For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯಾಗುವುದನ್ನು ತಡೆಗಟ್ಟುವ ಪರಿಣಾಮಕಾರಿಯಾದ ನೈಸರ್ಗಿಕ ವಿಧಾನಗಳಿವು

|

ಹಿಂದೆಲ್ಲಾ ದಂಪತಿಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳಿರುತ್ತಿದ್ದರು ಹಾಗೂ 'ಮಕ್ಕಳಿರಲವ್ವಾ ಮನೆತುಂಬಾ' ಎಂಬ ಆಶೀರ್ವಾದವನ್ನು ಹಿರಿಯರು ನೀಡುತ್ತಿದ್ದರು. ಆದರೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸರ್ಕಾರವೇ ಜನಸಂಖ್ಯೆಯ ಏರಿಕೆಗೆ ತಡೆ ನೀಡಲು ನಾವಿಬ್ಬರು ನಮಗಿಬ್ಬರು ಎಂಬ ಘೋಷವಾಕ್ಯದೊಂದಿಗೆ ಹಲವಾರು ಜನನ ನಿಯಂತ್ರಣಾ ಕ್ರಮಗಳನ್ನು ಪರಿಚಯಿಸಿತು. ಸುಮಾರು ಎಪ್ಪತ್ತರ ದಶಕದಲ್ಲಿ ಪ್ರಾರಂಭವಾದ ಈ ಅಭಿಯಾನದ ಪರಿಣಾಮವಾಗಿ ಗಣನೀಯ ಪ್ರಮಾಣದಲ್ಲಿ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಿಸಲಾಯಿತು.

ಆದರೆ, ಇದಕ್ಕೆ ಬಳಸಲಾದ ಕ್ರಮಗಳಲ್ಲಿ ಕೆಲವು ಜನರಿಗೆ ಇಷ್ಟವಾಗದೇ ಹೋದವು. ವಿಜ್ಞಾನ ಮುಂದುವರೆದಂತೆ ಗರ್ಭನಿರೋಧಕ ಕ್ರಮಗಳಲ್ಲಿ ಸುಧಾರಣೆ ಕಂಡುಬಂದಿದೆ. ಇಂದು ನಿಖರವಾದ ದಿನಗಳು, ಸಮಯ, ದೇಹದ ತಾಪಮಾನ ಮೊದಲಾದ ಮಾಹಿತಿಗಳನ್ನು ಪಡೆದು ದಂಪತಿಗಳು ದುಗುಡವಿಲ್ಲದೇ ಮಿಲನಕ್ಕೊಳಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮೂಲಕ ದಾಂಪತ್ಯ ಸುಖವನ್ನು ಬಲಿಗೊಡದೇ, ಅನೈಚ್ಛಿಕ ಗರ್ಭಾಧಾರಣೆಗೂ ಒಳಗಾಗದೇ ಪರಿಪೂರ್ಣ ಸಾಂಗತ್ಯವನ್ನು ಪಡೆಯುವುದು ಸಾಧ್ಯವಾಗಿದೆ. ಈ ಕ್ರಮವೇ ನೈಸರ್ಗಿಕವಾದ ಗರ್ಭ ನಿರೋಧಕ ಕ್ರಮ.

ಏನಿದು ನೈಸರ್ಗಿಕ ಗರ್ಭ ನಿರೋಧಕ ಕ್ರಮ?

ಏನಿದು ನೈಸರ್ಗಿಕ ಗರ್ಭ ನಿರೋಧಕ ಕ್ರಮ?

ಯಾವುದೇ ಕೃತಕ ವಿಧಾನ ಅಥವಾ ಔಷಧಿಗಳನ್ನು ಬಳಸದೇ ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯುವ ವಿಧಾನವೇ ನೈಸರ್ಗಿಕ ಗರ್ಭ ನಿರೋಧಕ ಕ್ರಮ. ಇದಕ್ಕೆ ಪ್ರಮುಖವಾಗಿ ಮಹಿಳೆಯ ಋತುಚಕ್ರದ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿ ಈ ಬಗ್ಗೆ ಮಾಹಿತಿಯನ್ನು ಪಡೆಯುವುದು ಹಾಗೂ ಆ ಪ್ರಕಾರ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ನೈಸರ್ಗಿಕ ಜನನ ನಿಯಂತ್ರಣದ ಅನುಕೂಲಗಳು ಮತ್ತು ಅನಾನುಕೂಲಗಳೇನು?

