For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಕುರಿತ ಈ ಮೂಢನಂಬಿಕೆಗಳ ಹಿಂದಿದೆ ಈ ವೈಜ್ಞಾನಿಕ ಸತ್ಯ

|

ಗರ್ಭಿಣಿಯಾದ ಮೇಲೆ ಮನೆಯಲ್ಲಿ ಅನೇಕ ರೀತಿಯ ನಿರ್ಬಂಧಗಳನ್ನು ಹಾಕೋದು ನೀವು ಕೇಳಿರಬಹುದು. ಮನೆಯ ಹಿರಿಯರು ಈ ರೀತಿ ಹೇಳೋದು ಹೆಚ್ಚು. ಸಂಜೆಯಾದ ಮೇಲೆ ಗರ್ಭಿಣಿಯರು ಮನೆಯಿಂದಾಚೆ ಹೋಗಬಾರ್ದು, ಬೆಕ್ಕನ್ನು ಹತ್ತಿರ ಸೇರಿಸಿಕೊಳ್ಳಬಾರದು, ಹೊಸಿಲ ಮೇಲೆ ಕೂತ್ಕೋಬಾರ್ದು ಇತ್ಯಾದಿ. ವಿದ್ಯಾವಂತರಾದ ನಿಮಗೆ ಅದರಲ್ಲೂ ಈಗಿನ ಕಾಲದ ಮಹಿಳೆಯರು ಇದನ್ನೆಲ್ಲಾ ಕೇಳಿ ನಕ್ಕುಬಿಡುತ್ತಾರೆ, ಮೂಢನಂಬಿಕೆಯೆನ್ನುತ್ತಾರೆ. ಆದರೆ ಹಗುರವಾಗಿ ತೆಗೆದುಕೊಳ್ಳಬೇಡಿ ಹಿಂದೆ ಹಿರಿಯರು ಮಾಡಿದ ನಂಬಿಕೆ, ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿದೆ. ಅದರಲ್ಲೂ ಗರ್ಭಿಣಿಯರ ಕುರಿತಾಗಿ ಇರುವಂತಹ ಕೆಲವೊಂದು ನಂಬಿಕೆಗಳು, ಅದರ ಹಿಂದಿನ ಕಾರಣದಲ್ಲೂ ಸತ್ಯಾಂಶಗಳಿವೆ. ಅವೇನು ಎನ್ನುವ ಮಾಹಿತಿ ಇಲ್ಲಿದೆ ನೋಡಿ..

1. ಬೆಕ್ಕನ್ನು ಮುದ್ದಿಸಿದರೆ ಮಗುವಿಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ

1. ಬೆಕ್ಕನ್ನು ಮುದ್ದಿಸಿದರೆ ಮಗುವಿಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ

ಗರ್ಭಿಣಿಯಾಗಿದ್ದಾಗ ಬೆಕ್ಕನ್ನು ಸಾಕಬಾರದು, ಅದನ್ನು ಹತ್ತಿರವೂ ಸುಳಿಯಲು ಬಿಡಬಾರದು ಎನ್ನುತ್ತಾರೆ. ಬೆಕ್ಕನ್ನು ಮುದ್ದು ಮಾಡಿದರೆ ಮಗುವಿಗೆ ಶತ್ರುಗಳು ಹೆಚ್ಚಾಗುತ್ತಾರೆ ಅನ್ನುತ್ತಾರೆ. ಆದರೆ ಶತ್ರುಗಳ ಬಗ್ಗೆ ಇರುವ ನಂಬಿಕೆ ನಿಜವಲ್ಲ. ವೈಜ್ಞಾನಿಕವಾಗಿ ನೋಡುವುದಾದರೆ ಬೆಕ್ಕುಗಳು ಟಾಕ್ಸೊಪ್ಲಾಸ್ಮಾಸಿಸ್‌ ಎನ್ನುವ ಸೋಂಕನ್ನು ಹರಡುತ್ತದೆ, ಇದು ನಿರ್ದಿಷ್ಟ ಪರಾವಲಂಬಿಯಿಂದ ಉಂಟಾಗುವ ಸೋಂಕು. ಇದು ನಿಮ್ಮ ಹುಟ್ಟಲಿರುವ ಮಗುವಿಗೆ ಮಾರಕವಾಗಬಹುದು.

