For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಲು ಸಹಾಯ ಮಾಡುತ್ತೆ ಈ ವ್ಯಾಯಾಮಗಳು

|

ಒಬ್ಬ ವ್ಯಕ್ತಿ ಆರೋಗ್ಯಕರವಾಗಿರುವಲ್ಲಿ ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ಗರ್ಭಿಣಿ ಮಹಿಳೆಯರಿಗೂ ಸಹ ವ್ಯಾಯಾಮ ಅಗತ್ಯವಾಗಿದೆ. ಆದರೆ, ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವಾಗ ವ್ಯಾಯಾಮ ಮಾಡಬಹುದೇ ಅಥವಾ ಬೇಡವೇ ಎಂಬ ಗೊಂದಲ ಸಾಮಾನ್ಯವಾಗಿರುತ್ತದೆ. ಆದರೆ, ಸದ್ಯ ಬಂದಿರುವ ವರದಿಯ ಪ್ರಕಾರ, ವ್ಯಾಯಾಮ ಗರ್ಭಿಣಿಯಾಗಲು ಸಹಕಾರಿ ಎಂದು ಹೇಳಿದೆ. ಅಂದರೆ, ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರು ವ್ಯಾಯಾಮ ಮಾಡಿದರೆ, ಅವರು ಆರೋಗ್ಯಕರ ಗರ್ಭಧಾರಣೆಯ ಜೊತೆಗೆ ಮಗು ಹಾಗೂ ತಾಯಿಯ ಒಟ್ಟಾರೆ ಆರೋಗ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ. ಹಾಗಾದರೆ ಬನ್ನಿ ಗರ್ಭಧಾರಣೆಗೆ ಸಹಾಯ ಮಾಡುವ ವ್ಯಾಯಾಮಗಳು ಯಾವುವು ನೋಡೋಣ.

ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವಾಗ ವ್ಯಾಯಾಮದ ಪ್ರಯೋಜನಗಳೇನು?:

ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವಾಗ ವ್ಯಾಯಾಮದ ಪ್ರಯೋಜನಗಳೇನು?:

ಅಮೇರಿಕನ್ ಕಾಲೇಜ್ ಆಫ್ ಅಬ್ಸ್ಟೆಟ್ರಿಶಿಯನ್ಸ್ ಮತ್ತು ಗೈನೆಕಾಲಜಿಸ್ಟ್ಸ್ (ACOG) ಪ್ರಕಾರ, ಗರ್ಭಿಣಿಯಾಗಲು ನಿರೀಕ್ಷಿಸುತ್ತಿರುವ ಅಥವಾ ಯೋಜಿಸುತ್ತಿರುವ ಮಹಿಳೆಯರಿಗೆ ಹೆಚ್ಚು ದೈಹಿಕವಾಗಿ ಸಕ್ರಿಯರಾಗಲು ಒತ್ತಾಯಿಸುತ್ತಾರೆ. ಏಕೆಂದರೆ, ನಿಯಮಿತ ಜೀವನಕ್ರಮಗಳು ನಿಮ್ಮ ಹೃದಯವನ್ನು ಒಳಗೊಂಡಂತೆ ಸ್ನಾಯುಗಳನ್ನು ಟೋನ್ ಮಾಡುವ ಮೂಲಕ ನಿಮ್ಮ ದೇಹವನ್ನು ಮಗುವನ್ನು ಪಡೆಯಲು ತಯಾರು ಮಾಡುವುದು. ಜೊತೆಗೆ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡುತ್ತದೆ, ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಗರ್ಭಿಣಿಯಾಗುವ ಮೊದಲು ಫಿಟ್‌ನೆಸ್ ದಿನಚರಿಯಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು.

ಎಷ್ಟು ವ್ಯಾಯಾಮ ಮಾಡಿದರೆ ಉತ್ತಮ?:

ಎಷ್ಟು ವ್ಯಾಯಾಮ ಮಾಡಿದರೆ ಉತ್ತಮ?:

