For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಬಳಿ ಇಂಥಾ ವಿಷಯಗಳನ್ನು ಚರ್ಚಿಸದಿರಿ

|

ತಾಯ್ತನ ಎಂಬುದು ಹೆಣ್ಣನ್ನು ಸಂಪೂರ್ಣವಾಗಿಸುವ ಹಂತ, ಗರ್ಭದಲ್ಲಿ ಮತ್ತೊಂದು ಜೀವಕ್ಕೆ ಜನ್ಮ ನೀಡುವ ಪ್ರಕ್ರಿಯೆ, ಭಾವನೆಯೇ ವರ್ಣಿಲಾಸಾಧ್ಯವಾದದ್ದು. ಹೆಣ್ಣು ತಾಯಿಯಾಗುತ್ತಿದ್ದಾಳೆ ಎಂದರೆ ಆಕೆಯನ್ನು ಸಮಾಜ ನೋಡುವ ರೀತಿಯೇ ಭಿನ್ನ. ಆಕೆಯ ಆರೋಗ್ಯ, ಬೇಡಿಕೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ, ಅವರಿಗೆ ಹಿತಕರವಾದ ವಾತಾವರಣವನ್ನು ಸೃಷ್ಟಿಸುತ್ತಾರೆ, ಅವರ ಸಂತೋಷಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.

ಅಂತೆಯೇ ಕೆಲವರು ಗರ್ಭಿಣಿಯರ ಎಂತಹ ವಿಷಯಗಳನ್ನು ಚರ್ಚಿಸಬಾರದು ಎಂಬ ಸಾಮಾನ್ಯ ಮಾಹಿತಿ ಇಲ್ಲದೆ, ಅವರ ಆರೋಗ್ಯ ಅಥವಾ ಮನಸ್ಸಿನ ಮೇಲೆ ಪರಿಣಾಮ ಬೀರುವಂಥ ವಿಷಯಗಳನ್ನು ಚರ್ಚಿಸುತ್ತಾರೆ.

ಗರ್ಭಧಾರಣೆಯ ಕೆಲವೊಂದು ಲಕ್ಷಣಗಳು: ನೀವು ತಿಳಿಯಲೇಬೇಕಾದ ಸಂಗತಿಗಳು

ಗರ್ಭಿಣಿಯರ ಜತೆ ಎಂಥಹ ವಿಷಯಗಳನ್ನು ಚರ್ಚಿಸಬಾರದು, ಎಂಥಹ ವಿಷಯಗಳು ಅವರ ಮನಸ್ಸು, ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಗರ್ಭಿಣಿಯರು ಯಾವುದನ್ನು ಕಡೆಗಣಿಸಬೇಕು ಎಂಬ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.

ತೂಕದ ಬಗ್ಗೆ ಅಸಮಂಜಸ ಪ್ರಶ್ನೆ

ತೂಕದ ಬಗ್ಗೆ ಅಸಮಂಜಸ ಪ್ರಶ್ನೆ

ನೀನು ಗರ್ಭಿಣಿಯಂತೆಯೇ ಕಾಣುವುದಿಲ್ಲ, ಬಹಳ ಸಣ್ಣ ಇದ್ದೀಯಾ ಅಥವಾ ಬಹಳ ದಪ್ಪ ಇದ್ದೀಯಾ ಪ್ರಸವದ ವೇಳೆ ಸಮಸ್ಯೆಯಾಗಬಹುದು. ಮಗು ಜನಿಸಲು ಇನ್ನು ಇಷ್ಟು ವಾರಗಳಿವೆ, ಈಗಲೇ ಬೇಬಿ ಬಂಪ್ ಇಷ್ಟು ಬೆಳೆದಿದೆ? ಎಂಬಂಥ ಚರ್ಚೆಗಳನ್ನು ಎಂದಿಗೂ ಮಾಡಬೇಡಿ. ಅವರ ಆರೋಗ್ಯದ ಬಗ್ಗೆ ವೈದ್ಯರು, ಕುಟುಂಬದವರು ಕಾಳಜಿ ವಹಿಸಿರುತ್ತಾರೆ. ಇಂಥಹ ಪ್ರಶ್ನೆಗಳು ಆರಭಿಕ ಹಂತದಲ್ಲೇ ಮಗುವಿನ ಬೆಳವಣಿಗೆ ಅಥವಾ ಪ್ರಸವ ವೇದನೆ ಬಗ್ಗೆ ಅವರನ್ನು ಚಿಂತೆಗೆ ದೂಡಬಹುದು, ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹದು.

