For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಹಾಗಲಕಾಯಿ ತಿನ್ನಬಹುದೇ? ಇದರ ಅಡ್ಡಪರಿಣಾಮವೇನು?

|

ಹಾಗಲಕಾಯಿ! ಹೆಸರು ಕೇಳಿದೊಡನೆಯೇ ಬಹುತೇಕರ ಮುಖ ಸಿಂಡರಿಸಿಕೊಳ್ಳುತ್ತದೆ! ಯಾಕಂದ್ರೆ ಕಹಿರುಚಿಗೆ ಪರ್ಯಾಯ ಹೆಸರೇ ಹಾಗಲಕಾಯಿ ಅನ್ನಬಹುದೇನೋ ಅನ್ನೋವಷ್ಟು ಅದು ಕಹಿಯಾಗಿರುತ್ತದೆ!! ಆಂಗ್ಲಭಾಷೆಯಲ್ಲಿ "ಬಿಟ್ಟರ್ ಗಾರ್ಡ್" ಅಥವಾ "ಬಿಟ್ಟರ್ ಮೆಲನ್" ಎಂದೂ ಕರೆಯಲ್ಪಡುವ ಈ ಹಸಿರು ತರಕಾರಿಯ ವೈಜ್ಞಾನಿಕ ಹೆಸರು ಮೊಮೋರ್ಡಿಕಾ ಚರಾನ್ಷಿಯಾ ಅಂತಾ. ಭಾರತದಲ್ಲಿ ಹಾಗಲಕಾಯಿಯನ್ನ "ಕರೇಲಾ" ಅಂತಾನೂ ಕರೀತಾರೆ. ಕಹಿಯಾದರೇನಂತೆ!

"ಯಾವುದು ಅದರಕ್ಕೆ ಕಹಿಯೋ ಅದು ಉದರಕ್ಕೆ ಸಿಹಿಯಾಗಿರುತ್ತೆ" ಅನ್ನೋ ಮಾತೇ ಇದ್ಯಲ್ಲ!! ಆ ಮಾತಿನ ಪ್ರಕಾರಾನೇ ಈ ಹಾಗಲಕಾಯಿ ಅನ್ನೋ ಕಹಿ ತರಕಾರಿಯಲ್ಲಿರೋ ಆರೋಗ್ಯದಾಯಕ ಸದ್ಗುಣಗಳು ಒಂದೆರಡಲ್ಲ!! ನಿಮ್ಮ ಶರೀರಕ್ಕೆ ಬೇಕಾದ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಕಬ್ಬಿಣಾಂಶ, ರಂಜಕ, ಮ್ಯಾಗ್ನೀಷಿಯಂ, ಮ್ಯಾಂಗನೀಸ್, ಫ಼ೋಲೇಟ್, ವಿಟಮಿನ್ ಎ, ವಿಟಮಿನ್ ಸಿ, ಹಲವಾರು ಬಿ ವಿಟಮಿನ್ ಗಳು - ಈ ಎಲ್ಲವೂ ಹಾಗಲಕಾಯಿಯೆಂಬ ಈ ಒಂದೇ ತರಕಾರಿಯಲ್ಲಿ ಯಥೇಚ್ಛವಾಗಿ ದೊರೆಯುತ್ತವೆ!!