ಅಂಡೋತ್ಪತ್ತಿ ಪರೀಕ್ಷಾ ಕಿಟ್‌ಗಳನ್ನು ಖರೀದಿಸುವುದನ್ನು ಮಹಿಳೆ ಆರಿಸದ ಹೊರತು ಜನನ ನಿಯಂತ್ರಣದ ಇತರ ವಿಧಾನಗಳಿಗೆ ಹೋಲಿಸಿದರೆ ನೈಸರ್ಗಿಕ ವಿಧಾನಗಳು ಸಾಮಾನ್ಯವಾಗಿ ಬಹಳ ಅಗ್ಗವಾಗಿವೆ.

ನೈಸರ್ಗಿಕ ಜನನ ನಿಯಂತ್ರಣದ ಅನುಕೂಲತೆಗಳು

ನೈಸರ್ಗಿಕ ಜನನ ನಿಯಂತ್ರಣದ ಅನುಕೂಲತೆಗಳು

ಮಹಿಳೆಗೆ ಗರ್ಭ ನಿರೋಧಕ ಔಷಧಿ ತೆಗೆದುಕೊಳ್ಳುವ ಅಥವಾ ಹಾರ್ಮೋನುಗಳ ಏರುಪೇರುಗಳಿಗೆ ಒಡ್ಡಿಕೊಳ್ಳಬೇಕಾದ ಅಗತ್ಯವಿಲ್ಲ. ವೈದ್ಯರಿಂದ ಯಾವುದೇ ಕಾರ್ಯವಿಧಾನಗಳು ಅಥವಾ ಸಲಕರಣೆಗಳನ್ನು ಅಳವಡಿಸುವ ಅಗತ್ಯವಿಲ್ಲ.

ನೈಸರ್ಗಿಕ ಜನನ ನಿಯಂತ್ರಣದ ಅನಾನುಕೂಲಗಳು

ನೈಸರ್ಗಿಕ ಜನನ ನಿಯಂತ್ರಣದ ಅನಾನುಕೂಲಗಳು

ಮಹಿಳೆಯ ಅತಿ ಫಲವತ್ತೆಯ ದಿನಗಳನ್ನು ಅಂದಾಜು ಮಾಡುವುದು ಅಥವಾ ನಿಖರವಾಗಿ ತಿಳಿದುಕೊಳ್ಳುವುದು ಬಹಳ ಕಷ್ಟ, ಹಾಗಾಗಿ ಕೊಂಚ ಲೆಕ್ಕಾಚಾರ ತಪ್ಪಿದರೂ ಇದರ ಮೂಲ ಯೋಜನೆಗೇ ಕುತ್ತು ಬರಬಹುದು. ಮಿಲನದ ಫಲಿತಾಂಶವನ್ನು ಕಂಡುಕೊಳ್ಳಲು ಮಹಿಳೆಯರು ಉಪಕರಣವನ್ನು ಖರೀದಿಸಬೇಕಾಗಿ ಬರಬಹುದು, ಇದು ವೆಚ್ಚಕ್ಕೆ ದಾರಿಯಾಗಿದೆ. ಕೆಲವು ದಿನಗಳಲ್ಲಿ ಫಲವತ್ತತೆ ಹೆಚ್ಚಿದ್ದು ಈ ದಿನಗಳಲ್ಲಿ ಮಿಲನದಿಂದ ವಿಮುಖರಾಗಿರುವುದು ಕೆಲವು ಮಹಿಳೆಯರಿಗೆ ಇಷ್ಟವಾಗದ ವಿಚಾರವಾಗಿದೆ. ಪರಿಣಾಮವಾಗಿ ಅನೈಚ್ಛಿಕ ಗರ್ಭಧಾರಣೆಯ ಸಾಧ್ಯತೆ ಎದುರಾಗಬಹುದು.

