Just In
Don't Miss
- News
ಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Sports
ನಮ್ಮೂರ ಪ್ರತಿಭೆ: ಕ್ರೀಡೆಯನ್ನೇ ಉಸಿರಾಗಿಸಿಕೊಂಡ ಛಲಗಾರ: ಕಬಡ್ಡಿ ಅಂಗಳದ ಮಿನುಗು ತಾರೆ ಸುಕೇಶ್ ಹೆಗ್ಡೆ
- Automobiles
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
- Movies
'ಕೆಜಿಎಫ್ 2' ಬಳಿಕ ಗೆದ್ದ ಬಾಲಿವುಡ್ ಸಿನಿಮಾ 'ಭೂಲ್ ಭುಲಯ್ಯ 2', ಗಳಿಸಿದ್ದೆಷ್ಟು?
- Finance
ಆಂಕರ್ ಹೂಡಿಕೆದಾರರಿಂದ 124 ಕೋಟಿ ರೂ. ಪಡೆದ ಇಮುದ್ರಾ!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗರ್ಭಿಣಿಯರು ಕೋವಿಡ್ 19 ಬೂಸ್ಟರ್ ಶಾಟ್ ಪಡೆಯಬಹುದೇ?
ಕೊರೊನಾ 3ನೇ ಅಲೆಯಲ್ಲಿ ಸಾವು-ನೋವಿನ ಸಂಖ್ಯೆ ಕಡಿಮೆಯಿದ್ದರರೂ ಒಮಿಕ್ರಾನ್ ಮಾತ್ರ ಅತ್ಯಂತತ ವೇಗವಾಗಿ ಹರಡುತ್ತಿದೆ, ಭಾರತದಲ್ಲಿ ಬಹುತೇಕರಿಗೆ 2 ಡೋಸ್ ವ್ಯಾಕ್ಸಿನ್ ಆಗಿದೆ, ಆದರೆ 2 ಡೋಸ್ ಲಸಿಕೆ ಪಡೆದು 9 ತಿಂಗಳು ಕಳೆದಿದ್ದರೆ ಅದರ ಸಾಮರ್ಥ್ಯ ತಗ್ಗುವ ಸಾಧ್ಯತೆ ಇದೆ, ಹೀಗಾಗಿ ಬೂಸ್ಟರ್ ನೀಡಲಾಗುತ್ತಿದೆ. ಮೊದಲು ಯಾವ ಕೊರೊನಾ ಲಸಿಕೆ ಪಡೆದಿರುತ್ತಾರೋ ಅದನ್ನೇ ಬೂಸ್ಟರ್ ಆಗಿ ನೀಡಲಾಗುತ್ತಿದೆ.
ಆರೋಗ್ಯ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ನೀಡಲಾಗುತ್ತಿದೆ. ಆದರೆ ಗರ್ಭಿಣಿಯರು ಬೂಸ್ಟರ್ ಪಡೆಯಬಹುದೇ? ಎಂದು ಕೆಲವರು ಕೇಳುತ್ತಿದ್ದಾರೆ. ಅದರ ಕುರಿತ ಮಾಹಿತಿ ಇಲ್ಲಿದೆ ನೋಡಿ:

