್ಲ ಹಾಗೂ ವಿಟಮಿನ್‌ ಸಪ್ಲಿಮೆಂಟ್‌ ನೀಡಬಹುದು. ಇವುಗಳನ್ನು ತೆಗೆದುಕೊಳ್ಳುವುದರಿಂದ ಅಂಡಾಣುಗಳ ಉತ್ಪತ್ತಿ ಹೆಚ್ಚುವುದು.

* ಇನ್ನು ಗರ್ಭಧಾರಣೆಗೆ ಏಬಾದರೂ ತೊಂದರೆಯಿದ್ದರೆ ಬೇಗನೆ ತಿಳಿಯುತ್ತೆ, ಇದರಿಂದ ಚಿಕಿತ್ಸೆ ಬೇಗನೆ ಪ್ರಾರಂಭಿಸಬಹುದು.

* ಆರೋಗ್ಯ ಆಹಾರಶೈಲಿ, ಜೀವನ ಶೈಲಿ ಪ್ರಾರಂಭಿಸಿ.

English summary

Things You Must Know About Getting Pregnant After 30 in Kannada

Things You Must Know About Getting Pregnant After 30 in Kannada, read on...
X
Desktop Bottom Promotion