For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೇಕೆ ದೇಹದ ತಾಪಮಾನ ಏರುತ್ತದೆ? ಇಲ್ಲಿದೆ ಕೆಲವು ಕಾರಣ

|

ಗರ್ಭಾವಸ್ಥೆಯ ಹಂತದಲ್ಲಿ ಗರ್ಭವತಿಯ ದೇಹದ ತಾಪಮಾನ ಇತರ ಸಮಯಕ್ಕಿಂತಲೂ ಕೊಂಚ ಹೆಚ್ಚಾಗುತ್ತದೆ. ಈ ಸ್ಥಿತಿಗೆ ಹೈಪರ್ ಥರ್ಮಿಯಾ (Hyperthermia) ಎಂದು ಕರೆಯುತ್ತಾರೆ. ಇದರ ಪ್ರಭಾವದಿಂದ ಗರ್ಭವತಿಯ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು.

Pregnancy Overheat: Signs, Causes, Risks And Prevention

ಸಾಮಾನ್ಯಕ್ಕಿಂತಲೂ ದೇಹದ ಒಳಗಿನ ತಾಪಮಾನ 39°C (102°F) ಕ್ಕಿಂತಲೂ ಹೆಚ್ಚಾದರೆ ಈ ಹೈಪರ್ ಥರ್ಮಿಯಾ ಇದೆ ಎಂದು ವೈದ್ಯರು ಗುರುತಿಸುತ್ತಾರೆ. ಈ ತಾಪಮಾನಕ್ಕೂ ಹೆಚ್ಚಿದ್ದರೆ ಮಗುವಿನ ಆರೋಗ್ಯಕ್ಕ ಅಪಾಯವಿದೆ. ಹಾಗಾಗಿ ಈ ತಾಪಮಾನದ ಜೊತೆಗೇ ಸುಸ್ತು, ನಿರ್ಜಲೀಕರಣ, ಬಿಸಿಲಿಗೆ ತಲೆತಿರುಗುವುದು ಮೊದಲಾದವು ಕಂಡುಬಂದರೆ ತಕ್ಷಣ ವೈದ್ಯರ ಬಳಿ ಧಾವಿಸಬೇಕು.

ಈ ಸ್ಥಿತಿಯ ಬಗ್ಗೆ ತಜ್ಞರು ವಿವರಿಸುವ ವಿವರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಈ ಸ್ಥಿತಿ ಎದುರಾಗಲು ಕಾರಣಗಳೇನು ಹಾಗೂ ದೇಹದ ತಾಪಮಾನವನ್ನು ಸೂಕ್ತ ಮಟ್ಟದಲ್ಲಿ ಕಾಯ್ದುಕೊಳ್ಳಲು ಗರ್ಭವತಿ ಏನೇನು ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ವಿವರಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರುವುದು ಸಾಮಾನ್ಯವೇ?

ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರುವುದು ಸಾಮಾನ್ಯವೇ?

ಗರ್ಭಾವಸ್ಥೆಯಲ್ಲಿ ನೀಮ್ಮ ದೇಹ ಸಾಮಾನ್ಯಕ್ಕಿಂತಲೂ ಕೊಂಚ ಹೆಚ್ಚು ಬಿಸಿಯಾಗಿರುವುದು ಸಾಮಾನ್ಯವಾಗಬಹುದು. ನಿಮ್ಮ ಮಗುವಿನ ದೇಹ ಬೆಳೆದಂತೆ, ನಿಮ್ಮ ದೇಹವು ಹೆಚ್ಚಿನ ಶಕ್ತಿಯನ್ನು ಬಳಸುವ ಸಾಧ್ಯತೆಯಿದೆ. ಕೆಲವು ಸಂದರ್ಭಗಳಲ್ಲಿ, ಬಿಸಿ ಇರುವ ವಾತಾವರಣದಲ್ಲಿ ಅಥವಾ ನಿರ್ದಿಷ್ಟ ಕೆಲಸದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವುದರಿಂದಲೂ ನಿಮ್ಮ ದೇಹದ ಮುಖ್ಯ ಉಷ್ಣಾಂಶದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಕೊಂಚ ಮಟ್ಟಿಗಿನ ದೇಹದ ತಾಪಮಾನದ ಏರಿಕೆಯಿಂದ ಅಷ್ಟೊಂದು ತೊಂದರೆ ಇಲ್ಲವಾದರೂ ಅತಿಯಾದ ಬಿಸಿಯಾಗುವುದು ಆತಂಕಕ್ಕೆ ಕಾರಣವಾಗಿದೆ, ಮತ್ತು ವಿಶೇಷವಾಗಿ ನೀವು ಬಿಸಿಲಿನಲ್ಲಿ ಹೊರಗೆ ಹೋಗುವಾಗ ಅಥವಾ ಸೆಖೆ ಇರುವ ದಿನಗಳಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಮಾಡುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು.