ಅತಿ ಫಲಕಾರಿ ನೈಸರ್ಗಿಕ ಗರ್ಭ ನಿರೋಧಕ ಕ್ರಮಗಳು

ಅತಿ ಫಲಕಾರಿ ನೈಸರ್ಗಿಕ ಗರ್ಭ ನಿರೋಧಕ ಕ್ರಮಗಳು

ಅಮೇರಿಕಾದ ಆರೋಗ್ಯ ಮತ್ತು ಮಾನವಸೇವಾ ಸಂಸ್ಥೆಯ ನಂಬಲರ್ಹ ಮೂಲಗಳ ಪ್ರಕಾರ ಅತಿ ಫಲಕಾರಿ ನೈಸರ್ಗಿಕ ಗರ್ಭ ನಿರೋಧಕ ಕ್ರಮಗಳೆಂದರೆ:

* ಮಹಿಳಾ ಮತ್ತು ಪುರುಷ ಸಂತಾನ ಶಕ್ತಿಹರಣ. ಈ ಕ್ರಮದಲ್ಲಿ ಪುರುಷರಿಗೆ ವ್ಯಾಸೆಕ್ಟಮಿ, ಟ್ಯುಬಲ್ ಲೈಗೇಶನ್ ಮತ್ತು ಆಕ್ಯೂಲೇಶನ್ ಕ್ರಮಗಳು ಪ್ರಮುಖವಾಗಿವೆ. ಆದರೆ ಇವು ಶಾಶ್ವತ ಕ್ರಮಗಳಾಗಿದ್ದು ಮುಂದೆ ಸಂತಾನ ಪಡೆಯಬಯಸಿದರೆ ಸಾಧ್ಯವಾಗದು.

* ಗರ್ಭನಿರೋಧಕ ಕ್ರಮದಿಂದ ಮತ್ತೆ ಮಗುವನ್ನು ಪಡೆಯಬಹುದಾದ ವಿಧಾನ

ಇವು ಜನನ ನಿಯಂತ್ರಣವನ್ನು 3 ರಿಂದ 10 ವರ್ಷಗಳ ಕಾಲ ತಡೆಯುತ್ತದೆ. ಗರ್ಭಾಶಯದ ಸಾಧನಗಳು ಮತ್ತು ಹಾರ್ಮೋನುಗಳ ಇಂಪ್ಲಾಂಟ್ ಗಳು ಇದಕ್ಕೆ ಕೆಲವು ಉದಾಹರಣೆಗಳಾಗಿವೆ.

* ಕಡಿಮೆ-ಕಾರ್ಯನಿರ್ವಹಿಸುವ ಹಾರ್ಮೋನುಗಳ ವಿಧಾನಗಳು. ಮಾತ್ರೆ, ಮಿನಿ ಮಾತ್ರೆಗಳು, ಪ್ಯಾಚ್ ಮತ್ತು ಗರ್ಭಾಶಯದ ಉಂಗುರದಂಥ ಸಾಮಗ್ರಿಯನ್ನು ಅಳವಡಿಸುವುದು. ಪ್ರತಿದಿನ ಅಥವಾ ತಿಂಗಳಲ್ಲಿ ನೀವು ತೆಗೆದುಕೊಳ್ಳುವ ಜನನ ನಿಯಂತ್ರಣ ಇದರಲ್ಲಿ ಸೇರಿದೆ. ನಿಮ್ಮ ವೈದ್ಯರು ಪ್ರತಿ 3 ತಿಂಗಳಿಗೊಮ್ಮೆ ಈ ಉಪಕರಣಗಳನ್ನು ಬದಲಿಸುತ್ತಾರೆ.

ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗಲೆಲ್ಲಾ ಇವುಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಕಾಂಡೋಮ್ ಗಳು, ಡಯಾಫ್ರಾಮ್ ಗಳು, ಸ್ಪಂಜುಗಳು ಮತ್ತು ಗರ್ಭಕಂಠದ ಟೊಪ್ಪಿಗೆ ಮೊದಲಾದ ವಿಧಾನಗಳು ಹೆಚ್ಚು ಫಲಕಾರಿಯಾಗಿವೆ.

