For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ದೇಹದ ದುರ್ಗಂಧ ನಿವಾರಣೆಗೆ ಸಿಂಪಲ್ ಟಿಪ್ಸ್

|

ಗರ್ಭಾವಸ್ಥೆಯಲ್ಲಿ ಅನುಭವಕ್ಕೆ ಬರುವ ದೇಹದ ಬದಲಾವಣೆಗಳಲ್ಲಿ ದೇಹದ ದುರ್ಗಂಧವೂ ಒಂದು. ಕೆಲವು ಗರ್ಭವತಿಯರು ತಮ್ಮ ಜೀವನಕ್ರಮ ಮತ್ತು ಆಹಾರಕ್ರಮಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಈ ತೊಂದರೆಯನ್ನು ಸಮರ್ಥವಾಗಿ ನಿಭಾಯಿಸಿಕೊಳ್ಳುತ್ತಾರೆ. ಆದರೆ ಉಳಿದವರಿಗೆ ವೈದ್ಯರ ಸಲಹೆಯ ಅಗತ್ಯವಿರುತ್ತದೆ.

Pregnancy Body Odor: Natural Ways To Deal With It

ಸಾಮಾನ್ಯವಾಗಿ ದೇಹದ ದುರ್ಗಂಧ ಎಂದಾಕ್ಷಣ ಸ್ನಾನ ಮಾಡದೇ ಹೊಮ್ಮುವ ಸಹಿಸಲಸಾಧ್ಯವಾದ ವಾಸನೆ ಎಂದೇ ಹೆಚ್ಚಿನವರು ತೀರ್ಮಾನಕ್ಕೂ ಬಂದುಬಿಡುತ್ತಾರೆ. ವಾಸ್ತವದಲ್ಲಿ, ಇದು ಬೇರೆ ಯಾವುದೇ ವ್ಯಕ್ತಿಗೂ ಬೆವರಿನ ಮೂಲಕ ಎದುರಾಗಬಹುದಾದ ವಾಸನೆಯೂ ಇರಬಹುದು. ಗರ್ಭಾವಸ್ಥೆಯಲ್ಲಿ ಈ ಬೆವರಿನ ವಾಸನೆ ರಸದೂತಗಳು ಮತ್ತು ಔಷಧಿಗಳ ಪ್ರಭಾವದಿಂದ ಕೊಂಚ ಭಿನ್ನವಾಗಿರಬಹುದು. ಆದರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ:

ಗರ್ಭಾವಸ್ಥೆಯಲ್ಲಿ ದೇಹದಿಂದ ವಾಸನೆ ಹೊಮ್ಮುವುದು ಸಾಮಾನ್ಯವೇ?

ಗರ್ಭಾವಸ್ಥೆಯಲ್ಲಿ ದೇಹದಿಂದ ವಾಸನೆ ಹೊಮ್ಮುವುದು ಸಾಮಾನ್ಯವೇ?

ಗರ್ಭಾವಸ್ಥೆಯಲ್ಲಿ ದೇಹದ ವಪೆಯ ಕೆಳಭಾಗದ ರಾಸಾಯನಿಕ ಕ್ರಿಯೆ (The basal metabolic rate) ಹೆಚ್ಚು ಚುರುಕಾಗುತ್ತದೆ. ನಿಮ್ಮ ರಕ್ತದ ಪರಿಚಲನೆಯ ಪ್ರಮಾಣ ಮತ್ತು ದೇಹದ ಉಷ್ಣತೆಯೂ ಹೆಚ್ಚುತ್ತದೆ. ಇದು ಬೆವರು ಗ್ರಂಥಿಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಉತ್ಪತ್ತಿಯಾಗುವ ಬೆವರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೆ, ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಆಘ್ರಾಣದ ಶಕ್ತಿ ಉಳಿದ ಸಮಯಕ್ಕಿಂತ ಹೆಚ್ಚು ಸೂಕ್ಷ್ಮಸಂವೇದಿಯಾಗುತ್ತದೆ.

