For Quick Alerts
ALLOW NOTIFICATIONS  
For Daily Alerts

ಸಹಜ ಹೆರಿಗೆಯ ಲಕ್ಷಣಗಳು ಹಾಗೂ ಸಹಜ ಹೆರಿಗೆಯಾಗಲು ಏನು ಮಾಡಬೇಕು?

|

ಇಂದು ಸಹಜ ಹೆರಿಗೆ ಎನ್ನುವುದು ಅಪರೂಪ ಎನ್ನುವಂತಾಗಿದೆ. ಹಿಂದೆಲ್ಲಾ ಸಹಜ ಹೆರಿಗೆಯಾಗುತ್ತಲೇ ಇರಲಿಲ್ಲವೇ? ಇಂದು ಕೇಳಿ ಬರುವಷ್ಟರ ಮಟ್ಟಿಗೆ ತೊಂದರೆಗಳು ಇರುತ್ತಿದ್ದವೇ? ಒಂದು ಅಧ್ಯಯನದ ಪ್ರಕಾರ 85% ರಷ್ಟು ಗರ್ಭವತಿಯರು ಸಹಜ ಹೆರಿಗೆಯಾಗುವ ಸಾಧ್ಯತೆ ಹೊಂದಿರುತ್ತಾರೆ. ಉಳಿದ ಹದಿನೈದು ಶೇಖಡಾ ಗರ್ಭವತಿಯರಿಗೆ ಮಾತ್ರವೇ ಸಿಸರೇನಿಯನ್ ಅಥವಾ ಸಿ ಸೆಕ್ಷನ್ ಹೆರಿಗೆಯಾಗುವ ಅಗತ್ಯ ಬೀಳಬಹುದು.

ಆದರೆ, ಅಂಕಿ ಅಂಶಗಳ ಪ್ರಕಾರ ಇಂದು ಮೂವರಲ್ಲೊಬ್ಬರಿಗೆ ಅಂದರೆ ಶೇ ಮೂವತ್ತಕ್ಕೂ ಹೆಚ್ಚಿನ ಗರ್ಭವತಿಯರು ಹೆರಿಗೆಯ ನೋವು ಮತ್ತು ಆತಂಕದಿಂದ ಪಾರಾಗಲು ಸಿ ಸೆಕ್ಷನ್ ಹೆರಿಗೆಗೆ ಒಳಗಾಗುತ್ತಿದ್ದಾರೆ. ಆದರೆ ಈ ಕ್ರಿಯೆ ಹೇಳಿದಷ್ಟು ಸುಲಭವೇನೂ ಅಲ್ಲ. ಹೆರಿಗೆಯ ಸಮಯದ ಸಹಿತ ಹೆರಿಗಯ ಬಳಿಕವೂ ಕೆಲವಾರು ತೊಂದರೆಗಳು ಎದುರಾಗುತ್ತವೆ ಹಾಗೂ ವೈದ್ಯರಿಗೂ ಸಮಸ್ಯೆಯನ್ನು ಕ್ಲಿಷ್ಟವಾಗಿಸುತ್ತವೆ. ಸಿಸರೇನಿಯನ್ ಹೆರಿಗೆಯಿಂದ ಚೇತರಿಸಿಕೊಳ್ಳಲು ಸಹಜ ಹೆರಿಗೆಗಿಂತಲೂ ಬಹಳವೇ ಹೆಚ್ಚಿನ ಸಮಯ ಬೇಕಾಗುತ್ತದೆ.

normal delivery symptoms

ಇಂದಿನ ಲೇಖನದಲ್ಲಿ ಸಹಜ ಹೆರಿಗೆಯ ಪ್ರಯೋಜನಗಳು, ಈ ಬಗೆಯ ಹೆರಿಗೆಯಾಗುವ ಸಾಧ್ಯತೆ ಹೆಚ್ಚಿಸುವುದು ಮತ್ತು ಒಟ್ಟಾರೆ ಪ್ರಕ್ರಿಯೆ ಆದಷ್ಟೂ ಸುಲಭವಾಗಿಸುವಂತೆ ಮಾಡಲು ನೆರವಾಗುವ ಸಲಹೆಗಳನ್ನು ಒದಗಿಸಲಾಗಿದೆ.
ಸಾಮಾನ್ಯ ಹೆರಿಗೆ ಎಂದರೇನು?

ಸಾಮಾನ್ಯ ಹೆರಿಗೆ ಎಂದರೇನು?

ಸಾಮಾನ್ಯ ಹೆರಿಗೆ ಎಂದರೆ ಮಗುವನ್ನು ಈ ಜಗತ್ತಿಗೆ ತರುವ ನೈಸರ್ಗಿಕ ವಿಧಾನವಾಗಿದೆ. ನೀವು ಕೆಲವು ಅನಾರೋಗ್ಯದ ಪರಿಸ್ಥಿತಿಗಳನ್ನು ಹೊಂದಿಲ್ಲದಿದ್ದರೆ ನೈಸರ್ಗಿಕ ಮತ್ತು ಸಾಮಾನ್ಯ ಹೆರಿಗೆಯನ್ನು ಪಡೆಯುವುದು ಕಷ್ಟವೇನಲ್ಲ. ಇದಲ್ಲದೆ, ನೈಸರ್ಗಿಕ ಜನನ ಪ್ರಕ್ರಿಯೆಯು ಆರೋಗ್ಯಕರ ಮಗುವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಬಾಣಂತಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾಳೆ. ಸಾಮಾನ್ಯ ಹೆರಿಗೆಯನ್ನು ಪಡೆಯಲು ಯಾವುದೇ ಸೂತ್ರ ಅಥವಾ ಕಿರುಮಾರ್ಗ ಇಲ್ಲವಾದರೂ, ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಮತ್ತು ನೈಸರ್ಗಿಕ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ಸಾಮಾನ್ಯ ಹೆರಿಗೆಯಸಾಧ್ಯತೆಗಳನ್ನು ಯಾವ ಅಂಶಗಳು ಹೆಚ್ಚಿಸುತ್ತವೆ?

ಸಾಮಾನ್ಯ ಹೆರಿಗೆಯಸಾಧ್ಯತೆಗಳನ್ನು ಯಾವ ಅಂಶಗಳು ಹೆಚ್ಚಿಸುತ್ತವೆ?