* ಮುಟ್ಟಿನ ದಿನ ಆದರಿಸಿ ಲೈಗಿಕ ಕ್ರಿಯ

ಈ ನೈಸರ್ಗಿಕ ಜನನ ನಿಯಂತ್ರಣ ವಿಧಾನವು ಮಹಿಳೆಯ ಅಂಡೋತ್ಪತ್ತಿ ಚಕ್ರವನ್ನು ಆಧರಿಸಿದೆ. ನೀವು ಹೆಚ್ಚು ಫಲವತ್ತಾದ ಮತ್ತು ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಾಗಿರುವ ದಿನಗಳಲ್ಲಿ ಲೈಂಗಿಕತೆಯಿಂದ ದೂರವಿರುವುದು ಇದರ ಪ್ರಮುಖ ಕ್ರಮವಾಗಿದೆ.

ಇತರ ನೈಸರ್ಗಿಕ ಗರ್ಭ ನಿರೋಧಕ ಕ್ರಮಗಳು

ಹೆರಿಗೆಯ ನಂತರದ ಆರು ತಿಂಗಳುಗಳ ಕಾಲ ಹಾಲೂಡಿಸುವಿಕೆಯ ಅವಧಿಯಲ್ಲಿ, ಅಂದರೆ ಮಗು ಕೇವಲ ತಾಯಿಯ ಹಾಲನ್ನೇ ಕುಡಿಯುತ್ತಿರುವಾಗ ಮತ್ತು ಹೆರಿಗೆಯ ಬಳಿಕ ಮಾಸಿಕ ಸ್ರಾವ ಕಾಣಿಸಿಕೊಳ್ಳದೇ ಇದ್ದಾಗ ಗರ್ಭಧಾರಣೆಯ ಸಾಧ್ಯತೆ ಇರುವುದಿಲ್ಲ. ಈ ಅವಧಿಗೆ lactational infertility ಎಂದು ಕರೆಯುತ್ತಾರೆ.

* ಹಿಂತೆಗೆತ

ಮಿಲನಕ್ರಿಯೆಯಲ್ಲಿ ಸ್ಖಲನಕ್ಕೂ ಮುನ್ನ ಪುರುಷ ತನ್ನ ಅಂಗವನ್ನು ಹೊರತೆಗೆದು ದೇಹದ ಹೊರಗೇ ಸ್ಖಲಿಸುವುದು ಈ ಕ್ರಮದ ವಿಧಾನವಾಗಿದೆ. ಆದರೆ ಇದು ಸಹಾ ಸಂಪೂರ್ಣವಾಗಿ ಸುರಕ್ಷಿತ ಎಂದು ಹೇಳುವ ಹಾಗಿಲ್ಲ. ಈ ಕ್ರಮದಿಂದಲೂ ನೂರರಲ್ಲಿ ಇಪ್ಪತ್ತೆರಡು ಸಂದರ್ಭದಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಇದೆ.

* ಮಹಿಳೆಯ ದೇಹದ ತಾಪಮಾನದ ಸೂಕ್ಷ್ಮ ಅವಲೋಕನ

ಮಹಿಳೆಯ ದೇಹದಲ್ಲಿ ಅಂಡಾಣು ಬಿಡುಗಡೆಯಾಗುವ ಹನ್ನೆರಡರಿಂದ ಇಪ್ಪತ್ತನಾಲ್ಕು ಘಂಟೆಗೂ ಮುನ್ನ ಆಕೆಯ ದೇಹದ ತಾಪಮಾನ 1°F ಕಡಿಮೆಯಾಗುತ್ತದೆ. ಅಂದರೆ ಇದು ಅತಿ ಹೆಚ್ಚು ಫಲಕಾರಿಯಾಗುವ ದಿನದ ಸೂಚನೆಯಾಗಿದೆ. ಈ ಸಮಯದಲ್ಲಿ ಮಿಲನದಿಂದ ದೂರವಿರುವ ಮೂಲಕ ಅನೈಚ್ಛಿಕ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಸಾಮಾನ್ಯವಾಗಿ ಈ ತಾಪಮಾನ 48 ರಿಂದ 72 ಘಂಟೆಯವರೆಗೆ ಇದ್ದು ಬಳಿಕ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ನೈಸರ್ಗಿಕ ಗರ್ಭ ನಿರೋಧಕಕ್ಕೆ ಗಿಡಮೂಲಿಕೆಗಳ ಬಳಕೆ

