For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕೋವಿಡ್ 19 ಲಸಿಕೆ: ತಪ್ಪು ಕಲ್ಪನೆಗಳೇನು, ನಿಜಾಂಶವೇನು?

|

ದೇಶದಲ್ಲಿ ಕೊರೊನಾ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಸಮಧಾನದ ವಿಷಯವಾಗಿದೆ. ಇದಕ್ಕೆ ಒಂದು ಪ್ರಮುಖ ಕಾರಣ ವ್ಯಾಕ್ಸಿನೇಷನ್‌ ಡ್ರೈವ್ ಎಂದು ಹೇಳಬಹುದು. ಇದುವರೆಗಿನ ಅಂಕಿ ಅಂಶದ ಪ್ರಕಾರ 18-44 ವರ್ಷದವರಲ್ಲಿ ಶೇ. 53.5ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಸೆಪ್ಟೆಂಬರ್ 25ರವರೆಗೆ 84.89ಕೋಟಿ ಲಸಿಕೆ ನೀಡಲಾಗಿದೆ. ಅದರಲ್ಲಿ 67.21 ಕೋಟಿ ಜನರಿಗೆ ಫಸ್ಟ್ ಡೋಸ್ ಸಿಕ್ಕಿದೆ, 22.17 ಕೋಟಿ ಜನರು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ದೊರೆಯುವಂತಾಗಲೂ ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್‌ ಡ್ರೈವ್‌ ನಡೆಸುತ್ತಿದೆ. ಸೆಪ್ಟೆಂಬರ್‌ 24 ಒಂದೇ ದಿನ ದೇಶದಲ್ಲಿ 71 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

ಗರ್ಭಿಣಿಯರೂ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಕೋವಿಡ್‌ 19 ಲಸಿಕೆ ನಡೆಯುವುದರಿಂದ ಗರ್ಭಿಣಿಯರ ಆರೊಗ್ಯ ದೃಷ್ಟಿಯಿಂದ ಒಳ್ಳೆಯದೇ, ಅಲ್ಲದೆ ಹೊಟ್ಟೆಯಲ್ಲಿರುವ ಮಗುವಿಗೂ ಒಳ್ಳೆಯದು. ಆದರೆ ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ, ಅದರಲ್ಲೂ ಗರ್ಭಿಣಿಯರ ಕುರಿತು ಈ ತಪ್ಪು ಸುದ್ದಿಗಳು ಹೆಚ್ಚು ಹರಿದಾಡುತ್ತಿವೆ, ಇದರಿಂದಾಗಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅವೆಲ್ಲಾ ತಪ್ಪು ಕಲ್ಪನೆಗಳಿವೆ, ಯಾವುದೇ ಆಧಾರಗಳಿಲ್ಲದೆ ಹರಿದಾಡುವ ಊಹಾ-ಪೋಹಾಗಳಾಗಿವೆ.

ಕೋವಿಡ್‌ 19 ಲಸಿಕೆ ಕುರಿತು ಕೇಳಿ ಬರುತ್ತಿರುವ ಸುಳ್ಳು ಸುದ್ದಿಗಳು ಹಾಗೂ ಸತ್ಯಾಂಶ ಏನು ಎಂಬುವುದಾಗಿ ಹೇಳಲಾಗಿದೆ ನೋಡಿ:

