For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಹಾನಿಮಾಡುವ ಈ ಸಂಗತಿಗಳಿಂದ ಆದಷ್ಟು ದೂರವಿರಿ

|

ಗರ್ಭಿಣಿಯಾಗುವುದು ಕೆಲವರಿಗೆ ಸುಲಭವಾಗಿರಬಹುದು, ಆದರೆ ಇನ್ನೂ ಕೆಲವರಿಗೆ ಅದು ಅಷ್ಟು ಸುಲಭವಲ್ಲ. ನಾವು ಚಿಕ್ಕವರಾಗಿದ್ದಾಗ, ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ನಾವು ಗಮನ ಹರಿಸುವುದಿಲ್ಲ, ಅದು ನಂತರದ ಜೀವನದಲ್ಲಿ ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೀವು ಮಾಡುವ ಪ್ರತಿ ಕೆಲಸದ ಮೇಲೂ ಗಮನ ಹರಿಸಬೇಕು.

ದಂಪತಿಗಳು ಗರ್ಭಧರಿಸಲು ಕಷ್ಟವಾಗಲು ಹಲವು ಕಾರಣಗಳಿವೆ. ರೋಗಗಳು, ಔಷಧಗಳು, ಆನುವಂಶಿಕತೆ, ಜೀವನಶೈಲಿ ಅಥವಾ ಕೆಲವು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಇವೆಲ್ಲವೂ ಗರ್ಭದಾರಣೆಯ ಪರಿಣಾಮ ಬೀರುತ್ತವೆ. ನೀವು ಗರ್ಭಿಣಿಯಾಗಲು ಪ್ರಯತ್ನಿಸದೇ ಇದ್ದರೂ ಪ್ರತಿದಿನ ಮಾಡುವ ಸಣ್ಣಪುಟ್ಟ ಕೆಲಸಗಳಿಗೆ ನೀವು ಹೆಚ್ಚು ಗಮನ ಹರಿಸಬೇಕು ಅದು ನಿಮ್ಮ ಪ್ರಸ್ತುತ ಮತ್ತು ಭವಿಷ್ಯದ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಗರ್ಭಧಾರನೆಯ ಮೇಲೆ ಪರಿಣಾಮ ಬೀರುವ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

ಧೂಮಪಾನ:

ಧೂಮಪಾನ:

ಧೂಮಪಾನದ ದುಷ್ಪರಿಣಾಮದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ನಿಮ್ಮ ಶ್ವಾಸಕೋಶವನ್ನು ಹಾನಿಗೊಳಿಸುವುದಲ್ಲದೆ ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಆದರೆ ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಸಹ ಪರಿಣಾಮ ಬೀರುತ್ತದೆ. ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಧೂಮಪಾನದಿಂದಾಗಿ ಬಂಜೆತನದ ಅಪಾಯವನ್ನು ಹೊಂದಿರುತ್ತಾರೆ. ಸಾಮಾನ್ಯ ಧೂಮಪಾನಿಗಳು ಮಾತ್ರವಲ್ಲದೆ ಸಾಂದರ್ಭಿಕ ಧೂಮಪಾನಿಗಳು ಮತ್ತು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳು ಸಹ ಅಪಾಯದಲ್ಲಿರುತ್ತಾರೆ. ಧೂಮಪಾನವು ಮಹಿಳೆಯರಲ್ಲಿ ಆರಂಭಿಕ ಋತುಬಂಧವನ್ನು ತರುತ್ತದೆ ಮತ್ತು ಪುರುಷರಲ್ಲಿ ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.

ಮನೆಯ ರಾಸಾಯನಿಕಗಳು:

ಮನೆಯ ರಾಸಾಯನಿಕಗಳು:

ಕೆಲವು ರಾಸಾಯನಿಕಗಳು, ಮಾಲಿನ್ಯಕಾರಕಗಳು, ಕೀಟನಾಶಕಗಳು ಮತ್ತು ಕೈಗಾರಿಕಾ ಸಂಯುಕ್ತಗಳಿಗೆ ತೆರೆದುಕೊಳ್ಳುವುದರಿಂದ ಮಕ್ಕಳನ್ನು ಹೊಂದುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಈ ಹಾನಿಕಾರಕ ರಾಸಾಯನಿಕಗಳೊಂದಿಗೆ ಸಂಪರ್ಕಕ್ಕೆ ಬಂದರೆ ನಿಮ್ಮ ಗರ್ಭಧಾರಣೆಯ ಸಾಧ್ಯತೆಯನ್ನು ಶೇಕಡಾ 29 ರಷ್ಟು ಕಡಿಮೆ ಮಾಡಬಹುದು ಎಂದು ಡೇಟಾ ಸೂಚಿಸುತ್ತದೆ. ಆದ್ದರಿಂದ, ನೀವು ಶಾಪಿಂಗ್‌ಗೆ ಹೋದಾಗ, ಪಿಸಿಬಿಗಳು, ಥಾಲೇಟ್‌ಗಳು ಮತ್ತು ಫ್ಯೂರನ್‌ಗಳಿಂದ ಮುಕ್ತವಾಗಿರುವ ವಸ್ತುಗಳನ್ನು ನೋಡಿ. ಈ ರಾಸಾಯನಿಕಗಳು ಮನೆಯ ಶುಚಿಗೊಳಿಸುವಿಕೆ ಮತ್ತು ಸೌಂದರ್ಯ ಉತ್ಪನ್ನಗಳಲ್ಲಿ ಕಂಡುಬರುತ್ತವೆ.