ಹೊಟ್ಟೆ ಭಾಗವನ್ನು ಸ್ಪರ್ಶಿಸುವುದು

ಹೊಟ್ಟೆ ಭಾಗವನ್ನು ಸ್ಪರ್ಶಿಸುವುದು

ಗರ್ಭಿಣಿಯರ ಹೊಟ್ಟೆ (ಬೇಬಿ ಬಂಪ್) ಮ್ಯಾಗ್ನೆಟ್ ನಂತೆ ಎಲ್ಲರನ್ನು ಆಕರ್ಷಿಸುತ್ತದೆ. ಕೆಲವರಿಗೆ ನೋಡಿದಾಗ ಮುಟ್ಟಬೇಕು ಎನಿಸುವುದೂ ಉಂಟು, ಆದರೆ ಸಿಕ್ಕವರೆಲ್ಲಾ ಬೇಬಿ ಬಂಪ್ ಮುಟ್ಟಿದಾಗ ಗರ್ಭಣಿಯರಿಗೆ ತೀವ್ರ ಮುಜುಗರ, ಕಿರಿಕಿರಿ ಎನಿಸಬಹುದು. ಇಂಥವರಿಗೆ ನೇರವಾಗಿ ಮುಟ್ಟಬೇಡಿ, ಅಹಿತಕರ ಎನಿಸುತ್ತದೆ ಎಂದು ತಿಳಿಸಿಬಿಡಿ. ಪದೇ ಪದೇ ಇಂತಹ ಘಟನೆ ಮುಂದುವರೆದಲ್ಲಿ ಮತ್ತೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಅನವಶ್ಯಕ ಸಲಹೆಗಳು, ಪ್ರಶ್ನೆಗಳು

ಅನವಶ್ಯಕ ಸಲಹೆಗಳು, ಪ್ರಶ್ನೆಗಳು

ಗರ್ಭಿಣಿ ಎಂದರೆ ಕಂಡವರೆಲ್ಲಾ ಒಂದಿಲ್ಲೊಂದು ಉಚಿತ ಸಲಹೆ ಕೊಡುವವರೇ. ಇಂತಹ ಲಕ್ಷಣ ಇದ್ದರೆ ಗಂಡು ಮಗು, ಹೀಗಿದ್ದರೆ ಹೆಣ್ಣು ಮಗು, ಈ ಆಹಾರ ಸೇವಿಸಬೇಕು, ಮಗುವಿನ ನಂತರವೂ ಕೆಲಸಕ್ಕೆ ಹೋಗುತ್ತೀಯಾ?, ಮಗುವಿಗೆ ಎಷ್ಟು ತಿಂಗಳು ಎದೆಹಾಲು ನೀಡುತ್ತೀಯಾ? ಇಂತಹ ಪ್ರಶ್ನೆಗಳು ನಿಜವಾಗಿಯೂ ಗರ್ಭಿಣಿ ಬಯಸುವುದಿಲ್ಲ. ಕೆಲವು ಸಂದರ್ಭದಲ್ಲಿ ಏನು ಉತ್ತರ ನೀಡಬೇಕು ಎಂಬ ಗೊಂದಲ ಸಹ ಉಂಟಾಗಬಹುದು. ಇಂಥವರಿಂದ ಸಾಧ್ಯವಾದಷ್ಟು ದೂರವಿರಿ, ಇಲ್ಲವಾದಲ್ಲಿ ವಿಷಯ ಬದಲಾಯಿಸಿ ಸಕಾರಾತ್ಮಕ ಉತ್ತರಗಳಿಂದ ಚರ್ಚೆ ಪೂರ್ಣಗೊಳಿಸಿ.

