Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮನೆಯಲ್ಲಿರುವ ಈ ವಸ್ತುಗಳ ಮೂಲಕವೇ ನೀವು ಗರ್ಭಿಣಿ ಹೌದೇ, ಅಲ್ಲವೇ ತಿಳಿಯಬಹುದು
ನೀವು ತಾಯಿಯಾಗುವ ನಿರೀಕ್ಷೆಯಲ್ಲಿದ್ದೀರಾ? ಅಥವಾ ಪ್ರೆಗ್ನೆನ್ಸಿ ಆಗಿರುವ ಬಗ್ಗೆ ನಿಮಗೆ ಅನುಮಾನವಿದೆಯಾ? ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ಪ್ರೆಗ್ನೆನ್ಸಿ ಕಿಟ್ ತಂದು ಅದರಲ್ಲಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಇಂದಿನ ಹೆಚ್ಚಿನ ಮಹಿಳೆಯರಿಗೆ ಗೊತ್ತಿರುವುದು ಇದೊಂದೇ ವಿಧಾನ. ಆದರೆ ನಿಮಗೆ ಆಶ್ಚರ್ಯವಾಗಬಹುದು, ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಮನೆಮದ್ದಿನ ಮೂಲಕ ಕೂಡ ನಿಮ್ಮ ಗರ್ಭಧಾರಣೆಯನ್ನು ಖಾತ್ರಿಗೊಳಿಸಿಕೊಳ್ಳುವುದಕ್ಕೆ ಸಾಧ್ಯವಿದೆ.
ಹೌದು ನಾವು ಹೇಳುತ್ತಿರುವುದು ನಿಜ. ಮನೆಯಲ್ಲಿಯೇ ಕೆಲವು ಮನೆಮದ್ದು ತಯಾರಿಸಿಕೊಂಡು ನೀವು ನಿಮ್ಮ ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿಕೊಳ್ಳಬಹುದು. ಈ ನೈಸರ್ಗಿಕ ವಿಧಾನಗಳು ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಇದು ಬಹಳ ಸುರಕ್ಷಿತ, ದುಬಾರಿಯೂ ಅಲ್ಲ ಮತ್ತು ಬಹಳ ಉಪಯೋಗಕಾರಿಯೂ ಹೌದು.
ನೀವೇ ನಿಮ್ಮ ಕೈಯಾರೆ ತಯಾರಿಸಿಕೊಳ್ಳಬಹುದಾದ ಈ ಗರ್ಭಧಾರಣೆ ಪರೀಕ್ಷೆಯ ವಿಧಾನದ ಅತ್ಯಂತ ಮುಖ್ಯವಾದ ಲಾಭವೇನೆಂದರೆ ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದೇ ಆಗಿದೆ. ಒಂದು ವೇಳೆ ನೀವು ಯೋಜಿತವಲ್ಲದ ಗರ್ಭಧಾರಣೆಯನ್ನು ಹೊಂದಿರುವ ಬಗ್ಗೆ ಅನುಮಾನವಿದ್ದಲ್ಲಿ ಅಥವಾ ಈ ರಹಸ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬಯಸುತ್ತಿದ್ದಲ್ಲಿ ನಾವು ಹೇಳುವ ಈ ವಿಧಾನಗಳು ನಿಮಗೆ ಬಹಳ ಉಪಯೋಗಕಾರಿಯಾಗಿರುತ್ತದೆ.

1. ಬ್ಲೀಚ್ ಪ್ರೆಗ್ನೆನ್ಸಿ ಟೆಸ್ಟ್
ಈ ವಿಧಾನವು ಇತರೆ ಎಲ್ಲಾ ವಿಧಾನಗಳಿಗಿಂತ ಬಹಳ ನಿಖರವಾಗಿರುತ್ತದೆ ಮತ್ತು ತ್ವರಿತ ಫಲಿತಾಂಶವನ್ನು ಒದಗಿಸುತ್ತದೆ. ಒಂದು ಸ್ವಚ್ಛವಾದ ಪಾತ್ರೆಯನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಮೂತ್ರವನ್ನು ಅದರಲ್ಲಿ ಸಂಗ್ರಹಿಸಿ. ಇದೀಗ ಅದಕ್ಕೆ ಸ್ವಲ್ಪ ಬ್ಲೀಚಿಂಗ್ ಪೌಡರ್ ಅನ್ನು ಸೇರಿಸಿ ಮತ್ತು ಗಂಟುಗಳಾಗದಂತೆ ಅದನ್ನು ಮಿಶ್ರಣ ಮಾಡಿ. ಒಂದು ವೇಳೆ ಈ ಮಿಶ್ರಣದಿಂದ ನೊರೆ ಬಂದರೆ ಇದರರ್ಥ ನೀವು ಗರ್ಭಿಣಿ ಮತ್ತು ಒಂದು ವೇಳೆ ನೊರೆ ಕಾಣಿಸಿಕೊಳ್ಳದೇ ಇದ್ದಲ್ಲಿ ನೀವು ಗರ್ಭಿಣಿ ಅಲ್ಲ ಎಂದರ್ಥ.