ಕೆಲವಾರು ಅಂಶಗಳ ಮೇಲೆ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆ ಅವಲಂಬಿತವಾಗಿರುತ್ತದೆ. ಆದರೆ 100% ಹೀಗೇ ಆಗಬೇಕೆಂದಿಲ್ಲ. ಆದರೆ ಅಂಕಿ ಅಂಶಗಳ ಮತ್ತು ಪ್ರಸೂತಿತಜ್ಞರ ಅನುಭವದ ಪ್ರಕಾರ ಈ ಕೆಳಗಿನ ಅಂಶಗಳು ಸಾಮಾನ್ಯ ಹೆರಿಗೆಗೆ ಪೂರಕವಾಗಿವೆ:

  • ನಿಮ್ಮ ಹಿಂದಿನ ಹೆರಿಗೆಗಳು ಸಾಮಾನ್ಯ ಹೆರಿಗೆಯಾಗಿದ್ದರೆ
  • ನಿಮಗೆ ಬೇರಾವುದೋ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ, ಉದಾಹರಣೆಗೆ ಅಸ್ತಮಾ, ಇವು ಹೆರಿಗೆಯ ಸಮಯದಲ್ಲಿ ಉಲ್ಬಣಿಸಬಹುದು.
  • ನಿಮ್ಮ ದೇಹದ ತೂಕ ಸಹಜವಾಗಿದ್ದರೆ, ಅಂದರೆ ಸಾಮಾನ್ಯಕ್ಕಿಂತಲೂ ಹೆಚ್ಚು ಅಥವಾ ಕಡಿಮೆ ಇರದೇ ಇದ್ದರೆ. ವಿಶೇಷವಾಗಿ ಸ್ಥೂಲದೇಹದ ಮಹಿಳೆಯರಿಗೆ ಜನಿಸುವ ಮಕ್ಕಳ ಗಾತ್ರವೂ ಕೊಂಚ ಹೆಚ್ಚೇ ಇದ್ದು ಹೆರಿಗೆಯನ್ನು ಕಷ್ಟಕರವಾಗಿಸುತ್ತವೆ.
  • ನಿಮ್ಮ ಗರ್ಭಾವಸ್ಥೆ ಯಾವುದೇ ಹೆಚ್ಚಿನ ತೊಂದರೆ ಇಲ್ಲದೇ ಸುಗಮವಾಗಿ ಮುಂದುವರೆಯುತ್ತಿದ್ದರೆ.
  • ಗರ್ಭಾವಸ್ಥೆಯಲ್ಲಿ ನೀವು ದೈಹಿಕವಾಗಿ ಚಟುವಟಿಕೆಯಿಂದಿದ್ದು ಉತ್ತಮ ಆರೋಗ್ಯ ಹೊಂದಿದ್ದರೆ. ಹೆಚ್ಚು ಚಟುವಟಿಕೆ ಇದ್ದಷ್ಟೂ ಸಹಜ ಹೆರಿಗೆಯಾಗುವ ಸಾಧ್ಯತೆ ಹೆಚ್ಚು.
  • ನಿಮ್ಮ ಆರೋಗ್ಯದ ಸ್ಥಿತಿಗಳು, ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಮಟ್ಟ, ಹೀಮೋಗ್ಲೋಬಿನ್ ಎಲ್ಲವೂ ನಿಯಂತ್ರಣದಲ್ಲಿದ್ದರೆ.
  • ಮೇಲೆ ವಿವರಿಸಿದ ಎಲ್ಲವೂ ಒಂದು ಸಾಮಾನ್ಯ ಪರಿಗಣನೆಯೇ ಹೊರತು ಇವೆಲ್ಲಾ ಇದ್ದರೂ ಸಹಜ ಹೆರಿಗೆಯೇ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇವೆಲ್ಲವೂ ಸಹಜ ಹೆರಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

    ನಿಮಗಾಗಿ ಸಾಮಾನ್ಯ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುವ ಕೆಲವು ಸಲಹೆಗಳನ್ನು ಸಹ ನೀವು ಅನುಸರಿಸಬಹುದು.

    ಸಾಮಾನ್ಯ ಹೆರಿಗೆಗೆ ತಜ್ಞರು ನೀಡುವ ಸಲಹೆಗಳು:

    ಸಾಮಾನ್ಯ ಹೆರಿಗೆಗೆ ತಜ್ಞರು ನೀಡುವ ಸಲಹೆಗಳು:

    ಮಗುವಿಗೆ ಜನ್ಮ ನೀಡಲು ಸಾಮಾನ್ಯ ಹೆರಿಗೆ ಉತ್ತಮ ಮಾರ್ಗವಾಗಿದೆ. ಮತ್ತು ನಿಮಗೆ ಸಹಜ ಹೆರಿಗೆಯಾಗಬೇಕೆಂದು ಅನ್ನಿಸಿದರೆ, ಉತ್ತಮ ಫಲಿತಾಂಶಕ್ಕಾಗಿ ನೀವು ಈ ಸಲಹೆಗಳನ್ನು ಅನುಸರಿಸಬಹುದು

    1. ಮಾನಸಿಕ ಒತ್ತಡಕ್ಕೆ ಒಳಗಾಗದಿರಿ.

    1. ಮಾನಸಿಕ ಒತ್ತಡಕ್ಕೆ ಒಳಗಾಗದಿರಿ.

    ಗರ್ಭಾವಸ್ಥೆಯಲ್ಲಿ ಮಾನಸಿಕ ಒತ್ತಡ ಸಾಮಾನ್ಯವಾಗಿದೆ. ಒತ್ತಡ, ಆತಂಕ ಮತ್ತು ಯಾದೃಚಿಕ ಆಲೋಚನೆಗಳನ್ನು ತಪ್ಪಿಸುವುದು ಒಳ್ಳೆಯದು, ಏಕೆಂದರೆ ನಕಾರಾತ್ಮಕ ಭಾವನೆಗಳು ಹೆರಿಗೆಯ ಪ್ರಕ್ರಿಯೆಯನ್ನು ದುಃಸ್ವಪ್ನವನ್ನಾಗಿ ಮಾಡಬಹುದು.

