For Quick Alerts
ALLOW NOTIFICATIONS  
For Daily Alerts

ಮಗುವಿನ ಆರೋಗ್ಯಕ್ಕಾಗಿ ಸ್ಥೂಲಕಾಯದ ಗರ್ಭಿಣಿಯರು ಪಾಲಿಸಬೇಕಾದ ಜೀವನಶೈಲಿ

By Shreeraksha
|

ಸ್ಥೂಲಕಾಯದ ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುವ ಸಂಭವವಿದೆ. ಇದು ಗರ್ಭಧಾರಣೆಯ ಮಧುಮೇಹ ಮೆಲ್ಲಿಟಸ್ (ಜಿಡಿಎಂ), ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ ಮತ್ತು ಬಂಜೆತನ ಸೇರಿದಂತೆ ಇತರ ತೊಂದರೆಗಳನ್ನು ಉಂಟುಮಾಡುತ್ತದೆ. ಶಿಶುಗಳ ಅಕಾಲಿಕ ಜನನ ಮತ್ತು ಕೆಲವು ಜನ್ಮ ದೋಷ ಉಂಟಾಗುವ ಸಂಭವ ಅಧಿಕ.

ಈ ಹಿಂದೆ ಗರ್ಭಿಣಿ ಮಹಿಳೆಯರು ತೂಕ ಇಳಿಸುವುದಕ್ಕೆ ವೈದ್ಯರು ಉತ್ತೇಜಿಸುತ್ತಿರಲಿಲ್ಲ. ಆದರೆ ಹೊಸ ಸಂಶೋಧನೆಯ ಪ್ರಕಾರ ಸುಧಾರಿತ ಆಹಾರ ಮತ್ತು ಹೆಚ್ಚು ದೈಹಿಕ ಚಟುವಟಿಕೆಯು ಗರ್ಭಿಣಿಯರಿಗೆ ಹಾಗೂ ಅವರ ಶಿಶುವಿಗೆ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

ಜಿಡಿಎಂ ಹೊಂದಿರುವ ತಾಯಂದಿರ ಮೇಲೆ ಹೆಚ್ಚಿನ ಗ್ಲೂಕೋಸ್‌ನ ಪ್ರಭಾವದಿಂದಾಗಿ ಶಿಶುಗಳ ಡಿಎನ್‌ಎಯಲ್ಲಿ ಆಗುವ ಬದಲಾವಣೆಗಳನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಪಿಎಎಲ್‌ಒಎಸ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜಿಡಿಎಂ ಹೊಂದಿರುವ ತಾಯಂದಿರಲ್ಲಿ ಹೆಚ್ಚಿನ ಪ್ರಮಾಣದ ಗ್ಲೂಕೋಸ್, ಬೆಳೆಯುತ್ತಿರುವ ಭ್ರೂಣದ ಮೇಲೆ ಎಪಿಜೆನೆಟಿಕ್ ಬದಲಾವಣೆಗಳನ್ನು ಪ್ರಚೋದಿಸಬಹುದು. ಎಪಿಜೆನೆಟಿಕ್ ಬದಲಾವಣೆಗಳು ಡಿಎನ್‌ಎಯ ಭೌತಿಕ ರಚನೆಯನ್ನು ಬದಲಾಯಿಸಬಹುದು. ಭ್ರೂಣದ ಆನುವಂಶಿಕ ನೀಲನಕ್ಷೆಯಲ್ಲಿನ ರಾಸಾಯನಿಕ ಬದಲಾವಣೆಗಳು ನಿಮ್ಮ ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಆರೋಗ್ಯದ ತೊಂದರೆಗಳಿಗೆ ಕಾರಣವಾಗಬಹುದು.

