For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ನಪುಂಸಕತೆ: ಯಾರಲ್ಲಿ ಕಂಡು ಬರುತ್ತದೆ, ಚಿಕಿತ್ಸೆಯೇನು?

|

ಬಂಜೆತನ ಎನ್ನುವುದು ಹೆಣ್ಣಿನ ಮಾತ್ರ ಸಮಸ್ಯೆಯೆಂದು ಎಷ್ಟೋ ಜನರು ಭಾವಿಸುತ್ತಾರೆ. ಆದರೆ ಹೆಣ್ಣಿಗೆ ಗರ್ಭಧಾರಣೆಯ ಸಾಮರ್ಥ್ಯ ಇದ್ದರೂ ತನ್ನ ಪುರುಷನಲ್ಲಿ ನಪುಂಸಕತೆ ಇದ್ದರೆ ಗರ್ಭಧಾರಣೆಯಾಗುವುದಿಲ್ಲ.

ಕನಿಷ್ಟ ಒಂದು ವರ್ಷದ ಪ್ರಯತ್ನಗಳ ಬಳಿಕವೂ ಸಂಗಾತಿ ಗರ್ಭವತಿಯಾಗಲು ವಿಫಲಗೊಳ್ಳುವ ಪುರುಷರ ಅಸಾಮರ್ಥ್ಯತೆಯನ್ನೇ ನಪುಂಸಕತೆಎಂದು ಕರೆಯಬಹುದು. ನಾವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ಜನರಲ್ಲಿ ಈ ತೊಂದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು.

ಒಂದು ಅಂದಾಜಿನ ಪ್ರಕಾರ, ಸಂತಾನ ಭಾಗ್ಯ ಪಡೆಯಲು ವಿಫಲದಾರ ದಂಪತಿಗಳಲ್ಲಿ ಮೂರನೆಯ ಒಂದು ಕಾರಣಗಳು ಪುರುಷನಿಂದಲೂ, ಮೂರನೆಯ ಒಂದು ಭಾಗ ಮಹಿಳೆಯಿಂದಲೂ ಎದುರಾಗಿರುತ್ತದೆ. ಉಳಿದ ಒಂದು ಭಾಗ ಇಬ್ಬರಿಗೂ ಸಮಾನವಾಗಿ ಅಥವಾ ಇಬ್ಬರಿಗೂ ಹೊರತಾದ ಬೇರೆ ಕಾರಣಗಳಿಂದ ಎದುರಾಗಿರಬಹುದು.

ಪುರುಷರ ನಪುಂಸಕತೆಗೆ ಕಾರಣಗಳೇನು:

ಪುರುಷರ ನಪುಂಸಕತೆಗೆ ಕಾರಣಗಳೇನು:

ಈ ಸಂದರ್ಭಗಳು ಎದುರಾದಾಗ ನಪುಂಸಕತೆಕಾಣಿಸಿಕೊಳ್ಳುತ್ತವೆ. ಇವೆಂದರೆ:

* ಪುರುಷ ವೃಷಣಗಳಲ್ಲಿ ಅಗತ್ಯ ಪ್ರಮಾಣದ ವೀರ್ಯಾಣುಗಳು ಉತ್ಪಾದನೆ ಆಗದೇ ಇರುವುದು

* ಒಂದು ವೇಳೆ ಆದರೂ, ಇವು ಸಾಮಾನ್ಯ ಕ್ಷಮತೆಯನ್ನು ಹೊಂದಿರದೇ ಇರುವುದು

* ಅಂಡಾಣುವಿನೊಡನೆ ಮಿಲನಗೊಳ್ಳಲು ಎದುರಾಗುವ ಅಡ್ಡಿ

ವೀರ್ಯಣುಗಳ ಸಂಖ್ಯೆ ಸಾಕಷ್ಟಿದ್ದರೂ ಅದರಲ್ಲಿ ಗಮನಾರ್ಹ ಸಂಖ್ಯೆಯ ವೀರ್ಯಾಣುಗಳು ಸತ್ತಿರುವುದು ಅಥವಾ ಅಗತ್ಯ ಕ್ಷಮತೆ ಇರದೇ ಇದ್ದಾಗ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿ ಎದುರಾಗಲು ಒಂದು ಮುಖ್ಯ ಕಾರಣವೆಂದರೆ ವೆರಿಕೋಸೀಲ್ (varicocele) ಎಂಬ ತೊಂದರೆ. ಇದರಲ್ಲಿ ಒಂದು ನರ ಊದಿಕೊಂಡಿದ್ದು ಅಗತ್ಯ ಪ್ರಮಾಣದ ವೀರ್ಯಾಣುಗಳ ಉತ್ಪಾದನೆ ಸಾಧ್ಯವಾಗುವುದಿಲ್ಲ. ನಪುಂಸಕತ್ವದ ತೊಂದರೆ ಇರುವ ವ್ಯಕ್ತಿಗಳ ಪೈಕಿ ನಲವತ್ತು ಶೇಖಡಾ ಪುರುಷರಲ್ಲಿ ಈ ತೊಂದರೆ ಇರುತ್ತದೆ. ಉಳಿದಂತೆ, ಸರಿಯಾದ ಚಿಕಿತ್ಸೆ ದೊರಕದೇ ಇರುವ ಮಧುಮೇಹ ಅಥವಾ ಥೈರಾಯ್ಡ್ ತೊಂದರೆಗಳೂ ನಪುಂಸಕತ್ವಕ್ಕೆ ಕಾರಣವಾಗಬಹುದು.

ಕೆಲವು ಔಷಧಿಗಳೂ ವೀರ್ಯಾಣುಗಳ ಸಂಖ್ಯೆ ಇಳಿಮುಖವಾಗಲು ಕಾರಣವಾಗುತ್ತದೆ. ಟೆಸ್ಟ್ರೋಸ್ಟೆರೋನ್ ಥೆರಪಿ, ಸ್ಟೆರಾಯ್ಡುಗಳ ಬಳಕೆ ಮತ್ತು ಕೆಲವು ಬಗೆಯ ಕ್ಯಾನ್ಸರ್ ಗಳ ಚಿಕಿತ್ಸೆಯ ಅಡ್ಡ ಪರಿಣಾಮಗಳಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಅಥವಾ ವೀರ್ಯಾಣುಗಳಲ್ಲಿ ಹೆಚ್ಚಿನ ಸಂಖ್ಯೆಯ ಸತ್ತ ವೀರ್ಯಾಣುಗಳಿರುವುದು ಕಾಣಬರಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಗೆ ನೀಡಲಾಗುವ ಫ್ಲುಟಾಮೈಡ್, ಸೈಪ್ರೊಟೆರಾನ್ ಮತ್ತು ಬೈಕುಲುಟಮೈಡ್, ಅಧಿಕ ರಕ್ತದೊತ್ತಡಕ್ಕೆ ನೀಡಲಾಗುವ ಸ್ಪಿರೋನೋಲ್ಯಾಕ್ಟೋನ್, ಕರುಳಿನ ಹುಣ್ಣಿಗೆ ನೀಡಲಾಗುವ ಸಿಮೆಟೈಡಿನ್ ಮತ್ತು ಶಿಲಿಂಧ್ರ ನಿವಾರಕವಾಗಿ ನೀಡಲಾಗುವ ಕೀಟೋಕೊನಾಜ಼ೋಲ್ ಮೊದಲಾದ ಔಷಧಿಗಳಲ್ಲಿ ಈ ಅಡ್ಡ ಪರಿಣಾಮವಿದೆ.