ತಜ್ಞರು ಹೇಳುವ ಪ್ರಕಾರ, ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮಹಿಳೆಯರು ಅಥವಾ ಈಗಾಗಲೇ ಗರ್ಭಿಣಿಯಾದ ಮಹಿಳೆಯರು ದಿನಕ್ಕೆ 30 ನಿಮಿಷಗಳ ಮಧ್ಯಮ ವ್ಯಾಯಾಮವನ್ನು ಗುರಿಯಾಗಿರಿಸಿಕೊಳ್ಳಬೇಕು. ನೆನಪಿಡಿ, ಮೂರು 10-ನಿಮಿಷದ ಸೆಷನ್ಸ್‌ನ್ನು ಒಟ್ಟು 30 ನಿಮಿಷವನ್ನು ವ್ಯಾಯಾಮಕ್ಕೆ ಮೀಸಲಿಡಬೇಕು. ಏರೋಬಿಕ್ ವ್ಯಾಯಾಮ, ಶಕ್ತಿ ತರಬೇತಿ ಮತ್ತು ಯೋಗದಂತಹ ಸ್ಪಷ್ಟ ಆಯ್ಕೆಗಳ ಹೊರತಾಗಿ, ನಿಮ್ಮ ಹೃದಯವನ್ನು ಪಂಪ್ ಮಾಡುವ ಯಾವುದಾದರೂ, ತೋಟಗಾರಿಕೆ ಅಥವಾ ಮನೆಗೆಲಸವು ನಿಮ್ಮ ದೇಹಕ್ಕೆ ಮತ್ತು ಭವಿಷ್ಯದ ಮಗುವಿಗೆ ಒಳ್ಳೆಯದು.

ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಅಥವಾ ಈಗಾಗಲೇ ಗರ್ಭಿಣಿಯಾಗಿದ್ದರೂ ಸುರಕ್ಷಿತವೆಂದು ಪರಿಗಣಿಸಲಾದ ಕೆಲವು ವ್ಯಾಯಾಮಗಳು ಇಲ್ಲಿವೆ:

ನಡೆಯುವುದು:

ನಡೆಯುವುದು:

ನಡೆಯುವುದು ಅತ್ಯುತ್ತಮ ವ್ಯಾಯಾಮವಾಗಿದೆ. ಇದಕ್ಕೆ ನಿಮಗೆ ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದ ಕಾರಣ, ನಿಮಗೆ ಯಾವಾಗ ಬೇಕೋ ಆವಾಗ ವಾಕಿಂಗ್ ಮಾಡಬಹುದು. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ನಿಮ್ಮ ಡೆಲಿವರಿ ದಿನದವರೆಗೂ ಮಾಡಬಹುದು. ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಸುಮಾರು ಅರ್ಧ ಗಂಟೆಗಳ ಕಾಲ ಈ ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದಕ್ಕಾಗಿ ಒಂದು ಸಮತಟ್ಟಾದ ಮೈದಾನ ಅಥವಾ ಗಾರ್ಡನ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಶಕ್ತಿ ತರಬೇತಿ( ಸ್ಟ್ರೆಂತ್ ಟ್ರೈನಿಂಗ್):

ಶಕ್ತಿ ತರಬೇತಿ( ಸ್ಟ್ರೆಂತ್ ಟ್ರೈನಿಂಗ್):

ವೈಟ್ ಲಿಫ್ಟಿಂಗ್ ನಿಂದ ನಿಮ್ಮ ಸ್ನಾಯುವಿಗೆ ಸರಿಯಾದ ಟೋನ್ ಮತ್ತು ಮೂಳೆಯ ಬಲ ಹೆಚ್ಚಾಗುತ್ತದೆ. ಇವೆರಡೂ ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಉತ್ತಮ ಆಕಾರದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಆದರೆ, ಗಾಯದ ಅಪಾಯವನ್ನು ತಪ್ಪಿಸಲು, ಹೆಚ್ಚು ಪುನರಾವರ್ತನೆಗಳೊಂದಿಗೆ ಹಗುರವಾದ ತೂಕವನ್ನು ಆರಿಸಿಕೊಳ್ಳಿ (12 ರಿಂದ 15ಕೆಜಿ) ಅಥವಾ ನಿಮ್ಮ ದೇಹದ ತೂಕ ಅಥವಾ ಬ್ಯಾಂಡ್‌ಗಳನ್ನು ಬಳಸುವ ಪ್ರತಿರೋಧ ವ್ಯಾಯಾಮಗಳ ಮೇಲೆ ಕೇಂದ್ರೀಕರಿಸಿ, ಉದಾಹರಣೆಗೆ ಲಂಗ್ಸ್, ಸ್ಕ್ವಾಟ್‌ಗಳು, ಪುಶಪ್ಸ್‌. ಆದರೆ ಜಂಪಿಂಗ್, ಜರ್ರಿಂಗ್ ಚಲನೆಗಳನ್ನು ತಪ್ಪಿಸಿ, ಜೊತೆಗೆ, ಆಗಾಗ ನೀರು ಕುಡಿಯುತ್ತಾ, ಸರಿಯಾದ ಉಸಿರಾಟ ಮಾಡಲು ಮರೆಯದಿರಿ.