ಇವಿಷ್ಟೇ ಸಾಲದೆಂಬಂತೆ ಹಾಗಲಕಾಯಿ ಅನ್ನೋ ಈ ತರಕಾರೀಲೀ (ನಿಜ ಹೇಳ್ಬೇಕೂಂತಂದ್ರೆ, ಹಾಗಲಕಾಯಿ ಒಂದು ತರಕಾರಿ ಅಲ್ವಂತೆ, ಅದೊಂದು ಹಣ್ಣಂತೆ!!!) ನಾರಿನಂಶವೂ ವಿಫುಲವಾಗಿದ್ದು, ಕಡಿಮೆ ಕ್ಯಾಲರಿಗಳನ್ನ ಇದು ಒಳಗೊಂಡಿದೆ. ಹಾಗಲಕಾಯಿಯಲ್ಲಿ ಇಷ್ಟೆಲ್ಲ ಒಳ್ಳೆಯ ಗುಣಗಳಿದ್ದರೂ ಕೂಡ, ಗರ್ಭಿಣಿಯರು ಈ ಹಾಗಲಕಾಯಿಯ ವಿಚಾರದಲ್ಲಿ ಜಾಗರೂಕರಾಗಿರಬೇಕಾಗುತ್ತೆ!! ಏಕೆಂದರೆ, ಹಾಗಲಕಾಯಿಯನ್ನ ಗರ್ಭಿಣಿಯರು ಸೇವಿಸಕೂಡದು.

ಗರ್ಭಿಣಿಯರು ಹಾಗಲಕಾಯಿಯನ್ನ ಸೇವಿಸೋದ್ರಿಂದ ಆಗಬಹುದಾದ ತೊಂದರೆಗಳನ್ನ ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಓದಿ ಅರಿತುಕೊಳ್ಳಿ....

ಗರ್ಭಿಣಿಯರಲ್ಲಿ ರಕ್ತಹೀನತೆಯನ್ನುಂಟು ಮಾಡುತ್ತದೆ

ಗರ್ಭಿಣಿಯರಲ್ಲಿ ರಕ್ತಹೀನತೆಯನ್ನುಂಟು ಮಾಡುತ್ತದೆ

ಹಾಗಲಕಾಯಿಯಲ್ಲಿ ವಿಸೈನ್ ಎಂದು ಕರೆಯಲ್ಪಡುವ ಅಣುವಿದೆ. ಇದು ಫ಼ೇವಿಸಮ್ ಗೆ ದಾರಿಮಾಡಿಕೊಡುತ್ತದೆ. ಶರೀರದ ಅಂಗಾಂಶಗಳಿಗೆ ಪ್ರಾಣವಾಯುವನ್ನು ಸಾಗಿಸುವ ಕೆಂಪು ರಕ್ತಕಣಗಳ ಹಾನಿಯನ್ನೇ ಫ಼ೇವಿಸಮ್ ಎನ್ನುತ್ತಾರೆ. ಕೆಂಪು ರಕ್ತಕಣಗಳು ಹೀಗೆ ಶಿಥಿಲಗೊಂಡಾಗ ಆ ಪರಿಸ್ಥಿತಿಯು ರಕ್ತಹೀನತೆಗೆ ದಾರಿಮಾಡಿಕೊಡುತ್ತದೆ. ರಕ್ತಹೀನತೆಯು ಗರ್ಭಿಣಿಯರಲ್ಲಿ ಕ್ಲಿಷ್ಟಕರವಾದ ಅನಾರೋಗ್ಯಗಳನ್ನ ಹುಟ್ಟುಹಾಕುತ್ತದೆ. ಗರ್ಭಿಣಿಯಾದಾಗ ತಲೆದೋರುವ ವಿಪರೀತ ರಕ್ತಹೀನತೆಯು ಅವಧಿಪೂರ್ವ ಪ್ರಸವದ ಸಾಧ್ಯತೆಯೊಂದಿಗೆ ನಂಟು ಹೊಂದಿದೆ. ಹಾಗೆ ಅವಧಿಗಿಂತ ಮೊದಲೇ ಜನಿಸುವ ಮಗುವಿನ ತೂಕ ಕಡಿಮೆಯಿರುತ್ತದೆ, ಅಥವಾ ಮಗುವು ಜನಿಸುವ ತುಸು ಮೊದಲೇ ಇಲ್ಲವೇ ಜನಿಸಿದ ಕೂಡಲೇ ಸಾವಿಗೀಡಾಗುವ ಸಾಧ್ಯತೆಯೂ ಇರುತ್ತದೆ.

