For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ಹಸಿವು ಕಮ್ಮಿಯಾದರೆ ನಿರ್ಲಕ್ಷ್ಯ ಬೇಡ

|

ಗರ್ಭಿಣಿಯಾಗುವುದು ಒಂದು ವಿಶೇಷ ಭಾವನೆಯಾಗಿದ್ದು, ಅದನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಸಂತೋಷ, ಸಂಭ್ರಮದ ಜೊತೆಗೆ ಸಾಕಷ್ಟು ಸವಾಲುಗಳು ಸಹ ಗರ್ಭಧಾರಣೆಯ ಜೊತೆಗೆ ಬಳುವಳಿಯಾಗಿ ಬರುವುದು. ತಿಂಗಳು ತುಂಬುತ್ತಾ ಹೋದಂತೆ, ದೈಹಿಕ ಅಸ್ವಸ್ಥತೆ, ಒತ್ತಡ, ಆತಂಕ ಎಲ್ಲವೂ ನಿಮ್ಮನ್ನು ಸುತ್ತುವರಿಯುತ್ತದೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ, ಅವುಗಳಲ್ಲಿ ಒಂದು, ಹಸಿವಿನ ನಷ್ಟ.

ಸಾಮಾನ್ಯವಾಗಿ ಮೂರು ತಿಂಗಳು ತುಂಬಿದ ನಂತರ ತಿನ್ನಲು ಇಷ್ಟವಿಲ್ಲದಿರುವುದು ಮತ್ತು ಆಹಾರವನ್ನು ನೋಡಿದಾಗ ವಾಕರಿಕೆ ಭಾವನೆ ಹೆಚ್ಚಿನ ಗರ್ಭಿಣಿಯರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಏಕೆ ಸಂಭವಿಸುತ್ತದೆ ಎಂಬುದು ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲಿ ಚಿಗುರುವ ಪ್ರಶ್ನೆ. ಅದಕ್ಕಾಗಿ ನಾವಿಂದು ಉತ್ತರ ನೀಡಲಿದ್ದೇವೆ.

ಕೆಲ ಗರ್ಭಿಣಿಯರಿಗೆ ಹಸಿವಾಗದೇ ಇರಲು ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕೆಲ ಗರ್ಭಿಣಿಯರಿಗೆ ಹಸಿವಾಗದೇ ಇರಲು ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರ ತಿನ್ನುವುದು ಬಹಳ ಮುಖ್ಯವಾಗಿದೆ. ಹಸಿವು ಕಡಿಮೆಯಾಗುವುದು ಒಂದು ಸಾಮಾನ್ಯ ವಿದ್ಯಮಾನವಾಗಿದ್ದು, ಅದು ಮಹಿಳೆಯ ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಗರ್ಭಿಣಿಯಾಗಿದ್ದರೆ, ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಅದಕ್ಕೆ ಕಾರಣವಾಗುವ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. ಇದು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರಬಹುದು.

ಹಾರ್ಮೋನ್ ಬದಲಾವಣೆ:

ಹಾರ್ಮೋನ್ ಬದಲಾವಣೆ:

ಗರ್ಭಿಣಿಯರ ದೇಹವು ಈ ಸಮಯದಲ್ಲಿ ಬಹಳಷ್ಟು ಹಾರ್ಮೋನುಗಳ ಬದಲಾವಣೆಗಳನ್ನು ಅನುಭವಿಸುತ್ತದೆ. ಇದರಿಂದ ನಿಮ್ಮ ದೇಹವು ಕಾಣುವ ರೀತಿಯಲ್ಲಿ ಬದಲಾಗುತ್ತದೆ. ಲೆಪ್ಟಿನ್, ಗರ್ಭಧಾರಣೆಯ ಹಾರ್ಮೋನ್ ಆದ ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಪಿನ್ (ಎಚ್ಸಿಜಿ) ಗಳ ಏರಿಳಿತಗಳು ಹಸಿವಿನ ಮಟ್ಟವನ್ನು ಕಡಿಮೆ ಮಾಡಬಹುದು. ಜೊತೆಗೆ ನೋವು ಮತ್ತು ವಾಕರಿಕೆಯನ್ನು ಪ್ರಚೋದಿಸಬಹುದು. ಇವುಗಳೆಲ್ಲವೂ ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿ ಕಂಡುಬರುತ್ತವೆ.

ಔಷಧಗಳು:

ಔಷಧಗಳು:

ಗರ್ಭಿಣಿಯರಿಗಾಗಿ ನೀಡುವ ಕೆಲವು ಔಷಧಿಗಳು ಹಸಿವಿನ ನಷ್ಟದಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಗರ್ಭಿಣಿಯರು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ, ಆಹಾರ ಪದ್ಧತಿ ಬದಲಾಗಬಹುದು ಮತ್ತು ಹಸಿವು ಕಡಿಮೆಯಾಗಬಹುದು. ಕೆಲವು ಔಷಧಿಗಳು ವಾಕರಿಕೆ, ವಾಂತಿ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಗರ್ಭಿಣಿಯರು ತಮ್ಮ ಔಷಧಿಗಳನ್ನು ಆದಷ್ಟು ತಡವಾಗಿ ಆರಂಭಿಸಲು ಮತ್ತು ಸ್ವಯಂ-ಔಷಧಿಗಳನ್ನು ತಪ್ಪಿಸಲು ವೈದ್ಯರು ಸಾಮಾನ್ಯವಾಗಿ ಶಿಫಾರಸು ಮಾಡುತ್ತಾರೆ.