ನೈಸರ್ಗಿಕ ಗರ್ಭ ನಿರೋಧಕಕ್ಕೆ ಗಿಡಮೂಲಿಕೆಗಳ ಬಳಕೆ

ಕೆಲವು ಗಿಡಮೂಲಿಕೆಗಳಿಗೆ ಅನೈಚ್ಛಿಕ ಗರ್ಭಧಾರಣೆಯಾಗದಂತೆ ತಡೆಯುವ ಶಕ್ತಿ ಇದೆ ಎಂದು ಮೂಲಿಕಾತಜ್ಞರು ವಿವರಿಸುತ್ತಾರೆ. ಇವು ರಾಸಾಯನಿಕ ಆಧಾರಿತ ಕ್ರಮಗಳಿಗಿಂತಲೂ ಸುರಕ್ಷಿತವಾಗಿದ್ದು ಮಹಿಳೆಯರ ದೇಹದಲ್ಲಿ ರಸದೂತಗಳ ಏರುಪೇರಾಗದಂತೆ ಕಾಪಾಡುತ್ತವೆ.

ಗಿಡಮೂಲಿಕೆಗಳಿಂದ ನೈಸರ್ಗಿಕ ಗರ್ಭ ನಿರೋಧಕ ಕ್ರಮ

ಗಿಡಮೂಲಿಕೆಗಳಿಂದ ನೈಸರ್ಗಿಕ ಗರ್ಭ ನಿರೋಧಕ ಕ್ರಮ

ಸೂಚನೆ

ಕೆಳಗೆ ವಿವರಿಸಿರುವ ಮೂಲಿಕೆಗಳನ್ನು ಅಮೇರಿಕಾದ ಆಹಾರ ಮತ್ತು ಔಷಧ ನಿರ್ದೇಶನಾಲಯವಿನ್ನೂ ಅನುಮೋದನೆ ನೀಡಿಲ್ಲ ಹಾಗೂ ಯಾವುದೇ ವೈದ್ಯಕೀಯ ಪರೀಕ್ಷೆಯಿಂದಲೂ ಇದನ್ನು ಸಾಬೀತುಪಡಿಸಿಲ್ಲ. ಹಾಗಾಗಿ, ಇವುಗಳ ಸುರಕ್ಷತೆಯ ಬಗ್ಗೆ ಖಾತರಿ ನೀಡಲಾಗದು. ಹಾಗೂ ಕೆಲವೊಮ್ಮೆ ಕೆಲವು ಮೂಲಿಕೆಗಳು ಗರ್ಭಾಪಾತಕ್ಕೂ ಕಾರಣವಾಗಬಹುದು. ಹಾಗಾಗಿ ಇವುಗಳನ್ನು ಉಪಯೋಗಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಕುರಿಯ ಚರ್ಮದ ಕಾಂಡೋಮ್ ಸಹಿತ ಇತರ ವಿಧಾನಗಳು ನೈಸರ್ಗಿಕವಾಗಿದೆ. ಅಲ್ಲದೇ ಗಿಡಮೂಲಿಕೆಗಳು ರಾಸಾಯನಿಕ ಕ್ರಿಯೆಗೆ ಒಳಗಾಗಿರುವುದಿಲ್ಲ. ಇವುಗಳಲ್ಲಿ ಪ್ರಮುಖವಾದವು ಎಂದರೆ:

ಸ್ಟೋನ್ ಸೀಡ್ ಬೇರು: ಡಕೋಟಾ, ಶೋಶೋನ್ ಮೊದಲಾದ ಕಡೆ ಮೂಲ ಅಮೇರಿಕನ್ನರು ಈ ವಿಧಾನವನ್ನು ಬಳಸುತ್ತಾರೆ. ಈ ಬೇರಿನ ರಸವನ್ನು ಕುಡಿಸುತ್ತಾರೆ ಮತ್ತು ಇದನ್ನು ಸುಟ್ಟು ಹೊಗೆಯನ್ನು ಸೇವಿಸುತ್ತಾರೆ. ಇದರಿಂದ ನಿಯಂತ್ರಣ ಸಾಧ್ಯವಾಗುತ್ತದೆ.

ಥಿಸಲ್: ಕ್ವಿನಾಲ್ಟ್ ಮೊದಲಾದ ಮೂಲ ಅಮೇರಿಕನ್ನರು ಥಿಸಲ್ ಮೂಲಿಕೆಯ ಟೀ ಮಾಡಿ ಕುಡಿಯುವ ಮೂಲಕ ನಿಯಂತ್ರಣ ಸಾಧಿಸುತ್ತಿದ್ದರು.