ಅಂದರೆ ಇತರರಿಗೆ ಅತಿ ಕ್ಷೀಣವಾಗಿ ಬರುವ ಯಾವುದೇ ಪರಿಮಳ, ಕೆಲವಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ವಾಸನೆ ಇದ್ದರೂ ಗರ್ಭವತಿ ಈ ವಾಸನೆಗಳನ್ನು ಸುಲಭವಾಗಿ ಗ್ರಹಿಸುತ್ತಾರೆ. ಈ ಎರಡು ಕಾರಣಗಳಿಂದಾಗಿ ಮಹಿಳೆಯರಿಗೆ ಇದು ಬೆವರಿನ ಸಾಮಾನ್ಯ ವಾಸನೆಯಾಗಿದ್ದರೂ ಗರ್ಭಿವತಿಯಾಗಿದ್ದಾರ ಈ ದೇಹದ ವಾಸನೆ ಅತಿ ಹೆಚ್ಚಾಗಿದೆ ಎಂದು ಗ್ರಹಿಸಬಹುದು.

ಗರ್ಭಾವಸ್ಥೆಯಲ್ಲಿ ದೇಹದ ವಾಸನೆ ಎದುರಾಗಲು ಕಾರಣವೇನು?

ಗರ್ಭಾವಸ್ಥೆಯಲ್ಲಿ ದೇಹದ ವಾಸನೆ ಎದುರಾಗಲು ಕಾರಣವೇನು?

ಗರ್ಭಾವಸ್ಥೆಯಲ್ಲಿ ಎದುರಾಗುವ ದೇಹದ ವಾಸನೆ ಇತರ ಸಮಯಕ್ಕಿಂತ ಕೊಂಚ ವ್ಯತ್ಯಾಸ ಇರಬಹುದು ಮತ್ತು ಹೆರಿಗೆಯ ನಂತರ ಬಾಣಂತನದ ಕೆಲವು ತಿಂಗಳುಗಳವರೆಗೂ ಉಳಿಯಬಹುದು. ದೇಹದ ಬಲವಾದ ವಾಸನೆಯನ್ನು ಉಂಟುಮಾಡುವ ಕೆಲವು ಕಾರಣಗಳು ಈ ಕೆಳಗಿನಂತಿವೆ:

ಹಾರ್ಮೋನುಗಳ ಬದಲಾವಣೆಗಳು

ಲೈಂಗಿಕ ಹಾರ್ಮೋನುಗಳ ಮಟ್ಟಗಳು ಹೆಚ್ಚಾಗುವಿಕೆ, ವಿಶೇಷವಾಗಿ ಎಸ್ಟ್ರಾಡಿಯೋಲ್ ಮತ್ತು ಪ್ರೊಜೆಸ್ಟರಾನ್ (estradiol ಮತ್ತು progesterone), ನಿಮ್ಮ ವಾಸನೆ ಗ್ರಹಿಸುವ ಕ್ಷಮತೆಯನ್ನು ಅಪಾರವಾಗಿ ಹೆಚ್ಚಿಸಬಹುದು. ಅವು ಜನನಾಂಗ ಮತ್ತು ಕಂಕುಳ ಭಾಗಗಳಲ್ಲಿ ಪ್ರಬಲವಾದ ವಾಸನೆಯನ್ನು ಉಂಟುಮಾಡುವ ಸಾಧ್ಯತೆಯಿದೆ, ಇದು ನಿಮ್ಮ ದೇಹದ ವಾಸನೆಯನ್ನು ನೀವು ಹೆಚ್ಚಾಗಿ ಗ್ರಹಿಸಲು ಕಾರಣವಾಗಬಹುದು.

ಹೆಚ್ಚುವ ಬೆವರುವಿಕೆ

ಹೆಚ್ಚುವ ಬೆವರುವಿಕೆ

ಹೆಚ್ಚುತ್ತಿರುವ ದೇಹದ ತೂಕ ಮತ್ತು ನೀವು ಹೊರುವ ಮಗುವಿನ ಹೆಚ್ಚುವರಿ ತೂಕದಿಂದಾಗಿ ಚರ್ಮದ ಅಡಿಯಲ್ಲಿ ಕೊಬ್ಬಿನ ಪದರ ಹೊರಗಿನ ತಾಪಮಾನ ಒಳಬರದಂತೆ ತಡೆಯುತ್ತದೆ ಹಾಗೂ ದೇಹದ ಶಾಖ ನಷ್ಟವಾಗದಂತೆ ತಡೆದು ದೇಹವನ್ನು ಬೆಚ್ಚಗಾಗಿಸುತ್ತದೆ. ಈ ಕಾರಣದಿಂದಾಗಿ, ನೀವು ತಂಪಾದ ಹವಾಮಾನದಲ್ಲೂ ಹೆಚ್ಚು ಬೆವರುತ್ತೀರಿ. ವಾಸ್ತವದಲ್ಲಿ, ಚರ್ಮದಿಂದ ಹೊರಸೂಸುವ ಬೆವರು ಬಹುತೇಕ ಅಪ್ಪಟ ನೀರು ಇದರಲ್ಲಿ ತಾನಾಗಿ ವಾಸನೆ ಇರುವುದೇ ಇಲ್ಲ. ಆದರೆ ಅದು ದೇಹದ ಮೇಲೆ ನೆಲೆಗೊಂಡಾಗ, ಅದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತುಈ ಬ್ಯಾಕ್ಟೀರಿಯಾಗಳು ಧೂಳು ಮತ್ತು ಇತರ ಕಣಗಳನ್ನು ತಕ್ಷಣವೇ ಕೊಳೆಸಿ ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ.

