For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಅವಶ್ಯಕವಾದ ಅಂಡೋತ್ಪತ್ತಿಯ ಲಕ್ಷಣಗಳೇನು?

|

ಕೆಲ ಜೋಡಿಗೆ ಈಗ ಮಗು ಬೇಕು ಎಂದರೆ ಇನ್ನು ಕೆಲ ಜೋಡಿಗೆ ಸದ್ಯಕ್ಕೆ ಮಗು ಬೇಡ ಮುಂದೆ ನೋಡುವ ಎಂಬ ಆಲೋಚನೆ ಇರುತ್ತದೆ. ಮಗು ಬೇಡವೆಂದು ನಿರ್ಧರಿಸಿದ ದಂಪತಿಗೆ ಗರ್ಭಧಾರಣೆ ತಡೆಗಟ್ಟಲು ಅನೇಕ ಮಾರ್ಗಗಳಿವೆ.

ovulation symptoms

ಆದರೆ ಮಗು ಬೇಕೆಂದು ಬಯಸುವ ದಂಪತಿಗೆ ಮಗು ಬೇಕಾದರೆ ಪ್ರಮುಖವಾದ ಸಮಯದಲ್ಲಿ ಪ್ರಯತ್ನಿಸಬೇಕಾಗುತ್ತದೆ. ಆ ಪ್ರಮುಖ ಸಮಯವೆಂದರೆ ಅಂಡೋತ್ಪತ್ತಿ ಸಮಯ. ಈ ಸಮಯದಲ್ಲಿ ಹೆಣ್ಣು- ಗಂಡು ಕೂಡಿದರೆ ಮಾತ್ರ ಗರ್ಭಧಾರಣೆಯಾಗಲು ಸಾಧ್ಯ. ಅಲ್ಲದೆ ಈಗಲೇ ಮಗು ಬೇಡವೆಂದು ನಿರ್ಧರಿಸುವ ಜೋಡಿಗೂ ಕೂಡ ಸಮಯ ಮುಖ್ಯವಾಗಿರುತ್ತದೆ,

ಈ ಸಮಯದಲ್ಲಿ ಕೂಡುವಾಗ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಸುರಕ್ಷತಾ ಕ್ರಮ ಅನುಸರಿಸಿದರೂ ಗರ್ಭಧಾರಣೆಯಾಗುವ ಸಾಧ್ಯತೆ ಶೇ. 25-30ರಷ್ಟು ಇರುವುದರಿಂದ ಅಂಡೋತ್ಪತ್ತಿಯಾಗುವ ಸಮಯದಲ್ಲಿ ಸೇರದಿರುವುದೇ ಮಗು ಬೇಡ ಎನ್ನುವವರಿಗೆ ಸುರಕ್ಷತೆ, ಆ ಸಮಯದಲ್ಲಿ ಸೇರುವುದೇ ಮಗು ಬೇಕು ಎನ್ನುವವರಿಗೆ ಅತ್ಯುತ್ತಮ ಸಮಯ.

ಈ ಅಂಡೋತ್ಪತ್ತಿ ಎಂದರೇನು?

ಈ ಅಂಡೋತ್ಪತ್ತಿ ಎಂದರೇನು?

ಗರ್ಭಕೋಶದಲ್ಲಿ ಫಲವತ್ತತೆಯ ಸಂಕೇತವಾದ ಅಂಡಾಣುಗಳು ಬಿಡುಗಡೆಯಾಗುವುದಾಗಿದೆ. ಪ್ರತೀ ತಿಂಗಳು ಮಹಿಳೆಯ ಗರ್ಭಕೋಶದಲ್ಲಿ ಅಂಡಾಣುಗಳು ಬಿಡುಗಡೆಯಾಗುತ್ತದೆ, ವಯಸ್ಸಾಗುತ್ತಿದ್ದಂತೆ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು. ಅಂಡಾಣು ಅಧಿಕ ಉತ್ಪತ್ತಿಯಾಗುವ ಸಮಯ ಫಲವತ್ತತೆಯ ಉತ್ತಮ ಸಮಯ.

 ಅಂಡೋತ್ಪತ್ತಿ ಯಾವಾಗ ಉಂಟಾಗುವುದು?

ಅಂಡೋತ್ಪತ್ತಿ ಯಾವಾಗ ಉಂಟಾಗುವುದು?

ಅಂಡೋತ್ಪತ್ತಿ ಮುಟ್ಟಾದ 14 ದಿನಗಳಲ್ಲಿ ಉಂಟಾಗುತ್ತದೆ. ಇನ್ನು ಅನಿಯಮಿತ ಮುಟ್ಟು ಉಂಟಾಗುವರಲ್ಲಿ ಅಂಡೋತ್ಪತ್ತಿ ಸಮಯದಲ್ಲಿ ವ್ಯತ್ಯಾಸ ಉಂಟಾಗುವುದು.

ಅಂಡೋತ್ಪತ್ತಿ ಎಷ್ಟು ದಿನ ಇರುತ್ತದೆ?