ಒತ್ತಡದ ಮಟ್ಟ:

ಒತ್ತಡದ ಮಟ್ಟ:

ಒತ್ತಡದ ವಿಷಯಕ್ಕೆ ಬಂದಾಗ ನಾವು ಅದನ್ನು ಆಧುನಿಕ ಜೀವನದ ಒಂದು ಭಾಗವೆಂದು ಪರಿಗಣಿಸಿ ಗಾಳಿಗೆ ತೂರಿದ್ದೇವೆ. ಆದರೆ ನೀವು ಮತ್ತು ನಿಮ್ಮ ಸಂಗಾತಿ ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ, ನಿಮ್ಮ ಒತ್ತಡದ ಮಟ್ಟವನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು. ಬಂಜೆತನಕ್ಕೆ ಒತ್ತಡವು ಒಂದು ತೀವ್ರ ಪರಿಣಾಮ ಬೀರುತ್ತದೆ. ಒತ್ತಡದ ಹಾರ್ಮೋನುಗಳ ಮಟ್ಟದಲ್ಲಿನ ಏರಿಕೆ ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ನಿಗ್ರಹಿಸುತ್ತದೆ, ಇದರಿಂದಾಗಿ ಗರ್ಭಿಣಿಯಾಗುವುದು ಕಷ್ಟವಾಗುತ್ತದೆ.

ಲೈಂಗಿಕ ಆರೋಗ್ಯದ ಇತಿಹಾಸ:

ಲೈಂಗಿಕ ಆರೋಗ್ಯದ ಇತಿಹಾಸ:

ಅಸುರಕ್ಷಿತ ಲೈಂಗಿಕತೆಯು ಲೈಂಗಿಕವಾಗಿ ಹರಡುವ ರೋಗಗಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಇದಕ್ಕೆ ಚಿಕಿತ್ಸೆ ನೀಡದಿದ್ದರೆ ನಿಮ್ಮ ಜೀವನಕ್ಕೆ ಅಪಾಯಕಾರಿ. ಬಂಜೆತನವು ಅದರ ಪರಿಣಾಮಗಳಲ್ಲಿ ಒಂದಾಗಿದೆ. ಅನೇಕ ಎಸ್‌ಟಿಡಿಗಳು ತಮ್ಮ ಆರಂಭಿಕ ಹಂತದಲ್ಲಿ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಆದರೆ ಚಿಕಿತ್ಸೆ ನೀಡದಿದ್ದರೆ ಸಂತಾನೋತ್ಪತ್ತಿಯನ್ನು ನಿರ್ಬಂಧಿಸಬಹುದು. ಪುರುಷರಿಗೆ ಹೋಲಿಸಿದರೆ, ಎಸ್‌ಟಿಡಿಗಳಿಂದಾಗಿ ಮಹಿಳೆಯರಿಗೆ ಬಂಜೆತನದ ಅಪಾಯ ಹೆಚ್ಚು.

ಅತಿಯಾದ ಕಾಫಿ ಸೇವನೆ:

ಅತಿಯಾದ ಕಾಫಿ ಸೇವನೆ:

ನೀವು ಒಂದು ದಿನದಲ್ಲಿ ಮೂರರಿಂದ ನಾಲ್ಕು ಕಪ್ ಕಾಫಿ ಕುಡಿಯುತ್ತಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಿ. ಅತಿಯಾದ ಕಾಫಿ ಸೇವನೆಯು ವೀರ್ಯ ಉತ್ಪಾದನೆಯನ್ನು ದುರ್ಬಲಗೊಳಿಸುತ್ತದೆ. ಮಹಿಳೆಯರಿಗೆ, ಇದರ ಪರಿಣಾಮಗಳು ಇನ್ನಷ್ಟು ಗಂಭೀರವಾಗಿದೆ. ಬಂಜೆತನದ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಹೆಚ್ಚು ಅಪಾಯಕಾರಿ ಮತ್ತು ಗರ್ಭಪಾತದ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಒಂದು ದಿನದಲ್ಲಿ 2 ಕಪ್ ಗಿಂತ ಹೆಚ್ಚು ಕಾಫಿ ಕುಡಿಯಬೇಡಿ ಮತ್ತು ಪ್ರಮಾಣವು 250 ಮಿಲಿಗಿಂತ ಹೆಚ್ಚಿರಬಾರದು.

English summary

Things That Could Be Harming Your Fertility in Kannada

Here we told about Things That Could Be Harming Your Fertility in Kannada, read on
Story first published: Monday, March 29, 2021, 17:48 [IST]
X
Desktop Bottom Promotion