    ನಿಮಗೆ ನೆಮ್ಮದಿ ನೀಡಲು ಸಹಾಯ ಮಾಡುವ ಯಾವುದೇ ರೀತಿಯ ಧ್ಯಾನವನ್ನು ಪ್ರಯತ್ನಿಸಿ.

    ಪುಸ್ತಕಗಳನ್ನು ಓದಿ, ಸಂಗೀತವನ್ನು ಆಲಿಸಿ ಮತ್ತು ದೃಶ್ಯೀಕರಣ ತಂತ್ರಗಳಲ್ಲಿ ತೊಡಗಿಸಿಕೊಳ್ಳಿ.

    ಒಳ್ಳೆಯ ಮತ್ತು ಸ್ನೇಹಪರ ಜನರ ಸಹವಾಸದಲ್ಲಿ ಕಾಲ ಕಳೆಯಿರಿ.

    ನಿಮಗೆ ಅನಾನುಕೂಲ ಅಥವಾ ನಕಾರಾತ್ಮಕ ಭಾವನೆ ಮೂಡಿಸುವ ಜನರು ಮತ್ತು ಸನ್ನಿವೇಶಗಳಿಂದ ದೂರವಿರಿ.

    2. ಧನಾತ್ಮಕ ಚಿಂತನೆ ಹೆಚ್ಚಿಸಿ ಮತು ನಕಾರಾತ್ಮಕ ಹೆರಿಗೆಯ ಕಥೆಗಳಿಂದ ದೂರವಿರಿ.

    2. ಧನಾತ್ಮಕ ಚಿಂತನೆ ಹೆಚ್ಚಿಸಿ ಮತು ನಕಾರಾತ್ಮಕ ಹೆರಿಗೆಯ ಕಥೆಗಳಿಂದ ದೂರವಿರಿ.

    ಪ್ರತಿ ಗರ್ಭವತಿಗೂ ಹಲವಾರು ವ್ಯಕ್ತಿಗಳು ಸುಲಭ ಮತ್ತು ಕಷ್ಟಕರವಾದ ಹೆರಿಗೆಯ ಕಥೆಗಳನ್ನು ಹೇಳಿಯೇ ಹೇಳುತ್ತಾರೆ. ಕಷ್ಟಕರ ಹೆರಿಗೆಯ ಕಥೆಗಳು ನಿಮ್ಮಲ್ಲಿ ನಕಾರಾತ್ಮಕ ಭಾವನೆ ಮತ್ತು ಹೆಚ್ಚು ಆತಂಕವನ್ನುಂಟು ಮಾಡುತ್ತದೆ. ಇದರಿಂದ ಏನೂ ಇಲ್ಲದೆಯೂ ನಿಮ್ಮ ಸ್ಥೈರ್ಯ ಉಡುಗುತ್ತದೆ ಮತ್ತು ಸಹಜ ಹೆರಿಗೆಯ ಮೇಲೆ ಪ್ರಭಾವ ಬೀರಬಹುದು.

    ಜೊತೆಗಿರುವ ಬಾಣಂತಿ ಅಥವಾ ಇತರ ಮಹಿಳೆ ಕೇವಲ ಕಷ್ಟವನ್ನೇ ಹೇಳಿಕೊಳ್ಳುತ್ತಿದ್ದರೆ ಆಕೆಯಿಂದ ದೂರವಾಗಿ.

    ಬಾಣಂತನ ಮುಗಿಯುವವರೆಗೂ ಗಾಸಿಪ್ ಅಥವಾ ಗಾಳಿಸುದ್ದಿಗಳಿಗೆ ಮನಸ್ಸನ್ನು ತೆರೆಯದಿರಿ.

    ಪ್ರತಿ ತಾಯಿಯ ಹೆರಿಗೆಯ ಅನುಭವವೂ ಬೇರೆಯೇ ಇರುತ್ತದೆ. ಯಾರೊಬ್ಬರಿಗೆ ಕಷ್ಟ ಆಗಿದ್ದು ನಿಮಗೂ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ನೀವು ಕೇಳುವ ಯಾವುದೇ ಕಥೆಯನ್ನು ನಿಮಗೆ ಅನ್ವಯಿಸದಿರಿ.

    3. ಹೆರಿಗೆಯ ಬಗ್ಗೆ ಸಾಕಷ್ಟು ಮಾಹಿತಿ ಪಡೆಯಿರಿ

    3. ಹೆರಿಗೆಯ ಬಗ್ಗೆ ಸಾಕಷ್ಟು ಮಾಹಿತಿ ಪಡೆಯಿರಿ

    ಜ್ಞಾನವೇ ಶಕ್ತಿ. ಹೆರಿಗೆ ಮತ್ತು ಬಾಣಂತದ ಅವಧಿಯ ಬಗ್ಗೆ ಸಾಧ್ಯವಾದಷ್ಟು ಜ್ಞಾನವನ್ನು ಪಡೆದುಕೊಳ್ಳಿ.

    ಗರ್ಭಧಾರಣೆ ಮತ್ತು ಹೆರಿಗೆಯ ಬಗ್ಗೆ ನಿಮಗಿರುವ ಎಲ್ಲಾ ಅನುಮಾನಗಳನ್ನು ನಿಮ್ಮ ವೈದ್ಯರಿಂದ ಕೇಳಿ ಪರಿಹರಿಸಿಕೊಳ್ಳಿ. ಸಾಮಾನ್ಯವಾಗಿ ಕೇಳಬೇಕೆಂದಿರುವುದನ್ನು ವೈದ್ಯರು ಬಂದಾಗ ಕೇಳಲು ಹೆಚ್ಚಿನವರು ಮರೆಯುತ್ತಾರೆ. ಹಾಗಾಗಿ, ಯಾವುದೇ ಪ್ರಶ್ನೆ ಮನದಲ್ಲಿ ಮೂಡಿದ ತಕ್ಷಣ ಪುಸ್ತಕದಲ್ಲಿ ಬರೆದಿಡಿ ಹಾಗೂ ವೈದ್ಯರು ಬಂದಾಗ ಕೇಳಿ ಅವರು ಹೇಳುವ ವಿವರಣೆಗಳ ಮುಖ್ಯಾಂಶಗಳನ್ನೂ ಉತ್ತರದ ರೂಪದಲ್ಲಿ ಬರೆಯಿರಿ. ಈ ಮಾಹಿತಿ ನಿಮಗೆ ಅತ್ಯಮೂಲ್ಯವಾಗಿ ಪರಿಣಮಿಸುವುದು ಖಚಿತ.