ಗರ್ಭಿಣಿಯರಿಗೆ ಕೊರೊನಾದ ಅಪಾಯ
ಗರ್ಭಿಣಿಯರಿಗೆ ಕೋವಿಡ್ 19 ತಗುಲಿದರೆ ಅಪಾಯ ಹೆಚ್ಚು. ಕೆಲವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುವುದು. ಎರಡನೇ ಅಲೆಯಲ್ಲಿ ಎಷ್ಟೋ ಗರ್ಭಿಣಿಯರು ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇನ್ನು ಕೆಲವರಿಗೆ ಗರ್ಭಪಾತವಾಗಿದೆ. ಆದ್ದರಿಂದ ಗರ್ಭಿಣಿಯರಿಗೆ ಕೋವಿಡ್ 19 ತಗುಲುವುದು ಅಪಾಯಕಾರಿಯಾಗಿದೆ. ಅಲ್ಲದೆ ಗರ್ಭಿಣಿಯರಿಗೆ ಕೋವಿಡ್ 19 ತಗುಲುವುದು ತಪ್ಪಿಸಲು ಲಸಿಕೆ ಪಡೆಯುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
ಗರ್ಭಿಣಿಯರು ಕೋವಿಡ್ 19 ಲಸಿಕೆ ಪಡೆಯುವುದು ಸುರಕ್ಷಿತ, ಇದರಿಂದ ಮಗು ಹಾಗೂ ತಾಯಿಯ ಮೇಲೆ ಯಾವುದೇ ಅಡ್ಡಪರಿಣಾಮ ಬೀರಿಲ್ಲ ಎಂಬುವುದಾಗಿ ಅಧ್ಯಯನ ವರದಿಗಳು ತಿಳಿಸಿವೆ. ಲಸಿಕೆ ಪಡೆದಾಗ ಇತರರಿಗೆ ಉಂಟಾದಂತೆ ಸಣ್ಣ-ಪುಟ್ಟ ಅಡ್ಡಪರಿಣಾಮ ಕಾಣಿಸಬಹುದು, ಆದರೆ ಗಂಭೀರವಾದ ಸಮಸ್ಯೆಗಳಾಗಿಲ್ಲ. ಕೊರೊನಾ ಲಸಿಕೆಗಳು ಕೋವಿಡ್ 19 ವಿರುದ್ಧ ಗರ್ಭಿಣಿ ಮಹಿಳೆಯರಿಗೆ ಸುರಕ್ಷತೆಯನ್ನು ನೀಡುತ್ತದೆ.

ಗರ್ಭಿಣಿಯಾಗಿದ್ದರೆ ಬೂಸ್ಟರ್ ಪಡೆಯಬಹುದಾ?
ಹೌದು, ನೀವು ಬೂಸ್ಟರ್ ಪಡೆಯಲು ಅರ್ಹರಾಗಿದ್ದರೆ ಗರ್ಭಿಣಿಯಾದವರೂ ಬೂಸ್ಟರ್ ಪಡೆಯಬಹುದು. ಬೂಸ್ಟರ್ ಪಡೆಯುವುದರಿಂದ ನಿಮ್ಮ ಹಾಗೂ ಮಗುವಿನ ಸುರಕ್ಷತೆಗೆ ಒಳ್ಳೆಯದು, ನೀವು ಕೋವಿಡ್ 19 2ನೇ ಲಸಿಕೆ ಪಡೆದು 9 ತಿಂಗಳು ಕಳೆದಿದ್ದರೆ ಬೂಸ್ಟರ್ ಅಥವಾ ಪ್ರಿವೆನ್ಷನ್ ಡೋಸ್ ಪಡೆಯುವುದರಿಂದ ಸುರಕ್ಷತೆ ಹೆಚ್ಚು.

ಬೂಸ್ಟರ್ ಪಡೆಯುವುದು ಅವಶ್ಯಕ ಏಕೆ?
* ಕೋವಿಡ್ 19 ಎರಡು ಲಸಿಕೆ ಪಡೆದು 6 ತಿಂಗಳು ಕಳೆದವರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿರುವುದು ತಿಳಿದು ಬಂದಿದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಬೂಸ್ಟರ್ ಅಗ್ಯತವಾಗಿದೆ.
* ಬೂಸ್ಟರ್ ಪಡೆಯುವುದರಿಂದ ಕೋವಿಡ್ 19 ಅಪಾಯ ಕಡಿಮೆಯಾಗುವುದು.
* ಗರ್ಭಿಣಿಯರು ಬೂಸ್ಟರ್ ಪಡೆಯುವ ಮೂಲಕ ಹುಟ್ಟಲಿರುವ ಮಗುವಿನ ಸುರಕ್ಷತೆ ಸಿಗುವುದು.
ಬೂಸ್ಟರ್ಗೆ ಸಿಡಿಸಿಯಿಂದ ಅನುಮತಿ ಸಿಕ್ಕಿದ್ದು ಎಲ್ಲಾ ಗರ್ಭಿಣಿಯರು ಸೇರಿದಂತೆ ಎಲ್ಲಾ ವಯಸ್ಕರು ಪಡೆದುಕೊಳ್ಳಬಹುದು ಎಂದು ಹೇಳಿದೆ.