ಗರ್ಭಿಣಿಯರ ಶರೀರವನ್ನು ವಿಷಮಯವಾಗಿಸುತ್ತದೆ

ಗರ್ಭಿಣಿಯರ ಶರೀರವನ್ನು ವಿಷಮಯವಾಗಿಸುತ್ತದೆ

ಹಾಗಲಕಾಯಿಗಳಲ್ಲಿ ಕ್ವಿನೈನ್, ಮೊಮೋರ್ಡಿಕಾ, ಮತ್ತು ಗ್ಲೈಕೋಸೈಡ್ ಗಳಂತಹ ಅಣುಗಳಿದ್ದು, ಇವು ಗರ್ಭಿಣಿಯ ಶರೀರವನ್ನ ವಿಷಮಯವನ್ನಾಗಿಸುತ್ತವೆ. ಇಂತಹ ವಸ್ತುಗಳಿರೋ ಹಾಗಲಕಾಯಿಯ ಸೇವನೆಯು ಗರ್ಭಿಣಿಯರಲ್ಲಿ ಕರುಳಿನ ನೋವು, ದೃಷ್ಟಿದೋಷ, ವಾಂತಿ, ಆಯಾಸವಾಗುವಿಕೆ, ಮಾಂಸಖಂಡಗಳ ನಿತ್ರಾಣ, ವಾಕರಿಕ, ಮತ್ತು ಲಾಲಾರಸದ ಅಧಿಕ ಉತ್ಪಾದನೆಯಂತಹ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.

ರಕ್ತಸ್ರಾವಕ್ಕೆ ಕಾರಣವಾಗುತ್ತದೆ

ರಕ್ತಸ್ರಾವಕ್ಕೆ ಕಾರಣವಾಗುತ್ತದೆ

ಗರ್ಭಿಣಿಯರು ಹಾಗಲಕಾಯಿಯನ್ನ ಅಥವಾ ಹಾಗಲಕಾಯಿಯ ಬೀಜಗಳನ್ನ ತಿಂದರೆ ಅದು ಅವರಲ್ಲಿ ಹೊಟ್ಟೆನೋವನ್ನ, ಅಜೀರ್ಣತೆಯನ್ನ, ಅತಿಸಾರವನ್ನ, ಹಾಗೂ ಕಿಬ್ಬೊಟ್ಟೆಯಲ್ಲಿ ನೋವನ್ನ ಉಂಟು ಮಾಡುತ್ತದೆ.

ಕೆಲ ತಜ್ಞರ ಅಭಿಪ್ರಾಯದ ಪ್ರಕಾರ, ಗರ್ಭಿಣಿಯರು ಹಾಗಲಕಾಯಿಯ ಜ್ಯೂಸ್ ಅನ್ನು ಕುಡಿದರೆ ಅದು ಅವರಲ್ಲಿ ಹೊಟ್ಟೆಯ ಸ್ನಾಯುಗಳ ಸಂಕೋಚನೆಯನ್ನ ಪ್ರೇರೇಪಿಸುತ್ತದೆ ಹಾಗೂ ಆ ಮೂಲಕ ರಕ್ತಸ್ರಾವಕ್ಕೆ ಕಾರಣವಾಗಿ ಗರ್ಭಪಾತಕ್ಕೂ ದಾರಿ ಮಾಡಿಕೊಡುತ್ತದೆ.

ಹಾಗಲಕಾಯಿಯನ್ನ ಇಷ್ಟಪಡಿ! ಆದರೆ ಹಿತಮಿತವಾಗಿ ಸೇವಿಸಿ!!

ಹಾಗಲಕಾಯಿಯನ್ನ ಇಷ್ಟಪಡಿ! ಆದರೆ ಹಿತಮಿತವಾಗಿ ಸೇವಿಸಿ!!