2. ಸಕ್ಕರೆ ಗರ್ಭಧಾರಣೆ ಪರೀಕ್ಷೆ
ವೈಜ್ಞಾನಿಕ ಪ್ರೆಗ್ನೆನ್ಸಿ ಕಿಟ್ ಗಳು ಲಭ್ಯವಿಲ್ಲದ ಕಾಲದಲ್ಲಿ ಚಾಲ್ತಿಯಲ್ಲಿದ್ದ ಮತ್ತು ಬಹಳ ಸುಲಭವಾಗಿರುವ ಗರ್ಭಧಾರಣೆಯ ಪರೀಕ್ಷಾ ವಿಧಾನ ಇದಾಗಿದೆ. ಈ ವಿಧಾನವನ್ನು ಅತೀ ಹೆಚ್ಚು ಬಳಕೆ ಮಾಡಲಾಗುತ್ತದೆ. ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಟೇಬಲ್ ಸ್ಪೂನ್ ನಿಮ್ಮ ಮೂತ್ರವನ್ನು ಸೇರಿಸಿ. ಇದೀಗ ಮೂತ್ರವನ್ನು ಸಕ್ಕರೆಗೆ ಹಾಕಿದ ಕೂಡಲೇ ಯಾವ ರೀತಿ ಸಕ್ಕರೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೀವು ಗಮನಿಸಬೇಕಾಗುತ್ತದೆ. ಒಂದು ವೇಳೆ ಸಕ್ಕರೆ ಗಂಟುಗಂಟಾಗಲು ಪ್ರಾರಂಭಿಸಿ ಕರಗದೆ ಇದ್ದಲ್ಲಿ ನೀವು ಗರ್ಭಿಣಿ ಎಂದರ್ಥ. ಒಂದು ವೇಳೆ ಬೇಗನೆ ಸಕ್ಕರೆ ಮೂತ್ರದಲ್ಲಿ ಕರಗಿ ಹೋದರೆ ನೀವು ಗರ್ಭಿಣಿಯಲ್ಲ ಎಂದರ್ಥ. ಮೂತ್ರದಲ್ಲಿ ಬಿಡುಗಡೆಗೊಂಡಿರುವ hCG ಹಾರ್ಮೋನುಗಳು ಸಕ್ಕರೆಯನ್ನು ಸರಿಯಾಗಿ ಕರಗದೆ ಇರುವಂತೆ ಮಾಡುತ್ತದೆ.

3. ಟೂತ್ ಪೇಸ್ಟ್ ಗರ್ಭಧಾರಣೆ ಪರೀಕ್ಷೆ
ನೀವು ಯಾವುದೇ ಕಂಪೆನಿಯ ಟೂತ್ ಪೇಸ್ಟ್ ಅನ್ನು ಇದಕ್ಕಾಗಿ ಬಳಸಬಹುದು. ಆದರೆ ಟೂತ್ ಪೇಸ್ಟಿನ ಬಣ್ಣ ಬಿಳಿಯದ್ದೇ ಆಗಿರಬೇಕು. ಎರಡು ಟೇಬಲ್ ಸ್ಪೂನ್ ಟೂತ್ ಪೇಸ್ಟ್ ಅನ್ನು ಒಂದು ಸಣ್ಣ ಬೌಲ್ ನಲ್ಲಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಮೂತ್ರವನ್ನು ಸೇರಿಸಿ. ಒಂದು ವೇಳೆ ಟೂತ್ ಪೇಸ್ಟ್ ತನ್ನ ಬಣ್ಣವನ್ನು ಬದಲಾವಣೆಯಾಗಿ ನೊರೆಯಾದರೆ ನೀವು ಗರ್ಭಿಣಿ ಎಂದರ್ಥ, ಬಣ್ಣ ಬದಲಾಗದೇ ನೊರೆಯಾಗದೇ ಇದ್ದರೆ ನೀವು ಗರ್ಭಿಣಿ ಅಲ್ಲ ಎಂದರ್ಥ.

