For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಈ 4 ಪೋಷಕಾಂಶಗಳಿರುವ ಆಹಾರ ಮಿಸ್ ಮಾಡದಿರಿ

|

ಮಗು ಬೇಕೆಂದು ಬಯಸಿ ಕೆಲವು ಸಮಯದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದು ಬಯಸಿದ ಫಲಿತಾಂಶ ದೊರೆಯದಿದ್ದರೆ ನಿರಾಸೆ ಬೇಡ. ಮಗುವನ್ನು ಪಡೆಯಲು ಬಯಸುವವರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿದರೆ ನೀವು ಬಯಸಿದ ಫಲಿತಾಂಶ ಸಿಗಬಹುದು. ವೈದ್ಯರು ಕೂಡ ಮಗುವಿಗಾಗಿ ಪ್ರಯತ್ನಿಸುತ್ನಿಸುತ್ತಿರುವವರಿಗೆ ಕೆಲವೊಂದು ಸಪ್ಲಿಮೆಂಟ್‌ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಶೇ. 15ರಷ್ಟು ದಂಪತಿಗಳಿಗೆ ಬಂಜೆತನದ ಸಮಸ್ಯೆ ಕಾಡುತ್ತಿದೆ. ಜೀವನ ಶೈಲಿ, ಆಹಾರಕ್ರಮ ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬುವುದನ್ನು ತಜ್ಷರು ಹೇಳುತ್ತಾರೆ. ಆರೋಗ್ಯಕರ ಹಾಗೂ ಸಮತೋಲನದ ಆಹಾರ ಆರೋಗ್ಯಕರ ಗರ್ಭ ನಿಲ್ಲಲು ಸಹಾಯ ಮಾಡುವುದು. ಅಲ್ಲದೆ ಇಷ್ಟು ದಿನ ಪ್ಲ್ಯಾನಿಂಗ್‌ನಲ್ಲಿದ್ದು ಈಗ ಮಗು ಬೇಕೆಂದು ಬಯಸುವವರು ಕೂಡ

ಆರೋಗ್ಯಕರ ಆಹಾರದ ಕಡೆ ಗಮನ ನೀಡುವುದರಿಂದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ, ಈ ಪೋಷಕಾಂಶಗಳು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿವೆ:

ಕಬ್ಬಿಣದಂಶ

ಕಬ್ಬಿಣದಂಶ

ಕಬ್ಬಿಣದಂಶದ ಕೊರತೆಯಾದರೆ ರಕ್ತ ಹೀನತೆ ಉಂಟಾಗುವುದು, ಅನಿಮೀಯಾ ಸಮಸ್ಯೆಯಿದ್ದರೆ ಗರ್ಭಧಾರಣೆ ಕಷ್ಟವಾಗುವುದು. ಮಹಿಳೆಯರು ಕಬ್ಬಿಣದಂಶ ಇರುವ ಆಹಾರ ತೆಗೆದುಕೊಂಡರೆ ಕಬ್ಬಿಣದಂಶ ದೇಹದ ರಕ್ತ ಕಣಗಳನ್ನು ಆಮ್ಲಜನಕದ ಪೂರೈಕೆಗೆ ಸಹಾಯವಾಗುವುದು. ದೇಹದಲ್ಲಿ ಕಬ್ಬಿಣದಂಶ ಕಡಿಮೆಯಾದರೆ ಅಂಡೋತ್ಪತ್ತಿ ಕಡಿಮೆಯಾಗುವುದು, ಇದರಿಂದ ಗರ್ಭಧಾರಣೆ ಕಷ್ಟವಾಗುವುದು. ಇಂಥ ಸಮಸ್ಯೆ ತಡೆಗಟ್ಟಲು ಕಬ್ಬಿಣದಂಶವಿರುವ ಆಹಾರ ಸಹಾಯ ಮಾಡುತ್ತೆ.

ರೈಸ್‌ ಫ್ಲೇಕ್ಸ್‌, ಕಿಡ್ನಿ ಬೀನ್ಸ್, ಒಣ ಖರ್ಜೂರ, ಸೊಪ್ಪು, ತಾವರೆಯ ದಂಟು, ಸೆಲೆರಿ, ನಟ್ಸ್‌, ಫ್ಲ್ಯಾಕ್ಸ್ ಸೀಡ್ಸ್ (ಅಗಸೆ ಬೀಜ) ಇವುಗಳನ್ನು ತಿನ್ನಿ.

