For Quick Alerts
ALLOW NOTIFICATIONS  
For Daily Alerts

ಚಂದ್ರಗ್ರಹಣ 2021: ಚಂದ್ರಗ್ರಹಣದ ವೇಳೆ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಲೇಬೇಡಿ

|

ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ಇದೇ ನವೆಂಬರ್‌ 19ರಂದು ಘಟಿಸಲಿದೆ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಚಲಿಸುವ ಈ ಭವ್ಯವಾದ ವಿದ್ಯಮಾನ ಶತಮಾನದ ಸುದೀರ್ಘ ಭಾಗಶಃ ಗ್ರಹಣ ಆಗಲಿದೆ. ಸಂಪೂರ್ಣ ಗ್ರಹಣವು 6 ಗಂಟೆ 1 ನಿಮಿಷಗಳ ಕಾಲ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ.

Lunar Eclipse 2020: How Pregnant Women Should Take care

ಚಂದ್ರ ಮತ್ತು ಸೂರ್ಯನ ಮಧ್ಯದಲ್ಲಿ ಭೂಮಿಯು ಬಂದು ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ತಡೆಯುವುದೇ ಚಂದ್ರಗ್ರಹಣ. ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದ ಲ್ಲಿ ಈ ಗ್ರಹಣವು ಗೋಚರಿಸಲಿದೆ. ಈ ಗ್ರಹಣದ ಪ್ರಮುಖ ವಿಶೇಷತೆಯೆಂದರೆ ಭಾರತದ ಎಲ್ಲಾ ಭಾಗಗಳಿಂದಲೂ ಗೋಚರಿಸಲಿದೆ.

ಗರ್ಭಿಣಿ ಸ್ತ್ರೀಯರಿಗೆ ಸಲಹೆಗಳು

ಗರ್ಭಿಣಿ ಸ್ತ್ರೀಯರಿಗೆ ಸಲಹೆಗಳು

ಹಿಂದಿನ ಕಾಲದ ಒಂದು ನಂಬಿಕೆಯೆಂದರೆ ಗ್ರಹಣವು ಗರ್ಭಿಣಿಯರಿಗೆ ಕೆಟ್ಟ ಪರಿಣಾಮಗಳನ್ನು ಮಾಡುತ್ತದೆ ಎಂಬುದಾಗಿದೆ. ಹಾಗಂತ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಸಾಕ್ಷಿಗಳಿಲ್ಲ.

ಹಿಂದಿನಿಂದಲೂ ಇರುವ ನಂಬಿಕೆಯೆಂದರೆ ಮಹಿಳೆಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಬರಬಾರದು ಎಂಬುದಾಗಿದೆ. ಇದೊಂದೆ ಅಲ್ಲ ಗರ್ಭಿಣಿ ಮಹಿಳೆಯರು ಗ್ರಹಣ ಕಾಲದಲ್ಲಿ ಏನನ್ನೂ ಕುಡಿಯಬಾರದು ಮತ್ತು ಆಹಾರ‌ ಸೇವಿಸಬಾರದು ಎನ್ನಲಾಗುತ್ತದೆ.

ಗ್ರಹಣವು ನಿಜವಾಗಲೂ ಗರ್ಭಿಣಿ ಮಹಿಳೆಯರಿಗೆ ಕೆಟ್ಟದ್ದೇ?

ಗ್ರಹಣವು ನಿಜವಾಗಲೂ ಗರ್ಭಿಣಿ ಮಹಿಳೆಯರಿಗೆ ಕೆಟ್ಟದ್ದೇ?

ಗರ್ಭಿಣಿಯರಿಗೆ ಗ್ರಹಣವು ಕೆಟ್ಟ ಪರಿಣಾಮ ಮಾಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ. ಆದರೆ ಪ್ರತಿಯೊಂದು ಕುಟುಂಬದಲ್ಲೂ ಈ ನಂಬಿಕೆ ಆಳವಾಗಿ ಬೇರೂರಿದ್ದು ಪ್ರತಿಯೊಬ್ಬರಿಗೂ ಈಗಲೂ ಭಯವಿದೆ.

ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ನಿದ್ರಿಸುವುದರಿಂದ ಕೆಟ್ಟದ್ದಾಗುತ್ತದೆಯೇ?

ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ನಿದ್ರಿಸುವುದರಿಂದ ಕೆಟ್ಟದ್ದಾಗುತ್ತದೆಯೇ?

ಹಲವು ಮಂದಿ ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ನಿದ್ದೆ ಮಾಡಬಾರದು ಎಂದು ನಂಬುತ್ತಾರೆ. ಹಾಗಂತ ಇದಕ್ಕೆ ಯಾವುದೇ ರೀತಿಯ ಅಧ್ಯಯನದ ಸಾಕ್ಷಿಯೂ ಇಲ್ಲ. ಆದರೆ ಈ ನಂಬಿಕೆಯು ಬಹುಕಾಲದಿಂದ ನಮ್ಮಲ್ಲಿ ನಡೆದುಕೊಂಡು ಬಂದಿದೆ.

ಗ್ರಹಣದ ಬಗ್ಗೆ ವಿವಿಧ ಜನರಿಗೆ ವಿವಿಧ ನಂಬಿಕೆಗಳಿದೆ. ಕೆಲವರು ಗ್ರಹಣ ಕಾಲದಲ್ಲಿ ಹೃದಯದ ಕಾಯಿಲೆ, ಒತ್ತಡ, ಭಯ, ಇನ್ಸೊಮ್ನಿಯಾ, ಶೀತ ಮತ್ತು ಕೆಮ್ಮು, ಮನಸ್ಸಿನ ಚಂಚಲತೆ ಸೇರಿದಂತೆ ಹಲವು ಕಾಯಿಲೆಗಳು ಬರುತ್ತದೆ ಎಂದು ನಂಬುತ್ತಾರೆ. ಹಾಗಾಗಿ ಈ ಸಮಯದಲ್ಲಿ ಮನೆಯಿಂದ ಹೊರಗೆ ಕಾಲಿಡಬಾರದು ಎಂದು ಹೇಳಲಾಗುತ್ತದೆ.

ಆದರೆ ಈ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಹಾಗಂತ ಕೆಲವು ಮುಂಜಾಗ್ರತೆ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.

ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಸುರಕ್ಷಿತವಾಗಿರಲು ಕೆಲವು ಸಲಹೆಗಳು

ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಸುರಕ್ಷಿತವಾಗಿರಲು ಕೆಲವು ಸಲಹೆಗಳು

1. ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗಡೆ ಬರಬೇಡಿ.

2. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗರ್ಭಿಣಿ ಸ್ತ್ರೀಯರು ಯಾವುದೇ‌ ರೀತಿಯ ಲೋಹವನ್ನು ಉದಾಹರಣೆಗೆ ಹೇರ್ ಪಿನ್ ಅಥವಾ ಕಡಗವನ್ನು ಧರಿಸುವುದನ್ನು ತಪ್ಪಿಸಲು ಹೇಳಲಾಗಿದೆ. ಆದರೆ ಇದರ ವಿರುದ್ಧ ನಂಬಿಕೆಯೊಂದು ಚಾಲ್ತಿಯಲ್ಲಿದ್ದು ಗರ್ಭಿಣಿಯರು ತನ್ನ ಮಗುವಿನ ಸುರಕ್ಷತೆಗಾಗಿ ಪಿನ್ ಅಥವಾ ಚಾಕು ಇಟ್ಟುಕೊಳ್ಳಬೇಕು ಎಂದು ಕೂಡ ಹೇಳಲಾಗುತ್ತದೆ.

3. ಹಳೆಯ ಆಹಾರ ಪದಾರ್ಥಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.