4. ವಿನೆಗರ್ ಗರ್ಭಧಾರಣೆ ಪರೀಕ್ಷೆ
ಹೌದು, ವಿನೆಗರ್ ಕೂಡ ನಿಮ್ಮ ಗರ್ಭಧಾರಣೆ ಪರೀಕ್ಷೆ ನಡೆಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಆದರೆ ನೆನಪಿಡಿ ಈ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ನಿಮಗೆ ಬಿಳಿ ಬಣ್ಣದ ವಿನೆಗರ್ ನ ಅಗತ್ಯವಿದೆ. ಪ್ಲಾಸ್ಟಿಕ್ ಪಾತ್ರೆಯೊಂದರಲ್ಲಿ ಎರಡು ಟೇಬಲ್ ಸ್ಪೂನ್ ನಷ್ಟು ಬಿಳಿ ಬಣ್ಣದ ವಿನೆಗರ್ ಅನ್ನು ತೆಗೆದುಕೊಳ್ಳಿ. ಅದಕ್ಕೆ ನಿಮ್ಮ ಮೂತ್ರವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ವೇಳೆ ವಿನೆಗರ್ ನ ಬಣ್ಣ ಬದಲಾಗಿ ಅದರಲ್ಲಿ ಗುಳ್ಳೆಗಳು ಬರಲು ಪ್ರಾರಂಭವಾದರೆ ನೀವು ಗರ್ಭಿಣಿ ಎಂಬುದು ಖಾತ್ರಿ. ಒಂದು ವೇಳೆ ಯಾವುದೇ ಬದಲಾವಣೆ ಆ ಮಿಶ್ರಣದಲ್ಲಿ ಆಗದೇ ಇದ್ದರೆ ನೀವು ಗರ್ಭಧಾರಣೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

5. ಸೋಪಿನಿಂದ ಗರ್ಭಧಾರಣೆ ಪರೀಕ್ಷೆ
ನೀವು ಯಾವುದೇ ರೀತಿಯ ಸ್ನಾನ ಮಾಡುವ ಸೋಪ್ ಅನ್ನು ಈ ಪರೀಕ್ಷೆ ನಡೆಸುವುದಕ್ಕೆ ಬಳಸಿಕೊಳ್ಳಬಹುದು. ಒಂದು ಸಣ್ಣ ತುಂಡು ಸೋಪನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ನಿಮ್ಮ ಮೂತ್ರವನ್ನು ಸೇರಿಸಿ. ಒಂದು ವೇಳೆ ನೊರೆ ಕಾಣಿಸಿಕೊಂಡರೆ ನೀವು ಪ್ರಗ್ನೆಂಟ್ ಎಂದು ಅರ್ಥ. ಒಂದು ವೇಳೆ ಯಾವುದೇ ಬದಲಾವಣೆ ಆಗದೇ ಇದ್ದರೆ ಗರ್ಭ ಧರಿಸಿಲ್ಲ ಎಂದರ್ಥ.

6. ಬೇಕಿಂಗ್ ಸೋಡಾ ಗರ್ಭಧಾರಣೆ ಪರೀಕ್ಷೆ
ಎರಡು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ನಿಮ್ಮ ಮೂತ್ರದ ಎರಡು ಟೇಬಲ್ ಸ್ಪೂನ್ ಅನ್ನು ಸೇರಿಸಿ. ಇದೀಗ ಯಾವ ರೀತಿಯ ಪ್ರತಿಕ್ರಿಯೆಯಾಗುತ್ತದೆ ಎಂಬುದನ್ನು ಗಮನಿಸಿ. ಒಂದು ವೇಳೆ ನೀವು ಸೋಡಾ ಬಾಟಲಿಗಳಲ್ಲಿ ಗಮನಿಸುವಂತೆ ನೊರೆಯನ್ನು ಗಮನಿಸಿದರೆ ನಿಮ್ಮ ಪ್ರೆಗ್ನೆನ್ಸಿ ಖಾತ್ರಿ. ಮುಂದಿನ ಹಂತದ ಮೆಡಿಕಲ್ ಟೆಸ್ಟ್ ಗಳಿಗೆ ನೀವು ತಯಾರಾಗಬಹುದು.