ತಪ್ಪು ಕಲ್ಪನೆ 1: ಕೋವಿಡ್ 19 ಲಸಿಕೆಯಿಂದ ಬಂಜೆತನ ಉಂಟಾಗುವುದು

ತಪ್ಪು ಕಲ್ಪನೆ 1: ಕೋವಿಡ್ 19 ಲಸಿಕೆಯಿಂದ ಬಂಜೆತನ ಉಂಟಾಗುವುದು

ಇದೊಂದು ಶುದ್ಧ ಸುಳ್ಳಿನ ಸುದ್ದಿಯಾಗಿದೆ. ಕೋವಿಡ್ 19 ಲಸಿಕೆ ಪಡೆದ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಉಂಟಾಗುತ್ತದೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆಗಸ್ಟ್‌ನಲ್ಲಿ ಸಿಡಿಸಿ ನಡೆಸಿದ ಸಂಶೋಧನೆಯಲ್ಲಿ ಕೋವಿಡ್‌ 19 ಲಸಿಕೆ ಪಡೆದ ಮೇಲೆ 4, 800 ಮಹಿಳೆಯರು ಗರ್ಭಿಣಿಯಾಗಿದ್ದು, ತಾಯಿ-ಮಗು ಆರೋಗ್ಯಕರವಾಗಿದ್ದಾರೆ ಎಂಬುವುದು ಸಾಬೀತಾಗಿದೆ.

ತಪ್ಪು ಕಲ್ಪನೆ 2: ಕೋವಿಡ್ 19 ಲಸಿಕೆ ಪರೀಕ್ಷೆ ಹಂತದಲ್ಲಿದೆ

ತಪ್ಪು ಕಲ್ಪನೆ 2: ಕೋವಿಡ್ 19 ಲಸಿಕೆ ಪರೀಕ್ಷೆ ಹಂತದಲ್ಲಿದೆ

ಕೋವಿಡ್‌ 19 ಲಸಿಕೆ ಕೊರೊನಾ ಬಂದ ಮೇಲೆ ವರ್ಷದೊಳಗೇ ತಯಾರಾಗಿದೆ, ಈ ಕಾರಣದಿಂದಾಗಿ ಕೋವಿಡ್ 19 ಲಸಿಕೆ ಇನ್ನೂ ಪರೀಕ್ಷೆ ಹಂತದಲ್ಲಿದೆ ಎಂಬ ಭಾವನೆ ಜನರಲ್ಲಿದೆ. ಆದರೆ ಕೋವಿಡ್‌ 19 ಲಸಿಕೆಯನ್ನು ಸರಿಯಾದ ಕ್ಲಿನಿಕಲ್ ಪರೀಕ್ಷೆ ಮಾಡಿದ ಬಳಿಕವಷ್ಟೇ ಜನರಿಗೆ ನೀಡಲಾಗುತ್ತಿದೆ. ಕೋವಿಡ್‌ 19 ಎರಡೂ ಲಸಿಕೆಗಳು ಎಲ್ಲಾ ದೃಷ್ಟಿಯಿಂದಲೂ ಸುರಕ್ಷಿತವಾಗಿದೆ.

ತಪ್ಪು ಕಲ್ಪನೆ 3: ಗರ್ಭಿಣಿಯರಲ್ಲಿ ಅಡ್ಡಪರಿಣಾಮ ಉಂಟಾಗುವುದು

ತಪ್ಪು ಕಲ್ಪನೆ 3: ಗರ್ಭಿಣಿಯರಲ್ಲಿ ಅಡ್ಡಪರಿಣಾಮ ಉಂಟಾಗುವುದು

ಕೋವಿಡ್‌ 19 ಲಸಿಕೆಯನ್ನು ಗರ್ಭಿಣಿಯರು ಪಡೆಯುವುದು ಸುರಕ್ಷಿತ ಎಂಬುವುದು ಸಾಬೀತಾಗಿದೆ. ಆದ್ದರಿಂದ ಗರ್ಭಿಣಿಯರು ಕೋವಿಡ್‌ 19 ಲಸಿಕೆ ಪಡೆಯಬಹುದಾಗದೆ. JAMA Network ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ 17,500 ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರು ಲಸಿಕೆ ಪಡೆದಿದ್ದು ಅವರಲ್ಲಿ ಇತರರಿಗಿಂತ ಭಿನ್ನವಾದ ಅಡ್ಡಪರಿಣಾಮಗಳು ಕಂಡು ಬಂದಿಲ್ಲ ಎಂದು ಹೇಳಿದೆ.

