For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಹೆಚ್ಚು ಕನಸು ಬೀಳುವುದು ಏಕೆ? ಆ ಕನಸುಗಳ ಹಿಂದಿನ ಅರ್ಥವೇನು?

|

ನಿದ್ರೆ ಮಾಡಿದಾಗ ಕನಸು ಕಾಣುವುದು ನೈಸರ್ಗಿಕ ಮತ್ತು ಆರೋಗ್ಯಕರ ಕ್ರಿಯೆಯಾಗಿದೆ. ಆದರೆ, ಗರ್ಭಾವಸ್ಥೆಯಲ್ಲಿ ನಿಮ್ಮ ಕನಸುಗಳು ವಿಭಿನ್ನವಾಗಿರಬಹುದು. ಹೆಚ್ಚೆಚ್ಚು ದುಸ್ವಪ್ನಗಳೇ ಬೀಳಬಹುದು, ಇದರಿಂದ ಅವರು ಬೆಚ್ಚಿಬೀಳಬಹುದು. ಇದು ಅಸಹಜವಾದದ್ದೇನಲ್ಲ. ಆದ್ದರಿಂದ ಗರ್ಭಿಣಿಯಾಗಿದ್ದಾಗ ಬೀಳುವ ಕನಸುಗಳು, ಅದರ ಹಿಂದಿರುವ ಅರ್ಥಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಗರ್ಭಿಣಿಯರಿಗೆ ಬೀಳುವ ಕನಸುಗಳು ಹಾಗೂ ಅವುಗಳ ಹಿಂದಿರುವ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ:

ಪುನರಾವರ್ತಿತ ಕನಸುಗಳು:

ಪುನರಾವರ್ತಿತ ಕನಸುಗಳು:

ಗರ್ಭಿಣಿಯರು ಸಾಮಾನ್ಯ ವ್ಯಕ್ತಿಗಿಂತ ಹೆಚ್ಚು ಕನಸು ಕಾಣುವ ಸಾಧ್ಯತೆಯಿದೆ. ಇದು ಹೆಚ್ಚು ನಿದ್ದೆ ಅಥವಾ ಚಿಕ್ಕನಿದ್ರೆ ಕಾರಣವಾಗಿದೆ. ಪ್ರೆಗ್ನೆನ್ಸಿ ದೇಹದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಮತ್ತು ಶಕ್ತಿಯ ಮಟ್ಟವು ಆಯಾಸ ಮತ್ತು ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ. ನೀವು ಎಷ್ಟು ಹೆಚ್ಚು ಮಲಗುತ್ತೀರೋ ಅಷ್ಟು ಕನಸು ಕಾಣುವಿರಿ. ಆದ್ದರಿಂದ ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ.

ವಾಸ್ತವಕ್ಕೆ ಹತ್ತಿರವಿರುವ ಕನಸುಗಳು:

ವಾಸ್ತವಕ್ಕೆ ಹತ್ತಿರವಿರುವ ಕನಸುಗಳು:

ಕೆಲವು ಜನರು ಆಳವಾದ ನಿದ್ರೆಯಲ್ಲಿದ್ದಾಗ ವಾಸ್ತವಕ್ಕೆ ಹತ್ತಿರವಿರುವ ಕನಸುಗಳನ್ನು ಕಾಣತ್ತಾರೆ. ಇದು ಆಳವಾದ ಭಾವನೆಗಳು ಮತ್ತು ಎದ್ದುಕಾಣುವ ದೃಶ್ಯಗಳನ್ನು ಹೊಂದಿರುತ್ತದೆ. ಈ ಘಟನೆಗಳು ನಿಜವಾಗಿಯೂ ಸಂಭವಿಸುತ್ತಿರುವಂತೆ ಕಾಣಿಸಬಹುದು. ಗರ್ಭಿಣಿಯರು ಈ ಕನಸುಗಳನ್ನು ಹೆಚ್ಚು ಪಡೆಯುತ್ತಾರೆ. ಈ ಕನಸುಗಳಿಂದ ನೀವು ಎಚ್ಚರವಾದಾಗ ಕನಸು ಮತ್ತು ವಾಸ್ತವದ ನಡುವೆ ಗುರುತಿಸಲು ನಿಮಗೆ ಒಂದು ಕ್ಷಣ ಬೇಕಾಗಬಹುದು.

ತಾಯ್ತನದ ಕನಸುಗಳು:

ತಾಯ್ತನದ ಕನಸುಗಳು:

ನಿಮ್ಮ ಕುಟುಂಬದ ಹೊಸ ಸದಸ್ಯರನ್ನು ಸ್ವಾಗತಿಸಲು ಗರ್ಭಧಾರಣೆ ನಿಮ್ಮನ್ನು ಸ್ವಾಭಾವಿಕವಾಗಿ ಭಾವಪರವಶಗೊಳಿಸುತ್ತದೆ. ಹೆಚ್ಚು ಉತ್ಸಾಹ, ಸ್ವಲ್ಪ ಆತಂಕವು ನಿಮ್ಮನ್ನ ತಾಯ್ತನದ ಕನಸುಗಳನ್ನು ಕಾಣಲು ಪ್ರೇರೇಪಿಸಬಹುದು. ಅಂದ್ರೆ ಇದು ನಿಮ್ಮ ಮಗು ಈಗಾಗಲೇ ಹುಟ್ಟಿದ ಕನಸು ಅಥವಾ ನಿಮ್ಮ ಮಗುವನ್ನು ಹಿಡಿದಿಟ್ಟುಕೊಳ್ಳುವ ಕನಸುಗಳನ್ನು ಒಳಗೊಂಡಿರುತ್ತದೆ. ಕೆಲವು ಮಹಿಳೆಯರಿಗೆ ತಮ್ಮ ಮಗು ತಮ್ಮೊಂದಿಗೆ ಮಾತನಾಡುವುದರ ಬಗ್ಗೆ, ತಮ್ಮ ಮಗುವಿಗೆ ಹೆಸರಿಡುವ ಬಗ್ಗೆ, ಮತ್ತು ಅವರ ಮಗುವಿನ ಲಿಂಗದ ಬಗ್ಗೆ ಕನಸು ಬೀಳುತ್ತವೆ.