4. ಗರ್ಭಿಣಿ ಸ್ತ್ರೀಯರು ಯಾವುದೇ ಕೆಲಸ ಮಾಡಬಾರದು ಮತ್ತು ಈ ಸಮಯದಲ್ಲಿ ಸಾಧ್ಯವಾದಷ್ಟು ಆರಾಮಾಗಿ ವಿರಾಮ ತೆಗೆದುಕೊಳ್ಳಬೇಕು.

5. ಗ್ರಹಣ ಕಾಲದಲ್ಲಿ ಏನನ್ನೂ ಕುಡಿಯಬೇಡಿ ಮತ್ತು ಸೇವಿಸಬೇಡಿ.

6. ದಪ್ಪನೆಯ ಕರ್ಟನ್, ನ್ಯೂಸ್ ಪೇಪರ್ ಅಥವಾ ಕಪ್ ಬೋರ್ಡ್ ನಿಂದ ಕಿಟಕಿಗಳನ್ನು ಮುಚ್ಚಿ. ಗ್ರಹಣದ ಕಿರಣಗಳು ನಿಮ್ಮ ಮನೆಯೊಳಗೆ ಪ್ರವೇಶ ಮಾಡದಂತೆ ನೋಡಿಕೊಳ್ಳಿ.

7. ಒಮ್ಮೆ ಗ್ರಹಣ ಮುಗಿದ ನಂತರ ಪ್ರತಿಯೊಬ್ಬರೂ ಸ್ನಾನ ಮಾಡಬೇಕು.

ಪ್ರತಿಯೊಬ್ಬರೂ ತಿಳಿದಿರಬೇಕಾದ ವಿಚಾರವೆಂದರೆ ಗ್ರಹಣ ಎಂಬುದು ಒಂದು ನೈಸರ್ಗಿಕ ಪ್ರಕ್ರಿಯೆ ಮತ್ತು ಇದು ಯಾವುದೆ ವ್ಯಕ್ತಿಯ ಆರೋಗ್ಯ ಮತ್ತು ಗರ್ಭಾವಸ್ಥೆಯ ಮೇಲೆ ಪರಿಣಾಮ ಮಾಡುವುದಿಲ್ಲ. ಹಾಗಾಗಿ ಈ ಸತ್ಯಾಸತ್ಯತೆಯನ್ನು ನಂಬುವುದು ಬಿಡುವುದು ನಿಮ್ಮ ಆಯ್ಕೆಯಾಗಿರುತ್ತದೆ.

ನೆನಪಿಡಿ

ನೆನಪಿಡಿ

ಒಂದು ವೇಳೆ ನೀವು ಗರ್ಭಿಣಿಯಾಗಿದ್ದರೆ ಹೆಚ್ಚು ಅವಧಿಗೆ ಆಹಾರ ಮತ್ತು ನೀರು ಇಲ್ಲದೆ ಇರುವಂತಿಲ್ಲ ಯಾಕೆಂದರೆ ನಿಮಗೆ ನಿರ್ಜಲೀಕರಣವಾಗುವ ಸಾಧ್ಯತೆ ಇದೆ. ಇದು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ವೇಳೆ ಈಗಲೂ ನೀವು ಗ್ರಹಣದ ಸಮಯದಲ್ಲಿ ಉಪವಾಸ ಮಾಡಲು ಬಯಸುತ್ತೀರಾದರೆ ಗ್ರಹಣ ಪ್ರಾರಂಭವಾಗುವ ಮುನ್ನವೇ ಆಹಾರ ಸೇವಿಸಿ ನಿಮ್ಮ ಹಸಿವು ತಣಿದಿರುವಂತೆ ನೋಡಿಕೊಳ್ಳಿ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Lunar Eclipse 2021: How Pregnant Women Should Take care

Here we are discussing about Lunar Eclipse 2020: How Pregnant Women Should Takecare. It is an age-old belief that an eclipse can have a bad effect on pregnant women. However, there is no scientific proof to support this theory. Read more.
X
Desktop Bottom Promotion