ಯೋಗ:

ಯೋಗ:

ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಯೋಗ ಸೂಕ್ತ ವ್ಯಾಯಾಮವಾಗಿದೆ. ಏಕೆಂದರೆ ಅವು ಶಕ್ತಿ, ಸಮತೋಲನ, ಸಹಿಷ್ಣುತೆ ಮತ್ತು ಸ್ನಾಯು ಟೋನ್ ಅನ್ನು ನಿರ್ಮಿಸುತ್ತವೆ. ಯೋಗ, ನಿರ್ದಿಷ್ಟವಾಗಿ, ವಿಶ್ರಾಂತಿ ಪಡೆಯಲು ಸಹಾಯ ಮಾಡುವುದು, ವಿಶೇಷವಾಗಿ ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಯೋಗ ಬಹಳ ಪ್ರಮುಖ ಪಾತ್ರ ವಹಿಸುವುದು.

ಈಜುವುದು:

ಈಜುವುದು:

ಈಜು ಕೂಡ ಕಡಿಮೆ ಪ್ರಭಾವದ ವ್ಯಾಯಾಮವಾಗಿದ್ದು, ಅದು ಸ್ನಾಯು ಟೋನ್ ನಿರ್ಮಿಸುವುದರ ಜೊತೆಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಈಜು, ನಿರ್ದಿಷ್ಟವಾಗಿ, ನಿರೀಕ್ಷಿತ ತಾಯಂದಿರಿಗೆ ಸೂಕ್ತವಾಗಿದೆ, ಏಕೆಂದರೆ ಇದು ಹಗುರವಾದ ಭಾವನೆಯನ್ನು ಉಂಟುಮಾಡುತ್ತದೆ. ಜೊತೆಗೆ ವಾಕರಿಕೆ ಮತ್ತು ಊತದಂತಹ ಸಾಮಾನ್ಯ ಆರಂಭಿಕ ಗರ್ಭಧಾರಣೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಒಳಾಂಗಣ ಸೈಕ್ಲಿಂಗ್:

ಒಳಾಂಗಣ ಸೈಕ್ಲಿಂಗ್:

ಒಳಾಂಗಣ ಸೈಕ್ಲಿಂಗ್ ಮತ್ತೊಂದು ಸುರಕ್ಷಿತ, ಕಡಿಮೆ-ಪ್ರಭಾವದ ವ್ಯಾಯಾಮವಾಗಿದ್ದು ಅದು ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿರುತ್ತದೆ. ಆದರೆ, ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಅದರ ಜೊತೆಗೆ ಹೆಚ್ಚು ಗಾಳಿ ಅಥವಾ ಹೆಚ್ಚು ಬಿಸಿಯಾದರೆ, ವಿರಾಮಗಳನ್ನು ತೆಗೆದುಕೊಳ್ಳಿ.

ವ್ಯಾಯಾಮವನ್ನು ಅತಿಯಾಗಿ ಮಾಡುತ್ತಿದ್ದೀರಿ ಎನ್ನುವುದಕ್ಕೆ ಸೂಚನೆಗಳು:

ವ್ಯಾಯಾಮವನ್ನು ಅತಿಯಾಗಿ ಮಾಡುತ್ತಿದ್ದೀರಿ ಎನ್ನುವುದಕ್ಕೆ ಸೂಚನೆಗಳು:

ನೀವು ಅತಿಯಾಗಿ ದಣಿದಿದ್ದರೆ, ಕಿರಿಕಿರಿಯುಂಟುಮಾಡಿದರೆ, ಸ್ನಾಯು ಅಥವಾ ಕೀಲು ನೋವು ಇದ್ದರೆ ಅಥವಾ ರಾತ್ರಿಯ ನಿದ್ರೆಯನ್ನು ಪಡೆಯಲು ಸಾಧ್ಯವಾಗದಿದ್ದರೆ, ನಿಮ್ಮ ವ್ಯಾಯಾಮದ ವೇಗ ಮತ್ತು ಅವಧಿಯನ್ನು ಕಡಿಮೆ ಮಾಡಬೇಕು ಎನ್ನುವ ಸೂಚನೆಯಾಗಿದೆ. ಈ ಎಲ್ಲಾ ರೋಗಲಕ್ಷಣಗಳು ನೀವು ಗರ್ಭಿಣಿಯಾಗಿರಲಿ ಅಥವಾ ಇಲ್ಲದಿರಲಿ, ಅದನ್ನು ಅತಿಯಾಗಿ ಮಾಡುತ್ತಿದ್ದೀರಿ ಎಂದು ಸೂಚಿಸುತ್ತದೆ.

English summary

Pre Pregnancy Workouts: Best exercises for women trying to get pregnant in kannada

Here we talking about Pre Pregnancy Workouts: Best exercises for women trying to get pregnant in kannada, read on
Story first published: Wednesday, May 18, 2022, 11:00 [IST]
X
Desktop Bottom Promotion