ಗರ್ಭವತಿಯ ದೇಹ ಸಾಮಾನ್ಯಕ್ಕೂ ಹೆಚ್ಚು ಬಿಸಿಯಾಗಿದೆ ಎಂದು ತಿಳಿಯುವುದು ಹೇಗೆ?

ಗರ್ಭವತಿಯ ದೇಹ ಸಾಮಾನ್ಯಕ್ಕೂ ಹೆಚ್ಚು ಬಿಸಿಯಾಗಿದೆ ಎಂದು ತಿಳಿಯುವುದು ಹೇಗೆ?

ಸಾಮಾನ್ಯ ದಿನಗಳಲ್ಲಿ ದೇಹದ ತಾಪಮಾನ ಕೊಂಚ ಬಿಸಿಯಾದರೇ ಗರ್ಭವತಿಗೆ ಸುಸ್ತು ಮೊದಲ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಗರ್ಭಿಣಿಗೆ ಸುಸ್ತಾಗಿದೆ ಎಂದಾಗ ಹಿರಿಯರು ಮಾಡುವ ಮೊತ್ತ ಮೊದಲ ಕೆಲಸ ಎಂದರೆ ಹಣೆ ಮುಟ್ಟಿ ಬಿಸಿ ಇದೆಯೇ ಎಂದು ನೋಡುವುದು. ಸಾಮಾನ್ಯಕ್ಕೂ ಹೆಚ್ಚು ಬಿಸಿಯಾದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

  • ತ್ವಚೆ ಬಿಸಿಯಾಗುವುದು
  • ತಲೆನೋವು
  • ತಲೆ ಸುತ್ತುವಿಕೆ
  • ವಾಕರಿಕೆ
  • ಸ್ನಾಯುಗಳ ಸೆಡೆತ. ವಿಶೇಷವಾಗಿ ಕಾಲಿನ ಮೀನಖಂಡಗಳ ಸೆಡೆತವಾಗಿ ಕಾಲು ಮಡಚಿದರೆ ನೀಳವಾಗಿಸುವಾಗ ಅಸಾಧ್ಯ ನೋವು ತರುವುದು.
  • ಅಲ್ಲದೇ ಬಿಸಿಲಿನ ಝಳದಿಂದ ಕಣ್ಣು ಕತ್ತಲಾಗುವುದು, ಬಿಸಿಲಿನ ಆಘಾತ ಮತ್ತು ನಿರ್ಜಲೀಕರಣ ಮೊದಲಾದವು ಎದುರಾಗಬಹುದು. ಒಂದು ವೇಳೆ ಸಾಮಾನ್ಯ ಸುಸ್ತು ಎದುರಾಗಿದ್ದು ಕೊಂಚ ವಿಶ್ರಾಂತಿಯ ಬಳಿಕ ಬೇರಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಸಹಜಸ್ಥಿತಿಗೆ ಬಂದರೆ ಚಿಂತಿಸುವ ಅಗತ್ಯವಿಲ್ಲ. ಹಾಗಾಗದೇ ವಿಶ್ರಾಂತಿ ಪಡೆದ ಬಳಿಕವೂ ಈ ಲಕ್ಶಣಗಳು ಎದುರಾದರೆ ವೈದ್ಯರ ಸಲಹೆ ಅಗತ್ಯವಾಗಿದೆ.

    ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರಲು ಕಾರಣಗಳು

    ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರಲು ಕಾರಣಗಳು

    ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರಲು ಕಾರಣಗಳ ಬಗ್ಗೆ ಕೆಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ಸಂಭವನೀಯ ಕಾರಣಗಳು ಸೇರಿವೆ:

    ನೀವು ಗರ್ಭಧಾರಣೆಯ 34 ನೇ ವಾರವನ್ನು ತಲುಪುವ ಹೊತ್ತಿಗೆ ನಿಮ್ಮ ದೇಹದ ರಕ್ತದ ಪ್ರಮಾಣವು ಸುಮಾರು 50% ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿ ನಿಮ್ಮ ರಕ್ತನಾಳಗಳು ಹಿಗ್ಗುತ್ತವೆ ಮತ್ತು ಮತ್ತು ಹೊರಚರ್ಮಕ್ಕೆ ಇನ್ನಷ್ಟು ಹೆಚ್ಚು ಹತ್ತಿರವಾಗುವುದರಿಂದ ಬಿಸಿ ರಕ್ತ ಸಂಚರಿಸುವಾಗ ರಕ್ತದ ತಾಪಮಾನ ಚರ್ಮದ ಮೂಲಕ ಪ್ರಕಟಿಸಲ್ಪಡುವ ಮೂಲಕ ಬಿಸಿ ಕಾಣಿಸಿಕೊಳ್ಳುತ್ತದೆ.

    ನಿಮ್ಮ ಹೃದಯವು ಈಗ ಎರಡು ಜೀವಗಳಿಗೆ ರಕ್ತ ಒದಗಿಸಬೇಕಾದ ಕರ್ತವ್ಯವನ್ನು ಪಾಲಿಸಲು ಹೆಚ್ಚಿನ ಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಎಂಟನೇ ವಾರವನ್ನು ತಲುಪುವ ಹೊತ್ತಿಗೆ ಉಳಿದ ಸಮಯಕ್ಕಿಂತಲೂ 20% ಹೆಚ್ಚಿನ ಪ್ರಮಾಣದ ರಕ್ತವನ್ನು ದೂಡಿ ಕೊಡುತ್ತದೆ.

    ಗರ್ಭಾವಸ್ಥೆಯ ದಿನಗಳು ಮುಂದುವರೆದಂತೆ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಅಗತ್ಯತೆಯನ್ನು ಪೂರೈಸಲು ಜೀವ ರಾಸಾಯನಿಕ ಕ್ರಿಯೆಯೂ ಚುರುಕುಗೊಳ್ಳುತ್ತದೆ. ಇದೂ ದೇಹದ ತಾಪಮಾನ ಏರಲು ಇನ್ನೊಂದು ಕಾರಣವಾಗಿದೆ.

    ನಿಮ್ಮಂತೆಯೇ ನಿಮ್ಮ ಮಗುವಿನ ದೇಹವೂ ಉಷ್ಣವನ್ನು ಉತ್ಪಾದಿಸುತ್ತದೆ ಹಾಗೂ ಇ ತಾಪಮಾನವೂ ತಾಯಿಯ ದೇಹದ ತಾಪಮಾನವನ್ನು ಕೊಂಚ ಹೆಚ್ಚಿಸಬಹುದು. ಆದರೆ ಈ ಹೆಚ್ಚಳ ಸಾಮಾನ್ಯವಾಗಿ ಮೂರನೆಯ ತ್ರೈಮಾಸಿಕ ಮತ್ತು ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆ ಮಾತ್ರ ಕಾಣಿಸಿಕೊಳ್ಳುತ್ತದೆ.

    ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಹೆಚ್ಚಿಸುವ ಇತರ ಕೆಲವು ಸಾಮಾನ್ಯ ಚಟುವಟಿಕೆಗಳು

    ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಹೆಚ್ಚಿಸುವ ಇತರ ಕೆಲವು ಸಾಮಾನ್ಯ ಚಟುವಟಿಕೆಗಳು

    ಬಿಸಿಯಾದ ವಾತಾವರಣದಲ್ಲಿ ಅಥವಾ ದೀರ್ಘಕಾಲದವರೆಗೆ ವ್ಯಾಯಾಮ ಮಾಡುವುದು

    ಹಬೆ ಸ್ನಾನ ಅಥವಾ ಸೌನಾ ನೆನೆಸಿ

    ಬೇರೆ ಕಾಯಿಲೆಯಿಂದ ಬಂದಿರುವ ಜ್ವರ

    ಶಾಖದ ಕಂಬಳಿ ಅಥವಾ ವಿದ್ಯುತ್ ಕಂಬಳಿಗಳ ಬಳಕೆ (electric blanket)

    ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರುವುದರಿಂದ ಎದುರಾಗಬಹುದಾದ ಅಪಾಯಗಳು

    ಗರ್ಭಾವಸ್ಥೆಯಲ್ಲಿ ದೇಹದ ತಾಪಮಾನ ಏರುವುದರಿಂದ ಎದುರಾಗಬಹುದಾದ ಅಪಾಯಗಳು

    ದೇಹದ ತಾಪಮಾನ ಅತಿಯಾಗಿ ಏರಿದರೆ, ಕೆಲವಾರು ಬಗೆಯ ಅಪಾಯ ಎದುರಾಗುವ ಸಾಧ್ಯತೆಗಳು ಹೆಚ್ಚುತ್ತವೆ.

    ಈ ಬಗ್ಗೆ ಅಧ್ಯಯನಗಳಿಂದ ದೊರೆತ ಅಪಾರ ಮಾಹಿತಿಗಳ ವಿಶ್ಲೇಷಣೆಯ ಪ್ರಕಾರ, ಗರ್ಭಧಾರಣೆಯ ಆರಂಭದಲ್ಲಿ ಎದುರಾಗುವ ತಾಪಮಾನ ಏರಿಕೆ ಶಿಶುಗಳಲ್ಲಿನ ನರ ದೋಷಗಳೊಂದಿಗೆ (neural tube defect) ಸಂಬಂಧ ಹೊಂದಿದೆ.

    ಮೊದಲ ತ್ರೈಮಾಸಿಕದಲ್ಲಿ ದೇಹದ ತಾಪಮಾನ ಏರವುದರಿಂದ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ. ಆದರೆ ಈ ಮಾಹಿತಿಯನ್ನು ದೃಢೀಕರಿಸಲು ಇನ್ನಷ್ಟು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ.

    ಮೊದಲ ತ್ರೈಮಾಸಿಕದಲ್ಲಿ ದೇಹದ ತಾಪಮಾನ ಏರವುದರಿಂದ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ. ಆದರೆ ಈ ಮಾಹಿತಿಯನ್ನು ದೃಢೀಕರಿಸಲು ಇನ್ನಷ್ಟು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ.

    ಅಲ್ಲದೆ, ಬೇಸಿಗೆಯ ಬಿಸಿಲು ಅಥವಾ ಹವಾಮಾನವು ಈಗಿರುವ ಗರ್ಭಾವಸ್ಥೆಯ ಕೆಲವು ತೊಡಕಿನ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು. ಅಲ್ಲದೇ ಬೇರಾವುದೋ ಕಾಯಿಲೆಯ ಪ್ರಭಾವದಿಂದ ಎದುರಾಗಿದ್ದ ಜ್ವರವನ್ನು ಇನ್ನಷ್ಟು ತೀವ್ರಗೊಳಿಸಬಹುದು.

    ಈಗಾಗಲೇ ಬೆಳೆದ ದೇಹದ ಉಷ್ಣತೆಯನ್ನು ತೀವ್ರಗೊಳಿಸಿ.

    ಕಾಲು ಮತ್ತು ಕಾಲುಗಳಲ್ಲಿ ಕಾಣಿಸಿಕೊಳ್ಳುವ ಎಡಿಮಾ (ಊದಿಕೊಳ್ಳುವುದು-edema) ಇದ್ದರೆ ಇನ್ನಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.