ಫಾಲಿಕ್ ಆಮ್ಲ

ಫಾಲಿಕ್ ಆಮ್ಲ

ಮಗುವಿಗಾಗಿ ಪ್ಲ್ಯಾನ್ ಮಾಡುತ್ತಿದ್ದರೆ ಫಾಲಿಕ್ ಆಮ್ಲ ಸಪ್ಲಿಮೆಂಟ್‌ ತೆಗೆದುಕೊಳ್ಳಿ. ಇದು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು. ಫಾಲಿಕ್ ಆಮ್ಲ ಮಗು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುವುದು. ಫಾಲಿಕ್‌ ಆಮ್ಲದ ಕೊರತೆ ಇದ್ದರೆ ಮಗುವಿನ ಕೆಲ ನ್ಯೂನ್ಯತೆಗಳು ಕಂಡು ಬರುವುದು.

ನೈಸರ್ಗಿಕವಾಗಿ ಫಾಲಿಕ್ ಆಮ್ಲ ಹೊಂದಿರುವ ಆಹಾರಗಳೆಂದರೆ: ಪಾಲಾಕ್, ಅಶ್ವಗಂಧ, ಸಿಹಿ ಕುಂಬಳಕಾಯಿ, ಕ್ಯಾರೆಟ್, ಬೆಂಡೆಕಾಯಿ, ಬ್ರೊಕೋಲಿ, ಲಿವರ್, ಬೆಣ್ಣೆಹಣ್ಣು ಇಂಥ ಆಹಾರಗಳಲ್ಲಿ ಫಾಲಿಕ್ ಆಮ್ಲ ಹೆಚ್ಚಿರುತ್ತದೆ.

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಕ್ಯಾಲ್ಸಿಯಂ ಇರುವ ಆಹಾರವನ್ನೂ ತಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು. ಕ್ಯಾಲ್ಸಿಯಂ ಮಗು ಹಾಗೂ ತಾಯಿಯ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗರ್ಭಾವಸ್ಥೆಯಲ್ಲಿ ಕೆಲ ಮಹಿಳೆಯರಿಗೆ ಹಲ್ಲಿನ ಸಮಸ್ಯೆ ಇರುತ್ತದೆ, ಕ್ಯಾಲ್ಸಿಯಂ ಅಧಿಕವಿರುವ ಆಹಾರವನ್ನು ಸೇವಿಸುವುದರಿಂದ ಇಂಥ ಸಮಸ್ಯೆ ತಡೆಗಟ್ಟಬಹುದು.

ಕ್ಯಾಲ್ಸಿಯಂ ಇರುವ ಆಹಾರಗಳು: ಹಾಲು, ಮೊಸರು, ಪನ್ನೀರ್, ನಟ್ಸ್, ಧಾನ್ಯಗಳು, ರಾಗಿ ಮುಂತಾದವು.

ಸತುವಿನಂಶವಿರುವ ಆಹಾರ

ಸತುವಿನಂಶವಿರುವ ಆಹಾರ

ಯಾರು ಗರ್ಭಧಾರಣೆಗೆ ಪ್ರುತ್ನಿಸುತ್ತಿದ್ದಾರೋ ಅವರಿಗೆ ಸತುವಿನಂಶವಿರುವ ಆಹಾರ ತಿನ್ನಲು ಸಲಹೆ ನೀಡಲಾಗುವುದು. ಇದು ಕಣಗಳ ವಿಭಜನೆಗೆ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು, ಭ್ರೂಣದ ಬೆಳವಣಿಗೆಗೆ ಸಹಕಾರಿ. ಆದ್ದರಿಂದ ಮಗುವಿನ ಅಪೇಕ್ಷೆಯಲ್ಲಿರುವವರು ದಿನದಲ್ಲಿ 8-12ಗ್ರಾಂ ದೇಹಕ್ಕೆ ಸೇರುವಂತೆ ನೋಡಿಕೊಳ್ಳಬೇಕು.

ಧಾನ್ಯಗಳು, ಮೊಳಕೆ ಕಾಳುಗಳು, ಸೋಯಾ ಬೀನ್, ಕಪ್ಪು ಎಳ್ಳು, ವಾಲ್ನಟ್, ಕುಂಬಳಕಾಯಿ ಬೀಜ, ಚಿಕನ್‌ ಇವುಗಳಲ್ಲಿ ಸತುವಿನಂಶ ಅಧಿಕವಿರುತ್ತದೆ.