    ಹೆರಿಗೆಯ ಬಗ್ಗೆ ತಜ್ಞರು ಬರೆದಿರುವ ಪುಸ್ತಕಗಳನ್ನು ಓದಿ.

    ನಿಮ್ಮ ತಾಯಿ ಅಥವಾ ಕುಟುಂಬದ ಇತರ ವಯಸ್ಸಾದ ಮಹಿಳೆಯರಲ್ಲಿ ವಿಚಾರ ವಿಮರ್ಶಿಸಿ, ಅವರ ಅನುಭವಗಳು ನಿಮಗೆ ಸಹಾಯ ಮಾಡಬಹುದು.

    ನೈಸರ್ಗಿಕ ನಿರ್ವಹಣಾ ತಂತ್ರಗಳಾದ ವಿಶ್ರಾಂತಿ, ಉಸಿರಾಟ ಮತ್ತು ಮನಸ್ಸಿನ ನಿಯಂತ್ರಣ ತಂತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.

    ಪ್ರಸವಪೂರ್ವ ತರಗತಿಗಳಿಗೆ ದಾಖಲಾಗಿ ಸೂಚನೆಗಳನ್ನು ಅನುಸರಿಸಿ.

    ಆದಾಗ್ಯೂ, ಅತಿಯಾಗಿ ಭಾವಿಸಬೇಡಿ. ಕೆಲವೊಮ್ಮೆ, ಹೆಚ್ಚಿನ ಮಾಹಿತಿಯೂ ಸಹ ಮಾಡಬಹುದು

    ಆದರೆ ಇವುಗಳಲ್ಲಿ ಯಾವುದನ್ನೂ ನಿಮ್ಮ ಸಾಮರ್ಥ್ಯಕ್ಕೆ ಮತ್ತು ಅಗತ್ಯಕ್ಕೆ ಮೀರಿ ಮಾಡದಿರಿ. ಅತಿ ಹೆಚ್ಚು ಮಾಹಿತಿ ಇದ್ದರೂ ಇದು ಬೇರೆಯೇ ತೊಂದರೆ ಉಂಟು ಮಾಡಬಹುದು. ಕಾಲ ಕಾಲಕ್ಕೆ ನಿಮಗೆ ಚಿಕಿತ್ಸೆ ನೀಡುತ್ತಿರುವ ತಜ್ಞರು ಸರಿಯಾದ ಮಾಹಿತಿ ಮತ್ತು ಆರೈಕೆಯನ್ನು ಒದಗಿಸುತ್ತಾರೆ. ಹಾಗಾಗಿ ಚಿಂತಿಸದಿರಿ.

    4. ಭಾವನಾತ್ಮಕ ಬೆಂಬಲವನ್ನು ಗಳಿಸಿ.

    4. ಭಾವನಾತ್ಮಕ ಬೆಂಬಲವನ್ನು ಗಳಿಸಿ.

    ಈ ಜಗತ್ತಿನಲ್ಲಿ ಭಾವನಾತ್ಮಕ ಬೆಂಬಲದಷ್ಟು ಪ್ರಬಲವಾದ ಶಕ್ತಿ ಇನ್ನೊಂದಿಲ್ಲ. ಸಂಗಾತಿಯ 'ನಾನಿದ್ದೇನೆ, ನಿನಗೇನೂ ಆಗುವುದಿಲ್ಲ' ಎಂಬ ಒಂದೇ ಮಾತು ನಿಮ್ಮಲ್ಲಿ ಅಪಾರ ಆತ್ಮವಿಶ್ವಾಸವನ್ನು ತುಂಬುತ್ತದೆ. ತಾಯಿ, ಆಪ್ತರ ಸಾಂಗತ್ಯವನ್ನು ಪಡೆಯುತ್ತಿರಿ ಮತ್ತು ಇವರ ಧನಾತ್ಮಕ ಮಾತುಗಳಿಂದ ನಿಮ್ಮಲ್ಲಿ ಹೆಚ್ಚುವ ಆತ್ಮವಿಶ್ವಾದ ನಿಮ್ಮ ಭಯವನ್ನು ನಿವಾರಿಸಿ ಸಹಜೆ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

    ಹೆರಿಗೆಯ ವಿಷಯದಲ್ಲಿ ನೀವು ಮತ್ತು ನಿಮ್ಮ ಸಂಗಾತಿ ಸರಿಯಾದ ಮಾಹಿತಿ ಪಡೆದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

    ನಿಮ್ಮ ಕುಟುಂಬವು ನಿಮ್ಮ ಜೊತೆಗೇ ಇರುತ್ತಾರೆ, ಆದರೆ ಗರ್ಭಧಾರಣೆಯ ಬಗ್ಗೆ ನೀವು ಯಾವುದೇ ವಿಭಿನ್ನ ಅಭಿಪ್ರಾಯಗಳನ್ನು ಅಥವಾ ಆಲೋಚನೆಗಳನ್ನು ಹೊಂದಿದ್ದರೆ, ಅವುಗಳನ್ನು ಅವರೊಂದಿಗೆ ಹಂಚಿಕೊಳ್ಳಿ ಮತ್ತು ಒಮ್ಮತಕ್ಕೆ ಬನ್ನಿ.

    ಭಾವನಾತ್ಮಕ ಬೆಂಬಲದ ವ್ಯವಸ್ಥೆಯನ್ನು ಹೊಂದಿರುವುದು ಒತ್ತಡವನ್ನು ದೂರ ಮಾಡಲು ಸಹಾಯ ಮಾಡುತ್ತದೆ.