ವಾಕರಿಕೆ:

ವಾಕರಿಕೆ:

2017 ರ ಅಧ್ಯಯನದ ಪ್ರಕಾರ, ಹೆಚ್ಚಿನ ವಾಕರಿಕೆಯಿಂದ ಬಳಲುತ್ತಿರುವ 70% ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಆಹಾರ ಸೇವನೆ ಕಡಿಮೆಯಾಗಿದೆ ಎಂದು ದೂರಿದ್ದಾರೆ. ಮಾರ್ನಿಂಗ್ ಸಿಕ್ ನೆಸ್, ವಾಕರಿಕೆ ಮತ್ತು ವಾಂತಿಯು ಗರ್ಭಾವಸ್ಥೆಯ ಆರಂಭದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಇದು ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ವಾಕರಿಕೆ ಭಾವನೆಯನ್ನು ಉಂಟುಮಾಡಬಹುದು. ದೀರ್ಘಕಾಲದ ವಾಕರಿಕೆಯ ಸ್ಥಿತಿಯನ್ನು ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹಸಿವು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು

ಕಳಪೆ ಮಾನಸಿಕ ಆರೋಗ್ಯ:

ಕಳಪೆ ಮಾನಸಿಕ ಆರೋಗ್ಯ:

ಗರ್ಭಿಣಿ ಮಹಿಳೆಯರಲ್ಲಿ ಹಸಿವಿನ ನಷ್ಟಕ್ಕೆ ಅನೇಕ ಜನರು ಮಾನಸಿಕ ಸಮಸ್ಯೆಗಳನ್ನು ದೂರುತ್ತಾರೆ. ಗರ್ಭಾವಸ್ಥೆಯಲ್ಲಿ ಅಸ್ವಸ್ಥತೆ, ಒತ್ತಡ ಮತ್ತು ಆತಂಕಕ್ಕೆ ಒಳಗಾಗಿ, ಆಹಾರದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕೆಲವು ಮಹಿಳೆಯರು ಖಿನ್ನತೆಯನ್ನು ಸಹ ಅನುಭವಿಸುತ್ತಾರೆ. ಪ್ರಸವಪೂರ್ವ ಅಥವಾ ಪ್ರಸವಾನಂತರದ ಖಿನ್ನತೆಯು ಹಸಿವು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ತಮ್ಮ ತೂಕದ ಬಗ್ಗೆ ಜಾಗೃತರಾಗಿರುವ ಗರ್ಭಿಣಿಯರು ದೇಹ ಮತ್ತು ಮನಸ್ಸು ಎರಡರ ಮೇಲೂ ಪರಿಣಾಮ ಬೀರುವ ಅನಿಯಮಿತ ಆಹಾರ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.

ಕಳಪೆ ಹಸಿವನ್ನು ನಿರ್ವಹಿಸುವುದು ಹೇಗೆ?:

ಕಳಪೆ ಹಸಿವನ್ನು ನಿರ್ವಹಿಸುವುದು ಹೇಗೆ?:

ಗರ್ಭಾವಸ್ಥೆಯಲ್ಲಿ ಊಟ ಬಿಡುವುದು ಒಳ್ಳೆಯದಲ್ಲ. ಸಾಕಷ್ಟು ಆಹಾರ ಸೇವಿಸದಿದ್ದರೆ, ನಿಮ್ಮ ಭ್ರೂಣದ ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶ ಮತ್ತು ಶಕ್ತಿ ದೊರೆಯದೇ ಹೋಗಬಹುದು. ಆದ್ದರಿಂದ ಆಹಾರದ ಕಡೆಗೆ ಗಮನ ಕೊಡುವುದು ಮುಖ್ಯ.

  • ಒಂದು ವೇಳೆ ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿಯನ್ನು ಅನುಭವಿಸುವವರಾಗಿದ್ದರೆ, ಊಟವನ್ನು ಬಿಡುವ ಬದಲು ಸಣ್ಣ ಪ್ರಮಾಣದಲ್ಲಿ ತಿನ್ನಿ. ಯಾವುದೇ ಪ್ರಮಾಣದ ಆಹಾರವನ್ನು ಸೇವಿಸಿದರೂ, ಎಲ್ಲಾ ಪೋಷಕಾಂಶಗಳನ್ನು ಸೇರಿಸಿ ಮತ್ತು ನಿಮ್ಮ ಫೈಬರ್ ಸೇವನೆಯನ್ನು ಹೆಚ್ಚಿಸಿ.
  • ಸಾಕಷ್ಟು ನೀರು ಕುಡಿಯಿರಿ, ಆದ್ದರಿಂದ ನೀವು ಹೈಡ್ರೇಟೆಡ್ ಆಗಿರುತ್ತೀರಿ. ವಾಕರಿಕೆ ಮತ್ತು ವಾಂತಿಯ ಭಾವನೆಯನ್ನು ಹೋಗಲಾಡಿಸಲು ಅದಕ್ಕೆ ಸ್ವಲ್ಪ ನಿಂಬೆ ಸೇರಿಸಿ.
  • ಮುಖ್ಯವಾಗಿ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಅವರು ನೀಡುವ ಸಲಹೆಯನ್ನು ಪಾಲಿಸಿ.
English summary

Reasons Why Pregnant Women Lose Their Appetite in Kannada

Being pregnant is a blissful feeling. The joy of conceiving a baby and the excitement to plan ahead is something that cannot be expressed in words. However, your pregnancy journey will not be devoid of bumps and challenges. Here we talking about Reasons Why pregnant women lose their appetite in Kannada, read on
Story first published: Saturday, August 21, 2021, 18:29 [IST]
X
Desktop Bottom Promotion