ಆಹಾರಕ್ರಮದ ಬದಲಾವಣೆಗಳು

ಆಹಾರಕ್ರಮದ ಬದಲಾವಣೆಗಳು

ನೀವು ಸೇವಿಸುವ ಆಹಾರವು ದೇಹದ ಸಂಯೋಜನೆಯ ಮೇಲೂ ಪರಿಣಾಮ ಬೀರಬಹುದು. ಸಾಗರ ಉತ್ಪನ್ನಗಳಿಂದ ತಯಾರಿಸಲ್ಪಟ್ಟ ಆಹಾರಗಳು ಬೆವರು ಮತ್ತು ಜನನಾಂಗದ ಸ್ರಾವದ ಮೇಲೆ ಪರಿಣಾಮ ಬೀರಬಹುದು, ಕೆಂಪು ಮಾಂಸವು ದೇಹದ ವಾಸನೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಲವು ತರಕಾರಿಗಳಲ್ಲಿ ಇರುವ ಗಂಧಕದ ಅಂಶ (ಎಲೆಕೋಸು, ಹೂಕೋಸು ಮತ್ತು ಕೋಸುಗಡ್ಡೆ) ರಕ್ತಪ್ರವಾಹದಿಂದ ಹೀರಲ್ಪಡುತ್ತದೆ ಮತ್ತು ಇದೂ ದುರ್ವಾಸನೆಯನ್ನು ಸೂಸುತ್ತದೆ.

ಜನನಾಂಗದ ಸ್ರಾವ

ಜನನಾಂಗದ ಸ್ರಾವ

ಗರ್ಭಾವಸ್ಥೆಯಲ್ಲಿ ರಕ್ತ ಪೂರೈಕೆಯು ಹೆಚ್ಚಾಗುವುದರಿಂದ ಜನನಾಂಗದಲ್ಲಿ ಪಿಹೆಚ್ ಮಟ್ಟ ಏರುಪೇರಾಗುವುದು ಸಾಮಾನ್ಯ. ಇದರಿಂದಾಗಿಯೂ ವಿಶಿಷ್ಟ ವಾಸನೆ ಎದುರಾಗಬಹುದು. ಆದರೆ ವಾಸನೆಯು ಅಸಹಜ ವಿಸರ್ಜನೆ, ಅತೀವ ಉರಿ ಅಥವಾ ತುರಿಕೆಯ ಸಂವೇದನೆಯೊಂದಿಗೆ ಇದ್ದರೆ, ಅದು ಜನನಾಂಗದ ಸೋಂಕಿನ ಸಂಕೇತವಾಗಿರಬಹುದು.

ಗರ್ಭಾವಸ್ಥೆಯಲ್ಲಿ ದೇಹದ ವಾಸನೆಯನ್ನು ಎದುರಿಸಲು ನೈಸರ್ಗಿಕ ಮಾರ್ಗಗಳು

ಗರ್ಭಾವಸ್ಥೆಯಲ್ಲಿ ದೇಹದ ವಾಸನೆಯನ್ನು ಎದುರಿಸಲು ನೈಸರ್ಗಿಕ ಮಾರ್ಗಗಳು

ಗರ್ಭಧಾರಣೆಯ ಎಲ್ಲಾ ಹಂತದಲ್ಲಿ ದೇಹದ ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸಲು ನಿಮಗೆ ಸಾಧ್ಯವಾಗದಿರಬಹುದು, ಆದರೆ ಈ ಕ್ರಮಗಳಿಂದ ನೀವು ಅದನ್ನು ಆದಷ್ಟೂ ಮಟ್ಟಿಗೆ ನಿರ್ವಹಿಸಿ ಸಹಿಸಿಕೊಳ್ಳುವಂತೆ ಮಾಡಬಹುದು.

ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ

ಸೌಮ್ಯವಾದ ಬ್ಯಾಕ್ಟೀರಿಯಾ ನಿರೋಧಕ ಸೋಪು ಬಳಸಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ ನಿರಾಳತೆ ಪಡೆಯಿರಿ. ಅಲ್ಲದೆ, ನಿಮ್ಮ ಬಟ್ಟೆಗಳನ್ನು ಹಾಕುವ ಮೊದಲು ಸ್ವಚ್ಛವಾದ ಟವೆಲ್ ಬಳಸಿ ಒಣಗಿಸಿ. ಅಲ್ಲದೆ, ನಿಮ್ಮ ಕೂದಲನ್ನು ಜಿಡ್ಡಿನಂತೆ ಭಾಸವಾದಾಗಲೆಲ್ಲಾ ತಲೆಸ್ನಾನ ಮಾಡಿ.

ನಿಮ್ಮ ಕೂದಲನ್ನು ಗಿಡ್ಡವಾಗಿರಿಸಿ

ನಿಮ್ಮ ಕೂದಲನ್ನು ಗಿಡ್ಡವಾಗಿರಿಸಿ

ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ದೇಹದ ವಾಸನೆಯನ್ನು ತಡೆಗಟ್ಟಲು ನಿಮ್ಮ ಜನನಾಂಗಗಳು ಮತ್ತು ಕಂಕುಳ ಕೂದಲುಗಳನ್ನು ಅತಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ ಅಥವಾ ಕ್ಷೌರ ಮಾಡಿ. ಹೀಗೆ ಕತ್ತರಿಸಿಕೊಳ್ಳುವ ಮೂಲಕ ಜನನಾಂಗಗಳನ್ನು ಸ್ವಚ್ಛಗೊಳಿಸುವ ಕ್ರಿಯೆಯೂ ಸಹ ಸುಲಭವಾಗುತ್ತದೆ.

ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಿ

ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಿ

ದೇಹದ ವಾಸನೆಯನ್ನು ನಿಯಂತ್ರಿಸುವುದರಲ್ಲಿ ದೇಹದಲ್ಲಿರುವ ನೀರಿನ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ದಿನವಿಡೀ ಸಾಕಷ್ಟು ಹೆಚ್ಚು ನೀರನ್ನು ಕುಡಿಯಿರಿ. ಇದು ದೇಹವನ್ನು ತಂಪಾಗಿಸಿವುದರ ಜೊತೆಗೇ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ.

ಸೂಕ್ತವಾದ ಉಡುಪುಗಳನ್ನೇ ಧರಿಸಿ

ಸೂಕ್ತವಾದ ಉಡುಪುಗಳನ್ನೇ ಧರಿಸಿ

ಸಡಿಲವಾಗಿದ್ದು ಗಾಳಿಯಾಡುವಂತಹ ಮತ್ತು ದೇಹವನ್ನು ತಂಪಾಗಿರಿಸಲು ನೆರವಾಗುವ ಹತ್ತಿಯ ಬಟ್ಟೆಗಳನ್ನು ಧರಿಸಿ. ಅಲ್ಲದೆ, ಸ್ನಾನದ ಬಳಿಕ ಒಂದೇ ರೀತಿಯ ಬಟ್ಟೆಗಳನ್ನು ಧರಿಸಬೇಡಿ. ಪಾಲಿಯೆಸ್ಟರ್ ಮತ್ತು ರೇಯಾನ್ ಬಟ್ಟೆಗಳನ್ನು ಬಳಸಬೇಡಿ. ಇತರ ಯಾವುದೇ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಒಳ ಉಡುಪು ಮತ್ತು ಸಾಕ್ಸ್ ಅನ್ನು ಶಿರ್ಕಾ ಬೆರೆಸಿದ ನೀರಿನಲ್ಲಿ ನೆನೆಸಿಟ್ಟು ಕೊಂಚ ಹೊತ್ತಿನ ಬಳಿಕ ಒಗೆಯಿರಿ.