7. ವೈನ್ ಗರ್ಭಧಾರಣೆ ಪರೀಕ್ಷೆ
ಇದು ಸ್ವಲ್ಪ ದುಬಾರಿಯೇ ಆಗುತ್ತದೆ ಮತ್ತು ಸ್ವಲ್ಪ ಸಮಯವನ್ನು ಹಿಡಿಯುವ ಪರೀಕ್ಷೆ ಆಗಿದೆ.ಚಆದರೆ ಮತ್ತೊಂದು ವಿಶ್ವಾಸಾರ್ಹವಾಗಿರುವ ಮನೆಯಲ್ಲೇ ನಡೆಸಿಕೊಳ್ಳಬಹುದಾದ ಗರ್ಭಧಾರಣೆ ಪರೀಕ್ಷೆ ವಿಧಾನ ಇದಾಗಿದೆ.
ಅರ್ಧ ಲೋಟದಷ್ಟು ವೈನ್ ಅನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸಮ ಪ್ರಮಾಣದಲ್ಲಿ ನಿಮ್ಮ ಮೂತ್ರವನ್ನು ಸೇರಿಸಿ. ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು 10 ನಿಮಿಷ ಕಾಯಿರಿ. ಈ ಮಿಶ್ರಣದ ಪ್ರತಿಕ್ರಿಯೆಯನ್ನು ಗಮನಿಸಿ. ಒಂದು ವೇಳೆ ವೈನಿನ ನೈಜ ಬಣ್ಣ ಬದಲಾವಣೆ ಆದರೆ ನೀವು ಗರ್ಭವತಿ ಎಂಬುದು ಖಾತ್ರಿ.

ಸಲಹೆ
ಒಂದು ವೇಳೆ ನೀವು ಮೇಲೆ ತಿಳಿಸಿರುವ ಯಾವುದೇ ಒಂದು ವಿಧಾನವನ್ನು ಪ್ರಯತ್ನಿಸಿದರೆ ಮತ್ತು ಅದರ ಫಲಿತಾಂಶ ಧನಾತ್ಮಕವಾಗಿ ಬಂದರೆ ಮತ್ತೊಂದು ವಿಧಾನವನ್ನೂ ಕೂಡ ಬಳಸಿ ಖಾತ್ರಿ ಮಾಡಿಕೊಳ್ಳಿ. ಒಂದು ವೇಳೆ ಎರಡನೇ ವಿಧಾನವೂ ಕೂಡ ಧನಾತ್ಮಕ ಫಲಿತಾಂಶವನ್ನು ನೀಡಿದರೆ ಆದಷ್ಟು ಬೇಗನೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆಯ ನಿಖರತೆಯನ್ನು ಹೇಗೆ ಹೆಚ್ಚಿಸುವುದು?
- ಬೆಳಗಿನ ಮೊದಲ ಮೂತ್ರವನ್ನು ಪರೀಕ್ಷೆಗಾಗಿ ಬಳಸಿ ಯಾಕೆಂದರೆ ಇದರಲ್ಲಿ hCG ಹಾರ್ಮೋನಿನ ಮಟ್ಟವು ಕೇಂದ್ರೀಕರಿಸಲ್ಪಟ್ಟಿರುತ್ತದೆ.
- ಮೂತ್ರವನ್ನು ಸಂಗ್ರಹಿಸುವುದಕ್ಕಾಗಿ ಸ್ವಚ್ಛವಾಗಿರುವ ಪ್ಲಾಸ್ಟಿಕ್ ಪಾತ್ರೆಯನ್ನು ಬಳಸಿ.
- ಪರೀಕ್ಷೆಗಾಗಿ ಸಾಕಷ್ಟು ಪ್ರಮಾಣದ ಮೂತ್ರವನ್ನು ಸಂಗ್ರಹಿಸಿ. ಒಂದು ವೇಳೆ ಮೂತ್ರದ ಪ್ರಮಾಣ ಬಹಳ ಕಡಿಮೆ ಇದ್ದಲ್ಲಿ ಫಲಿತಾಂಶ ನಿಖರವಾಗಿ ಬರದೇ ಇರಬಹುದು.
- ಪರೀಕ್ಷೆಯ ಪ್ರತಿಕ್ರಿಯೆ ಸರಿಯಾಗಿ ಬರುವುದಕ್ಕಾಗಿ 10 ನಿಮಿಷ ಕಾಯಿರಿ.
- ಫಲಿತಾಂಶದ ಖಾತ್ರಿಗಾಗಿ ನೀವು ಯಾವುದೇ ಪರೀಕ್ಷಾ ವಿಧಾನವನ್ನು ಪುನರಾವರ್ತಿಸಬಹುದು ಅಥವಾ ಮತ್ತೊಂದು ವಿಧಾನವನ್ನು ಕೂಡ ಬಳಕೆ ಮಾಡಬಹುದು.