ಜೀವನಕ್ರಮದ ಕೆಲವು ಅಭ್ಯಾಸಗಳೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವ ವಹಿಸುತ್ತವೆ. ಧೂಮಪಾನ, ಅತಿಯಾದ ಮದ್ಯಪಾನ, ಮಾದಕ ದ್ರವ್ಯ ಸೇವನೆ ಮೊದಲಾದವು ವೀರ್ಯಾಣುಗಳ ಸಂಖ್ಯೆಯನ್ನು ಇಳಿಮುಖವಾಗಿಸುತ್ತವೆ. ಪುರುಷರ ವೃಷಣದ ತಾಪಮಾನ ದೇಹದ ತಾಪಮಾನಕ್ಕೂ ಕೊಂಚ ಕಡಿಮೆ ಇರಬೇಕೆಂದೇ ಇವು ದೇಹದ ಹೊರಗಿವೆ. ಇದರ ಬದಲು ನಿಸರ್ಗಕ್ಕೆ ವಿರುದ್ದವಾಗಿ ನಾವು ಅತಿಯಾದ ತಾಪಮಾನದಲ್ಲಿರಿಸಿದರೆ, ಇದೂ ನಪುಂಸಕತ್ವಕ್ಕೆ ಕಾರಣವಾಗಬಹುದು. ಉದಾಹರಣ್ಗೆ, ಅತಿಯಾದ ಸಮಯದವರೆಗೆ ಸೈಕಲ್ ತುಳಿಯುವುದು, ಬಿಸಿನೀರಿನ ಸೌನಾದಲ್ಲಿ ಅಧಿಕ ಹೊತ್ತು ಕಳೆಯುವುದು ಇತ್ಯಾದಿ. ಅಲ್ಲದೇ ಸೀಸ ಅಥವಾ ಕೀಟನಾಶಕ ಮೊದಲಾದ ಪ್ರದೂಷಕಗಳಿರುವ ವಾತಾವರಣದಲ್ಲಿ ಹೆಚ್ಚು ಕಾಲ ಇರುವುದೂ ಕಾರಣವಾಗಬಹುದು.

ಯಾವ ಪುರುಷರು ಈ ತೊಂದರೆಗೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ?

ಯಾವ ಪುರುಷರು ಈ ತೊಂದರೆಗೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ?

ಒಂದು ಮಗುವಿನ ತಂದೆಯಾಗಿದ್ದರೂ ಈಗ ಈ ಪುರುಷರಲ್ಲಿ ನಪುಂಸಕತೆಕಾಣಿಸಿಕೊಂಡ್ರಬಹುದು. ಹಾಗಾಗಿ, ನಪುಂಸಕತೆಯಾವುದೇ ಪುರುಷರಿಗೆ, ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು.

ಉಳಿದಂತೆ, ಈ ಕೆಳಗಿನ ಸ್ಥಿತಿ ಹೊಂದಿರುವ ಪುರುಷರಿಗೆ ನಪುಂಸಕತೆಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

* ವೀರ್ಯಾಣುಗಳ ಉತ್ಪಾದನೆಯ ಮೇಲೆ ನೇರವಾಗಿ ಕಾರಣವಾಗುವ ವೆರಿಕೋಸೀಲ್ ಮೊದಲಾದ ಕಾಯಿಲೆ ಇರುವ ಪುರುಷರು

* ಥೈರಾಯ್ಡ್ ತೊಂದರೆ ಮೊದಲಾದ ರಸದೂತಗಳ ಅಸಮತೋಲನ ಇರುವ ವ್ಯಕ್ತಿಗಳು

* ಟೆಸ್ಟೋಸ್ಟೆರೋನ್ ಚಿಕಿತ್ಸೆ ಅಥವಾ ಅನಾಬೋಲಿಕ್ ಸ್ಟೆರಾಯ್ಡುಗಳ ಚಿಕಿತ್ಸೆಯನ್ನು ಪಡೆಯುತ್ತಿರುವ ಪುರುಷರು

* ನಿಯಂತ್ರಣಕ್ಕೆ ಬಾರದ ಪ್ರಮುಖ ಕಾಯಿಲೆ ಹೊಂದಿರುವ ಪುರುಷರು

* ರೋಗ ನಿರೋಧಕ ವ್ಯವಸ್ಥೆ ಅಥವಾ ಸ್ವ-ರೋಗ ನಿರೋಧಕ ವ್ಯವಸ್ಥೆಯ ತೊಂದರೆ ಇರುವ ಪುರುಷರು

* ಸ್ಥೂಲದೇಹಿಗಳು

* ನಲವತ್ತು ದಾಟಿದ ಪುರುಷರು

* ಕ್ಯಾನ್ಸರ್ ಗಾಗಿ ವಿಕಿರಣ ಚಿಕಿತ್ಸೆ ಪಡೆಯುತ್ತಿರುವ ಪುರುಷರು, ವಿಶೇಷವಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿರುವ ಪುರುಷರು