ಕರೆನ್ ಲಿಲ್ಲಿಕ್ರಾಪ್ ಮತ್ತು ಯುಕೆ ಸೌತಾಂಪ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಆಹಾರ ಮತ್ತು ದೈಹಿಕ ಚಟುವಟಿಕೆಯಲ್ಲಿನ ಗಮನಾರ್ಹ ಸುಧಾರಣೆಗಳು ಮಗುವಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿದಿದ್ದಾರೆ. ಸ್ಥೂಲಕಾಯತೆ ಹೊಂದಿರುವ ೫೫೦ ಗರ್ಭಿಣಿಯರು ಮತ್ತು ಅವರ ಮಕ್ಕಳ
ಡೇಟಾವನ್ನು ಅಧ್ಯಯನವು ವಿಶ್ಲೇಷಿಸಿದೆ.

ಗರ್ಭಾವಸ್ಥೆಯಲ್ಲಿ ತಮ್ಮ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದ ಮಹಿಳೆಯರಿಗಿಂತ ಲೋವರ್ ಗ್ಲೆಸೆಮಿಕ್ ಇಂಡೆಕ್ಸ್ ಫುಡ್ ಪ್ರಕಾರ ಆಹಾರವನ್ನು ಮಿತವಾಗಿ ಸೇವಿಸಿ, ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆಯರು ಹೆಚ್ಚು ಆರೋಗ್ಯವಾಗಿದ್ದರು ಎಂದು ಸಂಶೋಧನೆ ತಿಳಿಸುತ್ತದೆ.

ನೀವು ಗರ್ಭಿಣಿಯಾಗಿ ಬೊಜ್ಜು ಹೊಂದಿದ್ದರೆ ಇರುವ ಅಪಾಯಗಳು:

ನೀವು ಗರ್ಭಿಣಿಯಾಗಿ ಬೊಜ್ಜು ಹೊಂದಿದ್ದರೆ ಇರುವ ಅಪಾಯಗಳು:

ಈಗಾಗಲೇ ಚರ್ಚಿಸಿದಂತೆ, ಬೊಜ್ಜು ಹೊಂದಿರುವ ಗರ್ಭಿಣಿ ಮಹಿಳೆಗೆ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವಿದೆ, ಅವುಗಳೆಂದರೆ:

ಗರ್ಭಪಾತ

ರಕ್ತ ಹೆಪ್ಪುಗಟ್ಟುವಿಕೆ

ಗರ್ಭಾವಸ್ಥೆಯ ಮಧುಮೇಹ

ತೀವ್ರ ರಕ್ತದೊತ್ತಡ

ಭಾರೀ ರಕ್ತಸ್ರಾವ

ಗರ್ಭಿಣಿಯರಲ್ಲಿ ಬೊಜ್ಜು ಇರುವುದು ಮಗುವಿಗೆ ಈ ಕೆಳಗಿನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಉಂಟುಮಾಡಬಹುದು:

ಗರ್ಭಿಣಿಯರಲ್ಲಿ ಬೊಜ್ಜು ಇರುವುದು ಮಗುವಿಗೆ ಈ ಕೆಳಗಿನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಉಂಟುಮಾಡಬಹುದು:

ಅವಧಿಪೂರ್ವ ಜನನ

ಹೆರಿಗೆ

ಜನ್ಮ ದೋಷಗಳು

ಹೃದ್ರೋಗಗಳು ಮತ್ತು ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳು

ಹೆಚ್ಚಿನ ಜನನ ತೂಕ

ಗರ್ಭಾವಸ್ಥೆಯಲ್ಲಿ ನಿಮ್ಮ ತೂಕವನ್ನು ನಿರ್ವಹಿಸಲು ಸಲಹೆಗಳು:

ಗರ್ಭಾವಸ್ಥೆಯಲ್ಲಿ ನಿಮ್ಮ ತೂಕವನ್ನು ನಿರ್ವಹಿಸಲು ಸಲಹೆಗಳು:

ಯಾವುದೇ ಸಮಸ್ಯೆಗಳನ್ನು ತಿಳಿಯಲು ಆರಂಭಿಕ ಮತ್ತು ಪ್ರಸವಪೂರ್ವ ಪರೀಕ್ಷೆಗಳನ್ನು ಪಡೆಯಿರಿ.