    ಮೆಲನೊಸೈಟುಗಳು (melanocytes) ಉತ್ತೇಜನಗೊಳ್ಳುವ ಕಾರಣ, ಇದು ಕ್ಲೋಸ್ಮಾ chloasma (mask of pregnancy) ಎಂಬ ಸ್ಥಿತಿ ಎದುರಾಗಲು ಕಾರಣವಾಗಬಹುದು.

    ಗರ್ಭಾವಸ್ಥೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸುವುದು ಹೇಗೆ?

    ಗರ್ಭಾವಸ್ಥೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸುವುದು ಹೇಗೆ?

    • ನಿಮ್ಮ ತಾಪಮಾನವನ್ನು ನಿಯಂತ್ರಣದಲ್ಲಿಡಲು, ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡಲು ಮತ್ತು ಗರ್ಭಾವಸ್ಥೆಯ ತಾಪಮಾನ ಏರುವಿಕೆಗೆ ಒಳಗಾಗದೇ ಇರಲು ಪ್ರತಿ ಗರ್ಭವತಿಯೂ ಅನುಸರಿಸಬೇಕಾದ ಕೆಲವು ಕ್ರಮಗಳು ಹೀಗಿವೆ:
    • ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ಕನಿಷ್ಠ ಎಂಟು ಕಪ್ ನೀರು ಕುಡಿಯುವುದರಿಂದ ನಿಮ್ಮ ದೇಹದ ತಾಪಮಾನ ಸಾಮಾನ್ಯ ಮಟ್ಟದಲ್ಲಿರುತ್ತದೆ. ತಂಪು ಎಂದರೆ ಫ್ರಿಜ್ಜಿನಲ್ಲಿಟ್ಟ ನೀರು ಅಲ್ಲ, ಬದಲಿಗೆ ಸಾದಾ ತಾಪಮಾನದ ನೀರು ಸಾಕು.
    • ಅಲ್ಲದೇ ದೇಹದಲ್ಲಿ ಸಾಕಷ್ಟು ನೀರಿನಂಶ ಇದ್ದರೆ ನಿರ್ಜಲೀಕರಣ ಎದುರಾಗುವುದು, ಮಲಬದ್ದತೆ, ಮೂತ್ರದಲ್ಲಿ ಉರಿ ಮೊದಲಾದ ತೊಂದರೆಗಳು ಎದುರಾಗದಂತೆ ಕಾಪಾಡಬಹುದು.
    • ತಣ್ಣೀರಿನಲ್ಲಿ ಈಜುವುದು ಸಹಾ ಉತ್ತಮ ಆಯ್ಕೆಯಾಗಿದೆ. ಈ ಅವಕಾಶ ನಿಮಗೆ ಲಭಿಸಿದರೆ ಇದನ್ನು ಬಳಸಿಕೊಳ್ಳಬಹುದು. ಆದರೆ ಇದಕ್ಕೂ ಮೊದಲು ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಮತ್ತು ಅನುಮತಿಯನ್ನು ಪಡೆಯುವುದು ಅಗತ್ಯ. (ಈಜುಕೊಳದ ನೀರಿನಲ್ಲಿರುವ ಕ್ಲೋರೀನ್ ನಿಮ್ಮ ಆರೋಗ್ಯಕ್ಕೆ ಮಾರಕವಲ್ಲ ಎಂದು ಅವರು ಕೆಲವು ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದು)
    • ಗರ್ಭಾವಸ್ಥೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸುವುದು ಹೇಗೆ?

      ಗರ್ಭಾವಸ್ಥೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸುವುದು ಹೇಗೆ?