ಲಸಿಕೆ ಪಡೆದವರಲ್ಲಿ ಕೆಲವರಿಗೆ ಸಣ್ಣ-ಪುಟ್ಟ ಅಡ್ಡಪರಿಣಾಮಗಳು ಕಂಡು ಉಂಟಾಗಿದೆ. ಆದರೆ ಗರ್ಭಿಣಿಯರಿಗೆ ಅಥವಾ ಎದೆ ಹಾಲುಣಿಸುವ ತಾಯಂದಿರಿಗೆ ಭಿನ್ನವಾದ ಅಡ್ಡಪರಿಣಾಮವೇನು ಉಂಟಾಗಿಲ್ಲ. ಕೆಲ ಗರ್ಭಿಣಿಯರಿಗೆ ಲಸಿಕೆ ಪಡೆದ ಬಳಿಕ ವಾಂತಿ, ಸುಸ್ತು ಕಂಡು ಬಂದಿದೆ. ಈ ರೀತಿ ಲಸಿಕೆಯಿಂದನೇ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಗರ್ಭಿಣಿಯರಿಲ್ಲಿ ವಾಂತಿ, ಸುಸ್ತು ಕಂಡು ಬರುವುದು ಸಹಜ.

ತಪ್ಪು ಕಲ್ಪನೆ 4: ಆರೋಗ್ಯವಂತರಿಗೆ ಕೋವಿಡ್ 19 ಲಸಿಕೆ ಅಗ್ಯತವಿಲ್ಲ

ತಪ್ಪು ಕಲ್ಪನೆ 4: ಆರೋಗ್ಯವಂತರಿಗೆ ಕೋವಿಡ್ 19 ಲಸಿಕೆ ಅಗ್ಯತವಿಲ್ಲ

ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿದ್ದರೂ ಕೂಡ ಕೋವಿಡ್‌ 19 ಲಸಿಕೆ ಪಡೆಯಬೇಕು. ಏಕೆಂದರೆ ಕೋವಿಡ್ 19 ಯಾರಿಗೆ ಬೇಕಾದರೂ ತಗುಲಬಹುದು. ಅದರಲ್ಲೂ ಗರ್ಭಿಣಿಯರಿಗೆ ಕೋವಿಡ್ 19 ಸೋಂಕು ತಗುಲಿದರೆ ಪರಿಸ್ಥಿತಿ ಗಂಭೀರವಾಗುವುದು. ಆದ್ದರಿಂದ ಆರೋಗ್ಯವಾಗಿದ್ದರೂ ಕೋವಿಡ್ 19 ಲಸಿಕೆ ಪಡೆಯುವುದರಿಂದ ಮತ್ತಷ್ಟು ಸುರಕ್ಷತೆ ಸಿಗುವುದು.

ಅಧ್ಯಯನಗಳ ವರದಿ ಪ್ರಕಾರ ಸುಮಾರು 4 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಗರ್ಭಿಣಿಯಾಗಿದ್ದಾಗ ಕೋವಿಡ್ 19 ತಗುಲಿ ಗರ್ಭಪಾತ, ಅವಧಿಪೂರ್ವ ಜನನ, ಮಗು ಸತ್ತು ಹುಟ್ಟಿರುವುದು, ಗರ್ಭಾವಸ್ಥೆಯಲ್ಲಿ ಮಧುಮೇಹ ಮುಂತಾದ ಸಮಸ್ಯೆಗಳು ಕಂಡು ಬಂದಿವೆ.

ಅದೇ ಗರ್ಭಿಣಿಯರು ಅಥವಾ ಗರ್ಭಾವಸ್ಥೆಗೆ ಮುನ್ನ ಕೋವಿಡ್‌ 19 ಲಸಿಕೆ ಪಡೆದರೆ ಕೋವಿಡ್‌ 19ನಿಂದ ಸುರಕ್ಷತೆ ಸಿಗುವುದು.