ಗರ್ಭಿಣಿಯರು ಹಾಗಲಕಾಯಿಯನ್ನ ವರ್ಜಿಸುವುದೇ ಕ್ಷೇಮ. ಆದಾಗ್ಯೂ, ಅದನ್ನೇ ತಿನ್ನಲೇ ಬೇಕೂಂತ ಅನ್ನಿಸಿದರೆ, ನಿಮ್ಮ ವೈದ್ಯರ ಸಲಹೆಯನ್ನ ಪಡೆದ ಬಳಿಕ ಅಲ್ಪಪ್ರಮಾಣವನ್ನಷ್ಟೇ ಸೇವಿಸಿರಿ. ಉದಾಹರಣೆಗೆ, ವಾರದಲ್ಲಿ ಒಂದು ಬಾರಿಯೋ ಇಲ್ಲವೇ ಎರಡು ಬಾರಿಯೋ ನೀವು ಒಂದು ಕಪ್ ನಷ್ಟು ಹಾಗಲುಕಾಯಿಯ ಜ್ಯೂಸನ್ನ ಕುಡಿಯಬಹುದು.

ಗರ್ಭಿಣಿಯರು ಹಾಗಲಕಾಯಿ ಬೀಜಗಳನ್ನ ಸರ್ವಥಾ ಸೇವಿಸಲೇ ಬಾರದು; ಅದರಲ್ಲೂ ವಿಶೇಷವಾಗಿ G6PD ಯ ಕೊರತೆಯಿದ್ದರೆ. ಗ್ಲುಕೋಸ್ - 6 - ಫ಼ಾಸ್ಪೇಟ್ ಡಿಹೈಡ್ರೋಜಿನೇಸ್ (G6PD) ಒಂದು ಬಗೆಯ ಕಿಣ್ವವಾಗಿದ್ದು, ಇದು ರಕ್ತದಲ್ಲಿದ್ದು, ಕೆಂಪು ರಕ್ತಕಣಗಳನ್ನು ಹಾಳುಗೆಡವಬಹುದಾದ ವಸ್ತುಗಳಿಂದ ಕೆಂಪು ರಕ್ತಕಣಗಳನ್ನು ರಕ್ಷಿಸುತ್ತದೆ.

ಹಾಗಲಕಾಯಿಯ ಬೀಜಗಳಲ್ಲಿ ವೈಸಿನ್ ಎಂದು ಕರೆಯಲ್ಪಡುವ ಒಂದು ರಾಸಾಯನಿಕ ಸಂಯುಕ್ತವಿದ್ದು, ಇದು ಫ಼ೇವಿಸಮ್ ಗೆ ದಾರಿಮಾಡಿಕೊಡಬಲ್ಲದು ಹಾಗೂ ಜೊತೆಗೆ ಜ್ವರ, ವಾಕರಿಕೆ, ರಕ್ತಹೀನತೆ, ಹಾಗೂ ಹೊಟ್ಟೆನೋವಿಗೂ ದಾರಿಮಾಡಿಕೊಡಬಲ್ಲದು.

ಗರ್ಭಿಣಿಯರು ಹಾಗಲಕಾಯಿಯನ್ನ ಸೇವಿಸೋದ್ರಿಂದ ಆಗಬಹುದಾದ ಇನ್ನಿತರ ತೊಂದರೆಗಳು:

ಗರ್ಭಿಣಿಯರು ಹಾಗಲಕಾಯಿಯನ್ನ ಸೇವಿಸೋದ್ರಿಂದ ಆಗಬಹುದಾದ ಇನ್ನಿತರ ತೊಂದರೆಗಳು:

ಹಾಗಲಕಾಯಿಯನ್ನ ಮೊದಲ ಮೂರು ತಿಂಗಳು ಸೇವಿಸೋದ್ರಿಂದ, ಕೆಲವು ಗರ್ಭಿಣಿಯರಲ್ಲಿ ಜೀರ್ಣಕ್ರಿಯೆಯು ಕುಂಠಿತಗೊಳ್ಳುತ್ತದೆ.