      • ಬಿಸಿಲಿಗೆ ಒಡ್ಡಿಕೊಳ್ಳುವುದರಿಂದಲೂ ದೇಹದ ತಾಪಮಾನ ಹೆಚ್ಚುತ್ತದೆ. ಹಾಗಾಗಿ, ಮುಂಜಾನೆ ಮತ್ತು ಸಂಜೆಯ ಹೊರತು ಇತರ ಸಮಯದ ಬಿಸಿಲಿನಲ್ಲಿ ಹೊರಗೆ ಹೋಗದಿರಿ. ಅನಿವಾರ್ಯ ಕಾರಣದಿಂದ ಹೋಗಲೇಬೇಕಾದರೆ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಪ್ರಸಾದನ ಹಚ್ಚಿಕೊಂಡೇ ಹೋಗಿ.
      • ಸ್ನಾನದ ನೀರು ಅತಿ ಬಿಸಿಯೂ ಇರಬಾರದು, ಅತಿ ತಣ್ಣಗೂ ಇಲ್ಲದ ಉಗುರುಬೆಚ್ಚಗಿರಬೇಕು. ಈ ನೀರು ಬಿಸಿ ಇದ್ದಷ್ಟೂ ನಿಮ್ಮ ದೇಹ ಹೆಚ್ಚು ಬಿಸಿಯಾಗಬಹುದು.
      • ಕೈ, ಕಾಲು,ಪಾದ, ಮೊಣಕೈಗಳ ಮೇಲೆ ತಣ್ಣೀರನ್ನು ಸುರುವಿಕೊಳ್ಳುವ ಮೂಲಕ ಏರಿದ್ದ ದೇಹದ ತಾಪಮಾನವನ್ನು ತಕ್ಷಣಕ್ಕೆ ಕೊಂಚ ಇಳಿಸಲು ನೆರವಾಗುತ್ತದೆ. ಅಲ್ಲದೇ ಮಂಜುಗಡ್ಡೆಯನ್ನು ಹೊಂದಿರುವ ದಪ್ಪ ಟವೆಲ್ಲನ್ನು ಕುತ್ತಿಗೆಯ ಭಾಗಕ್ಕೆ ಒತ್ತಿಕೊಳ್ಳುವುದೂ ಒಳ್ಳೆಯದು.
      • ಆರಾಮದಾಯಕ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ, ಅದು ಉಸಿರಾಟ ಮತ್ತು ಚರ್ಮ ತೇವಾಂಶ ಹೀರಿಕೊಳ್ಳುವುದನ್ನು ಸುಲಭಗೊಳಿಸುತ್ತದೆ.
      • ನಿಮ್ಮ ದೇಹದ ತಾಪಮಾನ ಏರಿದ್ದರೆ ಬ್ಯಾಟರಿ ಚಾಲಿತ ಫ್ಯಾನ್ ಅಥವಾ ಮಡಚಬಹುದಾದ ಫ್ಯಾನ್ ಅನ್ನು ಜೊತೆಗೇ ಒಯ್ಯಿರಿ
      • ನೀವು ಗರ್ಭಾವಸ್ಥೆಯಲ್ಲಿಯೂ ವ್ಯಾಯಾಮ ಮಾಡುತ್ತಿದ್ದರೆ, ಹವಾ-ನಿಯಂತ್ರಿತ ಕೋಣೆಯಲ್ಲಿಯೇ ಅದನ್ನು ಮಾಡಿ.
      • ಚುರುಕಾದ ನಡಿಗೆ, ನೀರಿನ ವ್ಯಾಯಾಮಗಳು (ಈಜು), ಮನೆಯಲ್ಲಿಯೇ ಓಡಿಸುವ ಬೈಸಿಕಲ್, ಸುಲಭ ಯೋಗ ಮತ್ತು ಬಸ್ಕಿ ಮೊದಲಾದ ವ್ಯಾಯಾಮಗಳು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
      • ಹಠ ಯೋಗ ಅಥವಾ ಭಾರೀ ಶ್ರಮದ ವ್ಯಾಯಾಮಗಳನ್ನು ಮಾಡದಿರಿ. ಏಕೆಂದರೆ ಇವು ದೇಹವನ್ನು ಹೆಚ್ಚು ಬಿಸಿಯಾಗಿಸುತ್ತವೆ.
      • ತಾಪಮಾನವು ತಂಪಾಗಿರುವಾಗ ಬೆಳಿಗ್ಗೆ ಅಥವಾ ಸಂಜೆಯ ವೇಳೆಯಲ್ಲಿಯೇ ವ್ಯಾಯಾಮ ಮಾಡಿ.
      • ಗರ್ಭಾವಸ್ಥೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸುವುದು ಹೇಗೆ?