ತಪ್ಪು ಕಲ್ಪನೆ 5: ಈಗಾಗಲೇ ಕೋವಿಡ್‌ 19 ಬಂದಿದ್ದರೆ ಲಸಿಕೆ ಪಡೆಯಬೇಕಾಗಿಲ್ಲ

ತಪ್ಪು ಕಲ್ಪನೆ 5: ಈಗಾಗಲೇ ಕೋವಿಡ್‌ 19 ಬಂದಿದ್ದರೆ ಲಸಿಕೆ ಪಡೆಯಬೇಕಾಗಿಲ್ಲ

ಕೋವಿಡ್ 19 ಬಂದು ಚೇತರಿಸಿದವರಲ್ಲಿ ನೈಸರ್ಗಿಕವಾಗಿ ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಆದರೆ ಕೆಲವು ತಿಂಗಳುಗಳ ಬಳಿಕ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಆದ್ದರಿಂದ ಕೋವಿಡ್‌ 19ನಿಂದ ಚೇತರಿಸಿದ 3 ತಿಂಗಳ ಬಳಿಕ ಕೋವಿಡ್ 19 ಲಸಿಕೆ ಪಡೆಯಬೇಕು. ಆಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ತಪ್ಪು ಕಲ್ಪನೆ 6: ಮೊದಲ ತ್ರೈಮಾಸಿಕದಲ್ಲಿ ಲಸಿಕೆ ಪಡೆಯಬಾರದು

ತಪ್ಪು ಕಲ್ಪನೆ 6: ಮೊದಲ ತ್ರೈಮಾಸಿಕದಲ್ಲಿ ಲಸಿಕೆ ಪಡೆಯಬಾರದು

ತಜ್ಞರ ಪ್ರಕಾರ ಗರ್ಭಾವಸ್ಥೆಯ ಯಾವುದೇ ಸಮಯದಲ್ಲಿ ಬೇಕಾದರೂ ಕೊರೊನಾ ಲಸಿಕೆ ಪಡೆಯಬಹುದಾಗಿದೆ. ಗರ್ಭಿಣಿಯರು ಮೊದಲ ತ್ರೈಮಾಸಿಕದಲ್ಲಿ ಕೋವಿಡ್ 19 ಲಸಿಕೆ ಪಡೆಯುವುದರಿಂದ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಸಿಡಿಸಿ ನಡೆಸಿದ ಅಧ್ಯಯನದಲ್ಲಿ 20 ವಾರ ತುಂಬುವುದಕ್ಕೆ ಮೊದಲೇ ಮೊದಲ ಡೋಸ್‌ ಪಡೆದ 2,500 ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. 10,000ಕ್ಕೂ ಅಧಿಕ ಗರ್ಭಿಣಿಯರು ಮೂರನೇಯ ತ್ರೈಮಾಸಿಕದಲ್ಲಿ ಲಸಿಕೆ ಪಡೆದಿದ್ದಾರೆ, ಅವರ ಮೇಲೆ ಕೋವಿಡ್ 19 ಲಸಿಕೆ ಯಾವುದೇ ಅಡ್ಡಪರಿಣಾಮ ಬೀರಿಲ್ಲ ಎಂದು ಮಾರ್ಟಿನ್ ಟಕ್ಕರ್ (M.D., FACOG, president of the American College of Obstetricians and Gynecologists).

ರೂಮರ್‌ಗಳನ್ನು ನಂಬಿ ಲಸಿಕೆ ಪಡೆಯದೇ ಇರಬೇಡಿ. ಕೋವಿಡ್ 19 ಲಸಿಕೆ ಗರ್ಭಿಣಿಯರಿಗೆ, ಎದೆ ಹಾಲುಣಿಸುವ ತಾಯಂದಿರಿಗೆ ಸುರಕ್ಷಿತ ಎಂದು ಕ್ಲಿನಿಕಲ್‌ ಟ್ರಯಲ್‌ನಿಂದ ಸುರಕ್ಷಿತವಾಗಿದೆ. ಆದ್ದರಿಂದ ಎರಡು ಡೋಸ್‌ ಲಸಿಕೆ ಪಡೆಯುವುದು ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

English summary

Myths and Facts about COVID-19 Vaccine During Pregnancy in kannada

Myths and Facts about COVID-19 Vaccine During Pregnancy in kannada, Read on....
Story first published: Monday, September 27, 2021, 17:42 [IST]
X
Desktop Bottom Promotion