For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಜೋಳ ತಿಂದರೆ ಸಿಗುವ 5 ಪ್ರಮುಖ ಪ್ರಯೋಜನಗಳು

|

ಜೋಳ ಆರೋಗ್ಯಕರವಾದ ಆಹಾರವಾಗಿದೆ. ಇದನ್ನು ಗರ್ಭಿಣಿಯರು ಕೂಡ ತಿನ್ನಬಹುದಾಗಿದ್ದು, ಇದನ್ನು ತಿನ್ನುವುದರಿಂದ ಗರ್ಭಿಣಿಯರು ಪ್ರಮುಖ 6 ಪ್ರಯೋಜನಗಳನ್ನು ಪಡೆಯಬಹುದು. ಜೋಳದಲ್ಲಿ ಫಾಲಿಕ್ ಆಮ್ಲ, ನಾರಿನಂಶ, ವಿಟಮಿನ್ ಬಿ1, ಬಿ5 ಮತ್ತು ಸಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ.

ಗರ್ಭಿಣಿಯರು ತಮ್ಮ ಆಹಾರಕ್ರಮದಲ್ಲಿ ಜೋಳವನ್ನು ಸೇರಿಸುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

Nutritional Benefits Of Corn During Pregnancy

1. ಮಲಬದ್ಧತೆ ಹೋಗಲಾಡಿಸುತ್ತದೆ

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಿಣಿಯಾಗಿದ್ದಾಗ ಶರೀರದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ ಹಾಗೂ ಜೀರ್ಣಕ್ರಿಯೆ ನಿಧಾನವಾಗಿ ನಡೆಯುವುದು, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇದನ್ನು ಹೋಗಲಾಡಿಸುವಲ್ಲಿ ಜೋಳ ಸಹಕಾರಿಯಾಗಿದೆ. ಜೋಳದಲ್ಲಿ ನಾರಿನಂಶ ಅಧಿಕವಿರುವುದರಿಂದ ಗರ್ಭಿಣಿಯರು ಜೋಳವನ್ನು ತಿನ್ನುವುದು ಒಳ್ಳೆಯದು.

ಜೋಳದಲ್ಲಿರುವ ಪೋಷಕಾಂಶಗಳು

ಪೋಷಕಾಂಶ ಪ್ರಮಾಣ
ನೀರು 75.96% ಗ್ರಾಂ
ಕ್ಯಾಲೋರಿ 86KCal
ಕಾರ್ಬೋಹೈಡ್ರೇಟ್ಸ್ 19.02ಗ್ರಾಂ
ಪ್ರೊಟೀನ್ 3.22ಗ್ರಾಂ
ನಾರಿನಂಶ 2.7ಗ್ರಾಂ
ಕೊಬ್ಬಿನಂಶ 1.18ಗ್ರಾಂ
ಸಕ್ಕರೆ 3.22ಗ್ರಾಂ

2.ಮಗುವಿನ ಆರೋಗ್ಯಕ್ಕೆ ಒಳ್ಳೆಯದು

ಜೋಳದಲ್ಲಿ zeaxanthin ಎಂಬ ಅಂಶವಿದ್ದು ಇದು ಮ್ಯಾಕ್ಯೂಲರ್ ಡಿಜನರೇಷನ್ ಎಂಬ ಕಣ್ಣಿನ ಸಮಸ್ಯೆ ಉಂಟಾಗದಂತೆ ತಾಯಿಯನ್ನು ಹಾಗೂ ಮುಂದೆ ಮಗುವಿಗೆ ಕಣ್ಣಿನ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

3. ಮಗುವಿಗೆ ದೈಹಿಕ ನ್ಯೂನ್ಯತೆ ಉಂಟಾಗದಂತೆ ತಡೆಯುತ್ತದೆ

ಇದರಲ್ಲಿ ಫಾಲಿಕ್ ಆಮ್ಲ ಇರುವುದರಿಂದ ಮೂಳೆಯಾರೋಗ್ಯಕ್ಕೆ ಒಳ್ಳೆಯದು, ಹಾಗೂ ಮಗುವಿಗೆ ದೈಹಿಕ ನ್ಯೂನತೆ ಉಂಟಾಗದಂತೆ ತಡೆಯುತ್ತದೆ.