ಕಲುಷಿತ ಸಣ್ಣ ಪ್ರಾಣಿಗಳನ್ನು ತಿಂದ ನಂತರ ಬೆಕ್ಕುಗಳು ಮಲದ ಮೂಲಕ ಈ ಸೋಂಕಿಗೆ ಕಾರಣವಾಗುವ ಪರಾವಲಂಬಿಯನ್ನು ಹರಡುತ್ತದೆ. ಬೆಕ್ಕುಗಳಿಗೆ ಸೋಂಕಿನಿಂದ ಪರಿಣಾಮವೇನಿರದಿದ್ದರೂ ಅದು ಮನುಷ್ಯರಿಗೆ ಅದರಲ್ಲೂ ಗರ್ಭಿಣಿಯರಿಗೆ ಅಪಾಯಕಾರಿ. ಕೆಲವೊಮ್ಮೆ ಬೆಕ್ಕನ್ನು ಮುಟ್ಟಿದ ನಂತರ ಕೈಗಳನ್ನು ಸ್ವಚ್ಛಗೊಳಿಸದೇ ಆಹಾರವನ್ನು ಸೇವಿಸಿದಾಗ ಈ ಸೋಂಕಿಗೆ ಒಳಗಾಗಬಹುದು. ಇದರಿಂದಾಗಿ ಗರ್ಭದಲ್ಲಿಯೇ ಭ್ರೂಣಕ್ಕೆ ಸಮಸ್ಯೆಯಾಗಬಹುದು ಅಥವಾ ಹೆರಿಗೆಯಾದ ನಂತರವೂ ಮಗುವಿಗೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಜನನದ ಸಮಯದಲ್ಲಿ ಅಥವಾ ಮೊದಲು ಈ ಪರಾವಲಂಬಿ ಸೂಕ್ಷ್ಮ ಜೀವಿಯಿಂದ ಗಂಭೀರ ಕಣ್ಣಿನ ಸೋಂಕುಗಳು, ಇತರ ಕಣ್ಣಿನ ಸಮಸ್ಯೆಗಳು, ಮಿದುಳಿನ ಹಾನಿ, ಗರ್ಭದಲ್ಲಿಯೇ ಭ್ರೂಣದ ಮರಣ ಅಥವಾ ಗರ್ಭಪಾತವೂ ಆಗಬಹುದು. ಟೊಕ್ಸೊಪ್ಲಾಸ್ಮಾಸಿಸ್‌ ಸೋಂಕಿಗೆ ಒಳಗಾದ ಮಗುವಿನಲ್ಲಿ ಆರಂಭದಲ್ಲಿ ರೋಗಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಕುರುಡುತನ ಅಥವಾ ಬೌದ್ಧಿಕ ಅಸಾಮರ್ಥ್ಯದಿಂದ ಮಗು ಬಳಲಬಹುದು.

2. ಹೊಸಿಲಿನ ಮೇಲೆ ಕುಳಿತರೆ ದುಷ್ಟಶಕ್ತಿ ಮಗುವನ್ನು ಕೊಂಡೊಯ್ಯುತ್ತೆ..

2. ಹೊಸಿಲಿನ ಮೇಲೆ ಕುಳಿತರೆ ದುಷ್ಟಶಕ್ತಿ ಮಗುವನ್ನು ಕೊಂಡೊಯ್ಯುತ್ತೆ..

ಮನೆಯಲ್ಲಿ ಹಿರಿಯರಿದ್ದರೆ ನೀವು ಈ ಮಾತನ್ನು ಕೇಳಿರಬಹುದು, ಹೊರಗೆ ಕುಳಿತುಕೊಳ್ಳಬಾರದು, ಅದೂ ಹೊಸಿಲಿನ ಮೇಲೆ ಗರ್ಭಿಣಿಯರು ಕುಳಿತುಕೊಳ್ಳಬಾರದು. ದುಷ್ಟಶಕ್ತಿಗಳು ಮಗುವನ್ನು ಸೆಳೆಯುತ್ತದೆ, ಮಗುವಿಗೆ ತೊಂದರೆಯಾಗುತ್ತೆ ಎನ್ನುವ ಎಚ್ಚರಿಕೆಯ ಮಾತನ್ನು ಹೇಳುತ್ತಾರೆ. ಆದರೆ ನಿಜವಾಗಿಯೂ ಕಾರಣ ಇದಲ್ಲ. ಹೊರಗೆ ಗಾಳಿಯಲ್ಲಿ ಅನೇಕ ಸೂಕ್ಷ್ಮಾಣಿ ಜೀವಿಗಳು, ಸೋಂಕುಗಳು ಇರುತ್ತವೆ. ಗರ್ಭಿಣಿಯರು ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗಗಳು ಮತ್ತು ಸೂಕ್ಷ್ಮಾಣು ಜೀವಿಗಳಿಂದ ಆರೋಗ್ಯ ಸಮಸ್ಯೆಗೆ ಒಳಗಾಗಬಹುದು ಎನ್ನುವ ಕಾರಣದಿಂದ ಗರ್ಭಿಣಿಯರನ್ನು ಹೆಚ್ಚು ಹೊರಗೆ ಕುಳಿತುಕೊಳ್ಳಲು ಹಾಗೂ ಓಡಾಡಲು ಬಿಡುವುದಿಲ್ಲ.