ಇತರರ ಕಹಿ ಘಟನೆಗಳು

ಇತರರ ಕಹಿ ಘಟನೆಗಳು

ಪ್ರಸವ ವೇದನೆಯಂಥ ಭೀಕರ ಅನುಭವಗಳು, ನೋವಿನ ಸಂಗತಿಗಳು, ಶಸ್ತ್ರಚಿಕಿತ್ಸೆಯಂಥ ವಿಷಯಗಳು, ಸಾಧ್ಯವಾದಷ್ಟು ನಿದ್ರಿಸು, ಮುಂದೆ ಹೆಚ್ಚು ನಿದ್ರಿಸಲು ಆಗುವುದಿಲ್ಲ ಎಂಬಂಥ ಎಚ್ಚರಿಕೆಗಳನ್ನು ಗರ್ಭಿಣಿಯರಿಗೆ ನೀಡದಿರಿ. ಹಾಗಿದ್ದೂ ಇಂತಹ ವಿಷಯಗಳು ನಿಮ್ಮ ಗಮನಕ್ಕೆ ಬಂದರೆ ನಿರ್ಲಕ್ಷಿಸಿ, ತಪ್ಪದೆ ವೈದ್ಯರ ಸಲಹೆ ಪಾಲಿಸಿ. ಸಕಾರಾತ್ಮಕ ವಿಷಯಗಳ ಕಡೆ ಗಮನ ನೀಡಿ, ಮಗುವಿಗೆ ಜನ್ಮ ನೀಡುವ ಭಾವನೆಯಲ್ಲಿ ಎಂಥಾ ನೋವು ಮರೆಯಾಗುತ್ತದೆ ಎಂಬಂಥ ಮಾತುಗಳು ಹಿತವೆನಿಸುತ್ತದೆ.

ನೆನಪಿಡಿ ಗರ್ಭಿಣಿಯರು ಅತಿಯಾಗಿ ಆಲೂಗಡ್ಡೆ ಚಿಪ್ಸ್ ತಿನ್ನಲೇಬಾರದು!

ನಿಮ್ಮದೇ ಹಿತಕರ ವಾತಾವರಣ ಸೃಷ್ಟಿಸಿಕೊಳ್ಳಿ

ನಿಮ್ಮದೇ ಹಿತಕರ ವಾತಾವರಣ ಸೃಷ್ಟಿಸಿಕೊಳ್ಳಿ

ನೀವೀಗ ತಾಯ್ತನದ ಅದ್ಭುತ ಭಾವನೆಯನ್ನು ಅನುಭವಿಸುತ್ತಿದ್ದೀರಾ, ನಿಮ್ಮದೇ ಒಂದು ಸಕಾರಾತ್ಮಕ ಲೋಕ ಸೃಷ್ಟಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಇಷ್ಟದ, ಮನಸಿಗೆ ಹಿತವೆನಿಸುವ, ಮಗುವಿಗೆ ಪ್ರೇರಣೆ ನೀಡುವಂಥ ವಸ್ತುಗಳನ್ನು ಇಟ್ಟುಕೊಳ್ಳಿ. ನಕಾರಾತ್ಮಕ ಸಂದೇಶ, ಆಲೋಚನೆಗಳಿಗೆ ಅವಕಾಶ ನೀಡಿದೇ, ನಿರ್ಲಕ್ಷಿಸಿ. ಉತ್ತಮ ಸಂಗೀತ, ಪುಸ್ತಕಗಳು, ಸ್ಥಳಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

English summary

Never Discuss These Things With Pregnant Woman

When you’re pregnant, it can sometimes feel like everyone has an opinion on your body. Here are some of the most annoying thing every pregnant woman face, waht she really neglect and what not to disucuss with pregnant woman.
Story first published: Saturday, August 17, 2019, 13:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X