ಅಂಡೋತ್ಪತ್ತಿ ಎಷ್ಟು ದಿನ ಇರುತ್ತದೆ?

ಅಂಡಾಣುಗಳು ಬಿಡುಗಡೆಯಾಗುವ ಸಮಯ 12-24 ಗಂಟೆಗಳು. ಈ ಬಿಡುಗಡೆಯಾದ ಅಂಡಾಣು ವೀರ್ಯಾಣು ಜೊತೆ ಸೇರಿದಾಗ ಗರ್ಭಧಾರಣೆ ಉಂಟಾಗುವುದು.

ಅಂಡಾಣು ಬಿಡುಗಡೆಯಾದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳೇನು?

ಅಂಡಾಣು ಬಿಡುಗಡೆಯಾದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳೇನು?

* ದೇಹದ ಉಷ್ಣತೆಯಲ್ಲಿ ವ್ಯತ್ಯಾಸ ಉಂಟಾಗುವುದು. ದೇಹದ ಉಷ್ಣತೆ ಸ್ವಲ್ಪ ಕಡಿಮೆಯಾಗಿ ನಂತರ ಅಧಿಕವಾಗುವುದು.

* ಗರ್ಭಕಂಠ ಮೃದುವಾಗುವುದು, ತೆರೆದುಕೊಳ್ಳುತ್ತದೆ.

* ಕಿಬ್ಬೊಟ್ಟೆಯಲ್ಲಿ ಸ್ವಲ್ಪ ನೋವು ಕಾಣಿಸಬಹುದು.

* ಲೈಂಗಿಕ ಆಸಕ್ತಿ ಹೆಚ್ಚುವುದು.

*ಜನನೇಂದ್ರೀಯ ಸ್ವಲ್ಪ ದಪ್ಪವಾಗುವುದು.

ಅಂಡೋತ್ಪತ್ತಿ ದಿನವನ್ನು ತಿಳಿಯುವುದು ಹೇಗೆ?

ಅಂಡೋತ್ಪತ್ತಿ ದಿನವನ್ನು ತಿಳಿಯುವುದು ಹೇಗೆ?

ಇದನ್ನು ತಿಳಿಯಲು ಅನೇಕ ವಿಧಾನಗಳಿವೆ.

* ಕ್ಯಾಲೆಂಡರ್‌ ಪಾಲಿಸಿ: ಮುಟ್ಟಾದ ದಿನವನ್ನು ಗುರುತು ಹಾಕಿ 14ನೇ ದಿನಕ್ಕೆ ದೇಹದಲ್ಲಿ ಆಗುವ ವ್ಯತ್ಯಾಸ ಗಮನಿಸಿ, ಒಂದೆರಡು ದಿನ ಆಚೆ-ಈಚೆ ಆಗಬಹುದು.

ನಿಮ್ಮಓವ್ಯೂಲೇಷನ್ ಕ್ಯಾಲೆಂಡರ್ ಕೆಲವು ತಿಂಗಳು ಪಾಲಿಸಿ. ಆಗ ಕೆಲವೇ ತಿಂಗಳಿನಲ್ಲಿ ಅಂಡೋತ್ಪತ್ತಿ ದಿನ ತಿಳಿದು ಬರುವುದು.

* ನಿಮ್ಮ ದೇಹದ ಮಾತು ಕೇಳಿ

ಈ ಸಮಯದಲ್ಲಿ ನಿಮ್ಮ ದೇಹದ ಉಷ್ಣತೆಯಲ್ಲಿ ವ್ಯತ್ಯಾಸ ಉಂಟಾಗುವುದು. ಕಿಬ್ಬೊಟ್ಟೆಯಲ್ಲಿ ನೋವು, ಆ ಸಮಯದಲ್ಲಿ ಲೈಂಗಿಕ ಆಸಕ್ತಿ ಹೆಚ್ಚುವುದು. ಇವೆಲ್ಲಾ ಅಂಡೋತ್ಪತ್ತಿಯ ಲಕ್ಷಣಗಳಾಗಿವೆ.

ಓವ್ಯೂಲೇಷನ್ ಕಿಟ್‌: ಮೆಡಿಕಲ್‌ನಲ್ಲಿ ಓವ್ಯೂಲೇಷನ್ ಕಿಟ್‌ ಸಿಗುತ್ತದೆ, ಇದನ್ನು ಬಳಸಿ ಕಂಡು ಹಿಡಿಯಬಹುದು. ಇತರ ವಿಧಾನಗಳಲ್ಲಿ ತಿಳಿಯುವುದಕ್ಕಿಂತ ಈ ವಿಧಾನ ಹೆಚ್ಚು ನಿಖರವಾಗಿರುತ್ತದೆ.

English summary

Ovulation Symptoms: What Is Ovulation & When Do You Ovulate?

Here we explain ovulation symptoms, what is ovulation and when do you ovulate, read on.
X
Desktop Bottom Promotion