ವೈಲ್ಡ್ ಕ್ಯಾರೆಟ್ ಬೀಜ: ಭಾರತದ ಕೆಲವು ಭಾಗಗಳಲ್ಲಿ ಮಹಿಳೆಯರು ಮಿಲನದ ತಕ್ಷಣ ಈ ಬೀಜವನ್ನು ಸೇವಿಸುತ್ತಾರೆ. ನಂತರ ಮುಂದಿನ ಏಳು ದಿನಗಳವರೆಗೂ ಈ ಬೀಜಗಳನ್ನು ಸೇವಿಸುತ್ತಾ ಹೋಗುತ್ತಾರೆ. ಈ ಮೂಲಕ ಗರ್ಭಧಾರಣೆಯಾಗದು ಎಂದು ಅನುಭವದಿಂದ ಹೇಳುತ್ತಾರೆ. ಕೆಲವೊಮ್ಮೆ ಇದನ್ನೇ ಅನೈಚ್ಛಿಕ ಗರ್ಭವನ್ನು ಹೊರಹಾಕಲೂ ಬಳಸಲಾಗುತ್ತದೆ.

ಹಸಿಶುಂಠಿ: ದಿನಕ್ಕೆ ನಾಲ್ಕು ಕಪ್ ನಂತೆ ಸತತ ಐದು ದಿನಗಳವರೆಗೆ ಕುಡಿಯುವ ಮೂಲಕ ಮಾಸಿಕ ಸ್ರಾವವನ್ನು ಪ್ರಾರಂಭಿಸಬಹುದು. ಇದಕ್ಕೆ ಬದಲಾಗಿ ಪುಡಿಮಾಡಿದ ಒಣಶುಂಠಿಯನ್ನು ಕುದಿನೀರಿನಲ್ಲಿ ಬೆರೆಸಿಯೂ ಸೇವಿಸಬಹುದು.

ಎಚ್ಚರಿಕೆ

ಎಚ್ಚರಿಕೆ

ಗರ್ಭಧಾರಣೆಯನ್ನು ತಡೆಗಟ್ಟುವುದು ಅಥವಾ ಉಳಿಸಿಕೊಳ್ಳುವುದು ಆಯಾ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಕೆಲವೊಮ್ಮೆ ಇದು ವೈದ್ಯಕೀಯ ಕಾರಣಗಳಿಗಾಗಿಯೂ ನಿರ್ವಹಿಸಬಹುದಾಗಿದೆ. ಆದರೆ ಕಾಂಡೋಮ್ ಬಳಕೆಯ ಹೊರತಾದ ಯಾವುದೇ ನೈಸರ್ಗಿಕ ವಿಧಾನಗಳಲ್ಲಿ ಲೈಂಗಿಕವಾಗಿ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಯಾವುದೇ ಕ್ರಮವಿಲ್ಲ. ಹಾಗಾಗಿ, ಈ ವಿಧಾನಗಳು ಕೇವಲ ಪರಸ್ಪರ ಬದ್ಧರಾದ ದಂಪತಿಗಳಿಗೆ ಮಾತ್ರವೇ ಅನ್ವಯಿಸುತ್ತದೆ.

ಈ ಬಗ್ಗೆ ದಂಪತಿಗಳು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಇಬ್ಬರಿಗೂ ಸೂಕ್ತವಾದ ಕ್ರಮವನ್ನು ಅನುಸರಿಸಬೇಕು. ನಿಮ್ಮ ದೈಹಿಕ ಮಾಹಿತಿಗಳನ್ನು ಪರಿಶೀಲಿಸಿದ ವೈದ್ಯರೇ ನಿಮಗೆ ಸೂಕ್ತವಾದ ವಿಧಾನವನ್ನೂ ಸೂಚಿಸುತ್ತಾರೆ.

English summary

Natural Birth Control: Uses, Effects and Types in Kannada

Natural birth control is a method of preventing pregnancy without the use of medications or physical devices. These concepts are based on awareness and observations about a woman’s body and menstrual cycle
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more