    5. ನಿಮ್ಮ ವೈದ್ಯರನ್ನು ಸೂಕ್ತವಾಗಿ ಆರಿಸಿ:

    5. ನಿಮ್ಮ ವೈದ್ಯರನ್ನು ಸೂಕ್ತವಾಗಿ ಆರಿಸಿ:

    ಅನೇಕ ವೈದ್ಯರು ಕೇವಲ ತಮ್ಮ ಅನುಕೂಲವನ್ನೇ ನೋಡುತ್ತಾರೆ ಮತ್ತು ಅಗತ್ಯವಿಲ್ಲದಿದ್ದರೂ ಸಿಸರೇನಿಯನ್ ಹೆರಿಗೆ ಮಾಡಿಸಲು ತಾಯಂದಿರಿಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬುದು ವಿಷಾದಕರ ಸಂಗತಿ. ಆದ್ದರಿಂದ, ನಿಮ್ಮ ಗರ್ಭಧಾರಣೆಯನ್ನು ಸೂಕ್ತವಾಗಿ ನಿರ್ವಹಿಸುವ ಮತ್ತು ನೀವು ನಂಬುವ ವೈದ್ಯರನ್ನು ಆಯ್ಕೆ ಮಾಡುವುದು ಮುಖ್ಯ.

    ನಿಮ್ಮ ವೈದ್ಯರು ಮತ್ತು ಆಸ್ಪತ್ರೆ ಸಾಮಾನ್ಯ ಹೆರಿಗೆಯ ಬಗ್ಗೆ ಸೂಕ್ತ ದರವನ್ನು ವಿಧಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.

    ಸಾಮಾನ್ಯ ಹೆರಿಗೆಯ ಬಗ್ಗೆ ನಿಮ್ಮ ವೈದ್ಯರ ಅಭಿಪ್ರಾಯಗಳ ಬಗ್ಗೆ ಮಾತನಾಡಿ.

    ಸಾಮಾನ್ಯ ಹೆರಿಗೆಯ ಬಯಕೆಯನ್ನು ನಿಮ್ಮ ವೈದ್ಯರು ಪರಿಗಣಿಸುತ್ತಿಲ್ಲ ಎಂದು ನಿಮಗೆ ಕೊಂಚವೂ ಅನುಮಾನ ಬಂದರೆ, ಇನ್ನೊಬ್ಬ ವೈದ್ಯರನ್ನು ಕಾಣುವುದು ಅವಶ್ಯ.

    6. ಅನುಭವಿ ಸೂಲಗಿತ್ತಿಯ ಸಹಾಯ ಪಡೆಯಿರಿ.

    6. ಅನುಭವಿ ಸೂಲಗಿತ್ತಿಯ ಸಹಾಯ ಪಡೆಯಿರಿ.

    ನಿಮ್ಮ ಹೆರಿಗೆಗೆ ಸಹಾಯ ಮಾಡಲು ಅನುಭವಿ ಸೂಲಗಿತ್ತಿಯನ್ನು ನೀವು ಕಂಡುಕೊಂಡರೆ, ನೀವು ಅರ್ಧ ಯುದ್ಧವನ್ನು ಗೆದ್ದಂತೆ.

    ಅನುಭವಿ ಸೂಲಗಿತ್ತಿ ಹೆರಿಗೆ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಸೂಕ್ತ ನೆರವು ನೀಡುತ್ತಾರೆ.

    ಹೆರಿಗೆಯ ಸಮಯದಲ್ಲಿ ಮನಃಸ್ಥಿತಿ ಕಾಯ್ದುಕೊಳ್ಳಲು ಮತ್ತು ವಾಸ್ತವಗಳ ಬಗ್ಗೆ ವಿವರಿಸುತ್ತಾ ನಿಮಗೆ ಧೈರ್ಯ ನೀಡಲು ಆಕೆ ನೆರವಾಗುತ್ತಾಳೆ.

    ಹೆರಿಗೆಯ ಬಳಿಕ ಮಗುವಿಗೆ ಹಾಲೂಡಿಸಲೂ ಆಕೆ ನಿಮಗೆ ನೆರವಾಗುವಳು.

    7. ನಿಯಮಿತವಾದ ಪೆರಿನಿಯಂ ಮಸಾಜ್ ನಿಂದ ನಿಮ್ಮ ದೇಹವು ಸಹಜ ಹೆರಿಗೆಗೆ ಸಿದ್ಧವಾಗಲು ನೆರವಾಗುತ್ತದೆ.

    7. ನಿಯಮಿತವಾದ ಪೆರಿನಿಯಂ ಮಸಾಜ್ ನಿಂದ ನಿಮ್ಮ ದೇಹವು ಸಹಜ ಹೆರಿಗೆಗೆ ಸಿದ್ಧವಾಗಲು ನೆರವಾಗುತ್ತದೆ.

    ನಿಮಗೆ ಏಳನೇ ತಿಂಗಳು ಪ್ರಾರಂಭವಾದ ಬಳಿಕ ನಂತರ ನೀವು ಸ್ವತಃ ಈ ಮಸಾಜ್ ಪಡೆಯಬಹುದು.

    ಇದು ನಿಮಗೆ ಹೆರಿಗೆಯ ನೋವನ್ನು ಎದುರಿಸಲು ಮತ್ತು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

    ಪೆರಿನಿಯಂಗೆ ಮಸಾಜ್ ಮಾಡಲು, ನಿಮ್ಮ ಎರಡೂ ಹೆಬ್ಬೆರಳುಗಳನ್ನು ಜನನಾಂಗದ ಒಳಗೆ ತೂರಿಸಿ ಕೊಂಚ ಮಡಚಿ ಒಳಭಾಗಕ್ಕೆ ಒತ್ತಡ ಬೀಳುವಂತೆ ಮಸಾಜ್ ಮಾಡಬೇಕು. ಬೆರಳುಗಳನ್ನು ತಿರುಗಿಸಿ ಎಲ್ಲಾ ಕೋನಗಳಿಂದ ಹೊರಗೆಳೆಯುವಂತೆ ಅಥವಾ ಯೋನಿಯ ವಿಸ್ತಾರವನ್ನು ಹಿಗ್ಗಿಸುವಂತೆ ಸೆಳೆಯುವ ಮಸಾಜ್ ಮಾಡಬೇಕು. ಈ ವ್ಯಾಯಾಮದ ಮೂಲಕ ಹೆರಿಗೆಯ ಸಮಯದಲ್ಲಿ ಮಗುವಿನ ತಲೆ ಹೊರಬರಲು ಈ ಹಿಗ್ಗುವಿಕೆ ನೆರವಾಗುತ್ತದೆ. ಇದನ್ನು ನಿರ್ವಹಿಸಲು ನಿಮಗೆ ಸರಿಯಾಗಿ ಅರ್ಥವಾಗದಿದ್ದರೆ ನಿಮ್ಮ ವೈದ್ಯರು ತಿಳಿಸಿಕೊಡುತ್ತಾರೆ.