3. ಹಾರರ್‌ ಮೂವಿ ನೋಡೋದರಿಂದ ಮಗು ಕುರೂಪವಾಗುತ್ತೆ..!

3. ಹಾರರ್‌ ಮೂವಿ ನೋಡೋದರಿಂದ ಮಗು ಕುರೂಪವಾಗುತ್ತೆ..!

ಗರ್ಭಿಣಿಯಾಗಿದ್ದಾಗ ಹಾರ್ಮೋನ್‌ ಅಸಮತೋಲನದಿಂದ ಭಾವನಾತ್ಮಕವಾಗಿ ಹೆಚ್ಚು ಸೂಕ್ಷ್ಮವಾಗಿರುತ್ತೀರಿ. ಹಾರರ್‌ ಮೂವಿ ನೋಡುವುದು, ನೋಡಿ ಹೆದರಿಕೊಳ್ಳೋದ್ರಿಂದ ನಿಮಗೆ ಹಾಗೂ ನಿಮ್ಮ ಮಗುವಿಗೆ ಹಾನಿಕಾರಕವಾದ ಒತ್ತಡವನ್ನು ಉಂಟುಮಾಡಬಹುದು. ಹೃದಯ ಬಡಿತವೂ ಏರುಪೇರಾಗುತ್ತದೆ. ಆದ್ದರಿಂದ ಹಾರರ್‌ ಮೂವಿಗಳ ಬದಲು ಉತ್ತಮ ಮೂವೀಸ್‌, ಉತ್ತಮ ಟಿವಿಪ್ರೋಗ್ರಾಂ ನೋಡಿ ಹಾಗೂ ಸಂಗೀತವನ್ನು ಕೇಳಿ.

4. ಗರ್ಭಿಣಿಯರು ಕಾಲು ಮಡಿಸಿ ಕುಳಿತರೆ ಮಗುವಿನ ಕಾಲು ವಕ್ರವಾಗುತ್ತೆ..!

4. ಗರ್ಭಿಣಿಯರು ಕಾಲು ಮಡಿಸಿ ಕುಳಿತರೆ ಮಗುವಿನ ಕಾಲು ವಕ್ರವಾಗುತ್ತೆ..!

ಗರ್ಭಿಣಿಯರು ಕುಳಿತುಕೊಳ್ಳುವ ಶೈಲಿಯ ಬಗ್ಗೆ ಹಲವು ನಂಬಿಕೆಗಳಿವೆ. ಹೀಗೆ ಕುಳಿತುಕೊಳ್ಳಬಾರದು, ಹಾಗೆ ಕುಳಿತುಕೊಳ್ಳಬಾರದು ಎಂದೆಲ್ಲಾ ಹೇಳುತ್ತಾರೆ. ಅದರಲ್ಲೂ ಕೆಲವರು ಗರ್ಭಿಣಿಯರು ಕಾಲು ಮಡಿಸಿ, ಚಕ್ಕಳ ಮಕ್ಕಳ ಹಾಕಿ ಕುಳಿತುಕೊಂಡರೆ ಮಗುವಿನ ಪಾದಗಳು ವಕ್ರವಾಗುತ್ತೆ ಎಂದು ಭಯ ಬೀಳಿಸುತ್ತಾರೆ. ಆದರೆ ಇದು ನಿಜವಲ್ಲ. ಭಯಪಡಬೇಡಿ. ಹಾಗೆ ಕುಳಿತುಕೊಳ್ಳಬಾರದು ಎನ್ನುವುದು ಓಕೆ. ಯಾಕೆಂದರೆ ಗರ್ಭಿಣಿಯಾದ ಮೇಲೆ ಬೆನ್ನಿಗೆ ಆಸರೆ ಕೊಟ್ಟು ಕಾಲು ಚಾಚಿ ಆರಾಮದಾಯಕವಾಗಿ ಕುಳಿತುಕೊಳ್ಳಬೇಕು ಇಲ್ಲವಾದರೆ ಬೆನ್ನುನೋವು, ಭುಜದನೋವಿನ ಜೊತೆಗೆ ಹೆಚ್ಚು ಆಯಾಸವೂ ನಿಮಗಾಗಬಹುದು.