ಇವುಗಳನ್ನು ದೂರವಿಡಿ

ಇವುಗಳನ್ನು ದೂರವಿಡಿ

* ಮದ್ಯ

* ಧೂಮಪಾನ

ಈ ಕುರಿತು ಗಮನ ಹರಿಸಿ

* ಮೈ ತೂಕ ಹೆಚ್ಚಿದ್ದರೆ ಕಡಿಮೆ ಮಾಡಿ. ಅದಕ್ಕಾಗಿ ವ್ಯಾಯಾಮ ಮಾಡಿ, ಮಾತ್ರೆ ನುಂಗುವುದು ಮತ್ತಿತರ ಶಾರ್ಟ್‌ ಕಟ್‌ ಬೇಡ, ಅವುಗಳಿಂದ ಅಡ್ಡ ಪರಿಣಾಮ ಉಂಟಾಗಬಹುದು. ಆಹಾರಕ್ರಮ ಹಾಗೂ ವ್ಯಾಯಾಮದಿಂದ ಮೈ ತೂಕ ಕಡಿಮೆ ಮಾಡಿ.

* ದೇಹಕ್ಕೆ ವಿಶ್ರಾಂತಿ ನೀಡಿ

ತುಂಬಾ ಮಾನಸಿಕ ಒತ್ತಡ ಇರಬಾರದು. ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾದರೆ ಗರ್ಭಧಾರಣೆ ಕಷ್ಟವಾಗುವುದು. ಮನಸ್ಸು ಶಾಂತವಾಗಿರಲಿ, ಅಗ್ಯತವಿದ್ದರೆ ದೇಹಕ್ಕೂ ವಿಶ್ರಾಂತಿ ನೀಡಿ.

* ಕಾರ್ಬ್ಸ್ ಹಾಗೂ ಟ್ರಾನ್ಸ್‌ಫ್ಯಾಟ್ ಆಹಾರ ಕಡಿಮೆ ಸೇವಿಸಿ.

FAQ's
  • ಗರ್ಭಧಾರಣೆಗೆ ಪ್ರಯತ್ನಿಸುವವರು ಫಾಲಿಕ್ ಆಮ್ಲ ಸಪ್ಲಿಮೆಂಟ್‌ ತೆಗೆದರೆ ಒಳ್ಳೆಯದು, ಏಕೆ?

    ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಫಾಲಿಕ್ ಆಮ್ಲ ಸಪ್ಲಿಮೆಂಟ್‌ ತೆಗೆದುಕೊಂಡರೆ ಒಳ್ಳೆಯದು. ಗರ್ಭಾವಸ್ಥೆಯಲ್ಲೂ ಫಾಲಿಕ್‌ ಆಮ್ಲ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು.

  • ಯಾವಾಗನಿಂದ ವಿಟಮಿನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳಬೇಕು?

    ನೀವು ಗರ್ಭಧಾರಣೆಗೆ ಪ್ರಯತ್ನಿಸುವ ಒಂದು ತಿಂಗಳ ಮುಂಚಿತವಾಗಿಯೇ ವೈದ್ಯರನ್ನು ಭೇಟಿಯಾಗಿ ಅವರು ನಿಮಗೆ ಯಾವೆಲ್ಲಾ ವಿಟಮಿನ್ಸ್‌ ಸಪ್ಲಿಮೆಂಟ್‌ ತೆಗೆಯಬೇಕೆಂದು ಸೂಚಿಸುತ್ತಾರೆ, ಅದನ್ನು ತೆಗೆಯಬಹುದು.

  • ವಿಟಮಿನ್‌ ಸಪ್ಲಿಮೆಂಟ್‌ನಿಂದ ಅಡ್ಡ ಪರಿಣಾಮವಿದೆಯೇ?

    ಗರ್ಭಧಾರಣೆಯ ಮುಂಚಿತವಾಗಿ ತೆಗೆದುಕೊಳ್ಳುವ ವಿಟಮಿನ್‌ ಸಪ್ಲಿಮೆಂಟ್‌ನಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ, ಈ ವಿಟಮಿನ್‌ ಸಪ್ಲಿಮೆಂಟ್‌ಗಳು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ವೈದ್ಯರ ಬಳಿ ನಿಮ್ಮಲ್ಲಿರುವ ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹರಿಸಿ.

English summary

Nutrients to Boost Fertility When Trying to Conceive in Kannada

Nutrients to Boost Fertility When Trying to Conceive in Kannada,Read on...
X
Desktop Bottom Promotion