    8. ಸಾಕಷ್ಟು ಆರ್ದ್ರತೆಯನ್ನು ಹೊಂದಿರಿ.

    8. ಸಾಕಷ್ಟು ಆರ್ದ್ರತೆಯನ್ನು ಹೊಂದಿರಿ.

    ಇತರ ಸಮಯಕ್ಕಿಂತಲೂ ಈ ಸಮಯದಲ್ಲಿ ನಿಮಗೆ ಹೆಚ್ಚಿನ ನೀರಿನಾಂಶದ ಅಗತ್ಯವಿದೆ. ಹೆರಿಗೆಗೆ ಅತಿ ಹೆಚ್ಚಿನ ರಕ್ತ ಮತ್ತು ನೀರಿನಂಶದ ಅಗತ್ಯವಿದೆ. (ಆದರೆ ಹೆರಿಗೆಯ ಸಮಯದಲ್ಲಿ ಅಲ್ಲ) ನೀರು ಕುಡಿಯುತ್ತಿರುವ ಮೂಲಕ ನಿಮ್ಮ ದೇಹಕ್ಕೆ ಸಾಕಷ್ಟು ತ್ರಾಣ ಮತ್ತು ಶಕ್ತಿ ದೊರಕುತ್ತದೆ. ನೀರಿನಂಶ ಉತ್ತಮವಾಗಿದ್ದರೆ ನಿಮಗೆ ವೈದ್ಯರು ನೀಡಬೇಕಾದ ದ್ರವ ಔಷಧಿಗಳ ಅಗತ್ಯತೆಯೂ ಇಲ್ಲವಾಗುತ್ತದೆ.

    ನಿಮ್ಮ ನಿತ್ಯದ ನೀರಿನ ಅಗತ್ಯತೆಯನ್ನು ತಣ್ಣೀರಿನಿಂದಲೇ ಪೂರೈಸಿಕೊಳ್ಳಬಹುದಾದರೂ ಇದರ ಜೊತೆಗೇ ಕೊಂಚ ಪ್ರಮಾಣದಲ್ಲಿ ತಾಜಾ ಹಣ್ಣುಗಳ ರಸ ಅಥವಾ ಆರೋಗ್ಯಕರ ಮತ್ತು ವೈದ್ಯರು ಅನುಮತಿಸುವ ಎನರ್ಜಿ ಡ್ರಿಂಕ್ ಗಳನ್ನು ಸೇವಿಸಬಹುದು. ಸಹಜ ಹೆರಿಗೆಗೆ ಇದೊಂದು ಮುಖ್ಯ ಅವಶ್ಯಕತೆಯಾಗಿದೆ.

    9. ನೀರನ್ನು ಹೆಚ್ಚಾಗಿ ಬಳಸಿ.

    9. ನೀರನ್ನು ಹೆಚ್ಚಾಗಿ ಬಳಸಿ.

    ನೀರನ್ನು ಕುಡಿಯುವುದು ಮಾತ್ರವಲ್ಲ, ನೀರಿನ ಇತರ ಬಳಕೆಯಿಂದಲೂ ಸಹಜ ಹೆರಿಗೆಯ ಸಾಧ್ಯತೆ ಹೆಚ್ಚುತ್ತದೆ.

    ಈ ವಿಧಾನದಕ್ಕೆ ಹೈಡ್ರೋಥೆರಪಿ ಎಂದು ಕರೆಯುತ್ತಾರೆ. ಸ್ನಾನದ ತೊಟ್ಟಿಯಲ್ಲಿ ಉಗುರುಬೆಚ್ಚನೆಯ ನೀರು ತುಂಬಿ ಈ ನೀರಿನಲ್ಲಿ ದೇಹವನ್ನು ಕೊಂಚ ಕಾಲ ಮುಳುಸಿಡಿ. ಅಲ್ಲದೇ ನೀರಿನ ಶವರ್ ಸ್ನಾನ, ಈಜುಕೊಳ ಅಥವಾ ಬಿಸಿನೀರು ತುಂಬಿಸಿದ ರಬ್ಬರ್ ಥೈಲಿಯ ಶಾಖವೂ ನೋವು ಇಲ್ಲವಾಗಿಸಲು ಮತ್ತು ನಿರಾಳವಾಗಿಸಲು ನೆರವಾಗುತ್ತದೆ.

    ಆದರೆ ಈ ನೀರು ಉಗುರುಬೆಚ್ಚಗಿರಬೇಕು. ಅತಿ ಬಿಸಿ ಇದ್ದರೆ ನಿಮ್ಮ ಮತ್ತು ಮಗುವಿನ ಆರೋಗ್ಯಕ್ಕೆ ಬಾಧೆಯಾಗುತ್ತದೆ.

    10. ಐಸ್ ಆಟವನ್ನು ಪ್ರಯತ್ನಿಸಿ:

    10. ಐಸ್ ಆಟವನ್ನು ಪ್ರಯತ್ನಿಸಿ:

    ಜನನ ಪ್ರಕ್ರಿಯೆಯನ್ನು ಹೇಗೆ ನಿಭಾಯಿಸುವುದು ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ನಿಮ್ಮ ಪಾಲುದಾರರ ಭಾಗವಹಿಸುವಿಕೆಯ ಅಗತ್ಯವಿರುವ ಐಸ್ ಆಟವನ್ನು ಪ್ರಯತ್ನಿಸಿ.

    ನಿಮ್ಮ ಕೈಯಲ್ಲಿ ಐಸ್ ತುಂಡೊಂದನ್ನು 60 ಸೆಕೆಂಡುಗಳ ಕಾಲ ಹಿಡಿದಿಡಲು ಸರದಿಗಳನ್ನು ವಹಿಸಿಕೊಳ್ಳಿ.