* ಧೂಮಪಾನಿ, ಮಾದಕ ದ್ಯವ್ಯ ಅಥವಾ ಅತಿಯಾದ ಮದ್ಯಪಾನದ ವ್ಯಸನ ಇರುವು ಪುರುಷರು

* ಕೀಟನಾಶಕ, ಸೀಸ, ಕ್ಯಾಡ್ಮಿಯಂ ಅಥವಾ ಪಾದರಸ ಮೊದಲಾದ ಪ್ರದೂಶಕಗಳಿರುವ ಪ್ರದೇಶದಲ್ಲಿ ಅತಿ ಹೆಚ್ದು ಸಮಯ ಕಳೆಯುವ ಪುರುಷರು

* ವೃಷಣದ ಭಾಗದಲ್ಲಿ ಅತಿ ಹೆಚ್ಚಿನ ಬಿಸಿ ಆವರಿಸುವಂತ ಸ್ಥಳಗಳು, ಉದಾಹರಣೆಗೆ ಸೌನಾ ಅಥವಾ ಅತಿಯಾದ ಬೈಸಿಕಲ್ ತುಳಿಯುವ ಪುರುಷರು

ಒಂದು ವೇಳೆ ನಿಮಗೆ ನಪುಂಸಕತೆಇದ್ದರೆ ಇದರ ಹೊರತಾಗಿಯೂ ಗರ್ಭಧಾರಣೆ ಸಾಧ್ಯವೇ?

ಒಂದು ವೇಳೆ ನಿಮಗೆ ನಪುಂಸಕತೆಇದ್ದರೆ ಇದರ ಹೊರತಾಗಿಯೂ ಗರ್ಭಧಾರಣೆ ಸಾಧ್ಯವೇ?

ವೀರ್ಯಾಣುಗಳ ಸಂಖ್ಯೆ ಕನಿಷ್ಟ ಪ್ರಮಾಣಕ್ಕೂ ಕಡಿಮೆ ಇದ್ದರೂ ಸರಿ, ಆರೋಗ್ಯಕರವಾಗಿದ್ದರೆ, ಗರ್ಭ ಧಾರಣೆಯ ಸಾಧ್ಯತೆಯಂತೂ ಇದ್ದೇ ಇರುತ್ತದೆ. ಈ ತೊಂದರೆ ಇರುವ ದಂಪತಿಗಳಲ್ಲಿಯೂ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲದೇ ಸಂತಾನ ಭಾಗ್ಯ ದೊರಕಿರುವ ಪ್ರಕರಣಗಳಿವೆ.

ಆದರೆ, ನಿಸರ್ಗದ ನಿಯಮಕ್ಕೆ ಅನುಗುಣವಾಗಿ ಕನಿಷ್ಟ ಪ್ರಮಾಣದ ವೀರ್ಯಾಣುಗಳು ಅಂದರೆ ಒಂದು ಸಿಸಿ ಯಲ್ಲಿ ಹದಿನಾಲ್ಕು ಮಿಲಿಯನ್ ನಷ್ಟು ವೀರ್ಯಾಣುಗಳಿದ್ದಾಗಲೇ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತದೆ. ಈ ತೊಂದರೆ ಇರುವ ದಂಪತಿಗಳು ಒಂದು ವರ್ಷದ ಪ್ರಯತ್ನದ ಬಳಿಕವೂ ಸಫಲರಾಗದೇ ಇದ್ದಲ್ಲಿ ವೈದ್ಯರನ್ನು ಭೇಟಿಯಾಗುವುದು ಅವಶ್ಯವಾಗಿದೆ. (ಮೂವತ್ತೈದು ದಾಟಿದ ಮಹಿಳೆಯರು ಆರು ತಿಂಗಳ ಪ್ರಯತ್ನದ ಬಳಿಕ ಸಫಲತೆ ಕಾಣದೇ ಇದ್ದಾಗಲೇ ವೈದ್ಯರನ್ನು ಕಾಣಬೇಕು)

ಪುರುಷರ ನಪುಂಸಕತ್ವಕ್ಕೆ ಯಾವ ಚಿಕಿತ್ಸೆಗಳು ಲಭ್ಯವಿವೆ?