ವಿಟಮಿನ್ಸ್

ಫಾಲಿಕ್ ಆಮ್ಲ 46mcg
ವಿಟಮಿನ್ ಬಿ3 1.7mg
ವಿಟಮಿನ್ ಬಿ2 0.06mg
ವಿಟಮಿನ್ ಬಿ6 0.055mg
ವಿಟಮಿನ್ ಬಿ1 0.2mg
ವಿಟಮಿನ್ ಎ 1IU
ವಿಟಮಿನ್ ಸಿ 6.8mg
ವಿಟಮಿನ್ ಇ 0.07mg
ವಿಟಮಿನ್ ಕೆ 0.3mg

4. ಮಗುವಿನ ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ

ಮಗುವಿನ ಮೆದುಳು ಸಾಮರ್ಥ್ಯ ಹೆಚ್ಚಿಸುವ ಆಹಾರದಲ್ಲಿ ಇದು ಕೂಡ ಒಂದಾಗಿದೆ. ಇದರಲ್ಲಿರುವ ಥಯಾಮೈನ್ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ.

5. ಮಗು ಹಾಗೂ ತಾಯಿಯಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ

ಇದರಲ್ಲಿ ಬೀಟಾ ಕೆರೊಟಿನ್ ಹಾಗೂ ವಿಟಮಿನ್ ಎ ಇದ್ದು ಇದು ಗರ್ಭಿಣಿಯರಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಸಹಕಾರಿ.

ಜೋಳದಲ್ಲಿರುವ ಖನಿಜಾಂಶಗಳು

ಕ್ಯಾಲ್ಸಿಯಂ 2mg
ಕಬ್ಬಿಣದಂಶ 0.52mg
ರಂಜಕ 89mg
ಮೆಗ್ನಿಷ್ಯಿಯಂ 37mg
ಸತು 0.45mg

ಯಾವಾಗ ಜೋಳ ಒಳ್ಳೆಯದಲ್ಲ?

*ಜೋಳದಲ್ಲಿ ಅಧಿಕ ಕೊಬ್ಬಿನ ಆಮ್ಲವಿರುವುದರಿಂದ ಹೃದಯ ಸಮಸ್ಯೆ ಇರುವವರು ದಿನಾ ತಿನ್ನುವುದು ಒಳ್ಳೆಯದಲ್ಲ.

*ಅಜೀರ್ಣ ಸಮಸ್ಯೆಯಿದ್ದಾಗ ಜೋಳ ತಿನ್ನಬೇಡಿ.

ಮೈಕ್ರೋವೇವ್‌ ಜೋಳ ಒಳ್ಳೆಯದಾ?

ಮೈಕ್ರೋವೇವ್‌ನಲ್ಲಿ ಮಾಡಿದ ಪಾಪ್‌ಕಾರ್ನ್‌ನಲ್ಲಿ perfluorooctanoic ಆಮ್ಲವೆಂಬ ರಾಸಾಯನಿಕವಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಗರ್ಭಿಣಿಯರು ಮೈಕ್ರೋವೇವ್‌ ಪಾಪ್‌ಕಾರ್ನ್‌ ತಿನ್ನಬೇಡಿ.

ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆಗಳು

ಗರ್ಭಿಣಿಯರು ಅತಿಹೆಚ್ಚು ಜೋಳ ತಿಂದರೆ ಹಾನಿಕಾರಕವೇ?

ಯಾವ ವಸ್ತುವೇ ಆಗಿರಲಿ ಅತಿ ಹೆಚ್ಚು ತಿಂದರೆ ಒಳ್ಳೆಯದಲ್ಲ. ಇನ್ನು ಜೋಳ ರುಚಿ ಸಿಗಬೇಕಾದರೆ ಉಪ್ಪು ಬೇಕೇಬೇಕು. ಉಪ್ಪಿನಂಶ ಅಧಿಕ ತಿಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಆದ್ದರಿಂದ ಜೋಳವನ್ನು ಮಿತಿಯಲ್ಲಿ ತಿನ್ನಿ.

ಬೇಯಿಸದೆ ಜೋಳ ತಿನ್ನಬಹುದೇ?

ಜೋಳವನ್ನು ಸಲಾಡ್‌ನಲ್ಲಿ ಬೇಯಿಸದೆಯೂ ತಿನ್ನಬಹುದು, ಆದರೆ ತುಂಬಾ ತಿನ್ನಬೇಡಿ.

English summary

5 Nutritional Benefits Of Corn During Pregnancy

Eating Corn Is good for pregnant women, It Has folic acid, fiber, vitamins B1, B5, and C So By eating can improve digestion, strengthens circulation and also aids lactation.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more