ದುಃಸ್ವಪ್ನಗಳು:

ದುಃಸ್ವಪ್ನಗಳು:

ಕನಸುಗಳು ಆತಂಕಗಳ ಒಳನೋಟವನ್ನು ನೀಡಬಲ್ಲವು. ಜೊತೆಗೆ ಭಯವನ್ನು ಎತ್ತಿ ತೋರಿಸುವುದು ಸಹಜ. ಗರ್ಭಧಾರಣೆಗೆ ಸಂಬಂಧಿಸಿದ ದುಃಸ್ವಪ್ನಗಳು ಸಹ ಬಹಳ ಸಾಮಾನ್ಯವಾಗಿದೆ. ಇದು ಹೆರಿಗೆಯ ಬಗ್ಗೆ ಭಯ ಅಥವಾ ಆತಂಕವಾಗಿರಬಹುದು ಅಥವಾ ಮಗುವಿಗೆ ಏನಾದರೂ ತೊಂದರೆಯಾಗಿರಬಹುದು. ನಿಮಗೆ ಹಿಂದೆ ಗರ್ಭಪಾತ ಆಗಿದ್ದರೆ, ಅದು ಮತ್ತೆ ಸಂಭವಿಸುವ ಬಗ್ಗೆ ಕೆಟ್ಟಕನಸು ಹೊಂದಿರಬಹುದು. ಈ ರೀತಿಯ ಕನಸುಗಳು ಸಾಮಾನ್ಯವಾಗಿದೆ. ಭಯಬೇಡ, ಸಕಾರಾತ್ಮಕವಾಗಿರಿ ಮತ್ತು ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸಿ.

ಗರ್ಭಾವಸ್ಥೆಯ ಕನಸಿನನಲ್ಲಿ ಬದಲಾವಣೆ ಏಕೆ?:

ಗರ್ಭಾವಸ್ಥೆಯ ಕನಸಿನನಲ್ಲಿ ಬದಲಾವಣೆ ಏಕೆ?:

ಗರ್ಭಾವಸ್ಥೆಯಲ್ಲಿ ಕನಸುಗಳಲ್ಲಿನ ಬದಲಾವಣೆಗೆ ಅಸಂಖ್ಯಾತ ಕಾರಣಗಳಿವೆ. ಇದರಲ್ಲಿ ಹಾರ್ಮೋನುಗಳ ಬದಲಾವಣೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಏರಿಳಿತಗಳು ನಿಮ್ಮ ದೇಹದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಜೊತೆಗೆ, ಮೂಡ್ ಸಂಬಂಧಿತ ಸಮಸ್ಯೆಗಳು ತೀವ್ರ ಆಯಾಸಕ್ಕೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಪುನರಾವರ್ತಿತ ದುಃಸ್ವಪ್ನಗಳು ಕಾಕತಾಳೀಯವಾಗಿರಬಹುದು ಅಥವಾ ಭಯವನ್ನು ವ್ಯಕ್ತಪಡಿಸುವ ನಿಮ್ಮ ಮೆದುಳಿನ ಮಾರ್ಗವಾಗಿರಬಹುದು. ಆದ್ದರಿಂದ ಅಂತಹ ಕನಸು-ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಕೆಲವು ಸಲಹೆಗಳಿವೆ.

ಕನಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಸಲಹೆಗಳು:

ಕನಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಸಲಹೆಗಳು:

  • ಸಕಾರಾತ್ಮಕವಾಗಿರಿ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಿ. ನಿಮ್ಮನ್ನು ಶಾಂತಗೊಳಿಸಲು ಯೋಗ, ಧ್ಯಾನ ಅಥವಾ ಯಾವುದೇ ಚಿಕಿತ್ಸಕ ಅಭ್ಯಾಸದ ಸಹಾಯವನ್ನು ತೆಗೆದುಕೊಳ್ಳಿ.
  • ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ನಿಮ್ಮ ಭಾವನೆಗಳ ಬಗ್ಗೆ ಮಾತನಾಡಿ, ನಿಮ್ಮ ಚಿಂತೆಗಳು ಸಾಮಾನ್ಯ ಎಂದು ಅರಿತುಕೊಳ್ಳಲು ಅವರು ನಿಮಗೆ ಸಹಾಯ ಮಾಡಬಹುದು.
  • ನಿದ್ರೆಯ ಮಾದರಿಗಳಲ್ಲಿನ ಅಡಚಣೆಯಿಂದಾಗಿ ಕನಸಿನಲ್ಲಿ ಬದಲಾವಣೆಯನ್ನು ಕೆಲವೊಮ್ಮೆ ಪ್ರಚೋದಿಸಬಹುದು. ಇದನ್ನು ಎದುರಿಸಲು, ನಿದ್ರೆಯ ವೇಳಾಪಟ್ಟಿಗೆ ಅಂಟಿಕೊಳ್ಳಲು ಪ್ರಯತ್ನಿಸಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ.
English summary

Most Common Dreams During Pregnancy and What they Mean in Kannada

Here we talking about Most common dreams during pregnancy and what they mean in kannada, read on
X
Desktop Bottom Promotion