ಪುರುಷರ ನಪುಂಸಕತ್ವಕ್ಕೆ ಯಾವ ಚಿಕಿತ್ಸೆಗಳು ಲಭ್ಯವಿವೆ?

ಈ ತೊಂದರೆಗೆ ಕಾರಣ ಏನು ಎಂಬುದನ್ನು ಅನುಸರಿಸಿ ವೈದ್ಯರು ವಿವಿಧ ಚಿಕಿತ್ಸೆಗಳನ್ನು ಆಯ್ದುಕೊಳ್ಳಬಹುದು.

ವೆರಿಕೋಸೀಲ್ ತೊಂದರೆ ಇದ್ದರೆ ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

ಉಳಿದಂತೆ, ಥೈರಾಯ್ಡ್ ಅಥವಾ ಅನಿಯಂತ್ರಿತ ಮಧುಮೇಹದ ತೊಂದರೆ ಇದ್ದರೆ, ಇದಕ್ಕೆ ಸೂಕ್ತ ಚಿಕಿತ್ಸೆಗಳನ್ನು ನೀಡುವ ಮೂಲಕ ನಪುಂಸಕತೆತಾನಾಗಿ ಇಲ್ಲವಾಗುತ್ತದೆ.

ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ನೆರವಾಗುವ ಕೃತಕ ವಿಧಾನಗಳಾದ ಇನ್ ವಿಟ್ರೋ ಫರ್ಟಿಲೈಸೇಶನ್ ಅಥವಾ ಇಂಟ್ರಾಯೂಟೆರೀನ್ ಇನ್ಸೆಮಿನೇಶನ್ ಮೊದಲಾದವುಗಳನ್ನು ಪುರುಷರ ನಪುಂಸಕತ್ವಕ್ಕೆ ಖಚಿತ ಕಾರಣ ತಿಳಿದು ಬರದೇ ಇದ್ದಾಗ ನಡೆಸಲ್ಪಡುತ್ತವೆ. ಒಂದು ವೇಳೆ ಪುರುಷನ ವೀರ್ಯಾಣುಗಳಲ್ಲಿ ಆರೋಗ್ಯವಂತ ವೀರ್ಯಾಣುಗಳು ಇಲ್ಲದೇ ಇದ್ದಲ್ಲಿ ದಾನಿಯಿಂದ ಪಡೆಯಲಾಗುತ್ತದೆ.

ಉಳಿದಂತೆ, ತೂಕ ಇಳಿಸಿಕೊಳ್ಳುವುದು, ಧೂಮಪಾನ ತ್ಯಜಿಸುವುದು, ಮದ್ಯಪಾನ ಕಡಿಮೆ ಮಾಡುವುದು, ಮಾದಕ ವಸ್ತುಗಳನ್ನು ತ್ಯಜಿಸುವುದು, ನಪುಂಸಕತ್ವದ ಮೇಲೆ ಪ್ರಭಾವ ಬೀರುವುದು ಖಚಿತವಾದ ಔಷಧಿಗಳನ್ನು ಬದಲಿಸಿಕೊಳ್ಳುವುದು ಮೊದಲಾದ ಕ್ರಮಗಳೂ ಸಾಕಷ್ಟು ಫಲ ನೀಡುತ್ತವೆ. ಪುರುಷರು ಈ ಬಗ್ಗೆ ಯಾವುದೇ ಕೀಳರಿಮೆಯನ್ನು ತಾಳದೇ ತಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಎಲ್ಲಾ ನಿಟ್ಟಿನಿಂದಲೂ ನಡೆಸುವ ಮೂಲಕ ಸಂತಾನಫಲ ಪಡೆಯಲು ಸಾಧ್ಯವಾಗುತ್ತದೆ.

English summary

Male Fertility Causes, Who Is At Risk, Diagnosis And Treatment In kannada

Male fertility causes, who is at risk, diagnosis and treatment in kannada, Read on...
Story first published: Saturday, March 13, 2021, 17:53 [IST]
X
Desktop Bottom Promotion