        ಗರ್ಭಾವಸ್ಥೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸುವುದು ಹೇಗೆ?

        • ನಿಮ್ಮ ಮಲಗುವ ಕೋಣೆಯನ್ನು ಆದಷ್ಟೂ ತಂಪಾಗಿರಿಸಿಕೊಳ್ಳಿ
        • ಸಂಜೆ ಕಿಟಕಿಗಳನ್ನು ತೆರೆದು ಹಗಲಿನ ವೇಳೆಯಲ್ಲಿ ಮುಚ್ಚುವ ಮೂಲಕ ನಿಮ್ಮ ಮಲಗುವ ಕೋಣೆಯನ್ನು ತಂಪಾಗಿರಿಸಬಹುದು.
        • ಒಳಾಂಗಣದ ಹಸಿರು ಸಸ್ಯಗಳನ್ನು ಮನೆಯಲ್ಲಿ ಇರಿಸಿ ಏಕೆಂದರೆ ಅವು ಗಾಳಿಯನ್ನು ತಣ್ಣಗಾಗಿಸುತ್ತವೆ ಮತ್ತು ತಾಜಾತನವನ್ನು ಸೇರಿಸುತ್ತವೆ.
        • ರಕ್ತದೊತ್ತಡ ಮತ್ತು ದೇಹದ ಮುಖ್ಯ ಉಷ್ಣತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದಿರುವ ಕಾರಣ ಕೆಫೀನ್ ಸೇವನೆಯನ್ನು ಆದಷ್ಟೂ ಮಿತಗೊಳಿಸಿ
        • ಹೆಚ್ಚಿನ ನೀರಿನ ಅಂಶವಿರುವ ಸಲಾಡ್‌ಗಳು, ಹಣ್ಣುಗಳು ಮತ್ತು ಹಸಿ ತರಕಾರಿಗಳಂತಹ ತಣ್ಣನೆಯ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಮಸಾಲೆಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡಿ ಏಕೆಂದರೆ ಅವು ದೇಹದದ ತಾಪಮಾನವನ್ನು ಹೆಚ್ಚಿಸಬಹುದು.
        • ಈ ಕ್ರಮಗಳು ನಿಮ್ಮನ್ನು ಹೆಚ್ಚು ಬಿಸಿಯಾಗದಂತೆ ತಡೆಯುವ ಸಾಧ್ಯತೆಯಿದೆ
        • ನೀಮ್ಮ ದೇಹ ಹೆಚ್ಚು ಬಿಸಿಯಾಗಿದ್ದರೆ ಅಥವಾ ನೀವು ಜ್ವರದಿಂದ ಬಳಲುತ್ತಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ಆರೋಗ್ಯಕರ ಗರ್ಭಧಾರಣೆಯನ್ನು ಹೊಂದಲು ಸಮತೋಲಿತ ಆಹಾರವನ್ನು ಸೇವಿಸುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು, ಮಾನಸಿಕ ಒತ್ತಡಕ್ಕೆ ಒಳಗಾಗದೇ ಇರುವುದು ಮತ್ತು ಧೂಮಪಾನ ಅಥವಾ ಮದ್ಯಪಾನ ವರ್ಜಿಸುವುದು ಅಗತ್ಯವಾಗಿದೆ.

English summary

Pregnancy Overheat: Signs, Causes, Risks And Prevention

Here we are discussing about Overheating In Pregnancy Signs, Causes, Risks And Prevention tips. This post explains the reasons behind the temperature rise during pregnancy, its impact, and ways to keep your body temperature under control.Read more.
X
Desktop Bottom Promotion