ಮೊಲೆಹಾಲುಣಿಸುವ ತಾಯಂದಿರು ಹಾಗಲಕಾಯಿಯ ಸೇವನೆಯನ್ನ ಮಾಡಕೂಡದೆಂದು ಕೆಲ ತಜ್ಞರು ಅಭಿಪ್ರಾಯ ಪಡುತ್ತಾರೆ. ಆದಾಗ್ಯೂ, ಈ ಅಭಿಪ್ರಾಯದ ಕುರಿತು ವಿಸ್ತೃತ ಮಾಹಿತಿಯೇನೂ ಲಭ್ಯವಿಲ್ಲ.

ಒಂದು ವೇಳೆ ನೀವು ಮಧುಮೇಹಿಯಾಗಿದ್ದು, ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನ ತಗ್ಗಿಸೋದಕ್ಕೆ ಔಷಧವನ್ನೇನಾದ್ರೂ ಸೇವಿಸುತ್ತಿದ್ದಲ್ಲಿ, ಹಾಗಲಕಾಯಿಯ ಸೇವನೆ ಮಾಡಬೇಡಿ. ಏಕೆಂದರೆ, ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನ ತೀರಾ ತಗ್ಗಿಸಿಬಿಡುತ್ತದೆ.

ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ಹಾಗೂ ಅನಂತರ ಹಾಗಲಕಾಯಿಯ ಸೇವನೆಯು ನಿಮ್ಮ ರಕ್ತದ ಸಕ್ಕರೆಯ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ಶಸ್ತ್ರಚಿಕಿತ್ಸೆಯ ನಿಗದಿತ ದಿನದ ಕನಿಷ್ಟ ಎರಡು ವಾರಗಳಿಗೂ ಮುಂಚಿನಿಂದ ಹಾಗಲಕಾಯಿಯನ್ನ ತಿನ್ನದೇ ಇರೋದೇ ಕ್ಷೇಮ.

ಆರೋಗ್ಯವಂತ ವ್ಯಕ್ತಿಯೂ ಕೂಡ ದಿನವೊಂದಕ್ಕೆ 2 ರಿಂದ 3 ಕ್ಕಿಂತ ಹೆಚ್ಚು ಹಾಗಲಕಾಯಿಗಳನ್ನ ಸೇವಿಸಬಾರದು. ಯಾಕೇಂದ್ರೆ, ಹಾಗಲಕಾಯೀನಾ ಹೆಚ್ಚಾಗಿ ಸೇವಿಸೋದ್ರಿಂದ, ಮಂದವಾಗಿ ಕಿಬ್ಬೊಟ್ಟೆ ನೋವು ಇಲ್ಲವೇ ಅತಿಸಾರ ಶುರುವಿಟ್ಟುಕೊಂಡೀತು.

ಗಮನಿಸಿ:

ಗಮನಿಸಿ:

ಗರ್ಭಿಣಿಯರಿಗೆ ಹಾಗಲಕಾಯಿಯ ಸೇವನೆ ಒಳ್ಳೆಯದೋ ಕೆಟ್ಟದ್ದೋ ಅನ್ನೋ ಚರ್ಚೆ ಇನ್ನೂ ಮುಂದುವರಿದೇ ಇದೆ. ಆದ್ದರಿಂದ, ಒಂದೊಮ್ಮೆ ನೀವು ಹಾಗಲಕಾಯಿಯನ್ನ ಸೇವಿಸೋದಕ್ಕೆ ಬಯಸೋದೇ ಆದ್ರೆ, ಯಾವುದಕ್ಕೂ ಮೊದಲು ನಿಮ್ಮ ವೈದ್ಯರ ಸಲಹೆಯನ್ನೊಮ್ಮೆ ಪಡೆದುಕೊಳ್ಳಿ.

English summary

Is It Safe to Eat Bitter Gourd (Karela) During Pregnancy?

Is it safe to eat bitter gourd during pregnancy? read on,
X
Desktop Bottom Promotion