ಸೂಕ್ತವಾದ ಆಹಾರ ಸೇವಿಸಿ

ಸೂಕ್ತವಾದ ಆಹಾರ ಸೇವಿಸಿ

ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ವಾಸನೆಯುಕ್ತ ಆಹಾರಗಳನ್ನು ಸೇವಿಸಬೇಡಿ. ಕಡಿಮೆ ಪ್ರಬಲ ವಾಸನೆ ಇರುವ ಮತ್ತು ಹೆಚ್ಚು ಪೌಷ್ಟಿಕವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

ನಿಮ್ಮ ಜನನಾಂಗದ ಭಾಗವನ್ನು ಸ್ವಚ್ಛವಾಗಿರಿಸಿಕೊಳ್ಳಿ

ನಿಮ್ಮ ಜನನಾಂಗದ ಭಾಗವನ್ನು ಸ್ವಚ್ಛವಾಗಿರಿಸಿಕೊಳ್ಳಿ

ಈ ಭಾಗದಲ್ಲಿ ಸರಳ ಮತ್ತು ಸುಗಂಧವಿಲ್ಲದ ಸ್ವಚ್ಛಕಾಕರ ದ್ರಾವಣ (cleanser) ಬಳಸಿ ತೊಳೆದುಕೊಳ್ಳುವ ಮೂಲಕ ಜನನಾಂಗದ ಭಾಗದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಜನನಾಂಗದ ಭಾಗದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಈ ಭಾಗಗಳ ಸ್ವಚ್ಛತೆಗಾಗಿಯೇ ಪ್ರತ್ಯೇಕವಾದ ಪ್ರಸಾದನಗಳು ದೊರಕುತ್ತಿವೆ. ಇವನ್ನು ವೈದ್ಯರ ಸಲಹೆ ಪಡೆದು ಉಪಯೋಗಿಸಿ.

ಡಿಯೋಡರೆಂಟ್‌ಗಳು ಮತ್ತು ಬೆವರು ನಿವಾರಕಗಳು

ಡಿಯೋಡರೆಂಟ್‌ಗಳು ಮತ್ತು ಬೆವರು ನಿವಾರಕಗಳು

ವಾಸನೆ ಮತ್ತು ಬೆವರನ್ನು ಕಡಿಮೆ ಮಾಡಲು ನೀವು ಸೌಮ್ಯವಾದ ಪರಿಮಳವಿರುವ ಡಿಯೋಡರೆಂಟ್ ಅಥವಾ ಟಾಲ್ಕಮ್ ಪೌಡರ್ ಗಳನ್ನು ಬಳಸಬಹುದು. ನಿಮ್ಮ ಕಂಕುಳು, ಸ್ತನಗಳ ಕೆಳಗಿನ ಭಾಗ ಮತ್ತು ಜನನಾಂಗದ ಭಾಗಗಳ ಸಂಧುಗಳಲ್ಲಿ ಸಂಗ್ರಹವಾಗಿರುವ ಬೆವರನ್ನು ಆಗಾಗ ಮಕ್ಕಳ ಒರೆಸುವ ಬಟ್ಟೆಗಳನ್ನು ಬಳಸಿ ಒರೆಸಿಕೊಂಡು ಈ ಭಾಗಗಳನ್ನು ಆದಷ್ಟೂ ಒಣದಾಗಿರಿಸಿಕೊಳ್ಳಬೇಕು.

ಈ ಕ್ರಮಗಳಿಂದ ನೀವು ಆದಷ್ಟೂ ಸ್ವಚ್ಛ, ವಾಸನಾ ರಹಿತ ಮತ್ತು ಪ್ರಫುಲ್ಲಿತರಾಗಿರುತ್ತೀರಿ ಹಾಗೂ ದಿನದ ಸಮಯವನ್ನು ನಿರಾಳತೆಯಿಂದ ಕಳೆಯುತ್ತೀರಿ. ನೀವು ಸಂತೋಷವಾಗಿದ್ದು ಹಗುರ ಮನಸ್ಸಿನಲ್ಲಿದ್ದಷ್ಟೂ ಗರ್ಭಾವಸ್ಥೆಯ ಎಲ್ಲಾ ಹಂತಗಳು ಸುಖಕರವಾಗಿ ಜರುತ್ತವೆ ಹಾಗೂ ನಿಮ್ಮ ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

English summary

Natural Ways To Get Rid Of Body Odour During Pregnancy

Here we are discussing about Pregnancy Body Odor, Natural Ways To Deal With It. Body odor can be one of the many changes you may experience during pregnancy. Some women may be able to manage it with dietary and lifestyle changes, whereas some require a doctor’s attention. Read more.
X
Desktop Bottom Promotion