    ಮೊದಲ ಬಾರಿಗೆ, ನೀವು ಪರಸ್ಪರ ಮಾತನಾಡುತ್ತಿದ್ದು ಐಸ್ ತುಂಡನ್ನು ಒಂದು ನಿಮಿಷ ಹಿಡಿದಿಡಲು ಪ್ರಯತ್ನಿಸಿ

    ನಂತರ ನಡೆದಾಡುತ್ತಾ ಐಸ್ ತುಂಡನ್ನು ಅನ್ನು ಹಿಡಿದಿಡಲು ಪ್ರಯತ್ನಿಸಿ.

    ಅಂತಿಮವಾಗಿ, ಐಸ್ ಕ್ಯೂಬ್ ಅನ್ನು 60 ಸೆಕೆಂಡುಗಳ ಕಾಲ ಸಂಪೂರ್ಣ ಮೌನವಾಗಿ ಹಿಡಿದುಕೊಳ್ಳಿ.

    ಐಸ್ ತುಂಡು ಕೈಯಲ್ಲಿದ್ದಷ್ಟೂ ಹೊತ್ತು ನಿಮ್ಮ ನರಗಳು ನೋವಿನ ಅನುಭವವನ್ನು ಮೆದುಳಿಗೆ ನೀಡುತ್ತವೆ. ಯಾವಾಗ ನಿಮ್ಮ ಅಗಮನ ಐಸ್ ಮೇಲೆ ಇರುತ್ತದೆಯೋ ಅಷ್ಟೂ ನಿಮಗೆ ನೋವು ಹೆಚ್ಚುತ್ತದೆ. ನಿಮ್ಮ ಗಮನ ಮಾತಿನ ಮೇಲಿದ್ದಾಗ ನೋವು ಕಡಿಮೆ ಇರುತ್ತದೆ. ಹಾಗಾಗಿ ನೋವು ಇದ್ದಾಗ ನಿಮ್ಮ ಗಮನವನ್ನು ಬೇರೆಡೆ ಹರಿಸಲು ಸಾಧ್ಯವಾದರೆ ಈ ನೋವನ್ನು ಆದಷ್ಟೂ ಕಡಿಮೆಗೊಳಿಸಬಹುದು. ನೀವು ಎಷ್ಟು ಸಮಯ ನೋವು ಸಹಿಸಬಹುದು ಮತ್ತು ಹೆರಿಗೆ ನೋವನ್ನು ಎಷ್ಟರ ಮಟ್ಟಿಗೆ ನಿಭಾಯಿಸಬಹುದು ಎಂಬುದನ್ನು ಅಳೆಯಲು ಇದು ಒಂದು ಉತ್ತಮ ವಿಧಾನವಾಗಿದೆ.

    11. ನಿಮ್ಮ ಭಂಗಿಗಳ ಮೇಲೆ ನಿಗಾ ಇರಿಸಿ:

    11. ನಿಮ್ಮ ಭಂಗಿಗಳ ಮೇಲೆ ನಿಗಾ ಇರಿಸಿ:

    ಮಗು ಸುಗಮವಾಗಿ ಚಲಿಸುವಂತೆ ನಿಮ್ಮ ದೇಹವನ್ನು ಸೂಕ್ತ ಭಂಗಿಗಳಲ್ಲಿಯೇ ಇರಿಸಿ. ದೀರ್ಘಕಾಲದವರೆಗೆ ನಿಲ್ಲುವುದು, ಕುಳಿತುಕೊಳ್ಳುವುದು, ವಿಚಿತ್ರವಾದ ಸ್ಥಾನಗಳಲ್ಲಿ ಮಲಗುವುದು ಮತ್ತು ಎತ್ತರದ ಹಿಮ್ಮಡಿ ಇರುವ ಪಾದರಕ್ಷೆ ಧರಿಸುವುದು ಮತ್ತು ಬಿಗಿಯಾದ ಬೆಲ್ಟ್‌ಗಳನ್ನು ಧರಿಸುವುದರಿಂದ ನಿಮ್ಮ ದೇಹದ ಮೇಲೆ ಅಪಾರವಾದ ಒತ್ತಡಗಳು ಎದುರಾಗುತ್ತವೆ.

    ನಿಮ್ಮ ಬೆನ್ನಿಗೆ ಸರಿಯಾದ ಬೆಂಬಲ ದೊರಕುವಂತೆ ಕುಳಿತುಕೊಳ್ಳಿ. ಗರ್ಭಾವಸ್ಥೆಯಲ್ಲಿ ನಿಮ್ಮ ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಮತ್ತು ನಿಮ್ಮ ದೇಹವನ್ನು ತಪ್ಪಾಗಿ ಇರಿಸುವುದರಿಂದ ನೋವು ಹೆಚ್ಚಾಗುತ್ತದೆ.

    ಮಡಿಚಿದ ಅಥವಾ ವಿಸ್ತರಿಸಿದ ಕಾಲುಗಳೊಂದಿಗೆ ಕುಳಿತುಕೊಳ್ಳಿ, ಅವುಗಳನ್ನು ಹೆಚ್ಚು ಹೊತ್ತು ಕೆಳಕ್ಕಿರಿಸಿ ಕುರ್ಚಿಯಲ್ಲಿ ಕುಳಿತೇ ಇದ್ದರೆ ಊತಕ್ಕೆ ಕಾರಣವಾಗಬಹುದು.

    ಕುಳಿತಿದ್ದಾಗ ಯಾವುದೋ ವಸ್ತುವನ್ನು ಎತ್ತಲು ಥಟ್ಟನೇ ಮುಂದೆ ಬಾಗುವುದು, ಥಟ್ಟನೇ ಏಳುವುದು ಮಾಡದಿರಿ.