5. ಬೆನ್ನಮೇಲೆ ಮಲಗಿದರೆ ಮಗುವಿಗೆ ಉಸಿರು ಕಟ್ಟುತ್ತೆ..!

5. ಬೆನ್ನಮೇಲೆ ಮಲಗಿದರೆ ಮಗುವಿಗೆ ಉಸಿರು ಕಟ್ಟುತ್ತೆ..!

ಗರ್ಭಿಣಿಯಾದ ಮೇಲೆ ವೈದ್ಯರೂ ಕೂಡಾ ಬದಿಯಲ್ಲಿ ಮಲಗಲು ಸಲಹೆ ನೀಡುತ್ತಾರೆ. ನಿಮ್ಮ ಕೊನೆಯ ತ್ರೈಮಾಸಿಕದಲ್ಲಿ ಬದಿಯಲ್ಲೇ ಮಲಗುವುದು ಅತ್ಯಂತ ಸುರಕ್ಷಿತ ವಿಧಾನ. ಗರ್ಭದ ತೂಕವೂ ಹೆಚ್ಚಾಗುವುದರಿಂದ ನೇರವಾಗಿ ಮಲಗಿದರೆ ಎದ್ದೇಳುವುದು ಕಷ್ಟ ಜೊತೆಗೆ ಬೆನ್ನ ಮೇಲೆ ಮಲಗಿದರೆ ಬೆನ್ನಿನ ಮೇಲೆ ಒತ್ತಡ ಹೆಚ್ಚಾಗಿ ಬೆನ್ನುನೋವು ಕಾಣಿಸಿಕೊಳ್ಳಬಹುದು. ಇದಕ್ಕಾಗಿಯೇ ಬೆನ್ನಮೇಲೆ ಮಲಗಬಾರದು ಎನ್ನುತ್ತಾರೆ. ಆದರೆ ಮಗುವಿಗೆ ಉಸಿರುಕಟ್ಟುತ್ತೆ ಎನ್ನುವುದು ನಿಜವಲ್ಲ.

6. ಸ್ನಾನ ಮಾಡಿದರೆ ಗರ್ಭಪಾತವಾಗುತ್ತೆ..!

6. ಸ್ನಾನ ಮಾಡಿದರೆ ಗರ್ಭಪಾತವಾಗುತ್ತೆ..!

ಸ್ನಾನ ಮಾಡಿದ್ರೆ ಮಗು ಹೋಗಿಬಿಡುತ್ತೆ, ಗರ್ಭಪಾತವಾಗುತ್ತೆ ಎನ್ನುವುದನ್ನು ನಿಮಗೆ ನಂಬಲಿಕ್ಕಾಗಲಿಕ್ಕಿಲ್ಲ. ಆದರೆ ಇದು ಸತ್ಯವೆನ್ನುತ್ತದೆ ಒಂದು ಸಂಶೋಧನೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಬಿಸಿನೀರಿನ ಸ್ನಾನ ಮಾಡುವ ಗರ್ಭಿಣಿಯರಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತದೆ ಸಂಶೋಧನೆ. ಆದ್ದರಿಂದ ಮೊದಲ ಮೂರು ತಿಂಗಳು ನೀವು ಬಿಸಿ ನೀರಿನ ಸ್ನಾನವನ್ನು ಮಾಡುತ್ತಿದ್ದರೆ ನಿಮ್ಮ ಸ್ನಾನದ ಸಮಯ ಹತ್ತು ನಿಮಿಷ ಅಥವಾ ಹತ್ತು ನಿಮಿಷಕ್ಕಿಂತ ಕಡಿಮೆ ಇರಲಿ. ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ನಂಬಿಕೆಗಳ ಹಿಂದೆ ನೈಜ ಕಾರಣಗಳಿರುತ್ತದೆ. ಅದನ್ನು ಅಲ್ಲಗಳೆಯುವ ಮುನ್ನ ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ಅರಿತುಕೊಂಡರೆ ಒಳ್ಳೆಯದು.

English summary

Pregnancy Myths That Turned Out to be True in kannada

Do you know these pregnancy myths that turned out to be true, read on...
X
Desktop Bottom Promotion