ಫಿಟ್‌ನೆಸ್ ಕಾಪಾಡಿಕೊಳ್ಳಲು, ತೂಕ ಕಡಿಮೆ ಮಾಡಲು ಮೇಲ್ವಿಚಾರಣೆಯ ವ್ಯಾಯಾಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ನೆನಪಿಡಿ, ನಿಮಗೆ ಮತ್ತು ಮಗುವಿಗೆ ಹಾನಿಯಾಗುವಂತೆ ಕಠಿಣ ವ್ಯಾಯಾಮ ಮಾಡಬಾರದು.

ಕರಿದ ಆಹಾರಗಳಿಂದ ದೂರವಿರಿ

ಕರಿದ ಆಹಾರಗಳಿಂದ ದೂರವಿರಿ

ತ್ವರಿತ ಆಹಾರ, ಕರಿದ ಆಹಾರ, ಸೋಡಾ, ಪೇಸ್ಟ್ರಿಯಂತಹ ಎಮ್ಟಿ ಅಥವಾ ಝೀರೋ ಕ್ಯಾಲೊರಿಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಡಿ. ನೀವು ಗರ್ಭಿಣಿಯಾಗಿದ್ದಾಗ, ಸರಿಯಾದ ಆಹಾರ ತಿನ್ನುವುದು ಮತ್ತು ಕುಡಿಯುವುದು ನಿಮ್ಮ ಮಗುವಿನ ಪೋಷಣೆಗೆ ಅತೀಮುಖ್ಯ

ನಿಮ್ಮ ಮಗುವಿನ ಸರಿಯಾದ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಆರೋಗ್ಯಕರ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ ಹೊಂದಿರುವ ಆಹಾರವನ್ನು ಸೇವಿಸಿ . ಮಗುವಿಗೆ ಅಪಾಯಕಾರಿಯಾದ ಆಹಾರ ಸೇವಿಸುವುದನ್ನು ದೂರ ಮಾಡಿ.

ಸಮತೋಲಿತ ಆಹಾರ ಸೇವನೆ ಮಾಡಿ

ಸಮತೋಲಿತ ಆಹಾರ ಸೇವನೆ ಮಾಡಿ

ಈ ಬದಲಾವಣೆಗಳನ್ನು ನಿಧಾನವಾಗಿ ಸಂಯೋಜಿಸಲು ಪ್ರಾರಂಭಿಸಿ. ಚಟುವಟಿಕೆಯಿಂದ ಇರುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಅಂತಿಮ ಗುರಿಯಾಗಿದೆ . ನೀವು ಏನೇ ಮಾಡಿದರೂ ಅದನ್ನು ಮಿತವಾಗಿ ಮಾಡಿರಿ.

ಗರ್ಭಾವಸ್ಥೆಯಲ್ಲಿ ನಿಮ್ಮ ತೂಕವನ್ನು ನೀವು ಹೇಗೆ ಮೇಲ್ವಿಚಾರಣೆ ಮಾಡಬಹುದು ಎಂಬುದರ ಕುರಿತು ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಅವರು ಸರಿಯಾದ ಆಹಾರವನ್ನು ಶಿಫಾರಸು ಮಾಡುತ್ತಾರೆ ಮತ್ತು ನಿಮಗೆ ಪ್ರಸವಪೂರ್ವ ವಿಟಮಿನ್‌ಗಳನ್ನು ನೀಡುತ್ತಾರೆ .

English summary

These Lifestyle Changes To Help Obese Pregnant Women Reduce Health Risks For Their Baby

These lifestyle changes to help obese pregnant women reduce health risks for their baby; study, Read on.
Story first published: Wednesday, December 2, 2020, 18:00 [IST]
X