    ಮೆಟ್ಟಿಲುಗಳನ್ನು ವೇಗವಾಗಿ ಏರದಿರಿ ಅಥವಾ ಇಳಿಯದಿರಿ. ಅಂದರೆ ಮೆಟ್ಟಿಲು ಏರಬಾರದೆಂದೇ ಅಲ್ಲ, ವಾಸ್ತವವಾಗಿ ನಿಧಾನವಾಗಿ ಹೆಚ್ಚು ಆಯಾಸವಾಗದಂತೆ ಮೆಟ್ಟಿಲು ಏರುವುದು ಮತ್ತು ಇಳಿಯುವುದು ನಿಮಗೆ ಸೂಕ್ತವಾದ ವ್ಯಾಯಾಮವೂ ಹೌದು (ಆದರೆ ಮೊದಲ ತ್ರೈಮಾಸಿಕದಲ್ಲಿ ಇದನ್ನು ಮಾಡಬಾರದು)

    12. ಈಗಿರುವ ತೂಕ ಅತಿ ಹೆಚ್ಚದಂತೆ ಜಾಗ್ರತೆ ವಹಿಸಿ

    12. ಈಗಿರುವ ತೂಕ ಅತಿ ಹೆಚ್ಚದಂತೆ ಜಾಗ್ರತೆ ವಹಿಸಿ

    ಹೌದು, ಗರ್ಭಾವಸ್ಥೆಯಲ್ಲಿ ಯೋಗ್ಯವಾದ ತೂಕವನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ, ಬೆಳೆಯುತ್ತಿರುವ ಮಗುವಿನೊಂದಿಗೆ ಗರ್ಭವತಿಯ ತೂಕ ಏರುವುದು ಸಾಮಾನ್ಯ. ಆದರೆ ಇದು ಅತಿ ಎನಿಸುವಷ್ಟಾಗಬಾರದು. ಅಧಿಕ ತೂಕದ ಮಹಿಳೆಯರು ಹೆರಿಗೆ ಸಮಯದಲ್ಲಿ ಸಮಸ್ಯೆಗಳನ್ನು ಹೊಂದಬಹುದು ಮತ್ತು ಸಿಸರೇನಿಯನ್ ಹೆರಿಗೆಯೇ ಅನಿವಾರ್ಯವಾಗಬಹುದು.

    ಸ್ಥೂಲ ದೇಹದ ಗರ್ಭವತಿಯ ಹೆರಿಗೆ ಸಮಯದಲ್ಲಿ ಮಗುವಿನ ಆರೋಗ್ಯ ಕಾಪಾಡುವುದು ಹೆಚ್ಚು ಹಾಗಾಗಿ ಸಾಮಾನ್ಯ ಹೆರಿಗೆಯ ಸಾಧ್ಯತೆ ಕ್ಷೀಣಿಸುತ್ತದೆ.

    ನಿಮ್ಮ ಹೊಟ್ಟೆ ಅತಿ ಎನಿಸುವಷ್ಟು ದೊಡ್ಡದಾಗಿದ್ದರೆ ನಿಮ್ಮ ಮಗು ದೊಡ್ಡದಾಗಿರಬಹುದು, ಇದರಿಂದ ಮಗು ಹೊರಬರಲು ಕಷ್ಟವಾಗಬಹುದು.

    13. ಚಿರೋಪ್ರಾಕ್ಟಿಕ್ ಚಿಕಿತ್ಸೆಯನ್ನು ಪರಿಗಣಿಸಿ:

    13. ಚಿರೋಪ್ರಾಕ್ಟಿಕ್ ಚಿಕಿತ್ಸೆಯನ್ನು ಪರಿಗಣಿಸಿ:

    ಈ ವಿಧಾನದಲ್ಲಿ ತಜ್ಞರು (chiropractor) ಸೂಕ್ತ ಒತ್ತಡಗಳನ್ನು ಮತ್ತು ಸೆಳೆತಗಳನ್ನು ನೀಡುವ ಮೂಲಕ ನೋವಿನ ಸ್ನಾಯುಗಳು ಮತ್ತು ತಿರುವಿರುವ ನರಗಳನ್ನು ಸರಿಪಡಿಸಲು ನೆರವಾಗುತ್ತಾರೆ. ಈ ವಿಧಾನವನ್ನು ಕೆಲವರು ನಂಬಿದರೆ ಕೆಲವರು ನಂಬುವುದಿಲ್ಲ. ಆದರೆ ನೀವು ಇದನ್ನು ಒಮ್ಮೆ ಪ್ರಯತ್ನಿಸಬಹುದು

    ಉತ್ತಮ ವೈದ್ಯರು ಉದ್ವಿಗ್ನ ಮತ್ತು ನೋವಿನ ಸ್ನಾಯುಗಳಿಂದ ಮತ್ತು ಸೆಟೆದುಕೊಂಡ ನರಗಳಿಂದ ಈ ವಿಧಾನದ ಮೂಲಕ ಪರಿಹಾರವನ್ನು ನೀಡಬಹುದು.

    ಒಂದು ವೇಳೆ ನಿಮಗೆ ಬೆನ್ನು ನೋವಿದ್ದರೆ ಈ ವಿಧಾನದಿಂದ ನೀವು ಹೆಚ್ಚಿನ ನೆರವನ್ನು ಪಡೆಯಬಹುದು ಮತ್ತು ನಿಯಮಿತ ಸೆಳೆತಗಳೊಂದಿಗೆ ನಿಮ್ಮ ತೊಡೆ ಮತ್ತು ಬೆನ್ನನ್ನು ಬಲಪಡಿಸಬಹುದು. ಸಾಮಾನ್ಯ ಹೆರಿಗೆಗೆ ಈ ವ್ಯಾಯಾಮ ಹೆಚ್ಚು ನೆರವಾಗಬಹುದು. ಮೊದಲ ಮತ್ತು ಎರಡನೆಯ ತ್ರೈಮಾಸಿಕದಲ್ಲಿ ತಿಂಗಳಿಗೊಮ್ಮೆ ಈ ತಜ್ಞರನ್ನು ಕಂಡರೆ ಸಾಕು. ಆದರೆ ಮೂರನೆಯ ತ್ರೈಮಾಸಿಕದಲ್ಲಿ ಹೆಚ್ಚು ಬಾರಿ ಭೇಟಿ ನೀಡಬೇಕಾಗುತ್ತದೆ.

English summary

Normal Delivery Symptoms And Process

Normal Delivery Symptoms And Process To Get Normal Delivery
X
Desktop Bottom Promotion